ಪುಟ:Kanakadasa darshana Vol 1 Pages 561-1028.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೨೪ ಕನಕ ಸಾಹಿತ್ಯ ದರ್ಶನ-೧ ಕನಕಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ೮೨೫ ನೋಡಿದಳು ಎದೆಯಲ್ಲಿ ತೃಪ್ತಿಯಾಯಿತು. ಅವಳ ಮುಖ ಹುಣ್ಣಿಮೆಯ ಚಂದ್ರನಂತಾಯಿತು.' (೧೩-೨೫). ಗರ್ಭಿಣಿ ಸ್ತ್ರೀಯ ವರ್ಣನೆಯಂತೂ ಉಸಿರುಕಟ್ಟಿಸುವಷ್ಟು ಮೋಹಕವಾಗಿದೆ. ರತಿದೇವಿ ಗರ್ಭಿಣಿಯಾದುದನ್ನು ಕನಕ ಹೀಗೆ ವರ್ಣಿಸುತ್ತಾನೆ; ಹೊನ್ನಕೇದಗೆಯ ಹೊಡೆಯಂತೆ ಮೈಯಲ್ಲಿ ಬಸಿರು ಕಾಣಿಸಿಕೊಂಡಿತು? (೧೭-೨), 'ಮಗನನ್ನು ಪಡೆಯುವ ಹಂಬಲದಲ್ಲಿ ಕರ್ಪೂರತಾಂಬೂಲದ ರುಚಿಯನ್ನು ನೋಡದ ಅವಳ ಹಲ್ಲುಗಳು ಮಲ್ಲಿಗೆಯ ಮೊಗ್ಗೆಗಳಂತೆ ರಂಜಿಸಿದವು.' (೧೭-೩) 'ಗರ್ಭೋತ್ಪತ್ತಿಯ ಸಂತೋಷದಿಂದ ತಾಪತ್ರಯ ಕಳೆದು ಹೋಯಿತೆನ್ನುವಂತೆ ಆ ಕಮಲನೇತ್ರೆಯ ತ್ರಿವಳಿಗಳ ರೂಪವು ಮೈಯಲ್ಲಿ ಕರಗಿಹೋಯಿತು.' (೧೭-೬), ಹೆಣ್ಣಿನ ವಿರಹ ವರ್ಣನೆ ಸಾಂಪ್ರದಾಯಿಕವಾಗಿದ್ದರೂ ಪರಿಣಾಮ ಕಳೆದುಕೊಂಡಿಲ್ಲ. ಉಷೆಯ ವಿರಹ ಜ್ವಾಲೆಯನ್ನು ವರ್ಣಿಸುವ ಕೆಲವು ಪದ್ಯಗಳನ್ನು ನೋಡೋಣ : 'ಅವಳ ವಿರಹ ಜ್ವಾಲೆಯನ್ನು ತಣಿಸಲು ಎದೆಯ ಮೇಲೆ ಪರಿಮಳೋದಕವನ್ನ ಚಿಮುಕಿಸಿದರೆ ಸುಣ್ಣದಕಲ್ಲಿಗೆ ನೀರೆರೆದಂತೆ ಸಪ್ಪಳ ಹೊರಟಿತು' (೨೭-೬೦). 'ವಿರಹ ತಾಪದ ಶಮನಕ್ಕೆಂದು ಅವಳನ್ನು ತಳಿರ ಮಂಟಪದಲ್ಲಿ ತಂದು ಮಲಗಿಸಿದಾಗ ಕಾಮನ ಹದವಾದ ಹೂಬಾಣ ನೆಟ್ಟು ಜೀವ ಕಂಗೆಟ್ಟು ಹೋಯಿತು. ಮೈಯುರಿಯಿಂದ ಮಗ್ಗುಲಿನ ತಳಿರು ತರಗೆಲೆಯಾಯಿತು..... ಮೈಗೆ ಲೇಪಿಸಿದ ಸಿರಿಗಂಧ ಕರಕಾಯಿತು.' (೨೮-೧೬-೧೭) ಕೆಲವು ಸೌಂದರ್ಯ ವರ್ಣನೆಗಳು ಕನಕದಾಸನ ಸೌಂದರ್ಯ ಪ್ರಜ್ಞೆಯನ್ನು ಇನ್ನಿಲ್ಲದಂತೆ ಮನಗಾಣಿಸುತ್ತವೆ. ತಲೆಗೂದಲಿನ ವರ್ಣನೆ ಹೀಗಿದೆ : “ಅರಳಿದ ಅವಳ ಮುಖಕಮಲದಲ್ಲಿಯ ಮಕರಂದ ಮತ್ತು ನೀರನ್ನು ಹೀರಿ ಸುಖಿಸಿದ ತುಂಬಿಗಳಂತೆ ಅವಳ ಕಪ್ಪಾದ ತಲೆಗೂದಲಿದ್ದವು. (೨೩-೨೮). ಚಂದನಾದಿ ಸಮಸ್ತ ವಸ್ತುಗಳಿಗೆ ತನ್ನ ಮೈಯ ಸುವಾಸನೆಯನ್ನು ಕಡವಾಗಿ ಕೊಡುವಂತೆ ವನಲಕ್ಷ್ಮಿಯನ್ನು ಹೋಲುವ ಬಾಣಾಸುರನ ಪುತ್ರಿ ಶಿವನ ಒಡೋಲಗಕ್ಕೆ ಬಂದಳು. (೨೪-೬೯) 'ಸೊಗಸಾದ ಅಡಕೆಗರಿಯೇ ಕಣ್ಣೆವೆಯಾಗಿದ್ದ ಚೆಲುವೆಯೊಬ್ಬಳು ಪಾತ್ರೆಯಲ್ಲಿ ನೀರು ಹಿಡಿದು ನಿಂತಿದ್ದಳು.' ....ರತಿದೇವಿಯು ತನ್ನ ದಾಸಾಳ ಹೂವಿನಂಥ ಬಾಯಿಂದ ನರುಗಂಪು ಸೂಸುವಂತೆ ಕಾಮನೊಡನೆ ಮಾತನಾಡಿದಳು' (೧೬-೨೪), ಹೆಣ್ಣಿನ ಸೌಂದರ್ಯಕ್ಕೆ ಸರಿಸಾಟಿಯಾದುದು ಯಾವುದೂ ಇಲ್ಲ. ಇದರ ಆಕರ್ಷಣೆಯನ್ನು ತಪ್ಪಿಸಿಕೊಳ್ಳುವುದು ಕಷ್ಟ ಎಂಬುದನ್ನು ಕನಕ ಮನಗಂಡಿರಬೇಕು. ಈ ಅನುಭವವನ್ನು ನಾನಾ ವಿಧದಲ್ಲಿ ವ್ಯಕ್ತಪಡಿಸಿದ್ದಾನೆ-ಶಿವನ ದರ್ಶನಕ್ಕೆ ಹೊರಟ ಉಷೆಗೆ ಪರಿಚಾರಿಕೆಯರು ಉಡುಗೆ ತೊಡುಗೆ ಮಾಡುವ ಸಂದರ್ಭದ ವರ್ಣನೆಯ ಒಂದು ಪದ್ಯ ಹೀಗಿದೆ- 'ಸುಂದರಿಯರಾದ ಹೆಣ್ಣುಗಳೇನು ಮಹಾ ಎನ್ನುವ ಬಾಯಿಬಡುಕ ತಪಸ್ವಿಗಳನ್ನು ಎಲೆ ತಾಯೆ ಕೆಡೆದು ಮೆಟ್ಟು ಎನ್ನುತ್ತ ಅವಳಿಗೆ ಕಾಲ್ಕಡಗ ಮತ್ತು ತೋಡಗಳನ್ನು ತಂದು ತೋಡಿಸಿದರು' (೨೩-೪೬) ಹೂಬಾಣಕ್ಕೆ ಸಾಟಿಯಾದ ಉಷಾದೇವಿಯ ಸಖಿಯರನ್ನು ಕಂಡ ವಿಟರು ಪಂಚಬಾಣಗಳ ಹೊಡೆತದಿಂದ ಬಾಣತಾಗಿದ ಹುಲ್ಲೆಗಳಂತೆ ಬಿದ್ದರು. (೨೪-೨೧) ಹೆಣ್ಣಿನ ವರ್ಣನೆಯಲ್ಲಿ ಅನೇಕಸಲ ಕನಕದಾಸ ತನ್ನ ತುಂಟತನವನ್ನು ಮೆರೆಯುತ್ತಾನೆ. ಒಂದು ಸಂದರ್ಭದಲ್ಲಿ ಮನ್ಮಥನು ಹೀಗೆ ನುಡಿಯುತ್ತಾನೆ : 'ನನ್ನ ಮಡದಿಯ ದಟ್ಟವಾದ ಕೊಬ್ಬಿದ ಕುಚಗಳನ್ನು ನಟ್ಟ ದೃಷ್ಟಿಯಿಂದ ನೋಡುವ ನಾನು ಕಿಡಿಗಣ್ಣನಾದರೆ ಹೇಗೆ ತಾನೆ ನೋಡಬಲ್ಲೆನು'... (೬-೪೧). ಕ್ರೀಡೆಯ ಸಂದರ್ಭದಲ್ಲಿ ಹೆಂಗಸರ ಚೇಷ್ಟೆಗಳ ವರ್ಣನೆ ಚೇತೋಹಾರಿಯಾಗಿದೆ. “ಮತ್ಯಾವತಾರ ತಾಳಿದ ನೀನು ನೀರನ್ನು ಬಿಟ್ಟಿರಲಾಗುವುದೆ ಎನ್ನುತ್ತ ಆ ಲಲನೆಯರು ರಾರಾಜಿಸುವ ಕುಂಕುಮ ಜಲದಲ್ಲಿ ನಾರಾಯಣನನ್ನು ಅದ್ದಿದರು (೧೪-೨೪), ಮನ್ಮಥ ರತಿಯನ್ನು ನೀರಲ್ಲಿ ನೂಕಿದಾಗ ಉಟ್ಟ ಹೊದಿಕೆಯ ಸೀರೆ ತೊಯ್ದು ಎದೆಯಲ್ಲಿ ಬಟ್ಟಮೊಲೆಗಳು ಶೋಭಿಸುತ್ತಿರಲು ರತಿದೇವಿ ನೀರಿನಿಂದ ಹೊರಬಂದು ಕೂದಲನ್ನು ಸರಿಪಡಿಸಿಕೊಳ್ಳುತ್ತ “ಮನ್ಮಥನೆ ನಿನ್ನ ಮೈಯಲ್ಲಿ ಹರನ ಉರಿಗಣ್ಣಿನಿಂದ ಬೆಂದ ಸಂತಾಪ ಹಾಗೂ ತುಂಬುಕುಚದ ತರುಣಿಯರ ವಿರಹದ ತಾಪವಿದೆ ತಂಪಾಗು” ಎಂದು ಆ ತಂಗೊಳದಲ್ಲಿ ನೂಕಿದಳು (೧೪-೭೮) ಒಟ್ಟಿನಲ್ಲಿ ಈ ಕಾವ್ಯದಲ್ಲಿ ಕನಕನ ದೃಷ್ಟಿಯಲ್ಲಿ ಹೆಣ್ಣೆಂದರೆ ಸೌಂದರ್ಯದ ಪ್ರತೀಕ. ಉಷೆಯಾದರೇನು, ರತಿಯಾದರೇನು, ರುಕ್ಕಿಣಿಯಾದರೇನು ಇವರೆಲ್ಲ