ಪುಟ:Kanakadasa Haribhakthisara.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೦ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ನಾಲ್ಕನೆಯ ಸಂಧಿ ೧೩೧ ಚಿಂತೆ ಬೇಡೆಂದರಸನನು ಸತಿ ಸಂತವಿಟ್ಟಳು ನೀತಿಯಲಿ ದಮ ಯಂತಿ ನಿಜಮಂದಿರಕೆ ಸರಿಯಲು ಕಂಡು ಪುಷ್ಕರನು ಇಂತು ಜೂಜಲಿ ಸೋತು ತಿರುಗಿ ನೈಂತು ರಾಜ್ಯದಿ ನಿಲುವಿರೆನೆ ಭೂ ಕಾಂತ ವನವಾಸಕ್ಕೆ ನಿಜಸತಿ ಸಹಿತಲನುವಾದ ಏನನೆಂಬೆನು ಜೇಯ ಲೋಕದ ಮಾನಿನಿಯೆ ದಮಯಂತಿ ಸತ್ಯ ಜ್ಞಾನಿಯಲ್ಲಾ ಸತಿಯರಿಗೆ ಗುರು ಪತಿವ್ರತಾಗುಣದಿ ಮೌನದಲಿ ಪತಿಯಂಘಿಕಮಲ ಧ್ಯಾನದಲಿ ಮನಸಂದು ಘನಸತಿ ಕಾನನಕೆ ಗಮಿಸಿದಳು ವರಪುರದರಸನಾಜ್ಜೆಯಲಿ ೪OI ತಳಿತ ಮಣಿಭೂಷಣಗಳೆಲ್ಲವ ಕಳಚಿ ಬಿಸುಟನು ಗುರುವಿನಂಫ್ರಿಗೆ ನಳಿನಮುಖಿಸಹಿತೆರಗಿ ಹೊರವಂಟನು ನಿಜಾಲಯವ ಬಳಿಕಲೈದಿದರಖಿಳಪುರಜನ ಜಲದ ಕಣ್ಣಳ ಧಾರೆಯಲಿ ಗಾ ವಳಿ ಮಸಗಿ ಮಿಗೆ ಶೋಕರವ ತುಂಬಿದುದು ಪಟ್ಟಣವ ೪O ಸಾಕು ಕಂಬನಿಗಳಲಿ ನನೆದರು ಊಳಿಗದ ಪರಿಜನರು ಮಂತ್ರಿಗ. ಳೋಲಗದ ಸಾಮಂತ ಸಚಿವರು ಮಲ್ಲ ಗಾಯಕರು ಬಾಲೆಯರು ಬಾಲಕರು ಪುರಜನ ಜಾಲವೆಲ್ಲವು ಶೋಕದಲಿ ಕ್ಷಿತಿ ಪಾಲನರಸಿಯ ಕಂಡು ಮರುಗಿತು ಮಂದಿ ಗೋಳಿಡುತ ೪೨|| ಮನದಿ ಮುನ್ನವೆ ತಿಳಿದು ನೃಪಸತಿ ತನಯರನು ರಥದೊಳಗೆ ತಂದೆಯ ಮನೆಗೆ ಕಳುಹಿದಳಾಪ್ತರೊಡನೆ ವಿದರ್ಭಪಟ್ಟಣಕೆ ಜನಪ ಕೇಳಿತ್ತಲು ಮಹಾರೋ ದನದಿ ಪಟ್ಟಣವೆಲ್ಲ ಮರುಗಲು ವನಿತೆ ಪತಿಯೊಡನೈದಿದಳು ನಿಜಭಾವ ಶುದ್ದಿಯಲಿ ೪೩