ಪುಟ:Kanakadasa Haribhakthisara.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೪ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಎಂಟನೆಯ ಸಂಧಿ ೧೭೫ ಇಟ್ಟ ಫಣೆಯೊಳಗೆಸೆವ ಮಟ್ಟಿಯ ತೊಟ್ಟ ಹೊಸ ಯಜ್ಯೋಪವೀತದ ಕಟ್ಟಿಯಿರುಕಿದ ಕಕ್ಷಪಾಳದ ಬೆರಳ ಜಪಸರದ ಉಟ್ಟ ಧೋತ್ರದ ಬಳಲುಗಚ್ಚೆಯ ಸೃಷ್ಟಿಗಚ್ಚರಿ ರೂಪಿನಲಿ ಪರ ಮೇಷ್ಠಿಯಂದದಿ ಬಂದನಾ ಋತುಪರ್ಣನೋಲಗಕೆ ಹೈ ಹಸಾದವೆನುತ್ತ ವಂದಿಸಿ ಬಾಹುಕನು ಮಂದಿರಕೆ ಬಂದು ವಿ ವಾಹವುಂಟೇ ಮರಳಿ ದಮಯಂತಿಗೆ ಜಗನ್ನಾಥ ಈ ಹದನವಾರಿಂದಲಾದುದೊ ದ್ರೋಹಿಯಾದ ದಮಯಂತಿ ಇದು ಸಂ ದೇಹವಾಗಿದೆ ಎನುತ ಚಿಂತಿಸಿ ಬಂದನರಮನೆಗೆ |೨೪| ೨೮) ಆರು ನೀವೆಲ್ಲಿಂದ ಬಂದಿರಿ ದೂರದೇಶದ ಹಿರಿಯರಿಳೆಯೊಳು ಕಾರಣವದೇನಿರುವುದಲ್ಲಿ ವಿಶೇಷವೇನೆನಲು ಭೂರಮಣ ಕೇಳವನಿಯಲಿ ಸಂ ಚಾರಿಸುತ ಬಂದೆವು ವಿದರ್ಭಕೆ ಭೂರಿನೃಪರೈತರುತಲಿದೆ ಚತುರಂಗಬಲಸಹಿತ ಲಾಯದೊಳಗುತ್ತಮದ ತೇಜಿಯ ನಾಯು ಹೂಡಿದ ರಥಕೆ ಸೇರಿಸಿ ವಾಯುವೇಗದ ತೇರ ನಿಲಿಸಿದ ತಂದು ನೃಪನೆಡೆಗೆ ರಾಯನೇರಲು ಕರಿ ತುರಗ ರಥ ಪಾಯದಳ ಸಂದಣಿಸಿದುದು ನೆಲ ಬಾಯಬಿಡೆ ಹೊರವಂಟ ನೃಪ ಘನವಾದ್ಯ ರಭಸದಲಿ ೨೫] |೨೯| ದೇಶದೇಶದ ಯಾಚಕರು ಧರ ಣೀಶರುನ್ನತ ತುರಗ ಗಜ ರಥ ಭೂಸುರರು ಮಂತ್ರಿಗಳು ದೈವಜ್ಞರು ಸುಗಾಯಕರು ಭಾಸುರದ ತೇಜದಲಿ ಜನ ಸಂ ತೋಷದಲಿ ನಡೆತರುತಲಿದೆ ಪರ ವಾಸುದೇವನೆ ಬಲ್ಲ ದಮಯಂತಿಯ ಸ್ವಯಂವರವ ಜನಪನೆಂದನು ಬಾಹುಕಗೆ ಮಾ ನಿನಿಯನೀಕ್ಷಿಸಬೇಕು ನಿಲ್ಲದು ಮನವಿದೊಂದೇ ದಿನಕೆ ನಡೆಸು ವಿದರ್ಭಪುರವರಕೆ ಎನಲು ನಕ್ಕನು ಮನದೊಳಗೆ ತ ಇನಿಯಳಿಗೆ ವಿಧಿ ಬರೆದನೇ ಶಾ ಸನವ ಮೀರುವರಾರೆನುತ ಮರುಗಿದನು ನಳನೃಪತಿ |೩೦ ಶಯನದಲಿ ಮಲಗಿದ ಸತಿಯನಡ ವಿಯಲಿ ನಳನೃಪನಗಲಿ ಹೋದನು ನಯವಿಹೀನಳಿಗಾಗಿ ರಚಿಸಿದರಾ ಸ್ವಯಂವರವ ಪಯಣ ನಿಮಗುಂಟೀಗಳೆನೆ ನೃಪ ಬಯಸಿ ಹೆಣ್ಣಿನ ಮೋಹದಲಿ ವಾ ಜಿಯ ವರೂಥಕೆ ಕೂಡ ಹೇಳಿದ ಕರೆಸಿ ಬಾಹುಕನ ಕರದ ವಾಷೆಯ ಸಡಿಲ ಬಿಡೆ ಮುಂ ಬರಿದು ಚಿಮ್ಮಿದುವಡಿಗಡಿಗೆ ರಥ ತುರಗ ಹಾಯ್ದುದು ತೇರು ಮುಂದಕೆ ಪವನವೇಗದಲಿ ಭರದೊಳ್ಳೆತರೆ ನೃಪನ ಹಚ್ಚಡ ಧರೆಗೆ ಬೀಳಲು ಸಾರಥಿಯನೆ ಚರಿಸಿದನು ಋತುಪರ್ಣನಿದಕಿನ್ನೇನು ಹದನೆನುತ ೨೭| |೩೧|