ಪುಟ:Kanakadasa darshana Vol 1 Pages 561-1028.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೩೬ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಸಾಹಿತ್ಯದಲ್ಲಿ ಐತಿಹಾಸಿಕ ಅಂಶಗಳು ೮೩೭ ತಿಳಿದದ್ದರಿಂದ ಆದ ತಪ್ಪು ಗ್ರಹಿಕೆಯೆಂದು ಕೆಲವರ ವಾದ. ಕಬ್ಬಲಿಗ ಗ್ರಹಿಕೆಗೆ ಪುರಂದರದಾಸರ ಕೀರ್ತನೆಯೊಂದರಲ್ಲಿನ “ಕನಕದಾಸನು ಕಬ್ಬಲಿಗನೆಂದು ಅಣಕಿಸಿ ನುಡಿಯಬೇಡಿರಣ್ಣ” ಎಂಬ ಮಾತು ಕಾರಣವಾಗಿದೆ. ಇಲ್ಲಿಯೂ ಕುರುಬಜಾತಿಯನ್ನು ಕಬ್ಬಲಿಗ ಜಾತಿಯೆಂದು ತಪ್ಪಾಗಿ ಭಾವಿಸಿದ್ದರಿಂದ ಆದುದೆಂದು ಹೇಳಲಾಗಿದೆ ಕನಕದಾಸರು ಕುರುಬರವನೆಂಬುದಕ್ಕೆ ಕೃತಿಗಳಲ್ಲಿಯೇ ಆಧಾರಗಳು ಸಿಗುವುದರಿಂದ ಇದೇ ಸರಿಯಾದುದೆಂದು ಕಾಣುತ್ತದೆ. ಇದಕ್ಕೆ “ನಾವು ಕುರುಬರು ನಮ್ಮ ದೇವರು ಬೀರಯ್ಯ, ಕಾವ ನಮ್ಮಜ್ಜ ನರಗುರಿಯ ಹಿಂಡುಗಳ” ಎಂಬ ಮಾತನ್ನು ಉದಾಹರಿಸಬಹುದು. ಮಿಗಿಲಾಗಿ ಕನಕದಾಸರ ಒಂದು ಉಗಾಭೋಗದಲ್ಲಿ “ಕುರುಬರ ಕುಲದಲಿ ಜನಿಸಿದೆನಗೀಜನುಮದಲ್ಲಿ ಮುಕ್ತಿ ಎಂತು ತಂದೆ” ಎಂದು ಸ್ಪಷ್ಟವಾಗಿರುವುದರಿಂದ ಭಿನ್ನಾಭಿಪ್ರಾಯಕ್ಕೆ ಎಡೆಯಿಲ್ಲವೆಂದೇ ತೋರುತ್ತದೆ. ಕನಕದಾಸರಿಗೆ ಮೊದಲು ತಿಮ್ಮಪ್ಪ' ಎಂದು ಹೆಸರಿದ್ದಂತೆ ತಿಳಿಯುವುದು. ಈ 'ತಿಮ್ಮಪ' `ಕನಕನಾಯಕ'ನಾಗಿ ಮಾರ್ಪಟ್ಟಿದ್ದು ಒಂದು ವಿಶೇಷ. ಈ ಕುರಿತ ನಿಧಿಯ ಪ್ರಸಂಗ ಒಂದು ಪ್ರತಿಮೆಯಷ್ಟೆ, ಪಾಳೆಯಗಾರನಾಗಿದ್ದ ಕನಕನಿಗೆ ಧನಕನಕವಸ್ತು-ವಾಹನಗಳಿದ್ದುದು ಆಶ್ಚರ್ಯವೇನಲ್ಲ. ಹೀಗೆ ತನ್ನಲ್ಲಿದ್ದ ಐಶ್ವಶ್ಯವನ್ನು ಸದ್ವಿನಿಯೋಗ ಮಾಡಿದ್ದರಿಂದ ಅವನಿಗೆ 'ಕನಕ' ಎಂದು ಹೆಸರು ಬಂದಿರಬಹುದು. ಇದಲ್ಲದೆ ಕೃತಿಗಳಲ್ಲಿ ಕನಕ ಕನಕಪ್ಪ ಎಂಬ ಹೆಸರುಗಳು ಕಂಡುಬರುವುದರಿಂದ, ಅವನ ಹೆಸರು ಇದಾಗಿರಲೂಬಹುದು : 'ದೇವಿ ನಮ್ಮ ದ್ಯಾವರು ಬಂದರು” ಎಂಬ ಕೀರ್ತನೆಯಲ್ಲಿ `ಕನಕಪ್ಪ' ಎಂದೇ ಅಂಕಿತವಿರುವುದು ಗಮನಾರ್ಹ. ಕನಕದಾಸರ ಕೌಟುಂಬಿಕ ವಿವರಗಳು ಹೆಚ್ಚಾಗಿ ಸಾಂಪ್ರದಾಯಿಕ ಆಧಾರಗಳಿಂದ ದೊರೆಯುತ್ತವೆಯೇ ಹೊರತು, ಕೃತಿಗಳಿಂದಲ್ಲ. ಆದರೆ 'ಮೋಹನತರಂಗಿಣಿ'ಯಲ್ಲಿ 'ಕೃತಿವೇಳ ಕನಕದಾಸೋತ್ತಮ ಕೇಳವಳುರೆ ಸುಜ್ಞಾನವಧೂಟಿ' ಎಂಬ ಮಾತಿದೆ.10 ಇದರ ಪ್ರಕಾರ ಕನಕದಾಸ ಹೇಳಿದ 5. ಜ್ಯೋತಿ ಹೊಸೂರ, ಕನಕದಾಸ ಜೀವನ ವಿಚಾರ, ಪು. 86 6, ಅದೇ, ಪು. 88-89 7. ಶ್ರೀಕನಕದಾಸರ ಹಾಡುಗಳು, ಕೀ 152 8. ಕನಕದಾಸರ ಕೀರ್ತನೆಗಳು, ಕೀ. 90 9. ಅದೇ, ಕೀ, 120 10, ಆರ್. ಸಿ. ಹಿರೇಮಠ (ಸಂ) ಮೋಹನತರಂಗಿಣಿ, 2-1 ಕಥೆಯನ್ನು ಒಬ್ಬ ಹೆಣ್ಣು ಕೇಳಿದಳು ಎಂದು ಅರ್ಥವಾಗುವುದು. ಇದೇ ಗ್ರಂಥದಲ್ಲಿ “ಮದ್ವಲ್ಲಭೆ' ಎಂದು ಸಂಬೋಧಿಸಿರುವುದರಿಂದ ಇವಳು ಅವನ ಹೆಂಡತಿ ಇರಬಹುದೆ ಎಂಬ ಸಂದೇಹ ಉಂಟಾಗುವುದು. ಕನಕದಾಸರಿಗೆ ಮಡದಿ ಮಕ್ಕಳು ಇದ್ದರೆಂಬುದಕ್ಕೆ ಕೆಲವು 'ಹರಿಭಕ್ತಿಸಾರ'ದ 'ಮಡದಿಯಾರೀ ಮಕ್ಕಳಾರಿ ಎಂಬುದನ್ನು ಉದಾಹರಿಸುತ್ತಾರೆ. ಆದರೆ ಇದನ್ನು ಸಾರ್ವತ್ರಿಕವಾಗಿ ಹೇಳಿರಬಹುದಾದ ಸಾಧ್ಯತೆ ಇದೆ. ಮಡದಿ ಬಗೆಗೆ ಸಹಾಯಕವಾಗಿ 'ಮೋಹನ ತರಂಗಿಣಿ'ಯಲ್ಲಿ ಉಲ್ಲೇಖಿತವಾದ ಹೆಣ್ಣು ಆಧಾರವಾಗಬಹುದಾದರೂ, ಮಕ್ಕಳ ಬಗ್ಗೆ ಆಧಾರವಿಲ್ಲ. 'ಮೋಹನತರಂಗಿಣಿ'ಯ ಆ ಉಲ್ಲೇಖದಲ್ಲಿ ಕನಕನ ಹೆಂಡತಿಯ ರೂಪವನ್ನು ಕೆಲವರು ಕಂಡಿದ್ದಾರೆ.12 ಮಗನ ಅಕಾಲಿಕ ಸಾವಿನಿಂದಾದ ಹೆಂಡತಿಯ ಲೋಕ ವಿಮುಖತೆಯನ್ನು 'ತರಂಗಿಣಿ'ಯಲ್ಲಿ ಬರುವ 'ರಹಿತ ಪ್ರಪಂಚ' ಮಾತಿನ ಮೂಲಕ ವಾಖ್ಯಾನಿಸಲಾಗಿದೆ.13 ಮೊದಲು 'ತರಂಗಿಣಿಯಲ್ಲಿ ಉಲ್ಲೇಖಗೊಂಡಿರುವ 'ಹೆಣ್ಣು' ಕನಕನ ಹೆಂಡತಿ ಎಂದು ದೃಢಪಡಬೇಕಾಗಿದೆ : ಆವರೆಗೆ ಇವೆಲ್ಲ ಊಹೆಯಷ್ಟೆ. ಕನಕದಾಸರ ಗುರುಗಳ ಪ್ರಸ್ತಾಪ ಇನ್ನೊಂದು ಮುಖ್ಯ ವಿಚಾರ. ಕನಕದಾಸರ ಗುರುಗಳು ವ್ಯಾಸರಾಯರೆಂಬುದು ಸ್ಪಷ್ಟವೇ ; ಕೆಲವರು ವಾದಿರಾಜರ ಹೆಸರನ್ನೂ ಹೇಳುತ್ತಾರೆ. ವಾದಿರಾಜರ ಉಲ್ಲೇಖ ಕನಕರ ಕೀರ್ತನೆಗಳಲ್ಲಿ ಬಂದಿರುವುದು ನಿಜ. ಕನಕ ಅವರನ್ನು ಕಂಡು ಅವರ ಸೇವೆಯನ್ನು ಕೈಗೊಂಡಿರಬಹುದಾದ ಸಾಧ್ಯತೆಯನ್ನು ಇದು ಹೇಳಬಹುದು. ವಾದಿರಾಜರನ್ನು ಕುರಿತು 'ಮೋಹನತರಂಗಿಣಿ'ಯಲ್ಲಿ 'ತ್ರಿವಿಕ್ರಮದಾಸಸ್ಯನಾದ' ಎಂದು ತನ್ನನ್ನು ಕರೆದುಕೊಂಡಿರುವುದರಿಂದ, ಅವರು ಗುರುವಾಗಿರಬಹುದೆಂದು ಸಂದೇಹ. ಸೋದೆಯಲ್ಲಿ ತ್ರಿವಿಕ್ರಮದೇವರನ್ನು ಪ್ರತಿಷ್ಠಿಸಿದ್ದರಿಂದ ವಾದಿರಾಜರಿಗೆ ಆ ಹೆಸರಿದೆ. ಕನಕ ಉಡುಪಿಗೆ ಬ೦ದಾಗ ವಾದಿರಾಜರ ನ್ನು ಭೇಟಿಮಾಡಿರಬಹುದು. ಆದರೆ ವ್ಯಾಸರಾಯರಂತೆ ವಾದಿರಾಜರು ನೇರಗುರುಗಳಾಗಿದ್ದರೆ ಎಂಬುದು ಪ್ರಶ್ನೆ. ಕನಕದಾಸರು ವ್ಯಾಸರಾಯ ಮತ್ತು 11. ಕನಕದಾಸಜೀವನವಿಚಾರ, ಪು. 59. 12. ಅದೇ ಪು. 58-59 13. ಅದೇ ಪು. 60.