ಪುಟ:Kanakadasa Haribhakthisara.pdf/೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ಹರಿಭಕ್ತಿ ಸಾರ ಶ್ರೀಯರಸ ಗಾಂಗೇಯನುತ ಕೌಂ ತೇಯ ವಂದಿತ ಚರಣ ಕಮಲದ ಳಾಯತಾಂಬಕ ರೂಪ ಚಿನ್ನಯ ದೇವಕೀತನಯ ರಾಯ ರಘುಕುಲವರ್ಯ ಭೂಸುರ ಪ್ರೀಯ ವರಪುರನಿಲಯ ಚೆನ್ನಿಗ ರಾಯ ಚತುರೋಪಾಯ ರಕ್ಷಿಸು ನಮ್ಮನನವರತ ದೇವ ದೇವ ಜಗದ್ಭರಿತ ವಸು ದೇವಸುತ ಜಗದೇಕನಾಥ ರ ಮಾವಿನೋದಿತ ಸಜ್ಜನಾನತ ನಿಖಿಲ ಗುಣಭರಿತ ಭಾವಜಾರಿಪ್ರಿಯ ನಿರಾಮಯ ರಾವಣಾಂತಕ ರಘುಕುಲಾನ್ವಯ ದೇವ ಅಸುರ ವಿರೋಧಿ ರಕ್ಷಿಸು ನಮ್ಮನನವರತ ಅನುಪಮಿತ ಚಾರಿತ್ರ ಕರುಣಾ ವನ, ಭಕ್ತ ಕುಟುಂಬಿ ಯೋಗೀ ಜನಹೃದಯ ಪರಿಪೂರ್ಣ ನಿತ್ಯಾನಂದ ನಿಗಮನುತ ವನಜನಾಭ ಮುಕುಂದ ಮುರಮ ರ್ದನ ಜನಾರ್ದನ ಜಗತ್ತಾ ವನ ಸುರಾರ್ಚಿತ ದೇವ ರಕ್ಷಿಸು ನಮ್ಮನನವರತ ಕಮಲಸಂಭವ ವಿನುತ ವಾಸವ ನಮಿತ ಮಂಗಳ ಚರಿತ ದುರಿತ ಕ್ಷಮಿತ ರಾಘವ ವಿಶ್ವಪೂಜಿತ ವಿಶ್ವ ವಿಶ್ವಮಯ ಅಮಿತ ವಿಕ್ರಮ ಭೀಮ ಸೀತಾ