ಪುಟ:Kanakadasa Haribhakthisara.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೮ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಏಳನೆಯ ಸಂಧಿ ೧೫೯ ಜನಪ ಕೇಳ್ ಬಾಹುಕನು ವಾಲಾ ನಲಿ ಸಖ್ಯವ ಬೆಳೆಸುತಾತನ ನನುದಿನವು ಕೂಡಿರ್ದನೊಂದಾನೊಂದುದಿನ ರಾತ್ರಿ ವನಜಮುಖಿ ದಮಯಂತಿಯೊಳು ಚುಂ ಬನ ಸರಸ ಸಲ್ಲಾಪದಿಂದಿಹ ಕನಸ ಕಂಡೆಚ್ಚರದಿ ಕಾಣದೆ ಸತಿಗೆ ಹಲುಬಿದನು ಅರಸ ಕೇಳಾ ಪುರದೊಳೊಬ್ಬರಿ ಗರಿಯದಂದದಿ ನಳನಿರಲು ಭೂ ಸುರರ ಮತದಲಿ ಕೇಳ ಭೀಮನೃಪಾಲನೀ ಹದನ ಧರೆಯನೆಲ್ಲವ ಜೂಜಿನಲಿ ಪು ಷ್ಟರಗೆ ಸೋತು ನಳಪನಡವಿಗೆ ತೆರಳಿದನು ಸತಿಸಹಿತವೆನೆ ಹೊರಳಿದನು ಶೋಕದಲಿ ೮). ೧೨। ಹಾ ತರುಣಿ ನಳಿನಾಕಿ ನಯಸು ಪ್ರೀತಿಪೂರ್ವಕದಿಂದ ಕನಸಲಿ ಮಾತುದೋರಿದೆ ಬಂದು ನನ್ನಲಿ ಕರುಣದಿಂ ನೀನು ಧಾತುಗುಂದಿದೆನಕಟ ಅಸುರಾ ರಾತಿ ಬಲ್ಲನೆನುತ್ತ ಮನದಲಿ ಕಾತರಿಸಿ ನಿಜಸತಿಗೆ ಹಲುಬಿದ ಮದನನೆಸುಗೆಯಲಿ ಹಾ ಮಗಳೆ ದಮಯಂತಿ ನಿಷಧ ಸ ನಾಮನನು ಕೈಹಿಡಿದು ಬಾಳುವ ನೇಮವನು ಬಿಸುಟಡವಿಗಟ್ಟಿತೆ ವಿಧಿ ವಿಕರ್ಮಫಲ ಭೀಮನೃಪನುದರದಲಿ ಜನಿಸಿ ವಿ ರಾಮವಾದುದೆ ನಿನ್ನ ಸಿರಿಮುಖ ತಾಮರಸವನು ಕಾಣೆ ತೋರೆಂದರಸ ಹಲುಬಿದನು ೯) [೧೩ ವಿಕಳವನು ವಾಲಾಖ್ಯ ಕೇಳಿದು ಪಕಪಕನೆ ನಗುತೆಂದನೆಲೆ ಬಾ ಹುಕನೆ ಹಲುಬುವುದೇನು ಕಾಂತೆಗೆ ತಕ್ಕ ಬೊಂತೆಯನು ಅಕಟ ನೀನತಿ ಚೆಲುವನೇ ಬಾ ಲಕಿ ನಿನಗೆ ತಕ್ಕವಳೊ ಲೋಕದಿ ಮಕರಕೇತನ ಮರುಳನೆಂದಪಹಾಸ್ಯ ಮಾಡಿದನು ಮಗಳೆ ಮೋಹದ ಸುತರನಾರಿಗೆ ತೆಗೆದು ಬಿಸುಟೆ ನಿರಾಶೆಯಲಿ ಈ ಬಗೆಗೆ ತಂದುದೆ ವಿಧಿಯು ನಿನ್ನನು ಹರಮಹಾದೇವ ಹೊಗಲುಬಹುದೇ ಕಾನನದೊಳಿಹ ಮೃಗಗಳಿಂದೇನಾದಳೋ ಪತಿ ಯಗಲಿದನೊ ಭೇತಾಳ ನುಂಗಿತೊ ಎನುತ ಹಲುಬಿದನು ೧೦|| ೧೪। ಎಂದು ಹಾಸ್ಯವ ಮಾಡಿದವನೊಡ ನೆಂದನಾ ಬಾಹುಕನು ಪೂರ್ವದೊ ಛಂದು ಬ್ರಾಹ್ಮಣನೊಬ್ಬ ನಿಜಸತಿಯಗಲಿ ಎನ್ನೊಡನೆ ನೊಂದು ನುಡಿದನು ವಿರಹದಲಿ ಅದ ನಿಂದು ಕನಸಲಿ ಕಂಡು ಭಾಮತಿಯೊ ಳೆಂದಡದು ತಪ್ಪೇನು ಸತಿಸುತರಿಲ್ಲ ತನಗೆಂದ ಬಡವರುದರದೊಳುದಿಸಿ ಸುಖವನು ಪಡೆಯಿಲ್ಲದೆ ಬಂದು ನೀನೀ ಪೊಡವಿಪತಿಯುದರದಲಿ ಸಂಜನಿಸುವರೆ ಎಲೆ ತಾಯೆ ಗಿಡಮೆಳೆಗಳಾರಣ್ಯದಲಿ ತನು ವಿಡಿದು ಸೈರಿಪುದೆಂತು ಮಗಳೇ ಸುಡು ತನುವನಿದನೆಂದು ಮರುಗಿದಳವಳ ನಿಜಜನನಿ |೧೧|| ೧೫)