ಪುಟ:Kanakadasa Haribhakthisara.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೦ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಆರನೆಯ ಸಂಧಿ ೧೫೧ ತೆಗೆದು ಹಾಯುವು ಸಿಂಹ ಶಾರ್ದೂ ಲಗಳು ಕರಿಗಳ ಹಿಂಡು ನಾನಾ ಮೃಗಗಳಗಣಿತ ಬೆಂದು ಬಿದ್ದವು ನಿಮಿಷಮಾತ್ರದಲಿ ಚಿಗಿದು ಹಾಯುವು ಗಂಡಭೇರುಂ ಡಗಳು ಮೊದಲಾದಖಿಳಮೃಗಪ ಕ್ಷಿಗಳು ಕೆಡೆದುವು ಕಿಚ್ಚಿನೊಳಗವನೀಶ ಕೇಳೆಂದ ಇರಲಿರಲು ಕಾಲಾಂತರಕೆ ಭೂ ವರನು ನಳನೃಪನಿಲ್ಲಿಗೈದುವ ಧರಣಿಪನ ಕರಕಮಲ ಸೋ೦ಕಲು ಶಾಪವಿದು ಬಳಿಕ ಪರಿಹರಿಪುದೆನೆ ಮುನಿಯ ವಚನದಿ ಬರವ ಹಾರುತ್ತಿರಲು ಬಂದೆ ಕರುಣದಿಂದಗ್ನಿಯನು ಪರಿಹರಿಸೆಂದನುರಗಪತಿ ೮). ೧೨। ಪ್ರಳಯಕಾಲದಿ ಸುಡುವ ವಡಬಾ ನಳನೊ ಎನಲಾ ವನವ ಸುಡುತಲಿ ಸುಳಿಸುಳಿಯುತಾಹಾರಗೊಳುತಿರಲಲ್ಲಿ ದನಿಯಾಯ್ತು ಸಿಲುಕಿದೆನು ಪಾವಕನೊಳಕಟಕಟ ಅಳಿವೆ ಹಾ ನೃಪಕುಲಶಿರೋಮಣಿ ಒಲಿದು ಬಿಡಿಸೈ ಸುಕೃತ ನಿನಗಹುದೆಂದುದಾ ನಿನದ ಕರುಣದಲಿ ನೃಪ ಭೀತಿಗೊಳ್ಳದೆ ಉರಗಪತಿಯನ್ನು ತೆಗೆಯುತನಲನ ಉರಿಯ ತಪಿಸಿ ಕೊಳದ ತೀರಕೆ ತಂದು ಪರಿಚರಿಸೆ ಕರವಿಡಿದು ಧರಣಿಪನ ಕಚ್ಚಿದ ಡುರವಣಿಸಿ ವಿಷವೇರೆ ನೃಪತಿಯ ಪರಮತೇಜದ ದೇಹ ಕೆಟ್ಟಿತು ವಿಕೃತರೂಪಾಗಿ ೯) [೧೩ ಆಗಲಾ ದನಿಗೇಳಿ ನೃಪತಿ ಸ ರಾಗದಿಂದವೆ ಬಂದು ಹೊಕ್ಕನು ಕೂಗಿದವರಾರೆನುತ ಬರುತಿರೆ ಕಂಡನುರಗಪತಿ ಪೋಗುತಿದೆಯೆನ್ನಸುವು ಸಲಹು ಷ ಡಾಗಮಜ್ಜ ನೃಪಾಲಯೆನಲಾ ಭೋಗಿಯನು ಕಂಡರಸ ನೀನಾರೆಂದು ಬೆಸಗೊಂಡ ದೊಡ್ಡ ಹೊಟ್ಟೆಯ ಗೂನು ಬೆನ್ನಿನ ಅಡ್ಡ ಮೋರೆಯ ಗಂಟು ಮೂಗಿನ ದೊಡ್ಡ ಕೈಕಾಲುಗಳ ಉದುರಿದ ರೋಮಮೀಸೆಗಳ ಜಡ್ಡು ದೇಹದ ಗುಜ್ಜುಗೊರಲಿನ ಗಿಡ್ಡ ರೂಪಿನ ಹರಕು ಗಡ್ಡದ ಹೆಡ್ಡನಾದ ಕುರೂಪಿತನದಲಿ ನೃಪತಿ ವಿಷದಿಂದ ೧೦|| |೧೪|| ಉರಗಪತಿ ಕಾರ್ಕೊಟಕನು ತಾ ನರಸ ಕೇಳೀ ಬನದೊಳಿರುತಿರೆ ಪರಮ ಋಷಿ ಬಂದೆನ್ನ ತಾಗಿದನಂದು ಭೀತಿಯಲಿ ಕರೆದುಕೊಟ್ಟನು ಶಾಪವನು ಸಂ ಚರಿಸದಂತಿರೆಯೆನಗೆಯಿದು ಪರಿ ಹರಿಸಲೆಂದಿಗೆ ಮುನಿಪ ಕರುಣಿಪುದೆಂದೊಡೆಂತೆಂದ ಮಾರನಾಕಾರದ ನೃಪಾಲಕ ಕ್ರೂರ ರೂಪಾದನು ಪುರಾಕೃತ ಮೀರಲಾರಳವೆಂದು ನುಡಿದನು ತನ್ನ ಮನದೊಳಗೆ ತೋರಮಾಣಿಕವೆಂದು ಪಿಡಿದರೆ ಭೂರಿ ಕೆಂಡವಿದಾಯ್ತು ಶಿವಶಿವ ಕೂರಜಂತುಗಳೊಡನೆ ಸಖತನ ಫಲಿಸಿತೆನಗೆಂದ | |೧೧|| ೧೫।