ಪುಟ:Kanakadasa Haribhakthisara.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಎರಡನೆಯ ಸಂಧಿ ಬಲಿದ ವಿರಹಾಗ್ನಿಯಲಿ ನೊಂದೆನು ಬಳಲಿದೆನು ತನು ಬಾಡಿ ತಾಪದಿ ನಲುವು ಹಿಂಗಿತು ಬವಣೆ ಹೆಚ್ಚಿತು ತ್ರಾಣವೆಳದಾಯ್ತು ಹಲವು ಮಾತೇನಿನ್ನು ನಳನೃಪ ತಿಲಕನೆನ್ನಯ ಪತಿಯಲಾ ಭೂ ತಳದ ಪುರುಷರು ಪಿತನ ಸಮ ಕೇಳೆಂದಳಿಂದುಮುಖಿ ಬಂದ ಹಂಸೆಯ ಕಂಡು ಮುಖಕಳೆ ಯಿಂದಲರಿದನು ನೃಪತಿ ಮನದಲಿ ಇಂದುಮುಖಿ ತನಗೊಲಿದ ಹದನಹುದೆಂದು ಹರುಷದಲಿ ಮಂದಗಮನೆಯ ಕಂಡಿರೇ ಏ ನೆಂದು ನುಡಿದಳು ಸತಿಯ ಬಗೆಯೇ ನೆಂದು ಬೆಸಗೊಳೆ ನಗುತ ಬಳಿಕಿಂತೆಂದುದಾ ಪಕ್ಷಿ ೪OI ಅರಸ ಕೇಳಾ ಹಂಸೆ ತರುಣಿಯ ಕರುಣದಳತೆಯ ಕಂಡು ತಾ ಬಂ ದಿರುವ ಕಾರ್ಯದ ಹದನು ಲೇಸಾಯೆಂದು ಮನದೊಳಗೆ ಹರುಷ ಮಿಗೆ ಕೊಂಡಾಡಿ ಸತಿಯನು ಕರೆದು ನುಡಿದುದು ನಿನಗೆ ನಳಭೂ ವರನ ಪತಿಯನು ಮಾಳ್ವೆನಂಜದಿರೆಂದುದಾ ಹಂಸೆ ಮಾನವಾಧಿಪ ಕೇಳು ಮನದನು ಮಾನವನು ಬಿಡು ಗುಡಿಯ ಕಟ್ಟಿಸು ನೀನೆಳಸಿದಿಷ್ಟಾರ್ಥಫಲ ಸಿದ್ಧಿಸಿದುದಿನ್ನೇನು ಮಾನನಿಧಿ ನೀ ಮುನ್ನ ಮಾಡಿದ ನೂನ ಸುಕೃತದ ಫಲವೊ ನಿನ್ನನೆ ಧ್ಯಾನಿಸುವಳನವರತ ಮನ ಬೇರಿಲ್ಲವಾ ಸತಿಗೆ ೪O [೪೫] ಅಂತರಂಗದ ಬುದ್ದಿಯನು ದಮ ಯಂತಿಗೆಲ್ಲವನರುಹಿ ತರುಣಿಯ ಸಂತವಿಟ್ಟಲ್ಲಿಂದ ಕಳುಹಿಸಿಕೊಂಡು ಬೇಗದಲಿ ಮುಂತಳರ್ದು ಮಿಗೆ ತನ್ನ ಬಾಂಧವ ಸಂತತಿಯನೊಡಗೊಂಡು ನಿಷಧನ ಚಿಂತೆಯನು ಪರಿಹರಿಸಬೇಕೆಂದೈದಿತಾ ಹಂಸೆ ಆ ತಳೋದರಿ ನಿನ್ನ ಮೇಲಣ ಪ್ರೀತಿಯಿಂದೊಲಿದಂತರಂಗದಿ ಕಾತರಿಸುತಿಹಳಂಗಜನ ಉಪಟಳದಿ ಕಡುನೊಂದು ಧಾತುಗುಂದಿಹಳಾ ತರುಣಿ ಮನ ಸೋತು ಹಂಬಲಿಸುವಳು ನಳನೃಪ ನಾತನೇ ಪತಿಯೆಂದು ನಂಬಿಹೆನೆಂದಳಿಂದುಮುಖಿ ಆಗ ನಳಭೂವರನ ದಕ್ಷಿಣ ಭಾಗ ಭುಜನಯನಂಗಳದುರಿದು ವಾಗ ಕೇಳಿದನಿದರ ಫಲವೇನೆಂದು ಭೂಸುರರ ಭೋಗಸುಖದರ್ಶನದ ಫಲವಿಂ ದೀಗಲಹುದೆನಲಾ ಸಮಯದಿ ಸ ರಾಗದಲಿ ನಡೆತಂದುದಾ ನೃಪನೆಡೆಗೆ ಕಲಹಂಸೆ ಎಲೆ ನೃಪತಿ ದಮಯಂತಿಯನು ನಿನ ಗೋಲಿಸಿ ಬಂದೆನು ಭಾಷೆ ಸಂದುದು ಲಲನೆಯನು ನೀ ಮದುವೆಯಾಗಿಂದೆನ್ನ ಕಳುಹೊನಲು ಬಳಲಿದಿರಿ ನಮಗೋಸುಗವೆ ಬಲು ಹಳುವದಲಿ ತೊಳಲಿದಿರಿ ಕಷ್ಟವ ಬಳಸಿದಿರಿ ಸಾಕಿನ್ನು ಗಮಯಿಸಿಯೆಂದು ಬೀಳ್ಕೊಟ್ಟ ೪೩. ೧೪೭