ಪುಟ:Kanakadasa Haribhakthisara.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೮ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಆರನೆಯ ಸಂಧಿ ೧೪೯ ಆರನೆಯ ಸಂಧಿ ಲೋಕದೊಳಗಗ್ಗಳೆಯ ಮಹಿಪರ ನೇಕರವಳೊಳಗಾರನೊಲ್ಲದೆ ನೂಕಿ ತನ್ನನೆ ಒಲಿದು ಕೈಕೊಂಡಳು ಸರೋಜಮುಖಿ ಆಕೆಯಗಲಿದ ಪಾತಕನು ತಾ ನೇಕೆ ಧರೆಯೊಳು ಶಿವಶಿವಾಯಂ ದಾ ಕಮಲಲೋಚನೆಗೆ ಮರುಗಿದನರಸ ಕೇಳೆಂದ ಇಂದುವದನೆಯನಗಲಿ ತಾ ಮನ ನೋಂದು ಕಾರ್ಕೋಟಕನ ದೆಸೆಯಲಿ ಬಂದು ಹೊಕ್ಕನು ನಿಷಧಪತಿ ಋತುಪರ್ಣನಗರಿಯನು ೪। ಕೇಳು ಕುಂತೀತನಯ ನಿಷಧನ್ಯ ಪಾಲನಿತ್ತಲು ಮರೆದು ಮಲಗಿದ ಬಾಲಕಿಯ ಬಿಟ್ಟಡವಿಯಲಿ ಹೊರವಂಟನಾ ವನವ ಕಾಲವಾವನ ಕೀಳು ಮಾಡದು ಶೂಲಪಾಣಿಯೆ ಬಲ್ಲ ನಳ ಭೂ ಪಾಲಕನ ವಿಧಿಯೇನನೆಂಬೆನು ಬಂದನಡವಿಯಲಿ ಈ ಪರಿಯೊಳತಿ ಶೋಕದಿಂದ ಪ್ರ ೪ಾಪಿಸುವ ನಳನೃಪತಿ ಹೆಚ್ಚಿದ ತಾಪದಲಿ ಕಡುನೊಂದು ಬಳಲುತ ತನ್ನ ಮನದೊಳಗೆ ಶ್ರೀಪತಿಯ ನೆಲೆಗೊಳಿಸಿ ಹೃದಯದ ತಾಪದೊಳು ಬರುತಿರಲು ಮುಂದೆ ಸ ಮೀಪದಲಿ ಹುತವಹನ ಮಹಿಮೆಯ ಕಂಡನವನೀಶ IO. ೧|| ವನಿತೆ ಮಲಗಿಹಳೋ ಅಧೈರ್ಯದಿ ನೆನೆವಳೋ ದೈವವನು ನಿದ್ರೆಯ ಕನಸ ಕಂಡೇಳುವಳೋ ಕಾಣದೆ ಹಲವ ಹಂಬಲಿಸಿ ಕನಲಿ ವಿಧಿಯನು ಬೈವಳೋ ಕಂ ಬನಿಯ ಸುರಿವಳೊ ಶೋಕದಲಿ ನಿಜ ತನುವ ಬಿಡುವಳೊ ಕಾಂತೆಯೆಂತಿಹಳೆನುತ ನಡೆತಂದ ಏನನೆಂಬೆನು ನೃಪತಿ ಕಿಚ್ಚಿನ ಹಾನಿಯನು ಬನದೊಳಗೆ ಚಲಿಸುತ ಭಾನುಮಂಡಲವಡರೆ ಮುಸುಕಿದ ಹೊಗೆಯ ಹೊರಳಿಯಲಿ ಕಾನನವನೆಡೆಗೊಂಡ ದಳ್ಳುರಿ ಗಾನಲಾಪುದೆ ತರುನಿಕರ ವೈ ಮಾನಿಕರು ನಡನಡುಗೆ ಬೆಂದುದು ಸಕಲ ವನಭೂಮಿ ಸುತರ ಪರರೆಡೆಗಿತ್ತು ನಂಬಿದ ಸತಿಯ ತಂದಡವಿಯಲಿ ಮಲಗಿಸಿ ಮತಿವಿಕಳನಾದೆನು ಪುರಾಕೃತ ಕರ್ಮಫಲವೈಸೆ ಕ್ರಿತಿಯೊಳಾರುಂಟೆನ್ನವೋಲ್ ನಿಜ ಸತಿಗೆ ತಪ್ಪಿದ ಬಾಹಿರನು ಎಂ ದತಿಶಯದ ಶೋಕದಲಿ ನಡೆದನು ಶಿವಶಿವಾಯೆನುತ ಬಿದಿರ ಮೆಳೆ ಧಗಧಗಿಸೆ ಘನ ಹೆ ಬಿದಿರು ಛಟಛಟಿರೆನಲು ಉರಿಯೊಳು ಕದಳಿಗಳು ಸಿಮಿಸಿಮಿಸ ತರುಗಳನುರುಹಿ ಮೆಳೆಗಳನು ಗದಗದಿಸೆ ಗುಹೆಗಳಲಿ ಮೃಗತತಿ ಬೆದರಿ ಹಾಯುವು ಪಕ್ಷಿಸಂಕುಲ ಉದುರಿದುವು ಗರಿಸಹಿತ ಬೆಂದಾ ವನದ ಮಧ್ಯದಲಿ ೭ ೩.