ಪುಟ:Kanakadasa darshana Vol 1 Pages 561-1028.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೧೨ ಕನಕ ಸಾಹಿತ್ಯ ದರ್ಶನ-೧ ಕನಕನ ಸಾಮಾಜಿಕ ವಿಡಂಬನೆ ೮೧೩ ಬರಿದಹಂಕಾರದಲಲಿ ತತ್ವದ || ಕುರುಹ ಕಾಣದೆ ನಿನ್ನ ದಾಸರ | ಜರೆದು ವೇದಪುರಾಣಗಳನೋದಿ ಫಲವೇನು ? || ನರರ, ದುಷ್ಕರ್ಮದಲಿ ಮಾಡಿದ || ದುರಿತವಡಗಲು ನಿನ್ನ ನಾಮ || ಸ್ಮರಣೆಯೊಂದೇ ಸಾಕು ರಕ್ಷಿಸು ನಮ್ಮನನವರತ || ವಿದ್ಯೆಯಿಂದ ವಿನಯ, ವಿನಯದಿಂದ ಯೋಗ್ಯತೆ, ಯೋಗ್ಯತೆಯಿಂದ ಧನಾರ್ಜನೆ, ಧನಾರ್ಜನೆಯಿಂದ ಧರ್ಮಾಚರಣೆ, ಧರ್ಮಾಚರಣೆಯಿಂದ ಸಮಾಜದಲ್ಲಿ ಸುಖಶಾಂತಿ ಲಭಿಸಬೇಕು. ಇದು ವೇದದ ಮಾತು. ಹಾಗಿರುವಾಗ, ವೇದಶಾಸ್ತ್ರಾದಿಗಳನ್ನು ಓದಿದವರೆಂದು ತೋರಿಸಿಕೊಳ್ಳುವ ಜನರಲ್ಲಿ, ಅದರ ಫಲವಾಗಿ ಮೂಡಬೇಕಾದ ಸೌಜನ್ಯವಿಲ್ಲದೆ ನಿಜವಾದ ಭಕ್ತಿಯ ಆಚರಣೆಯಿಂದ, ದೈವಾನುಗ್ರಹಕ್ಕೆ ಪಾತ್ರರಾದವರನ್ನು ಕೀಳುಜಾತಿಯೆಂದು ದೂಷಿಸುವುದು ಸರಿಯೆ? ಅಂತರಂಗ ಶುದ್ದಿಯಿಲ್ಲದೆ, ಬಹಿರಂಗ ಶುದ್ದಿಗಾಗಿ, ಬಹಳ ಪೇಚಾಡುವ, ಹಬ್ಬಹುಣ್ಣಿಮೆಗಳಲ್ಲಿ ಎಲ್ಲಿಯಾದರೂ ಕೀಳುವರ್ಣದವರಿಗೆ ಊಟಹಾಕಿದಾಗ, ಅಲ್ಲಿನ ಎಂಜಲು ಶುದ್ಧಿಗಾಗಿ ಶ್ರಮಪಡುವ ಜನತೆಯ ಬಗ್ಗೆ ಕನಕನ ಮಾತು ಹೀಗಿದೆ : ಎಂಜಲೆಂಜಲು ಎಂಬರಾ ನುಡಿ | ಎಂಜಲಲ್ಲವೆ ? ವಾರಿ ಜಲಚರ ದೆಂಜಲಲ್ಲವೆ ? ಹಾಲು ಕರುವಿನ ಎಂಜಲೆನಿಸಿರದೆ || ಎಂಜಲೆಲ್ಲಿಯದೆಲ್ಲಿಯುಂ ಪರ | ರೆಂಜಲಲ್ಲದೆ ಬೇರೆ ಭಾವಿಸ | ಲೆಂಜಲುಂಟೇ ದೇವ ರಕ್ಷಿಸು ನಮ್ಮನನವರತ || ಕನಕನ ಅಂತರಂಗದ ಪರಿಚಯ, ಆಧ್ಯಾತ್ಮಿಕ ದೃಷ್ಟಿ ನೋಡಲು ಹರಿಭಕ್ತಿಸಾರ ಓದಬೇಕು. ರಹಸ್ಯಾರ್ಥವಾಗಿದೆ. ಅಂತೂ ಇದೊಂದು ಗೂಢಾರ್ಥದ್ಯೋತಕ ಕಥೆ, ರೂಪಕ ಕಾವ್ಯ (Allegorical Poem)”. ರಾಮಧಾನ್ಯಚರಿತ್ರೆ ಒಂದು ವಿಡಂಬನಾತ್ಮಕ ಕಾವ್ಯ ದೇವೇಂದ್ರನ ಸಭೆಯಲ್ಲಿ ತಾನು ಕೇಳಿದ ನರೆದಲೆಗ (ರಾಗಿ) ವೀಹಿ (ಬತ್ತ)ಯರ ವಿವಾದದ ಕಥೆಯನ್ನು, ಶಾಂಡಿಲ್ಯಮುನಿಗಳು, ಕಾಡಿನಲ್ಲಿ ದುಃಖಸಂತಪ್ತನಾದ ಧರ್ಮರಾಯನಿಗೆ ಸಂತೋಷವಾಗಲೆಂದು ಹೇಳಿದಂತೆ ಕಲ್ಪನೆಯಿದೆ. ರಾಮಾಯಣದ ಕಥೆಯನ್ನು ಸಂಗ್ರಹವಾಗಿ ಹೇಳುತ್ತ ಕವಿ, ರಾಮನು ರಾವಣ ವಧಾನಂತರ ಅಯೋಧ್ಯೆಗೆ ಬರುತ್ತಿದ್ದಾಗ ಮುಚುಕುಂದನ ಆಶ್ರದುದಲ್ಲಿ, ಋಷಿಗಳಿತ್ತ ಸತ್ಕಾರ ಸ್ವೀಕರಿಸುವಲ್ಲಿ, ತಿಂಡಿ ತಯಾರಿಸಲು ಉಪಯೋಗಿಸಿದ ನವಧಾನ್ಯಗಳಲ್ಲಿ ಯಾವುದು ಶ್ರೇಷ್ಠ ಎಂದು ಪ್ರಶ್ನೆ ಬಂದಾಗ, ಒಬ್ಬೊಬ್ಬ ಋಷಿ ಒಂದೊಂದು ಧಾನ್ಯವನ್ನು ಹೊಗಳಲು ನರೆದಲಗನಿಗೂ ಹಿಗೂ ತಮ್ಮ ಶ್ರೇಷ್ಠತೆ ವಿಚಾರದಲ್ಲಿ ಪ್ರಚಂಡ ವಾಗ್ಯುದ್ಧ ನಡೆಯುವುದು. ಇಲ್ಲಿ ಕನಕನು ರಾಗಿಯನ್ನು ಬಡವರ ಪ್ರತಿನಿಧಿಯಾಗಿಯೂ, ವೀಹಿಯನ್ನು ಬಲ್ಲಿದರ ಸಂಕೇತವಾಗಿಯೂ ಬಳಸಿಕೊಂಡು, ಸಮಾಜದ ಮೇಲುಕೀಳು ಜಾತೀಯ ಭಾವನೆಯನ್ನು ತೊಲಗಿಸುವ ಉದ್ದೇಶದಿಂದ ಅಪೂರ್ವವಾದ ಕೃತಿ ನಿರ್ಮಿಸಿರುತ್ತಾನೆ. ಕವಿಯ ಚಾತುರ್ಯದಿಂದ ಎರಡು ವಸ್ತುಗಳು ಮನುಷ್ಯರಂತೆ ವಾಸಿಸುವಾಗ ಕೇಳುವವರು ಮೂಕವಿಸ್ಮಿತರಾಗುವಷ್ಟು ಕಥೆಯ ಬೆಳವಣಿಗೆಯಲ್ಲಿ ನೈಜ ಸರಳತೆಗಳಿವೆ. ರಾಗಿಯ ಮಹತ್ವದ ಬಗ್ಗೆ 'ಪುರಂದರದಾಸರೂ ಹಾಡಿದ್ದಾರೆ. “ರಾಗಿಯ ತಂದಿರಾ ಭಿಕ್ಷಕೆ ರಾಗಿಯ ತಂದಿರಾ | ಯೋಗ್ಯರಾಗಿ ಭೋಗ್ಯರಾಗಿ । ಭಾಗ್ಯವಂತರಾಗಿ ನೀವು ” “ಸರ್ವಜ್ಞನೂ' “ರಾಗಿಯುನು ಉಂಬವ ನಿರೋಗಿ ಎಂದೆನಿಸುವನು | ರಾಗಿಯು ಭೋಗಿಗಳಿಗಲ್ಲ ಬಡವರಿ। ಗಾಗಿ ಬೆಳೆದಿಹುದು ಸರ್ವಜ್ಞ ||” “ಅಕ್ಕಿಯನ್ನು ಉಂಬುವನು ಹಕ್ಕಿಯಂತಾಗುವನು | ಸಿಕ್ಕುರೋಗದಲ್ಲಿ ವೈದ್ಯನಿಗೆ ರೊಕ್ಕವ | ನಿಕ್ಕುತ್ತಲಿಹನು ಸರ್ವಜ್ಞ |” ಎಂದಿರುತ್ತಾನೆ. “ರಾಗಿ ರಾಜಾನ್ನ” ಎಂಬ ಗಾದೆಯೂ ಇದೆ. ರಾಮಧಾನ್ಯಚರಿತ್ರೆಯಲ್ಲಿ “ಕನಕದಾಸರ ರಾಮಧಾನ್ಯಚರಿತ್ರೆ ಮತ್ತಾವುದೋ ಭಾವನಾ ವಿಶೇಷತೆಗೆ ಮಾಡಿಟ್ಟ ಅರ್ಥಾಂತರೋಕ್ತಿಯಾಗಿದೆ. ತಿಳಿಸಬಯಸುವ ವಿಷಯ ವೈಶಿಷ್ಟ್ಯವನ್ನು ಮನಂಬುಗುವಂತೆ ಚಿತ್ರಿಸಲು, ಬೇರೆ ವಿಷಯವನ್ನು ಅಳವಡಿಸಿಕೊಂಡ ಸಾಂಕೇತಿಕ 1. ಕಾವ್ಯಾನುಶೀಲನ-ರಾ.ಗೌ., ಪುಟ ೫೩-೫೪