ಪುಟ:Kanakadasa Haribhakthisara.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೮ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ನಾಲ್ಕನೆಯ ಸಂಧಿ ಅರಸನಾಪ್ತಪುರೋಹಿತನು ಮನ ಹರುಷವಳಿದೆಯ್ತಂದನಂತಃ ಪುರವ ಹೊಕ್ಕನು ರಾಜವದನೆಯ ಸಭೆಗೆ ತಾ ಬಂದು ತರುಣಿಯರ ಮೇಳದಲಿ ಶೋಭಿಪ ಪರಮರತ್ವದ ಪೀಠದಲಿ ತಾ ಹರುಷಮಿಗೆ ರಂಜಿಸುವ ಸತಿಯಳ ಕಂಡು ಕೈಮುಗಿದು ಶಶಿಕುಲಾಂಬುಧಿಚಂದ್ರ ರಿಪುನೃಪ ನಿಶಿತ ಭಾಸ್ಕರತೇಜ ನಿಮಗೀ ವ್ಯಸನ ತೋರಿತೆ ಜೂಜಿನಲಿ ಶಿವಶಿವ ಮಹಾದೇವ ಬಿಸರುಹಾಕನ ಕರುಣವಿದು ಸೋ ಲಿಸಿದನೇ ಪುಷ್ಕರನು ಇದು ವಿಧಿ ವಶವಲಾ ತಪ್ಪೇನು ಸಾಕಿನ್ನೆಂದಳಿಂದುಮುಖಿ |೩೨| |೩೬ ತಾಯೆ ಬಿನ್ನಹವಿಂದು ನಿಮ್ಮಯ ರಾಯ ಸೋತನು ಜೂಜಿನಲಿ ನಿ ರ್ದಾಯದಲಿ ಪುಷ್ಕರನು ಗೆಲಿದನು ಸಕಲರಾಜ್ಯವನು ನೋಯಲಾಗದು ಚಿತ್ತದಲಿ ನೆರೆ ಬೀಯವಾದುದು ಸಿರಿಯು ಇನ್ನಿದ ರಾಯತವ ನೀವ್ ಬಲ್ಲಿರೆಂದನು ವಿಪ್ರ ಕೈಮುಗಿದು ಲಲನೆಯಾಡಿದ ನುಡಿಗೆ ಸಭೆಯವ ರಳಲಿ ಬೈದರು ಪುಷ್ಕರನೆ ಕೇ ಛಲವೊ ಬಾಹಿರ ಸಾಕು ತೆಗೆ ಚಾರಿಗಳನೆಂದೆನುತ ಹೋಲಬುದಪ್ಪಿದ ಹುಲ್ಲೆ ಬೇಡನ ಬಲೆಗೆ ಬಿದ್ದಂತಾಗೆ ನಳನೃಪ ತಿಲಕನೆಂದನು ಮನದ ದುಗುಡದಿ ತನ್ನ ನಿಜಸತಿಗೆ |೩೩| |೩೭| ಕಮಲವನದಲಿ ಮಂಜು ಸುರಿದಾ ಕ್ರಮದ ಬಗೆಯಲಿ ಸತಿಯಳಿಗೆ ಮುಖ ಕಮಲ ಬಾಡಿತು ನುಡಿಯ ಕೇಳುತ ಮನದ ಚಿಂತೆಯಲಿ ಕಮಲನಾಭನ ಕರುಣ ಕವಚವು ಸಮೆದರಾರೇಗುವರು ಹರಹರ ಕುಮತಿ ಪುಷ್ಕರನಿಂತು ಮುನಿದನೆ ಎನುತ ಮರುಗಿದಳು ತರುಣಿ ಕೇಳಪಜಯದ ನಾರಿಯ ಸೆರಗ ಹಿಡಿದೆನು ರಾಜ್ಯಲಕ್ಷ್ಮಿಯ ಪರರಿಗಿತ್ತುಳುಹಿದನು ದೇಹವನಿದಕೆಯಂಜದಿರು ತರುಣಿ ನೀ ಕಾನನದಿ ಗಿರಿಗ ಜ್ವರಗಳಲಿ ಬಿಡದೆಂತು ತೋಳಲುವೆ ಹರಹರಾಯೆಂದೆನುತ ಸತಿಯನ್ನು ನೋಡಿ ಬಿಸುಸುಯ್ದ |೩೪|| ೩೮। ಕಮಲಮುಖಿ ನಳನೃಪಗೆ ರಾಜ್ಯ ಭ್ರಮಣವಾಯಿತೆ ಎನುತ ಸತಿ ಭೂ ರಮಣನೆಡೆಗೈತಂದು ಕಂಡು ಕಾಂತನಿಂಗಿತವ ತಮದ ರಾಹುಗ್ರಹವು ಸೋಂಕಿದ ದ್ಯುಮಣಿಯಂತಿರೆ ಕಂಡು ಧೈರ್ಯದಿ ಕಮಲಮುಖಿ ಕೈಮುಗಿದು ಬಿಸಿದಳು ನಿಜಪತಿಗೆ ಚಿತ್ತವಿಸು ಶಶಿಕುಲಶಿರೋಮಣಿ ಹೆತ್ತವರು ಸತಿಸುತರು ಮನೆ ಮನೆ ವಾರ್ತೆ ಬಾಂಧವ ಧರಣಿಪರ ಭೋಗೈಕಸಂಪದವು ನಿತ್ಯವಲ್ಲ ಶರೀರಸುಖಗಳ ನಿತ್ಯವೆಂಬುದ ತಿಳಿಯುತೀ ನಿಜ ಸತ್ಯವನು ಕೈಹಿಡಿದು ಸಲಹೆಂದಳು ಸರೋಜಮುಖಿ |೩೫|| ೩೯