ಪುಟ:Kanakadasa Haribhakthisara.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮೬ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂಬತ್ತನೆಯ ಸಂಧಿ ಸೋಮಕುಲ ನೃಪಸಾರ್ವಭೌಮ ಸ ನಾಮ ಮಂಗಳನಿಳಯ ಜಿತಸ೦ ಗ್ರಾಮ ಧೀರ ವಿರೋಧಿಸಾಮಜಸಿಂಹ ದಯಶೀಲ ತಾಮಸನು ಮತಿಗೇಡಿ ಮಾನವ ಪಾಮರನ ಗುಣದೋಷವೆಣಿಸದೆ ಪ್ರೇಮದಿಂದೊಲಿದೆನ್ನ ನೀ ಸಲಹೆಂದು ಕೈಮುಗಿದ ಕಲಿಪುರುಷನಿಂದಾದುದಪಹತಿ ಲಲನೆ ಪುತ್ರರನಗಲಿ ಕಷ್ಟವ ಬಳಸಿದೆಯಲ್ಲಾ ನೊಂದು ಸತ್ಯವ ಬಿಡದೆ ಸಂಚರಿಸಿ ಸುಲಭನಾದೆ ಕುಲಾಂಗನೆಯ ವ್ರತ ಫಲದ ಪುಣೋದಯದಿ ನಿಜಸಿರಿ ಫಲಿಸಿತಿ ಲೋಕದಲಿ ನಿನಗಾರು ಸರಿಯೆಂದ ೪ ರೂಢಿಯಲಿ ನಾ ನಿಮ್ಮನರಿಯದ ಮೂಢಮತಿಯವಿವೇಕಿ ತುರಗವ ಹೂಡಿದಾಗಲೆ ರಥಕೆ ಆದಿಯೊಳರಿದೆನೇ ತಾನು ಮಾಡಿದಪರಾಧಗಳನೊಂದನು ನೋಡಲಾಗದು ಚಿತ್ತದಲಿ ಖಯ ಖೋಡಿಯಿಲ್ಲದೆ ಸಲಹಬೇಕೆಂದೆರಗಿದನು ಪದಕೆ ಹರಿಯ ನೆಲೆಗೆಡಿಸಿದನು ಪರಮೇ ಶ್ವರನ ಭಿಕ್ಷವನೆತ್ತಿಸಿದ ಸರ ಸಿರುಹಭವ ತಾ ಶಿರವ ಪೋಗಾಡಿದನು ಪೂರ್ವದಲಿ ಕರುಣಹೀನನು ನಿನ್ನ ಸೋಂಕಲು ತೆರನ ಕಾಣದೆ ಹಲವು ದಿನ ಕಾ ತರಿಸಿ ಚಲದಲಿ ತೊಡಚಿಬಿಟ್ಟನು ಮನದ ಭೀತಿಯಲಿ ೫. ಈ ಪರಿಯೊಳೆನಲಾ ನೃಪನ ಸಂ ತಾಪವನು ಪರಿಹರಿಸಿ ನಳನೃಪ ತಾ ಪಿರಿದು ಮಣಿಭೂಷಣಂಗಳನಿತ್ತು ನಸುನಗುತ ಕೋಪವೆನಗಿಲ್ಲೆಂದಯೋಧ್ಯಾ ಭೂಪನನು ಮನ್ನಿಸುವ ಸಮಯದಿ ತಾಪ ರಸ ನೊಡಗೊಂಡು ಬಂದನು ಒಲಿದು ಮೈತ್ರೇಯ ಎಲ್ಲ ನೃಪರಂತಲ್ಲ ಲಕ್ಷ್ಮೀ ವಲ್ಲಭನ ಪ್ರತಿಬಿಂಬ ನಿನ್ನಲಿ ನಿಲ್ಲಬಲ್ಲನೆ ಕಲಿಪುರುಷನತಿ ಬೇಗ ತೆರಳಿದನು ಸಲ್ಲಲಿತ ಸಾಮ್ರಾಜ್ಯಪದವಿ ದೆಲ್ಲ ನಿನಗಹುದೆಂದು ಧರಣೀ ವಲ್ಲಭನ ಸತ್ಕರಿಸಿ ಕೊಂಡಾಡಿದನು ಮೈತ್ರೇಯ |೬| IOO ಬಂದ ಮುನಿಗವನೀಶ ಚರಣ ದ್ವಂದ್ವದಲಿ ಚಾಚಿದನು ಮಕುಟವ ನಂದು ಪಿಡೆದೆತ್ತಿದನು ನಸುನಗತಲ್ಲಿ ಕುಳ್ಳಿರ್ದ ಎಂದನೆಲೆ ನಳನೃಪತಿ ನಿನಗೆ ಮು ಕುಂದನೊಲುಮೆಯು ಆವ ಕಾಲದಿ ಸಂದಿರಲು ಇನ್ನಾವುದರಿದಿಲ್ಲೆಂದನಾ ಮುನಿಪ ಎಂದು ಹರಸಿದನವನಿಪಗೆ ಮುದ ದಿಂದ ಮಂತ್ರಾಕ್ಷತೆಗಳಲಿ ಮುನಿ ವೃಂದ ಸಂತೋಷಿಸಿತು ನೃಪ ಸಿಂಹಾಸನದೊಳಿರಲು ಇಂದುವದನೆಯರಾರತಿಯ ನಲ ವಿಂದಲೆತ್ತಿದರಲ್ಲಿ ಸತಿಯರು ಸಂದಣಿಸಿ ಪಾಡಿದರು ಶೋಭಾನವನು ಮನವೊಲಿದು IND