ಪುಟ:Kanakadasa Haribhakthisara.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೬ ಕನಕ ಸಾಹಿತ್ಯ ದರ್ಶನ-೨ ರಾಮಧಾನ್ಯ ಚರಿತ್ರೆ ೫೭ ಅಂದಣವ ಸೊಸೆಯರು ವರೂಥದಿ ಹಿಂದುಮುಂದಿಟ್ಟಣಿಸಿ ನಡೆದುದು ಸತಿಯರೊಗ್ಗಿನಲಿ ಕರುಣದಲಿ ಸತ್ಕರಿಸಿ ಮುಂದಕೆ ತೆರಳಿದರು ಕೌಸಲ್ಯರಾಮನ ಕಾಣ್ವ ತವಕದಲಿ 1೮೪। |೮೮ ಪುರಜನವ ಸಂತೈಸಿ ಭೂಸುರ ವರರ ಮಂತ್ರಾಕ್ಷತೆಯ ಕೈಕೊಂ ಡರಸ ರಾಮ ಶ್ರೀ ಪದಾಬ್ಬವ ನೆನೆದು ಮನದೊಳಗೆ ತರಿಸಿ ಮಾಲ್ಯಾಂಬರ ಸುಗಂಧವ ಕರೆಸಿಕೊಟ್ಟನು ರಾಜವರ್ಗಕೆ ಹರುಷದಲಿ ಶತ್ರುಘ್ನನೇರಿದ ದಿವ್ಯಮಣಿ ರಥವ ಇತ್ತ ಕೇಳ್ಯ ಪಾಂಡವಾಗ್ರಜ ಸತ್ವ ಗುಣನಿಧಿ ರಾಮಚಂದ್ರನು ವತ್ತರಿಸಿಬರೆ ಕಂಡು ನಲಿಯುತ ಜಾನಕಿಯ ಕರೆದು ಇತ್ತ ನೋಡೆಲೆ ದೇವಿ ಭರತನ ಶತ್ರುಹರ ಶತ್ರುಘ್ನರಿವರು ಸ ಮಸ್ತ ಬಲಸಹಿತಿದಿರು ಬರುತಿದೆ ನೋಡು ನೀನೆಂದ [೮೫] J೮೯) ವಿವಿಧ ವಾದ್ಯ ಧ್ವನಿಯ ಕಹಳಾ ರವದ ಸನ್ನೆಯೊದಿಬಹ ನೃಪ ನಿವಹದಲಿ ಚತುರಂಗ ಸೇನೆಯ ಪದದ ಕೆಂಧೂಳಿ ಭುವನವಾಕಾಶವನು ಮುಸುಕಿದ ಡವನಿ ನೆಗ್ಗಲು ಬಲವು ಬಲು ಭಾ ರವಣೆಯಲಿ ಹೊರವಂಟನಾ ಶತ್ರುಘ್ನನೋಲವಿನಲಿ ಎಂದು ತೋರಿಸಿ ಮನದ ಹರುಷದಿ ಮಿಂದು ಲಕ್ಷಣನೊಡನೆ ಸತಿಸಹಿ ತಂದು ರಥವೇರಿದನು ರಾಮನೃಪಾಲನಾಕ್ಷಣಕೆ ಮುಂದೆ ನೆರೆದುದು ಬನದೊಳಗೆ ಮುದ ದಿಂದ ಪಾಠಕರುಗೂಡಿಸೆ ನಲ ವಿಂದ ಮುನಿಕುಲದೊಡನೆ ತೆರಳಿದನಾ ಮಹೀಪಾಲ ೧೯OI ಸತ್ತಿಗೆಯ ಸಾಲುಗಳ ಬೀಸುವ ಬಿತ್ತರದ ಚೌರಿಗಳ ರಥದಲಿ ತೆತ್ತಿಸಿದ ಸೂನಗಿಯ ಸೀಗುರಿ ಗುಡಿ ಪತಾಕೆಗಳ ಮತ್ತೆ ಗಜಘಟೆ ತುರಗ ಕಾಲಾ ಲೋತ್ತರಿಸಿ ಬರೆ ಕಮಠ ಕೂರ್ಮರ ನೆತ್ತಿ ನೆಗ್ಗಲು ನಡೆದುದಗಣಿತ ಸೇನೆ ವಹಿಲದಲಿ ತಲ್ಲಣಿಸಿ ದಶದಿಕ್ಕುಗಳ ಬಲ ವೆಲ್ಲ ನೆರೆದುದು ವಾನರಾಧಿಪ ರಲ್ಲಿ ಸುಗ್ರೀವನ ವರೂಥದ ಬಳಿಯೆ ಸಂದೆಣಿಸೆ ನಿಲ್ಲಬೈದಿದರಾ ವಿಭೀಷಣ ನಲ್ಲಿ ದಾನವಸೇನೆ ಕೈದುಗ ಗಳಲ್ಲಿ ಹೊರವಂಟನು ವನಾಲಯದಿಂದಲಿದಿರಾಗಿ |೮೭ l೯೧। ಪುರವ ಕಳೆದರು ಮುಂದೆ ಯಮುನಾ ವರನದಿಯನುತ್ತರಿಸೆ ಪಯಣದಿ ಮೆರೆವ ನಂದೀಗ್ರಾಮವನ್ನು ಕಂಡಲ್ಲಿಗೈತಂದು ಭರತನೊಡಗೊಂಡಲ್ಲಿ ಹನುಮನ ದೂರದಲಿ ಮಣಿರಥದೊಳಗೆ ರಘು ವೀರರಿಬ್ಬರು ಕಂಡು ಬರೆ ಹೊಂ ದೇರನಿಳಿದರು ಭರತ ಶತ್ರುಘ್ನರು ಸರಾಗದಲಿ ಧಾರುಣಿಗೆ ಮೈಯಿಕ್ಕಿದರು ಪರಿ