ಪುಟ:Kanakadasa Haribhakthisara.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೬ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ನಾಲ್ಕನೆಯ ಸಂಧಿ ೧೨೭ ನಂಬಿದನು ಲೇಸಾಗಿ ಭಾಷೆಯ ನಿಂಬುಗೊಂಡುದು ಹೃದಯ ಪುಷ್ಕರ ನೆಂಬ ಖಳ ಸಂತೋಷದಲಿ ಕಲಿಪುರುಷನೊಡಗೊಂಡು ಅಂಬುಜಾಕನ ಕಳೆಗೆ ತಾ ಪ್ರತಿ ಬಿಂಬನೆನಿಸುವ ನಳನ ಬಳಿಗತಿ ಸಂಭ್ರಮದೊಳ್ಳೆತಂದರಿಬ್ಬರು ರಾಯನೋಲಗಕೆ ಮೇದಿನೀಪತಿ ಕೇಳು ಸಜ್ಜನ ಸಾಧು ಬಲ್ಲನೆ ನಳನ ಹೃದಯವ ನಾ ದುರಾತ್ಮನ ನುಡಿಯ ಕೈಕೊಂಡಾಡಿದನು ನೃಪತಿ ಭೇದದಲಿ ಕಲಿಪುರುಷ ಮಾಯೋ ಪಾಧಿಯಲಿ ಪುಷ್ಕರನ ಜೂಜಿನ ವಾದದಿಂದರೆಗಳಿಗೆಯಲಿ ಗೆಲಿಸಿದನು ವಸ್ತುಗಳ |೨೪| ೨೪। ೨೮) ಮಿಸುನಿ ರತ್ನಪ್ರಭೆಗಳಲಿ ರಂ ಜಿಸುವ ಮಂಟಪದೊಳಗೆ ರಾಜ ಪ್ರಸರಸಹಿತವನೀಶನಿದ್ದನು ಸಿಂಹಪೀಠದಲಿ ಶಶಿಮುಖಿಯರಡಬಲದಿ ಕೈವಾ ರಿಸುತ ಸಿತಚಾಮರವ ಚಿಮ್ಮಲು ನಸುನಗುತ ಕೈಮುಗಿದು ಪುಷ್ಕರನೆಂದನಾ ನಳಗೆ ದುಗನು ಪಂಚಗ ಬಾರವೆರಡಿ ತ್ತಿಗೆಯ ಬೇಡಿದಡಲ್ಲಿ ಬೀಳ್ವುದು ವಿಗಡ ಪುಷ್ಕರನೃಪನು ಗೆಲಿದನು ಹಲಗೆಯೊಂದರಲಿ ಬಗೆಬಗೆಯ ರತ್ನಗಳ ಧನ ಧಾ ನ್ಯಗಳ ಗಜ ರಥ ತುರಗ ಮೊದಲಾ ದಗಣಿತ ಸುವಸ್ತುಗಳ ಸೋತನು ನೃಪತಿ ಪುಷ್ಕರಗೆ ೨೫। ೨ | ಅರಸ ಕೇಳೀ ವಿಪ್ರನತಿ ಭಾ ಸುರ ಸುತೇಜದೊಳೆಸೆವ ನೆತ್ತವ ನೆರಡ ಕಾಣಿಕೆಗೊಟ್ಟ ನನಗಿದರಲ್ಲಿ ಮನವಾಯ್ತು ಹರವು ಹಾಸಂಗಿಗಳನಾಡುವೆ ವಿರದೆ ಸೋತವನಾವನಾಗಲಿ ಧರೆಯನುಳಿದು ವನಾಂತರಕೆ ತೆರಳುವುದು ಸತಿಸಹಿತ ಆಡಿದನು ಜೂಜಿನಲಿ ನೃಪ ಹೋ ಗಾಡಿದನು ರಾಜ್ಯವನ್ನು ಕೋಶವ ಕೇಡುಗರ ಕೈ ಮೇಳವಿಸಿದುದು ದೈವಗತಿಯಿಂದ ಬಾಡಿತರಸನ ವದನ ಸಭೆಯಲಿ ನೋಡಿದರು ಸಜ್ಜನರು ಮರುಗಿದ ರಾಡಲೇನದನರಸ ಸೋತನು ವಿಧಿಯ ಘಟನೆಯಲಿ |೨೬| |೩೦| ಧರಣಿಪತಿ ನಿನಗಿನಿತು ಚಿತ್ತಕೆ ಹರುಷವಾಗಿರಲಿನ್ನು ಮನದಲಿ ಕೊರತೆದೋರಲು ಮಾಣು ಇದು ಪಾರ್ಥಿವರ ಪಂಥ ಕಣಾ ಧುರಕೆ ಬೇಂಟೆಗೆ ಜೂಜಿಗೆಂದಡೆ ಕರೆದಡೋಸರಿಸುವುದು ನೀತಿಯೆ ನಿರುತವಿದು ಚಿಸು ಎಂದನು ನೃಪಗೆ ಕೈಮುಗಿದು ತೀರಿತಿನ್ನೇನವನಿಪತಿ ಭಂ ಡಾರವಸ್ತು ಸುವಸ್ತುವೆಲ್ಲವು ಸೇರಿತೆನಗಿಂದಿನಲಿ ಪಣವೇನಿನ್ನು ಪೇಳೆನಲು ಭೂರಮಣ ಚಿಂತಿಸಿದ ಮನದಲಿ ನಾರಿಯಳನೊಡ್ಡುವೆನು ಸೋತಿಹ ಧಾರಿಣಿಯ ನೆರೆ ಗೆಲುವೆನೆನ್ನುತ ತನ್ನ ಮನದೊಳಗೆ ೨೭| ೩೧।