ಪುಟ:Kanakadasa darshana Vol 1 Pages 561-1028.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೭೪ ಕನಕ ಸಾಹಿತ್ಯ ದರ್ಶನ-೧ ಕನಕದಾಸನ ಕೀರ್ತನೆಗಳಲ್ಲಿ ಸಾಮಾಜಿಕ ಅಭಿವ್ಯಕ್ತಿ ೭೭೫ ಗಣಗಣ ಗಂಟೆಯ ಬಾರಿಸುವರಯ್ಯ | ತನುವಿನ ಕೋಪವೂ ಹೊಲೆಯಲ್ಲವೆ | ಪರಧನ ಪರಸತಿ ಹೊಲೆಯಲ್ಲವೆ | ಹೊರಗಿದ್ದ ಹೊಲೆಯನ ಒಳಗೆ ಬಚ್ಚಿಟ್ಟರೆ | ಇದಕೇನು ಮದ್ರೋ ಪುರಂದರ ವಿಠಲ ಗಮನಾರ್ಹವಾಗುತ್ತದೆ. ತಾವಷ್ಟೇ ಶ್ರೇಷ್ಠವೆಂದು ಗೋಡೆ ನಿರ್ಮಿಸಿಕೊಳ್ಳುತ್ತ ಮನುಷ್ಯ ಬದುಕನ್ನು ಕ್ರೂರ ವಿಷವರ್ತುಲಕ್ಕೆ ತಳ್ಳುತ್ತಿರುವ ಜನರಿಗೆ ಸತ್ಯಸುಖವುಳ್ಳ ಜನರಿಗೆ ಕುಲವ್ಯಾವುದು ಎಂದು ಕೇಳುತ್ತಾನೆ. ಸತ್ಯವಂತರು ಒಂದೇ ಸಮಾಜದಲ್ಲಿ ಮೇಲು-ಕೀಳು ಎಂಬ ಎರಡು ದಡದಲ್ಲಿ ಇರಲು ಸಾಧ್ಯವಿಲ್ಲ. ಅಂಥ ಜನ ಒಂದೇ ಆಗಿರುತ್ತಾರೆ, ಆಗಿರಬೇಕು ಎಂಬುದು ಕನಕದಾಸನ ನಿರೀಕ್ಷೆ, ಅಸಮಾನತೆ ಇಲ್ಲದ ಸಮಾಜ ನಿರ್ಮಾಣದ, ಮೇಲು ಕೀಳು ಎಂಬಿಲ್ಲದ ಮಾನವ ಜಾತಿಯ ಉದ್ದಾರದ ಅಪೇಕ್ಷೆಯಲ್ಲಿ ಕವಿ ಮನುಷ್ಯ-ಮನುಷ್ಯ ನಡುವಣ ಸಂಬಂಧವನ್ನು ಒಂದು ಮೌಲ್ಯವಾಗಿಸುತ್ತಾನೆ. ಸಾವಿರ ನೋವುಂಡು ಸಹಿಸಿಕೊಂಡ ಮನಸ್ಸು ಆದರೂ, ಈ ಸಾಮಾಜಿಕ ಸತ್ಯದತ್ತವೇ ಕವಿಯ ಒಲವಾಗುತ್ತದೆ. - ಕನಕದಾಸನ ದನಿ ಕೇವಲ ವಿಷಾದಪೂರ್ಣವಾಗುವುದಿಲ್ಲ; ಅದರಲ್ಲಿ ಉದಾತ್ತ ಸಿಟ್ಟು ಇದೆ. ಇದೇ ಅವನ ಅಭಿವ್ಯಕ್ತಿಗೆ ಹೆಚ್ಚು ನಿಖರತೆಯನ್ನು ತಂದುಕೊಡುವುದು. ಈ ಜಾತಿಯ ಸಮಸ್ಯೆ ಉಪದೇಶ ಮಾತ್ರವಾದ ಸಾರ್ವತ್ರಿಕ ಜಾಡ್ಯವಾಗಷ್ಟೇ ಅವನಿಗೆ ಕಾಣುತ್ತಿಲ್ಲ. ಅವನಿಗಿದು ವೈಯಕ್ತಿಕ ಸಮಸ್ಯೆ ಆಗಿದೆ. ಅದು ಅವನಿಗೆ ಉಸಿರು ಕಟ್ಟಿಸುತ್ತಿರುವುದರಿಂದಲೇ ಜಾತಿಯ ಆಳ-ಅಗಲಗಳನ್ನು, ಅದರ ಸೋಗಿನಲ್ಲಿ ನಡೆದಿರುವ ಇಬ್ಬಂದಿತನವನ್ನು ಹೆಚ್ಚು ಸ್ಪರ್ಶಿಸಿ ಛಾಪಿಸುತ್ತಾನೆ. ಈ ಮಾತನ್ನು ಇನ್ನೊಬ್ಬ ದಾಸರೊಂದಿಗೆ ಹೋಲಿಸಿ ನೋಡಬಹುದು. ಸಮಕಾಲೀನನಾದ ಪುರಂದರದಾಸನನ್ನೇ ತೆಗೆದುಕೊಳ್ಳೋಣ. ಇವನೂ ಜಾತಿಯ ವಿಚಾರಗಳನ್ನು ಅಲ್ಲಲ್ಲಿ ಆಡಿದ್ದಾನೆ. “ಆವ ಕುಲವಾದರೇನು ಆವನಾದರೇನು ಆತ್ಮ ಭಾವವರಿತಮೇಲೆ” -ಮುಂತಾದುವುಗಳನ್ನು ಗಮನಿಸಿ, ಅನುಭವಿಸಿ ಬಂದ ಉದ್ಧಾರ ಇಲ್ಲಿದೆ ಅನಿಸುವುದಿಲ್ಲ. ಆವ ಕುಲವಾದರೇನು ಎಂಬಲ್ಲಿಯಾಗಲೀ ಕುಲದ ಮೇಲೆ ಹೋಗಬೇಡ ಎಂಬಲ್ಲಿಯಾಗಲೀ ಪುರಂದರದಾಸ ಸಮಸ್ಯೆಯನ್ನು ಅನುಭವಿಸಿ ಮಾತನಾಡುತ್ತಿದ್ದಾನೆ ಅನಿಸುವುದಿಲ್ಲ. ಹೊರಗಿದ್ದ ಹೊಲೆಯನ ಒಳಗೆ ಬಚ್ಚಿಟ್ಟರೆ ಇದಕೇನು ಮದ್ದೋ ಎನ್ನುವಲ್ಲಿ ಇದರ ಜಾರಿಕೆಯನ್ನು ಕಾಣಬಹುದು. ಉಪದೇಶ ಮಾತ್ರವಾದ ಮನಸ್ಸಿನ ಪ್ರತಿಕ್ರಿಯೆ ಇದು ಅನಿಸುತ್ತದೆ. ಇಂಥ ಕಡೆಯ ವಿಚಾರಗಳೆಲ್ಲ ಒಂದು ರೀತಿಯ ಹೇಳಿಕೆಯ ರೂಪದಲ್ಲಿ ಉಳಿದುಬಿಡುತ್ತವೆ. ಅದೇ ಕನಕದಾಸ “ಕುಲಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ” ಎಂಬಲ್ಲಿ ಅನುಭವದ ತೀವ್ರತೆಯನ್ನು, ನೇರತೆಯನ್ನು ಕಾಣುತ್ತೇವೆ. ಕಾರಣ ಕನಕದಾಸನಿಗೆ ಈ ಕುಲದ ವಿಚಾರ ಅಮೂರ್ತವಾದ ಕೇವಲ ವೈಚಾರಿಕ ಸಂಗತಿಯಾಗಿಲ್ಲ. ಅನುಭವ ಮತ್ತು ಅಭಿವ್ಯಕ್ತಿಗಳೆರಡೂ ಸಂಗಮಿಸಿ ಹರಳುಗಟ್ಟಿದ ಕ್ರಮದ ಪರಿಣಾಮವಿದು. “ಕುಲದ ಮೇಲೆ ಹೋಗಬೇಡ ಕುಲವಿಲ್ಲ ಜ್ಞಾನಿಗಳಿಗೆ ಹೊಲೆಯ ಬಂದನೆಂದು ಒಳಗೆ ದೇವರ ಮಾಡಿ | ಕನಕದಾಸ ತನ್ನ ಅಭಿವ್ಯಕ್ತಿಗೆ ಪೂರಕವಾಗಿ ದುಡಿಸಿಕೊಳ್ಳುವ ಇನ್ನಿತರೆ ಅಂಶಗಳನ್ನು ಗಮನಿಸಬಹುದು. ದಾಸಪರಂಪರೆಯ ಇತರೆ ದಾಸರಿಗಿಂತ ಕನಕದಾಸ ಭಿನ್ನವಾದದ್ದು ಮಿಗಿಲಾದದ್ದು ಅವನ ಕೆಳಸ್ತರದಲ್ಲಿ ಹುಟ್ಟಿಬಂದ ಕಾರಣಕ್ಕೆ ಮತ್ತು ಅದಕ್ಕಾಗಿ ಅವಮಾನವನ್ನು ಇದಿರಿಸಬೇಕಾಗಿ ಬಂದ ಕಾರಣಕ್ಕೆ ಅಂತ ಹೇಳುವುದು ಕನಕದಾಸನಿಗೆ ನ್ಯಾಯ ನೀಡಿದಂತಾಗುವುದಿಲ್ಲ. ಅವನ ಜಾನಪದೀಯತೆ ಕೂಡ ಕೆಲಸ ಮಾಡುವ ರೀತಿಯಲ್ಲಿ ಈ ವಿಶೇಷತೆಯನ್ನು ಪರಿಗಣಿಸಬಹುದು. ಲೌಕಿಕ ಬದುಕಿನ ಕ್ಷಣಿಕತೆಯನ್ನು ಹೇಳುತ್ತಲೇ ಹೇಗೆ ಕವಿಯ ಈ ಜಾನಪದೀಯ ಮನಸ್ಸು ದುಡಿಯುತ್ತದೆ ಎಂಬುದಕ್ಕೆ ಈ ರಚನೆಗಳನ್ನು ಪೂರಕವಾಗಿ ನೋಡಬಹುದು. “ಧರ್ಮವಿಲ್ಲದ ಅರಸು ಮುರಿದ ಕಾಲಿನ ಗೊರಸು ನಿರ್ಮಲಿಲ್ಲದ ಮನಸು ತಾ ಕೊಳಚೆಹೊಲಸು” ೨. ಇಂದ್ರಿಯ ಸೂತಕದುರ್ಗಂಧ ಮಲಮೂತ್ರ | ಬಂದ ಠಾವಿನ ನಿಜ ಗುರುತನರಿಯೆ | ಬಂದದ್ದು ಬಚ್ಚಲಗುಣೆ ತಿಂದದ್ದು ಮೋಲೆಮಾಂಸ ? ಅಂಧಕ ತನಗಿನ್ನೇತರ ಕುಲವಯ್ಯ | ೩. ಮುಟ್ಟಲಮ್ಮರು ಎನ್ನ ಬಂಧುಗಳು ಕಂಡರೆ || ಅಟ್ಟಿ ಬಡಿಯುತಲಿಹರೊ ಕೃಷ್ಣ ||