ಪುಟ:Kanakadasa darshana Vol 1 Pages 561-1028.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೧೬ ಕನಕ ಸಾಹಿತ್ಯ ದರ್ಶನ-೧ ಕನಕನ ಸಾಮಾಜಿಕ ವಿಡಂಬನೆ ೮೧೭ ಧರ್ಮಕೋಪ-ಇವು ಈ ವಿಡಂಬನೆಯ ಹಿಂದಿರುವ ಮೂಲಭೂತವಾದ ಪ್ರೇರಕ ಪ್ರವೃತ್ತಿಗಳು.”೧ ಮುಂಡಿಗೆಗಳಲ್ಲಿ “ಕನಕನಾಡಿದ ಗುಟ್ಟು ಆದಿಕೇಶವ ಬಲ್ಲ” ಎಂದು ಕನಕನೇ ಹೇಳಿದಂತೆ ಸಾಮಾನ್ಯರಿಗೆ ಅಸಂಬದ್ದವಾಗಿ ಕಾಣುವ ಹಾಡುಗಳು ಸಾಂಕೇತಿಕ ಭಾಷೆಯನ್ನು ತಿಳಿದವರಿಗೆ, ಗಹನವಾದ ಆಧ್ಯಾತ್ಮಿಕ ತತ್ವಗಳೆಂದು ಅರ್ಥವಾಗುತ್ತದೆ. “ಕೀಳು ಜಾತಿಯ ಕುರುಬ ಏನು ಬಲ್ಲ ?” ಎಂಬವರಿಗೇ ಮುಂಡಿಗೆಯಾಗಿ ಈ ಮುಂಡಿಗೆಗಳು ಜನ್ಮತಾಳಿವೆ. ಹಲವು ಜೀವವ ಒಂದೆಲೆ ನುಂಗಿತು | ಕಾಗಿನೆಲೆಯಾದಿಕೇಶವ ಬಲ್ಲ ಬೆಡಗ || ಮೂವರೇರಿದ ಬಂಡಿ ಹೊರೆ ನೆರೆಯಿದು | ದೇವಕೀನಂದನನು ತಾನೊಬ್ಬ ಬಲ್ಲ ||ಪ|| ಆಡಿಪೊತ್ತವನೊಬ್ಬ ನೋಡಿ ತಿರುಗಿದನೊಬ್ಬ | ಓಡಾಡಿದನು ಒಬ್ಬ ಈ ಮೂವರು | ಆಡಿದಗೆ ಕಿವಿಯಿಲ್ಲ, ನೋಡಿದನ ಮಗ ಪಾಪಿ | ಓಡಾಡಿದವನೊಬ್ಬ ಓಡನಯ್ಯ || ಕಾಣುತ್ತದೆ, ಅವನ ಶೈಲಿಯಲ್ಲಿ ಮೊಹರಂ ಹಬ್ಬದ ಆಡಂಬರವಿಲ್ಲ ಸಹಜ ಸೌಂದರ್ಯವಿದೆ. ಚಮತ್ಕಾರವಿಲ್ಲ-ಶೋಭೆಯಿದೆ. ಶಬ್ದ ದಾರಿದ್ರವಿಲ್ಲ-ಆದರೆ ಲೋಭಿ ಎನ್ನುವಷ್ಟು ಹಿಡಿತವಿದೆ. ವಿನಯಶ್ರೀ ಕನಕನ ಶೈಲಿಯ ಜೀವಾಳ.” “ಭಾರತ ಸಮಾಜದಲ್ಲಿ ಜಾತಿಭೇದವಿದ್ದರೂ ಕರ್ನಾಟಕ ಸಾರಸ್ವತ ಪ್ರಪಂಚದಲ್ಲಿ ಭೇದವಿಲ್ಲ. 'ಬ್ರಾಹ್ಮಣ' ಲಕ್ಷ್ಮೀಶನ ಪಕ್ಕದಲ್ಲಿ 'ಲಿಂಗವಂತ' ಷಡಕ್ಷರಿಯೂ, 'ಜೈನ ಪಂಪನೂ, 'ಕುರುಬ' ಕನಕನೂ, 'ಬಳೆಗಾರ' ರನ್ನನೂ ಸಮಾನಸ್ಕಂದರಾಗಿ ಕುಳಿತಿರುವರು. “ಬ್ರಹ್ಮಸೂತ್ರ ತೋರಿಸಿಕೊಟ್ಟ ತತ್ವಕ್ಕಿಂತಲೂ ಹೆಚ್ಚಿನ ಮಂದಿಗೆ ಮುಕ್ತಿಮಾರ್ಗವನ್ನು ತೋರಿದ 'ದಾಸ'ವಾಹ್ಮಯಕ್ಕೆ ಕನಕನು ಅಪೂರ್ವ ಕೃತಿಕಾಣಿಕೆಗಳನ್ನು ಕೊಟ್ಟು ಪುಣ್ಯವಂತನಾಗಿದ್ದಾನೆ. ಕರ್ನಾಟಕ ಸಂಗೀತಕ್ಕೆ ಪುರಂದರ-ಕನಕರ ಕೊಡುಗೆ ಅಮೂಲ್ಯವಾದುದು. ಹರಿಭಕ್ತಿಸಾರದ ಮೊರೆ, ಬರೇ ಕನಕನದಾಗಿರದೆ, ಸರ್ವ ಆಸ್ತಿಕ ಜನರದಾಗಿದೆ.” ಕನಕನು ಕವಿಯಾಗಿ ನಿರಹಂಕಾರಿ ಆದರೆ, ದೀನನಲ್ಲ, ಧೈರ್ಯಗೇಡಿಯಲ್ಲ, ಬಗ್ಗಿದರೂ ಕುಗ್ಗುವವನಲ್ಲ, ಆತ್ಮಪ್ರತ್ಯಯಬಾಹಿರನಲ್ಲ, ಹಿರಿಯ ಸ್ಥಾನವುಳ್ಳವನು. ಮಹಿಮಾವಂತ, ಚಿರಂಜೀವಿ-ಎಂಬ ಸಂಗತಿ ನಿರ್ಧಾರವಾಗಿದೆ. ನಡುಗನ್ನಡ ಕವಿ ಸಂದೋಹದಲ್ಲಿ ಅವನೂ ಒಬ್ಬ ಸ್ಮರಣೀಯ ಮಹನೀಯ.” ಮನುಷ್ಯನು ಉಪಕಾರ ಮಾಡುವುದರಿಂದ ಮಿತ್ರನೂ, ಅಪಕಾರ ಮಾಡುವುದರಿಂದ ವೈರಿಯೂ ಆಗುತ್ತಾನೆ. ಕನಕನಾದರೋ ಸಮಾಜಕ್ಕೆ ತನ್ನ ತನುಮನಧನಗಳನ್ನು ಧಾರೆಯೆರೆದವನು. ಡಿ.ವಿ.ಜಿ. ಅವರು ಎನ್ನುವಂತೆ, “ಲೋಕೋಪಕಾರದ ವಿಸ್ತೀರ್ಣವನ್ನು ಅಳೆದು ನೋಡಿದರೆ ಬಸವಣ್ಣಅಲ್ಲಮರುಗಳಿಂದಲೂ, ಪುರಂದರ-ಕನಕರುಗಳಿಂದಲೂ ಆಗಿರುವಷ್ಟು ವೇದಾಂತ ತತ್ವಪ್ರಚಾರವು, ಅನೇಕ ಉಪನಿಷದ್ವಾಖ್ಯಾತರುಗಳಿಂದ ಆಗಿಲ್ಲವೆಂದು ಧಾರಾಳವಾಗಿ ಹೇಳಬಹುದು. ಅವರಲ್ಲೂ ಕನಕನ ಸ್ಥಾನ ವಿಶಿಷ್ಟವಾದುದು.” ಎಲ್ಲ ಮಕ್ಕಳ ಹಿತಚಿಂತನೆ ಮಾಡುವ ತಾಯಿ, ತನ್ನ ಮುಂದುವರಿದ ೧. ನಳಚರಿತ್ರೆಯ ಪೀಠಿಕೆ-ದೇ. ಜ. ಗೌ. ೨. ಸಾಹಿತ್ಯ ಮತ್ತು ಜನಜೀವನ-ಡಿ.ವಿ.ಜಿ.-ಜೀವನ ಸೌಂದರ್ಯ ಮತ್ತು ಸಾಹಿತ್ಯ ಪುಟ-೧೨೭ ೩. ಕನಕದಾಸನ ಶೈಲಿ- (ಶೈಲಿ-ಪುಟ ೩೫೯-೩೭೯) ಡಾ. ಎಸ್. ವಿ. ರಂಗಣ್ಣ ಇತರ ಕೃತಿಗಳಲ್ಲಿ ಮೋಹನತರಂಗಿಣಿ ಕನಕನ ಬೃಹತ್ಕತಿ, ಕೃಷ್ಣದೇವರಾಯನ ಕಾಲದ ಸಮಾಜದ ವೀರ, ಭೋಗ (ಶೃಂಗಾರ), ಭಕ್ತಿಗಳು ಜನರ ಅಭಿರುಚಿಯ ವಿಷಯವಾಗಿದ್ದುದು ತಿಳಿಯುತ್ತದೆ. ಜೈನ, ವೀರಶೈವ ಕವಿಗಳು, ಸಾಂಗತ್ಯದಲ್ಲಿ ಬರೆಯುತ್ತಿದ್ದಂತೆ ಅವನೂ ಸಾಂಗತ್ಯದಲ್ಲಿ ಬರೆದಿರುತ್ತಾನೆ. ಕನಕನ ಜೀವನದಲ್ಲಿ ಮೊದಲಿಂದ ಕೊನೆತನಕ ವೈವಿಧ್ಯವಿರುವಂತೆ ಅವನ ಕೃತಿಗಳಲ್ಲಿಯೂ ವೈವಿಧ್ಯವಿದೆ. ಯುಗಪ್ರವರ್ತಕ ಮಹಾಕವಿಗಳಾದ ಹರಿಹರ ಕುಮಾರವ್ಯಾಸರು ಸಾಮಾನ್ಯರ ಹಿತದೃಷ್ಟಿಯಿಂದ, ದೇಸಿಯನ್ನೆ ಮೆರೆಸಿದಂತೆ, ಕನಕನೂ ಸರಳ ಸುಂದರಭಾಷೆಯಲ್ಲಿ ಸಾಂಗತ್ಯ ಷಟ್ಟದಿಗಳಲ್ಲಿ ಬರೆದು ಹೆಸರಾಗಿದ್ದಾನೆ. “ಕನಕದಾಸರ ಗರಡಿಯಲ್ಲಿ ಸಂಸ್ಕೃತ ಕನ್ನಡಕ್ಕೆ ಕೈಂಕರ್ಯವೆಸಗುತ್ತಿರುವಂತೆ ೧.ರಾಮಧಾನ್ಯಚರಿತ್ರೆ, ಪೀಠಿಕೆ-ಪುಟ ೧೦-ದೇ, ಜ, ಗೌ.