ಪುಟ:Kanakadasa Haribhakthisara.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೪ ಕನಕ ಸಾಹಿತ್ಯ ದರ್ಶನ-೨ ೭೫ ಬೀಳುಕೊಂಡುದು ಹರುಷ ಚಿತ್ತದೆ ದಾಳಿ ಹರಿಯಿತ್ತೆನುತ ಮುನಿಪದಕೆರಗಿ ಕೈಮುಗಿದ ೧೫೬ ಅರಸ ನೀ ಮನವೊಲಿದು ಕೇಳದ ಚರಿತೆ ತಾನೊಂದಿಲ್ಲ ಲೋಕದಿ ಪರಮ ಪುಣ್ಯದ ರಾಮಕಥೆಯಿದ ಕೇಳೆ ನೀನಿಂದು ಕೊರತೆಯುಂಟೇ ಇಷ್ಟಭೋಗವ ಹರಿಕೊಡುವ ನಿಮಗಿನ್ನುಯೆನುತುಪ ಚರಿಸಿ ಕಳುಹಿಸಿಕೊಂಡು ಮುನಿ ಹೊರವಂಟನಾಶ್ರಮಕೆ ನಳ ಚರಿತ್ರೆ ೧೫೭। ಶರಧಿಶಯನ ಮುಕುಂದ ಸಚರಾ ಚರಭರಿತ ನಿರ್ಗುಣ ನಿರಾಮಯ ಸುರ ನರೋರಗವಂದ್ಯ ವರಪುರದಾದಿಕೇಶವನ ಚರಣದಂಕಿತವಾಗಿ ಹೇಳಿದ ಪರಮಧಾನ್ಯದ ಚರಿತೆ ಸಂತತ ಧರೆಯೊಳಿಂತೊಪ್ಪಿಹುದು ಆಚಂದ್ರಾರ್ಕ ಪರಿಯಂತ ರಾಯರೊಳಗಗ್ಗಳೆಯನಾ ಕೌಂ ತೇಯನಿಗೆ ರೋಮಶ ಮಹಾಮುನಿ ರಾಯ ವಿಸ್ತರಿಸಿದನು ನಳಭೂವರನ ಚರಿತೆಯನು ಶ್ರೀಯರಸ ವರಪುರದ ಚೆನ್ನಿಗ ರಾಯನಂಕಿತಮಾಗಿ ಪೇಳುವೆ ಪ್ರೀಯದಿಂದಾಲಿಸುವ ಸುಜನರಿಗೀ ಮಹಾಕಥೆಯ | ೧೫೮ “ಮಂಗಲಂ”