ಪುಟ:Kanakadasa darshana Vol 1 Pages 561-1028.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೨೨ ಕನಕ ಸಾಹಿತ್ಯ ದರ್ಶನ-೧ ಕನಕಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ೮೨೩ ತುರುಬು ಕಟ್ಟುತ್ತಾರೆ ಮತ್ತು ಎಲೆಯ ದೊನ್ನೆಯನ್ನು ಕಟ್ಟುತ್ತಾರೆ ಅಷ್ಟೆ. ಇವನ್ನುಳಿದು ಅಲ್ಲಿ ಕಟ್ಟುಕಟ್ಟು ಎಂಬ ಮಾತಿಲ್ಲ (೨-೨೩೭) ಕೊಂಕುತನವೆಂಬುದು ಕೂದಲಲ್ಲಿ, ಮಧುಪಾನವೆನ್ನುವುದು ತೊಂಡೆಹಣ್ಣಿನಂಥ ತುಟಿಗಳಲ್ಲಿ, ಕಠಿಣತನವೆನ್ನುವುದು ರಮಣಿಯರ ಕುಂಭ ಕುಚಗಳಲ್ಲಿಯೇ ಹೊರತು ಬೇರೆಡೆಯಲ್ಲಿ ಇಂಥ ಶಬ್ದಗಳು ಹುಟ್ಟಲಾರವು(೨-೨೪) ಇದೇ ರೀತಿ ದ್ವಾರಕಾಪುರ ವರ್ಣನೆಯಲ್ಲಿ ಬರುವ ಕೆಲವು ವರ್ಣನೆಗಳು ಕೆಲಸದಲ್ಲಿ ತೊಡಗಿದ ಹೆಣ್ಣಿನ ಕಣ್ಣಿಗೆ ಕಟ್ಟುವಂಥ ಚಿತ್ರ ಕೊಡುತ್ತವೆ. ಬಿಚ್ಚಿದ ಕೂದಲು, ಬೆವರುಹನಿಗಳು, ತುಂಬಿ ಬೀಳುತ್ತಿರುವ ಮುಖ, ಅದುರುವ ಮೊಲೆಗಳಿಂದ ಮತ್ತೂ ಮೋಹಕವಾಗಿ ಕಾಣುತ್ತಿದ್ದ ಗಂಧವನ್ನು ಅರೆಯುವ ಹೆಂಗಳೆಯರಿದ್ದ ಅಂಗಡಿಗಳು ಶೋಭಿಸಿದವು (೩-೧೪). ಚೆಲುವಾದ ಸೂಳೆಯರ ತರುಣಿಯರ ಚಿಗುರುಮೊಲೆಗಳನ್ನು ನೋಡಿ ನಗುತ್ತ ಅವರ ಎಳೆಯ ಬೆರಳುಗಳ ಚಿಟುಕುಗಳನ್ನು ಒತ್ತಿ ಬಳೆ ಇಡಿಸುವ ಬಳೆಗಾರರು ಬೀದಿಯ ಎರಡೂ ಕಡೆಗೆ ಇದ್ದರು (೩-೨೩) ಬೇಡಿತಿಯರ ವರ್ಣನೆಯಂತೂ ಕವಿಯ ಪ್ರತಿಭೆ ಹಾಗೂ ನವನವೀನ ಮತ್ತು ಸಹಜ ಚಿತ್ರಣಕ್ಕೆ ಅತ್ಯುತ್ತಮ ನಿದರ್ಶನವೆನ್ನಬಹುದು : ಏರು ಹರಯದ ಕಪ್ಪಾದ ಶಬರಿಯರ ಚೆಲುವನ್ನು ನೋಡಿದರೆ ಚಂದ್ರನು ಅವರ ಕಣ್ಣಲ್ಲಿ ತನ್ನ ಕಾಂತಿಯನ್ನು ತುಂಬಿದಂತೆ ಕಾಣುತ್ತಿತ್ತು. (೧೯-೨) ಮನ್ಮಥನ ಗುಡಿಯ ಬಾಗಿಲಿಗೆ ತೋರಣ ಕಟ್ಟಿದಂತೆ ಶಬರಿಯ ಮೈಮೇಲೆ ತಳಿರಿನ ಉಡುಗೆ ಶೋಭಿಸುತ್ತಿತ್ತು. (೧೯-೬೩) ಪಟ್ಟಣದ ಹೆಣ್ಣುಗಳಿಗೆ ಹೆದರಿ ಕಾಡನ್ನು ಸೇರಿದರೂ ಈ ಬಟ್ಟ ಮೊಲೆಯ ಕಿರಾತೆಯರ ಹಿಂಸೆ ತಪ್ಪಲಿಲ್ಲವೆಂದು ಆ ಯತಿಗಳು ತೊಳಲಾಡಿದರು...(೧೯೮೪) ಎಂದು ಹೇಳುವ ಮೂಲಕ ಬೇಡಿತಿಯರ ಆಕರ್ಷಕ ರೂಪಿನ ವರ್ಣನೆ ಮಾಡುತ್ತಾನೆ. ಸ್ತ್ರೀ ವರ್ಣನೆಯ ಗೀಳು ಕನಕನಲ್ಲಿ ಎಷ್ಟು ಅಧಿಕವಾಗಿದೆ ಎಂದರೆ ಎಷ್ಟೋವೇಳೆ ಆತ ದೇವ ಮಾನವರೆಂಬ ಭೇದವನ್ನೂ ಮರೆತುಬಿಡುತ್ತಾನೆ. - ರುಕ್ಕಿಣಿಯು ತನಗೆ ಚೆಲುವಾದ ಸುಕುಮಾರನನ್ನು ಕರುಣಿಸಬೇಕು ಎಂದು ಶ್ರೀಕೃಷ್ಣನನ್ನು ಕೋರಿದಾಗ ನೀನು ಮಕ್ಕಳನ್ನು ಹಡೆದರೆ ಸಾಕು ನಿನ್ನ ಬಿರುಸು ಮೊಲೆಗಳು ಶಿಥಿಲಗೊಳ್ಳುವುವು' ಎಂದು ಕೆಣಕುತ್ತಾನೆ. (೪-೩೩) ಶಿವನ ದರ್ಶನಕ್ಕೆ ಉಷೆ ಬಂದಾಗ ಮಾತನಾಡಿದ ಅವಳ ಬಾಯಿಯ ಚೆಲುವನ್ನು ಕಂಡು ಶಿವನೂ ಮನಸೋತನು. ಆದರೂ ಕರುಣಾಮಯನೂ ನಿರ್ಮಲನೂ ಆದ ಭೂತೇಶನು ಮನದೊಳಗೆ ಕಾತರಿಸದೆ ತನ್ನ ಮಗಳಂತೆ ಅವಳನ್ನು ನೋಡಿದನು. (೨೫-೧೪) ಹೊಂದಾವರೆಯ ಮೊಗ್ಗೆಗಳಂತಿರುವ ಉಷಾದೇವಿಯ ಕುಚಗಳ ಮಾಟವನ್ನು ಕಂಡು ಕಾಮಹರನಾದ ಪರಶಿವನನ್ನೊಬ್ಬನನ್ನುಳಿದು ಮಿಕ್ಕ ಸ್ವರ್ಗಮರ್ತ್ಯ ಪಾತಾಳ ಲೋಕದವರೆಲ್ಲ ವಿರಹವ್ಯಥೆಯಿಂದ ಬೆಂದುಹೋದರು. (೨೫-೧೫) ಈ ಕಾವ್ಯದ ವಸ್ತುವಿಗೆ ತಕ್ಕಂತೆ ಕವಿ ವಿವಿಧ ಅವಸ್ಥೆಗಳ ಹೆಣ್ಣಿನ ಚಿತ್ರ ನೀಡುತ್ತಾನೆ. ಪ್ರೇಮ, ವಿರಹ, ಶೃಂಗಾರ, ತಾಯ್ತನ, ದುಃಖ, ನಿಯೋಗ...ಇತ್ಯಾದಿ, ಆದರೆ ಈ ಯಾವ ಅವಸ್ಥೆಯ ಹೆಣ್ಣಿನ ಚಿತ್ರವೇ ಆಗಲಿ ಎಲ್ಲದರಲ್ಲು ಈತ ಹೆಣ್ಣಿನ ಮೋಹಕ ರೂಪದ ಬಲೆಯಲ್ಲಿಯೇ ಕಣ್ಣನ್ನು ಕೀಲಿಸುತ್ತಾನೆ. ಈ ವರ್ಣನೆಗಳು ತಮ್ಮ ಚೆಲುವಿಕೆ ಮತ್ತು ಸಹಜತೆಯಿಂದಾಗಿ ಮನಸೆಳೆಯುತ್ತವೆ. ಶಿವನ ಉರಿಗಣ್ಣಿನಿಂದ ದಗ್ಧವಾಗಿ ಹೋದ ಮನ್ಮಥನ ಬೂದಿಯಲ್ಲಿ ಹೊರಳಿ ಅಳುತ್ತಿರುವ ರತಿಯ ಚಿತ್ರ ಹೀಗಿದೆ : ಬೂದಿಯಿಂದ ಕೈಯಾರೆ ತಿಕ್ಕಿಬೆಳಗಿದರೆ ಹೊಳೆವ ಸುವರ್ಣದ ಪಾತ್ರೆಯಂತೆ, ಹಲುಬುವ ರತಿಯ ಎದೆಯಲ್ಲಿ ಭಸ್ಮಲೇಪಿತ ಕುಚಗಳು ಶೋಭಿಸಿದವು (೮-೨೨), 'ಪುಷ್ಪದ ಪರಾಗದಲ್ಲಿ ಬಿದ್ದೆದ್ದು ಬಂದ ಮರಿದುಂಬಿಯ ಬಿಳಿಯಬಣ್ಣದ ಗರಿಗಳಂತಿದ್ದ ಸಡಿಲಾದ ತುರುಬಿನ ಬೂದಿ ಹತ್ತಿದ ಗುಂಗುರುಕೂದಲು ಮುಖವನ್ನು ಮುಚ್ಚಿದವು' (೮-೨೩) 'ಅಬ್ಬಾ ಬಿಚ್ಚಿ ಹರವಿದ ಕೂದಲು ಮತ್ತು ಬಿರುಸು ಮೊಲೆಗಳು ತೆರೆದು ಕಾಣುತ್ತಿರುವುದನ್ನೂ ಲಕ್ಷಿಸದಂಥ ಪತಿಯ ಸಾವಿನ ದುಃಖ ಎಂಥದೋ, (೮-೨೪). ಕನಕದಾಸ ತಾಯ್ತನದ ವಿವಿಧ ಭಾವಗಳನ್ನು ಬಹುಸಹಜವಾಗಿ ಚಿತ್ರಿಸುವುದನ್ನು ಆತನ ಕಾವ್ಯ ಹಾಗೂ ಕೀರ್ತನೆಗಳೆರಡರಲ್ಲೂ ಗುರುತಿಸಬಹುದು. ಎಳವೆಯಲ್ಲಿಯೇ ಶಂಬರಾಸುರನಿಂದ ಅಪಹೃತನಾದ ಪ್ರದ್ಯುಮ್ಮ ರತಿಯನ್ನು ವಿವಾಹವಾಗಿ ದ್ವಾರಕಾ ಪಟ್ಟಣವನ್ನು ಪ್ರವೇಶಿಸುವಾಗ ರುಕ್ಕಿಣಿ ಹೀಗೆ ಅಂದುಕೊಳ್ಳುತ್ತಾಳೆ. ಚಿನ್ನದ ಪ್ರತಿಮೆಯಂತಿರುವ ಈತನನ್ನು ಅದಾವ ಪುಣ್ಯಾತ್ಮಳು ಹಡೆದಳೊ ನನ್ನ ಮಗನು ಇದ್ದಿದ್ದರೆ ಹೀಗೆಯೇ ಇರುತ್ತಿದ್ದ, (೧೩-೨೪). “ಕಣ್ಣರಿಯದಿದ್ದರೂ ಕರುಳರಿಯಬಲ್ಲದೆಂಬಂತೆ ಆ ತಾಯಿ ಮನ್ಮಥನನ್ನು