ಪುಟ:Kanakadasa darshana Vol 1 Pages 561-1028.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಮುಂಡಿಗೆಗಳು ೫ರ್೮ 'ಮುಂಡಿಗೆ' ಶಬ್ದ ನಿಷ್ಪತ್ತಿಯನ್ನು ಕುರಿತಂತೆ ವಿದ್ವಾಂಸರು ವಿವಿಧ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಬುರ್ಲಿ ಬಿಂದು ಮಾಧವ ಅವರು “ಕಟ್ಟಿಗೆಯ ದೊಡ್ಡ ತೋಲೆಯ ಎತ್ತಲು ಹೇಗೆ ಸುಲಭ ಸಾಧ್ಯವಲ್ಲವೋ ಹಾಗೆಯೇ ಕನಕನ ಈ ಜಾತಿಯ ಹಾಡುಗಳನ್ನು ಸುಲಭವಾಗಿ ಅರ್ಥಮಾಡಲು ಸಾಧ್ಯವಿಲ್ಲೆಂದೇ ಇವುಗಳಿಗೆ ಮುಂಡಿಗೆಗಳೆಂದು ಕರೆದಿರುವರು”' ಎಂದಿದ್ದಾರೆ. ಎಂ. ಚಿದಾನಂದಮೂರ್ತಿಯವರು ಪ್ರಾಚೀನ ಕರ್ಣಾಟಕದಲ್ಲಿ ದಿವ್ಯ ಮತ್ತು ಮುಂಡಿಗೆಯ ಬಗ್ಗೆ ವಿವೇಚಿಸುತ್ತ “ಮುಂಡಿಗೆ ಮತ್ತು ಮುಡಿಗೆಗಳೆರಡೂ ಸಮಾನಾರ್ಥಗಳು. ಎರಡಕ್ಕೂ ಟೊಪ್ಪಿಗೆ ಅಥವಾ ತಲೆಯ ಮೇಲಿನ ಉಡುಪು ಎಂಬುದು ಮೂಲಾರ್ಥ, ಇಬ್ಬರ ಮಧ್ಯೆ ವಾದವೊಂದು ಎದ್ದಾಗ ಅವರಲ್ಲಿ ಒಬ್ಬನು ತನ್ನ ತಲೆಯ ಮೇಲಿನ ಉಡುಪನ್ನು ತೆಗೆದು ಎಸೆದರೆ ಅದು ಸವಾಲಿನ ಸೂಚಕವಾಗಿದ್ದಿತು” ಎಂದು ಹೇಳಿ ಮುಂದುವರೆದು “ಹೀಗೆ ಮುಂಡಿಗೆ ಮತ್ತು ಮುಡಿಗೆಗಳು ಮೊದಲು ಶಿರೋವಸ್ತ್ರವನ್ನು ಸೂಚಿಸುತ್ತಿದ್ದು ಕ್ರಮೇಣ ಸವಾಲು ಎಂಬ ಅರ್ಥವನ್ನು ಪಡೆದವು” ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ಮುಂಡಿಗೆ ಮತ್ತು ಮುಡಿಗೆ ಸಮಾನಾರ್ಥಕಗಳೆಂದು ಸ್ವೀಕರಿಸುವ ಮುನ್ನ ಕೆಲವೊಂದು ಅನುಮಾನಗಳು ಉದ್ಭವಿಸುತ್ತವೆ. ಮುಂಡಿಗೆ ಶಬ್ದ ಸಂಸ್ಕೃತ ಮುಂಡಕದ ತದ್ಭವ, ಕಿಟ್ಟೆಲ್ ಮುಂಡಕ ಎಂಬುದಕ್ಕೆ the lopped trunk or stem of a tree, a barber, the head ಎಂಬ ಅರ್ಥಗಳನ್ನು ಕೊಟ್ಟಿದ್ದಾರೆ. ಅಲ್ಲದೆ ಈ ಬಗೆಗೆ ಅತ್ಯಂತ ಪ್ರಾಚೀನ ಉಲ್ಲೇಖವೆನಿಸಿರುವ ಪಂಪಭಾರತದಲ್ಲಿ “ಮುಡಿಗೆ' ಎಂಬ ಅಬಿಂದುಕ ರೂಪ ದೊರೆಯುವುದನ್ನು ಗಮನಿಸಬೇಕು. 'ಮುಂಡಿಗೆ' ರೂಪ ಪ್ರಥಮವಾಗಿ ಕಾಣಿಸಿಕೊಳ್ಳುವುದು ಬಸವಣ್ಣನವರಲ್ಲಿ. ಸಾಮಾನ್ಯವಾಗಿ ಸಬಿಂದುಕಗಳು ಅಬಿಂದುಕಗಳಾಗುತ್ತವೆಯೇ ಹೊರತು ಅಬಿಂದುಕಗಳು ಸಬಿಂದುಕವಾಗುವುದಿಲ್ಲ. ಬುರ್ಲಿಯವರು ಕಿಟ್ಟೆಲ್ ನೀಡಿರುವ Thelopped trunk or stem of a tree ಎಂಬ ಅರ್ಥವನ್ನು ಆಧರಿಸಿ ನಿಷ ಮಾಡಿದ್ದಾರೆ. ಸದ್ಯದಲ್ಲಿ the head ಮೂಲವಾಗಿಟ್ಟುಕೊಂಡು ತಲೆಗೆ ಅಂದರೆ ಮಿದುಳಿಗೆ ಸಂಬಂಧಿಸಿದಂತೆ ಬುದ್ದಿ ಪ್ರಧಾನವಾದ ರಚನೆಗಳನ್ನು ಮುಂಡಿಗೆ ಎಂದು ಕರೆಯಬಹುದು. “ಕನಕನು ಹೇಳಿದ ಬೆಡಗು ಕಂಡವರು ನೀವ್ | ಕೇಳಿತಿಳಿದು ನಿಮ್ಮ ಮನದಲ್ಲಿ ನೋಡಿ”೩ "ಕಾಗಿನೆಲೆಯ ಕನಕದಾಸ ಹೇಳದಂಥ ೧. ಸಂಶೋಧನ ತರಂಗ ಭಾಗ-೧ : ೨. ಅದೇ ೩. ಕನಕದಾಸರ ಕೀರ್ತನೆಗಳು : ಸಂ. ಬಿ. ಶಿವಮೂರ್ತಿಶಾಸ್ತ್ರೀ, ಡಾ. ಕೆ.ಎಂ. ಕೃಷ್ಣರಾವ್ : ಪು ೨೦೩ ಮುಂ | ಡಿಗೆಯ ಬಲ್ಲನು ಆದಿಕೇಶವನೊಬ್ಬನು ಬಲ್ಲವರು ನೀವು ಪೇಳಿರಯ್ಯ ಭಾವದುಭಯಾರ್ಥವಿದು | ಎಲ್ಲರಿಗೆ ಸಮ್ಮತವಾದೀ ನಾಮ” ಎಂದು ಕನಕದಾಸರು ಬೆಡಗು, ಮುಡಿಗೆ, ದ್ವಂದ್ವಾರ್ಥ ಎಂಬ ಮೂರು ಶಬ್ದಗಳನ್ನೂ ಸಮಾನಾರ್ಥಕವಾಗಿ ಬಳಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಡಿಗೆ ಶಬ್ದದ ಅರ್ಥವ್ಯಾಪ್ತಿ ಸ್ಪಷ್ಟವಾಗುತ್ತದೆ. ಸಾಮಾನ್ಯರಿಗೂ ಸುಲಭ ಗ್ರಾಹ್ಯವಾಗುವಂಥ ಕೀರ್ತನೆಗಳನ್ನು ರಚಿಸಿದ ಕನಕರು ಗೂಢವಾದ ಮುಂಡಿಗೆಗಳನ್ನು ರಚಿಸಲು ಪ್ರೇರಣೆಯೇನು ಎಂಬ ಪ್ರಶ್ನೆ ಸಹಜ. ಈ ಕುರಿತು ಬುರ್ಲಿಯವರು ಬಗೆಬಗೆಯ ಊಹೆಗಳನ್ನು ಮಾಡಿದ್ದಾರೆ. “೧. ಕೆಲವು ಪಾಂಡಿತ್ಯ ಪ್ರದರ್ಶನಕ್ಕಾಗಿ ಇರಬೇಕು. ೨. ಇನ್ನೂ ಕೆಲವು ಪಾಂಡಿತ್ಯ ಪರೀಕ್ಷೆಗಾಗಿಯೂ ಇದ್ದಂತೆ ಕಾಣುತ್ತವೆ. ೩. ಮತ್ತೆ ಕೆಲವು ಬುದ್ಧಿಪೂರ್ವಕವಾಗಿ ಗುಹ್ಯ ಭಾಷೆಯಲ್ಲಿ ಹೇಳಿದಂತೆ ಅನಿಸುವುದು. ೪. ಕೆಲವೊಮ್ಮೆ ಜ್ಞಾನಿಜ್ಞಾನಿಗಳ ಆಂತರಿಕ ಭಾಷೆಯಾಗಿ ಹೊರಹೊಮ್ಮಿದ್ದನ್ನೂ ಕಾಣಬಹುದು. ೫. ಆತ್ಮಾನುಭವ ಹಾಗೂ ತತ್ವಜ್ಞಾನವನ್ನು ವಿವರಿಸಿದ್ದನ್ನು ನೋಡಬಹುದು ೬. ಪಂಡಿತರನ್ನೂ ಪೌರಾಣಿಕರನ್ನೂ ಕೆಣಕಿದ ಕೆಲವು ಹಾಡುಗಳನ್ನು ಕಾಣಬಹುದು'೧ ಮೇಲಿನ ಊಹೆಗಳಲ್ಲಿ ಕೆಲವು ಸತ್ಯಾಂಶಗಳಿದ್ದರೂ ಪ್ರಬಲವಾದ ಕಾರಣ ಬೇರೆಯೇ ಆಗಿದೆ. ಅಧ್ಯಾತ್ಮವನ್ನು ನೇರವಾಗಿ ಹೇಳದೆ ಜಟಿಲವಾಗಿ ಹೇಳಬೇಕೆಂಬ ಆಶಯ ಉಪನಿಷತ್ತಿನಲ್ಲಿದೆ. ಅಂತೆಂರೆ ಅಧ್ಯಾತ್ಮವನ್ನು ಅಲ್ಪಮತಿಗೆ ಅಜ್ಞಾನಿಗೆ ಅವಿವೇಕಿಗೆ ಉಪದೇಶಿಸಬಾರದೆಂಬ ನಿಷೇಧ ಪರಂಪರಾನುಗತವಾಗಿ ಬಂದಿದೆ. ಪುರಂದರರು ತಮ್ಮ ಒಂದು ಕೀರ್ತನೆಯಲ್ಲಿ ಪಾಪಿಗೇತಕೆ ಪರಮತತ್ವಬೋಧ ಕೋಪಿಗೇತಕೆ ಸುಗುಣ ಶಾಂತ ಬುದ್ದಿ ಮೂಡಬಲ್ಲನೆ ಜ್ಞಾನ ದೃಢಭಕುತಿಯ ಕಾಡಕಪಿ ಬಲ್ಲುದೇ ಮಾಣಿಕದ ಬೆಲೆಯ ಎಂದು ವ್ಯಕ್ತಪಡಿಸಿರುವಲ್ಲಿ ಉಪನಿಷತ್ತಿನ ಇಂಗಿತವೆ ಮರುಗೊಳಿಸಿದೆ. ೪. ಅದೇ : ಮ. ೨೦೭ ೫. ಅದೇ ಮ. ೮೦೯ ೧. ಕನಕದಾಸ ಪ್ರಶಸ್ತಿಗ್ರಂಥ : ಪು. ೪೭ ೨. ಶ್ರೀ ಪುರಂದರದಾಸರ ಸಾಹಿತ್ಯ-೫, ಪು. ೯