ಪುಟ:Kanakadasa Haribhakthisara.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ಒಂದನೆಯ ಸಂಧಿ ಶ್ರೀರಮಣ ಸರಸಿಜದಳಾಕ್ಷ ಮು ರಾರಿ ಸಚರಾಚರಭರಿತ ದುರಿ ತಾರಿ ನಿತ್ಯಾನಂದ ನಿರ್ಜರನಿಕರ ದಾತಾರ ವಾರಿಜಾಂಬಕ ವರಗುಣಾಶ್ರಯ ಮಾರಪಿತ ವೇದಾಂತನುತ ಸಾ ಕಾರ ಚೆನ್ನಿಗರಾಯ ಪಾಲಿಸು ಜಗಕೆ ಮಂಗಳವ | ಶರಧಿಶಯನ ಮುಕುಂದ ಕಂಸಾ ಸುರ ಮಥನ ಸುರಮೌಳಿವಂದಿತ ಗಿರಿಧರಾಚ್ಯುತ ವೇಣುನಾದ ವಿನೋದ ಭವದೂರ ಸರಸಿಜೋದ್ದವನುತ ದಯಾಸಾ ಗರ ಮುರಾಂತಕ ದೇವ ವರಪುರ ದರಸ ಚೆನ್ನಿಗರಾಯ ಪಾಲಿಸು ಸಕಲ ಸಜ್ಜನರ ಉರಗರಿಪುಕೇತನ ವಿಭೀಷಣ ವರದ ಹರಿ ಸದ್ಭಕ್ತಪೋಷಣ ದುರಿತ ಕುಲಗಿರಿ ವಜ್ರ ನರಕಾಂತಕ ಮಹಾಮಹಿಮ ಪರಮಪುರುಷ ಯಶೋದೆಯಾತ್ಮಜ ದುರಿತ ದುಃಖವಿನಾಶ ವರಪುರ ದರಸ ಚೆನ್ನಿಗರಾಯ ಪಾಲಿಸು ನಮ್ಮನನವರತ ಕರಿವದನ ಹೇರಂಬ ಲಂಬೊ ದರ ಗಣಾಧಿಪ ಮೋದಕಪ್ರಿಯ ಪರಶು ಪಾಶಾಂಕುಶ ಕರಾಂಕಿತದಿಂದ ರಂಜಿಸುವ ಸುರನರೋರಗ ನಮಿತ ಗೌರೀ