ಪುಟ:Kanakadasa Haribhakthisara.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೮ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂದನೆಯ ಸಂಧಿ ವರ ಕುಮಾರಕ ವಿದ್ಯೆವಾರಿಧಿ ವರದ ಗಣಪತಿ ಪಾಲಿಸೆನ್ನಯ ಮತಿಗೆ ಮಂಗಳವ ಜನ ಸಹಿತ ನಡೆತಂದು ಕಾಮ್ಯಕ ವನದೊಳಗೆ ಸಂಚರಿಸುತಿರ್ದನು ತೀರ್ಥಯಾತ್ರೆಯಲಿ ನಾರಿ ನಳಿನದಳಾಕ್ಷಿ ವರ ಜಂ ಭಾರಿನುತೆ ಚತುರಾನನ ಪ್ರಿಯೆ ಭೂರಿ ಶುಭಗುಣಭರಿತೆ ಭಕ್ತಾಶ್ರಿತಜನಾಧಾರೆ ನೀರೆ ನಿಗಮವಿಚಾರೆ ಘನಶ್ಯಂ ಗಾರೆ ಭಕ್ತರಿಗುರದೆ ಕೊಡುವ ಉ ದಾರೆ ಶಾರದೆ ನಲಿದೊಲಿದು ನೆಲಸನ್ನ ಜಿಹ್ನೆಯಲಿ ಧರಣಿಪತಿ ಚಿಂತಿಸುವ ಹಲುಬಿದ ನರನ ಹದನೇನೆಂದು ತಪದಲಿ ಮರೆದು ಕಳೆದನೋ ನಮನಿನಿಬರನೆನುತಲಿರಲಂದು ಸುರಪ ಕಳುಹಿದ ರೋಮಶನು ಮುನಿ ವರನು ಗಡಣದೊಳೆಯ್ಲಿ ರವಿಭಾ ಸುರಸುತೇಜದೊಳಂದು ಕಾಮ್ಯಕವನಕೆ ನಡೆತಂದ ೫). ರಾಯರೊಳಗಗ್ಗಳೆಯನಾ ಕೌಂ ತೇಯನಿಗೆ ರೋಮಶ ಮಹಾಮುನಿ ರಾಯ ವಿಸ್ತರಿಸಿದನು ನಳಭೂವರನ ಚರಿತೆಯನು ಶ್ರೀಯರಸ ವರಪುರದ ಚೆನ್ನಿಗ ರಾಯನಂಕಿತಮಾಗಿ ಪೇಳುವೆ ಪ್ರೀಯದಿಂದಾಲಿಸುವ ಸುಜನರಿಗೀ ಮಹಾಕಥೆಯ ಚ್ಯವನ ಗೌತಮ ಕಪಿಲ ಭೌಗು ಭಾ ರ್ಗವ ಭರದ್ವಾಜಾ ಕೌಶಿಕ ಪವನಭಕ್ಷಣ ವಾಮದೇವ ಮರೀಚಿ ಮೈತ್ರೇಯ ಶ್ರವತಿ ಕಣ್ಹಾಂಗಿರಸ ಶುಕ ಗಾ ಲವ ಪರಾಶರ ದಾಲ್ಯ ವರಮುನಿ ನಿವಹದೊಡನೆಯ್ತಂದನಾ ರೋಮಶ ಮಹಾಮುನಿಪ IOO. ಪರಮ ಪುಣ್ಯಚರಿತ್ರೆಯಿದನಾ ದರಿಸಿ ಕೇಳುವ ನರರ ಜನ್ಮಾಂ ತರದ ಘನ ದುಷ್ಕರ್ಮ ದುಃಖವಿನಾಶವಾಗುವುದು ಕರಿ ತುರಗ ರಥನಿಚಯ ರಾಜ್ಯದ ಸಿರಿಯ ಸಂಪದವಾಯುವನು ಮುರ ಹರನು ಮನ್ನಿಸಿ ಕೊಡುವ ಸುಜನರಿಗಿಷ್ಟಸಂಪದವ ಅರಸನನುಜರು ಸಹಿತ ಮುನಿಮು ಖ್ಯರನ್ನು ಕಂಡಿದಿರೆದ್ದು ಚರಣದೊ ಲೆರಗಿ ಬಿಜಯಂಗೆಯ್ಲಿ ತಂದನು ತಳಿರ ಮಂಟಪಕೆ ವರ ಮುನೀಂದ್ರರಿಗರ್ಥ್ಯ ಪಾದ್ಯೋ ತರದೊಳಪಚರಿಸುತ್ತ ದರ್ಭಾ ಸ್ತರಣದಲಿ ಕುಳ್ಳಿರಿಸಿದನು ಭಯಭರಿತ ಭಕ್ತಿಯಲಿ TOO. ಜನಪ ಕುರುಭೂಪಾಲನೊಳು ಜೂ ಜಿನಲಿ ರಾಜ್ಯವ ಸೋತು ಯಮನಂ ದನನು ತನ್ನನುಜಾತರೊಡನೆಯೆ ಸತ್ಯವನ್ನು ಬಿಡದೆ ವನಿತೆ ಝಮ್ಯಮುನೀಂದ್ರ ಮಂತ್ರಿ ನೀವಘಾಡದ ದೇವಋಷಿಗಳು ಪಾವನರು ಮೂಲೋಕಕತಿ ಸಂ ಭಾವನೀಯರು ಸತ್ಯಸಂಧರು ನಿರ್ಮಲಾತ್ಮಕರು ಆವನರಿವನು ನಿಮ್ಮ ಮಹಿಮೆಯ