ಪುಟ:Kanakadasa darshana Vol 1 Pages 561-1028.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೪೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಸಾಹಿತ್ಯದಲ್ಲಿ ಐತಿಹಾಸಿಕ ಅಂಶಗಳು ೮೪೧ ಹೀಗೆ ಆಳುತ್ತಿದ್ದರೂ ವಿಜಯನಗರದ ಅರಸರಿಗೆ ಸಹಾಯಕರಾಗಿಯೇ ಇದ್ದರೆಂಬುದನ್ನು ಮರೆಯುವ ಹಾಗಿಲ್ಲ. “ಕಂದಾಯವನ್ನು ವಸೂಲು ಮಾಡುವುದು, ಕರೆಬಂದಾಗ ಅರಸರಿಗೆ ಯುದ್ದಕ್ಕೆ ನೆರವಾಗುವುದು” ಬೀರಪ್ಪನ ಕೆಲಸವಾಗಿತ್ತೆಂದು ಹೇಳಲಾಗಿದೆ.20 ಇದು ಕನಕದಾಸರ ಕಾಲಕ್ಕೂ ಮುಂದುವರೆದಿರಬಹುದು. ಕನಕನಿಗೂ ಕೃಷ್ಣದೇವರಾಯನಿಗೂ ನೇರಸಂಬಂಧವಿತ್ತೆಂಬುದಕ್ಕೆ 'ಮೋಹನತರಂಗಿಣಿ'ಯಲ್ಲಿ ಬರುವ ಇತಿಹಾಸ ಪ್ರಸಕ್ತಿಯೇ ನಿದರ್ಶನವಾಗಿದೆ. ಕನಕದಾಸರು ಸಮಕಾಲೀನ ರಾಜಕೀಯ, ಸಾಮಾಜಿಕವಿಚಾರಗಳನ್ನು ತಮ್ಮ ಕೃತಿಗಳಲ್ಲಿ ಪ್ರಸ್ತಾಪಿಸಿದ್ದಾರೆ, ಮುಖ್ಯವಾಗಿ 'ಮೋಹನತರಂಗಿಣಿ'ಯನ್ನು ಗಮನಿಸಬೇಕು. ಇದರಲ್ಲಿ ನೇರವಾಗಿಯೇ ಈ ವಿಚಾರಗಳಿವೆ ; ಉಳಿದ ಒಂದೆರಡು ಕೃತಿಗಳಲ್ಲಿ ತುಂಬ ಸೂಚ್ಯವಾಗಿ ಸಾಂಕೇತಿಕವೆನ್ನುವಂತೆ ಇದರ ಉಲ್ಲೇಖವಿದೆ. ಕನಕದಾರ ಕೀರ್ತನೆಗಳಲ್ಲೂ ಕೆಲವು ಚಾರಿತ್ರಿಕ ಸಂಗತಿಗಳನ್ನು ಕಾಣಬಹುದು. ಅವು ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳೇ ಆಗಿವೆ ದಾಸನಾದ ಮೇಲೆ ತನ್ನ ಹಿಂದಿನ ಬದುಕನ್ನು ನೆನೆದು ವಿಷಾದಪಡುವ ರೀತಿಯಲ್ಲಿ ಇಂತಹ ರಚನೆಗಳು ಇವೆ. ಇವನ್ನು ಈ ಹಿಂದೆಯಷ್ಟೆ ಪರಿಶೀಲಿಸಿದ್ದೇವೆ. ಅವನ ಸೈನಿಕ ಜೀವನ, ಆ ಕುರಿತ ಅವನ ಅತೃಪ್ತಿ ಇಂತಹ ರಚನೆಗಳಲ್ಲಿ ಹೊಗೆಯಾಡುತ್ತದೆ. ಕನಕದಾಸರು ವಿಜಯನಗರದ ಕಾಲದಲ್ಲಿ, ಅದರಲ್ಲೂ ಕೃಷ್ಣದೇವರಾಯನ ಆಡಳಿತಾವಧಿಯಲ್ಲಿ ಇದ್ದವರು. ರಾಜಕೀಯ ಸಂಬಂಧವಾಗಿ ಕನಕ ಕೃಷ್ಣದೇವರಾಯನನ್ನು ಆಗಾಗ್ಗೆ ಭೇಟಿಮಾಡುತ್ತಿದ್ದಿರಬೇಕು. ಹೀಗಾಗಿ ವಿಜಯನಗರದ ವೈಭವವನ್ನು ಅವನು ಕಣ್ಣಾರೆ ಕಂಡಿರಲು ಸಾಧ್ಯ. ಈ ಅನುಭವವನ್ನು ಅವನು ತನ್ನ 'ಮೋಹನ ತರಂಗಿಣಿ'ಯಲ್ಲಿ ಬಿಡಿಸಲು ಯತ್ನಿಸಿರುವನು. ಇದು ವರ್ಣನೆ ರೂಪದಲ್ಲಿ ಮಾತ್ರ ಸಾಧ್ಯವಾಗಿದೆ. ಸಂಗತಿ ಅಥವಾ ಘಟನೆಗಳು ನೇರವಾಗಿ ಕಾಣಿಸಿಕೊಂಡಿಲ್ಲ. ವಿಜಯನಗರದ ವೈಭವದ ಬಿಡಿಚಿತ್ರಗಳನ್ನಷ್ಟೆ ಇಲ್ಲಿ ನೋಡುತ್ತೇವೆ. ಕನಕದಾಸರಿಗೂ ವಿಜಯನಗರಕ್ಕೂ ಇದ್ದ ನಿಕಟಸಂಬಂಧವನ್ನು ಈ ಚಿತ್ರಗಳು ದೃಢಪಡಿಸುತ್ತವೆ. ಆ ಕಾಲದ ಜನಜೀವನದ ಕೆಲವು ತುಣುಕುಗಳು ಇಲ್ಲಿ ದಾಖಲಾಗಿವೆ. ಪುರಾಣಕಥೆಯನ್ನು ಹೇಳುತ್ತಿದ್ದರೂ, ಅದರೊಳಗೆ ಸಮಕಾಲೀನ ಇತಿಹಾಸ ಪ್ರಸಕ್ತಿಯೇ ಕೆಲಸಮಾಡುವುದನ್ನು ಗುರುತಿಸುತ್ತೇವೆ. 'ಕೃಷ್ಣಚರಿತೆ' ಎಂದಿದನ್ನು ಕರೆದು “ಕೃಷ್ಣದೇವರಾಯ ಚರಿತೆ' ಎಂಬ ಸೂಚ್ಯಾರ್ಥವನ್ನು ಅಪೇಕ್ಷಿಸಿರಬಹುದು.22 ಆದರೆ ಕೃಷ್ಣದೇವರಾಯನ ರಾಜಕೀಯ ಸಾಧನೆಗಳೇನೂ ಇಲ್ಲಿ ಉಲ್ಲೇಖವಾಗಿಲ್ಲ. ಇಲ್ಲಿರುವುದು ಆ ಕಾಲದ ಒಂದು ವೈಭವದ ಚಿತ್ರ ಮಾತ್ರ. ಆ ಕಾರಣದಿಂದಲೇ ಇದು ಕೇವಲ ರಾಜಕೀಯ ಚಿತ್ರವಾಗಿರದೆ, ಸಾಮಾಜಿಕ ಚಿತ್ರವೂ ಆಗಿ ಪರಿಣಮಿಸಿದೆ. ಕನಕದಾಸ ಪಾಳೆಯಗಾರನಾಗಿದ್ದುದರಿಂದ ವಿಜಯನಗರವನ್ನು ನೋಡುವ ಅನೇಕ ಅವಕಾಶಗಳಿದ್ದುವು. ಈ ಸ್ವಾನುಭವದ ಭಾಗವಾಗಿ ಇಲ್ಲಿನ ಸಮಕಾಲೀನ ವಿಚಾರಗಳು ಬಂದಿರುವ ಹಾಗೆ ಕಾಣುತ್ತದೆ, ಕವಿಯ ಸಾಮಾಜಿಕ ಪ್ರಜ್ಞೆಯ ಕುರುಹುಗಳಾಗಿ ಇಲ್ಲಿನ ರಾಜಸಭೆ, ಸಂಗೀತ, ನೃತ್ಯ, ಓಕುಳಿಯಾಟ, ಜಲಕ್ರೀಡೆ, ನವರಾತ್ರಿ, ಪುರರಚನೆ, ಯುದ್ಧವಿಧಾನ, ವನವಿಹಾರ, ಪುಷ್ಕರಣಿ, ಸತ್ರ ಅಂಗಡಿಗಳ ವಿವರಗಳು ಬಂದಿವೆ. ಇವನ್ನು ಪರಿಶೀಲಿಸಿದಾಗ, “ಈ ಕಾವ್ಯ ಕಟ್ಟಡದ ಒಟ್ಟು ರಚನೆಯಲ್ಲಿ, ಕವಿ ತನ್ನ ಸಮಕಾಲೀನ ಜೀವನದ ಗಾರೆ ಇಟ್ಟಿಗೆ ಸುಣ್ಣ ಬಳಸಿದ್ದಾನೆ”22 ಎಂದು ಹೇಳಬೇಕಾಗಿರುತ್ತದೆ. ಕರ್ನಾಟಕದ ಇತಿಹಾಸದಲ್ಲಿ ಶ್ರೀಕೃಷ್ಣದೇವರಾಯನ ಕಾಲವನ್ನು ರಾಜಕೀಯ-ಸಾಮಾಜಿಕ- ಸಾಂಸ್ಕೃತಿಕವಾಗಿ ಅತ್ಯುಚ್ಚಕಾಲವೆಂದು ಹೇಳಬಹುದು. ಇದಕ್ಕೆ ಕೆಲವು ಅಪೂರ್ವ ಮಾಹಿತಿಗಳು 'ಮೋಹನತರಂಗಿಣಿ'ಯಲ್ಲಿ ದೊರೆಯುತ್ತವೆ. 'ಮೋಹನತರಂಗಿಣಿ'ಯಲ್ಲಿ ಬರುವ 'ದ್ವಾರಕಾಪುರ'ದ ವರ್ಣನೆಯಲ್ಲಿ ವಿಜಯನಗರದ ವೈಭವವನ್ನು ಕಾಣಲು ಪ್ರಯತ್ನಿಸಲಾಗಿದೆ. ಇಲ್ಲಿ ತೊರೆ, ಅಗ್ರಹಾರ, ವೀರರಿಗೆ ಕೊಟ್ಟ ಪುರಗಳು, ಶಿವ ಮತ್ತು ವಿಷ್ಣು ದೇವಾಲಯಗಳು, ಸತ್ರಗಳು ಶೋಭಿಸುತ್ತಿದ್ದುವಂತೆ. ಕೆರೆ ಬಾವಿಗಳಿಲ್ಲದ ಕಡೆ ತೊರೆ ನೀರನ್ನು ಕಂಬಿಯಲ್ಲಿ ತರಿಸಿ ಮಾಡಿದ ಅರವಟ್ಟಿಗೆಗಳು ಇದ್ದುವೆಂದು ವರ್ಣನೆ. ಹಾಗೆಯೇ ಸಾಲುಮರಗಳ ಕೆಳಗೆ ಕರೆದು ಬೆಲ್ಲದ ಪಾನಕ ಕೊಡುವುದೂ ಇದ್ದಿತಂತೆ. ಆಲೆಯ ಮನೆಗಳು, ಜಪಶಾಲೆಗಳು, ಹೊಂಗಳಸದ ದೇವಾಲಯಗಳು, ಆನೆ 20. ಎಚ್.ಎಂ. ಶಂಕರನಾರಾಯಣರಾವ್, ನಳಚರಿತ್ರಸಂಗ್ರಹ, ಪು. XIv 21. ರಂ. ಶ್ರೀ ಮುಗಳಿ, ಕನ್ನಡ ಸಾಹಿತ್ಯ ಚರಿತ್ರೆ, ಪು. 307 22. ಹಂಪನಾ ಮೋಹನ ತರಂಗಿಣಿ (ಸಂ. ಡಾ. ಎಸ್. ಎಸ್. ಕೋತಿನ) ಮುನ್ನುಡಿ ಪು.ಸ.