ಪುಟ:Kanakadasa Haribhakthisara.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೪ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಆರನೆಯ ಸಂಧಿ ೧೫೫ ಹರಿವ ನದಿಗಳ ಮನತಟಾಕದ ವರಕುಸುಮ ಮಲ್ಲಿಗೆಯ ಬನಗಳ ಪುರದ ಪ್ರಾಂತದೊಳೆಸೆವ ಕೆಂದಾವರೆಯ ಕೊಳಗಳನು ಉರುತರದ ಪಾನೀಯ ಶಾಲೆಯ ಮರಗಳಿಂದತಿ ಮೆರೆವ ರಾಜ್ಯವ ಧರಣಿಪತಿ ಸಂತಸದಿ ನೋಡುತ ಬಂದನಾಯೆಡೆಗೆ ಬಂದು ಹೊಕ್ಕನು ಪುರವ ಮೆರೆವತಿ ಚಂದವನು ನೆರೆನೋಡಿ ಮನದೊಳ ಗಂದು ಕೊಂಡಾಡಿದನು ಋತುಪರ್ಣನ ಮಹಾಸಿರಿಯ ತಂದುದೇ ವಿಧಿ ತನ್ನನಿಲ್ಲಿಗೆ ಮಂದಭಾಗ್ಯನು ತಾನೆನುತ ಮನ ನೊಂದು ನೆನೆದನು ವರಪುರಾಧಿಪ ಚೆನ್ನಕೇಶವನ |೨೪| ೨೪|| ೨೮) ನಗನಗಿಪ ಕೋಟಾವಳಿಯ ಹೊಗ. ರುಗುವ ಹೇಮದ ಕೊತ್ತಳಂಗಳ ಗಗನವನು ಚುಂಬಿಸುವ ತೆನೆಗಳ ಸಾಲುರತ್ನಗಳ ಸೊಗಸುವಾಳೇರಿಗಳ ಸುತ್ತಿರಿ ವಗಳ ಘಾತವನಾರು ಬಲ್ಲರು ಬಿಗಿದ ವಜ್ರಕವಾಟವೆಸೆದುದು ದಿಕ್ಕುದಿಕ್ಕಿನಲಿ ೨೫] ಹೊಳೆವ ಮಿಸುನಿಯ ರತ್ನನಿಚಯದ ನೆಲೆನೆಲೆಯ ಸೌಧಾಗ್ರದಲಿ ಪ್ರ ಜ್ವಲಿಪ ಹೇಮದ ಕಲಶಗಳ ರವಿಚಂದ್ರಶಾಲೆಗಳ ಲಲನೆಯರ ನಾನಾ ವಿನೋದದ ಹಲವು ಗೋಪುರ ಶಿಖರದಗಣಿತ ನೆಲೆಯ ವರ್ಣಿಸಲರಿದಯೋಧ್ಯಾಪುರವು ರಂಜಿಸಿತು |೨೬| ಅರಸುಗಳು ಭೂಸುರರು ಮಿಗೆ ವೈ ಶ್ಯರು ಚತುರ್ಥರು ನಾಗರೀಕದ ಪುರಜನರು ಸಂದಣಿಸಿತಗಣಿತ ರಾಜವೀಧಿಯಲಿ ಕರಿ ತುರಗ ರಥ ಪಾಯದಳ ಗೋ ಚರಿಸಿತಂಗಡಿ ನವವಿಧಾನದಿ ಮೆರೆವಯೋಧ್ಯಾಪುರವ ಕಂಡನು ತೂಗಿದನು ಶಿವರ ೨೭