ಪುಟ:Kanakadasa darshana Vol 1 Pages 561-1028.pdf/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೯೨ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ಸಾಮಾಜಿಕ ನೆಲೆ ೭೯೩ ಗೋಮಯದಿಂದ ಎರೆಯುವದು, ಹೊಕ್ಕಳ ಹುರಿಕತ್ತರಿಸಿ ಮಾಂಸದ ಗಡಿಗೆಯನ್ನು ಹೂಳುವದು, ಬಾಣಂತಿಗೆ ಬೇವಿನರಸ ಕುಡಿಸುವದು-ಮಗುವಿಗೆ ಜೇನಿನ ರಸ ಸೀಪಿಸುವದು, ಜಾತಕ ಬರೆಸುವದು ಮುಂತಾದವುಗಳಿಂದ ಒಟ್ಟು ಕಾವ್ಯವೇ ಸಮಕಾಲೀನ ಸಂಸ್ಕೃತಿಯ ಸಮೃದ್ದ ದಾಖಲೆಯಾಗಿ ನಿಲ್ಲುತ್ತದೆ ; ಕನಕದಾಸರ ಸೂಕ್ಷ್ಮ ನಿರೀಕ್ಷಣಾಶಕ್ತಿಗೆ ಸಾಕ್ಷಿಯಾಗುತ್ತದೆ ; ಕನಕದಾಸರು ಬದುಕನ್ನು ಅದೆಷ್ಟು ಗಾಢವಾಗಿ ಪ್ರೀತಿಸುತ್ತಿದ್ದರು ಎನಿಸುತ್ತದೆ : ನಮ್ಮ ಸಂಸ್ಕೃತಿಯ ಅದರಲ್ಲೂ ಜಾನಪದ ಸಂಸ್ಕೃತಿಯ ಜೊತೆಗೆ ಎಂಥ ಗಾಢ-ಪ್ರಗಾಢ ಸಂಬಂಧವನ್ನು ಹೊಂದಿದ್ದರು ಎನಿಸುತ್ತದೆ. ಕನಕದಾಸರ ಸಾಮಾಜಿಕ ಪ್ರಜ್ಞೆ ತಮ್ಮ ಸಮಕಾಲೀನ ಬದುಕಿನ ವಿವಿಧ ಮುಖಗಳ ವಾಸ್ತವ ವಿವರಣೆಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳುವುದಿಲ್ಲ. ಆತ ಪ್ರಯೋಗಿಸುವ ಭಾಷೆಯಲ್ಲೂ ಅದು ಸೂಸಲಾಡುತ್ತದೆ. ನೆಲದ ಬದುಕಿನಭಾಷೆಯ ದ್ರವ್ಯದಿಂದಲೇ ಸೃಷ್ಟಿಸಿಕೊಳ್ಳುವ ಉಪಮೆ, ದೃಷ್ಟಾಂತ, ರೂಪಕ ಮತ್ತು ನಾಣ್ಣುಡಿಗಳು ಕಾವ್ಯದ ರಕ್ತವಾಹಿನಿಗಳಾಗಿ ಇಡೀ ಕಾವ್ಯಕ್ಕೆ ಸಾಮಾಜಿಕ ಪ್ರಜ್ಞೆಯ ಜೀವಧಾತುವನ್ನು ಪೂರೈಸುತ್ತವೆ.-“ಊರ ಗುದ್ದಲಿಯ ತೋಡುವರೆ” (VI-೮), “ತಲೆ ಬಲ್ಲಿತೆಂದು ಕಲ್ಲನೇ ಹಾಯಬೇಡ' (VII-೨೩), “ಒಗೆತನಬಿಟ್ಟು ಹೋಹಾಗ ಹಾಲಿಗೆ ಹೆಪ್ಪ ಮೊಗೆದವರಾರುಂಟು” (IX೧೯), “ಇರಿದುಕೊಂಡರೆ ಹೊಟ್ಟೆ ತಿವಿದುಕೊಂಡರೆ ಕಣ್ಣು” (XXXV೩೮) ಎಂಬಂಥವುಗಳನ್ನು ಉದಾಹರಣೆಗಾಗಿ ಸ್ಮರಿಸಿಕೊಳ್ಳಬೇಕು. ಕವಿಯ ಇಂಥ ಉತ್ಕಟ ಸಾಮಾಜಿಕ ಪ್ರಜ್ಞೆಯಿಂದಾಗಿಯೇ ಇಲ್ಲಿಯ ಪೌರಾಣಿಕ ಪಾತ್ರಗಳೆಲ್ಲ ಮಾನವೀಕರಣಗೊಂಡು ಒಂದು ಸಾಮಾಜಿಕ ಪರಿಸರದಲ್ಲಿ ಓಡಾಡಿ ಆಪ್ತವೆನಿಸುತ್ತವೆ. ಅವೆರಡರ ನಿಕಟ ಪರಿಚಯವಿದ್ದ ಕವಿ ಅವೆರಡರ ಅನಾಯಾಸ ಫಲಗಳನ್ನು ಒದಗಿಸುತ್ತಾನೆ. ಒಟ್ಟಿನಲ್ಲಿ ಈ ಕಾವ್ಯದ ಮೂಲಭೂತ ಪ್ರೇರಣೆ ಮತ್ತು ಆಶಯ ಒಂದು ನಾಡಿನ ಅಖಂಡ ಸಂಸ್ಕೃತಿಯನ್ನು ಕುರಿತ ಹಿತಚಿಂತನೆ ಮತ್ತು ಆ ಸಂಸ್ಕೃತಿಯ ಕಳಕಳಿಯ ಜವಾಬ್ದಾರಿಗೆ ಸಂಬಂಧಿಸಿದ್ದು. ವೈಭವದ ಅತ್ಯುನ್ನತ ಶಿಖರವನ್ನು ತಲುಪಿದ್ದ ವಿಜಯನಗರ ಸಾಮ್ರಾಜ್ಯದ ಒಬ್ಬ ಪಾಳೆಯಗಾರನಾಗಿ ಅದರೆಲ್ಲ ವೈಭವ-ಅಟ್ಟಹಾಸಗಳನ್ನು ಪ್ರತ್ಯಕ್ಷವಾಗಿ ಕಂಡು ಅನುಭವಿಸಿದ್ದ ಕನಕದಾಸರು ಒಬ್ಬ ದಾರ್ಶನಿಕ ಹಿತಚಿಂತಕರಾಗಿ ಅದರ ಒಳಗಿನ ಸಾಮಾಜಿಕ ಬಿರುಕು ಹಾಗೂ ಹೊರಗಿನ ಆಘಾತದಿಂದ ಒದಗಬಹುದಾಗಿದ್ದ ಭೀಕರ ದುರಂತ ಸುಳುಹನ್ನು ಕಂಡವರಾಗಿದ್ದರು. ಅದರಿಂದಾಗಿ ಅವರ ಸಾಂಸ್ಕೃತಿಕ ಪ್ರಜ್ಞೆ ಹಲವು ನೆಲೆಗಳಲ್ಲಿ ಕಾವ್ಯ ಮಾಧ್ಯಮದ ಮೂಲಕ ವಾದ ರ ಕಾರ್ಯಾಚರಣೆಗೆ ತೊಡ ಗ ಬೇಕಾದದ್ದು ಅನಿವಾರ್ಯವಾಗಿತ್ತು. ಆ ಕಾರ್ಯಾಚರಣೆಯ ಸ್ವರೂಪವನ್ನು ಮುಖ್ಯವಾಗಿ ಮೂರು ರೀತಿಯಲ್ಲಿ ಗುರುತಿಸಬಹುದು : ಮೊದಲನೆಯದಾಗಿ ತತ್ಕಾಲೀನ ಸಾಮ್ರಾಜ್ಯದ ಮತ್ತು ಸಂಸ್ಕೃತಿಯ ಔನ್ನತ್ಯವನ್ನು ತನ್ನ ಜನಾಂಗದ ಅರಿವಿಗೆಅನುಭವಕ್ಕೆ ಅದರ ಬಗೆಗೆ ಅವರ ಗೌರವ-ಸ್ವಾಭಿಮಾನವನ್ನು ಚೇತರಿಸುವಂತೆ ಪ್ರೇರೇಪಿಸುವದು ; ಎರಡನೆಯದಾಗಿ ಅಂದಿನ ಸಮಾಜದಲ್ಲಿಯ ಆಂತರಿಕ ಕಲಹವನ್ನು ಎತ್ತಿ ಹೇಳಿ ಅದರಿಂದ ಮುಂದೆ ಸಂಭವಿಸಬಹುದಾದ ಅಪಾಯಗಳನ್ನು ಕಲ್ಪನೆಗೆ ತಂದುಕೊಟ್ಟು ಸಾಂಸ್ಕೃತಿಕವಾಗಿ ಕರ್ತವ್ಯದ ಪ್ರಜ್ಞೆಯನ್ನು ಮೂಡಿಸುವದು ; ಮೂರನೆಯದಾಗಿ ವರ್ಗಸಾಮರಸ್ಯ ಮತೀಯ ಸೌಹಾರ್ದತೆಯನ್ನು ಮೂಡಿಸಿ ಭಾವೈಕ್ಯತೆಯನ್ನು ಸಾಧಿಸುವದು. ಈ ಎಲ್ಲ ಪ್ರಜ್ಞಾವಲಯಗಳಿಗೆ ಅಖಂಡ ಸಾಂಸ್ಕೃತಿಕ ಪ್ರಜ್ಞೆ ಕೇಂದ್ರವಾಗುತ್ತದೆ. ಗಮನಿಸಬೇಕಾದದ್ದೆಂದರೆ-ಒಂದು ಜನಾಂಗದ ಒಟ್ಟು ಸಂಸ್ಕೃತಿಯ ಪ್ರತಿನಿಧಿಯಾಗಿ, ಹಿತೈಷಿಯಾಗಿ ತಮ್ಮನ್ನು ಗುರುತಿಸಿಕೊಡುವ ಕನಕದಾಸರು ಮತೀಯ ಸೌಹಾರ್ದತೆಯ ಪ್ರಶ್ನೆ ಬಂದಾಗ ಮಾತ್ರ ಒಂದು ವಿಶಿಷ್ಟ ಮತದ ಅಂದರೆ ವೈಷ್ಣವ ಮತದ ಪ್ರತಿನಿಧಿಯಾಗಿ ಪಕ್ಷಪಾತಿಯಾಗಿ ನಿಲ್ಲುತ್ತಾರೆ. ಇಂಥ ಸಂದರ್ಭದಲ್ಲಿ ಅವರ ಪ್ರಜ್ಞೆ ಸಮತೋಲನ ಕಳೆದುಕೊಂಡು ಇತರ ಮತದೊಂದಿಗೆ ಪೈಪೋಟಿಗೆ ನಿಲ್ಲುತ್ತದೆ : ಹರಿಸರ್ವೋತ್ತಮತೆಯನ್ನು ಸ್ಥಾಪಿಸುವ ಪೇಚಾಟದಲ್ಲಿ ತನ್ನ ಮೂಲ ಉದ್ದೇಶವನ್ನು ಶಿಥಿಲಗೊಳಿಸುತ್ತದೆ : ಮತೀಯ ಸೌಹಾರ್ದತೆಯನ್ನು ಸಾಧಿಸುವಲ್ಲಿ ಒಟ್ಟಿನಲ್ಲಿ ವಿಫಲಗೊಳ್ಳುತ್ತದೆ. ಕೆಲವು ಸಂದರ್ಭದಲ್ಲಿಯಾದರೂ ಚಿಂತೆಯಿಲ್ಲ ಹರಿಹರರಲ್ಲಿ ಸಮಾನತೆಯನ್ನು ಎತ್ತಿ ಹೇಳುವ ಕವಿ ಅದೇ ಔದಾರ್ಯವನ್ನು ಆ ಎರಡೂ ಮತಗಳ ಸಮಾಜದಲ್ಲಿ ತೋರುವದಿಲ್ಲ. ವೀರಶೈವಧರ್ಮದ ಬಗೆಗಿರುವ ಸದ್ಭಾವನೆ ವೀರಶೈವ ಸಮಾಜದ ಬಗೆಗೆ ಕಾಣುವದಿಲ್ಲ. ಹೀಗಾಗಿ ವೀರಶೈವ ಸಮಾಜವನ್ನು ವೈಷ್ಣವ ಸಮಾಜದೊಂದಿಗೆ ಸ್ಪರ್ಧೆಗೆ ಇಳಿಸಿ ಎಲ್ಲ ಹಂತದಲ್ಲೂ ವೀರಶೈವರ ಮುಖಭಂಗವಾಗುವಂತೆ ಸಂಕೇತಗಳನ್ನು ಸಂಯೋಜಿಸುತ್ತಾನೆ. ಕೃಷ್ಣ-ಬಾಣಾಸುರರ ಯುದ್ಧದ ಸನ್ನಿವೇಶದ ಪ್ರತಿಯೊಂದು ಹಂತವೂ ಇದನ್ನು ನಿಖರವಾಗಿ ಪ್ರತಿಪಾದಿಸುವಂತಿದೆ. ಯುದ್ದದಲ್ಲಿ ಹರಭಕ್ತ