ಪುಟ:Kanakadasa darshana Vol 1 Pages 561-1028.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೪೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಸಾಹಿತ್ಯದಲ್ಲಿ ಐತಿಹಾಸಿಕ ಅಂಶಗಳು ೮೪೫ ಅಗಣಿತ ವಿಧ್ಯಾಧಿಕರು ಬಂದಲಸದೆ ಹೊಗರಿದರಬುಜಾಂಬಕನ || ಇದರಲ್ಲಿ 'ಶ್ರೀಕೃಷ್ಣದೇವರಾಯ' ಎಂಬ ಮಾತು ಸ್ಪಷ್ಟವೇ ಇರುವುದರಿಂದ, ಅವನ ಪುತ್ರೋತ್ಸವವನ್ನೇ ಇದು ತಿಳಿಸುತ್ತಿರಬಹುದು. ಕೃಷ್ಣದೇವರಾಯನಿಗೆ ತಿರುಮಲರಾಯ ಎಂಬ ಮಗನಿದ್ದು, ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡನೆಂದು ಇತಿಹಾಸ ಹೇಳುತ್ತದೆ.೨೭ ಪದ್ಯದಲ್ಲಿ ಸೂಚಿತನಾಗಿರುವ 'ಗಂಡುಮಗು' ಇವನೇ ಆಗಿರಬೇಕು. ಕೃಷ್ಣದೇವರಾಯನಿಗೆ ತಿರುಮಲದೇವಿ ಎಂಬ ಮಗಳೊಬ್ಬಳಿದ್ದು, ಅವಳು ಅಳಿಯ ರಾಮರಾಯನನ್ನು ವಿವಾಹವಾಗಿರುತ್ತಾಳೆ. 'ಜಲಕ್ರೀಡೆ' (ಸಂಧಿ ೧೪) ಭಾಗದಲ್ಲಿನ ಕೆಲವು ಚಿತ್ರಗಳು ವಿಜಯನಗರಕ್ಕೆ ಸಂಬಂಧಿಸಿವೆ. ಈ `ಜಲಕ್ರೀಡೆ'ಯಲ್ಲಿ 'ಓಕುಳಿಯಾಟ' ಮುಖ್ಯವಾದುದು. ಇದರಲ್ಲಿ ಕೃಷ್ಣದೇವರಾಯ ಭಾಗವಹಿಸುತ್ತಿದ್ದನೆಂಬುದು ಗಮನಾರ್ಹ. ಓಕುಳಿಯಾಟ ಕೃಷ್ಣದೇವರಾಯನ ಪಟ್ಟಾಭಿಷೇಕವನ್ನು ನೆನಪಿಗೆ ತರುವಂತಿತ್ತು ಎಂಬುದನ್ನು “ಕೃಷ್ಣ ನಿನಗೆ ಪಟ್ಟಾಭಿಷೇಕವಿದೆಂಬಂತೆ” (೧೪-೨೫) ಎಂಬ ಸಾಲು ಹೇಳುತ್ತದೆ. ಜನರು ತಮ್ಮ ರಾಜನ ಮೇಲೂ ಓಕುಳಿಯನ್ನು ಸುರಿಯುತ್ತಿದ್ದುದು ವಿಶೇಷ. ತಮ್ಮ ಒಡೆಯನನ್ನು ಉತ್ಸಾಹಿಸಲು ಕೊಂಬು ಮತ್ತು ಜೀರ್ಕೊಳವೆಯಿಂದ ಓಕುಳಿಯನ್ನು ಎರಚಾಡುತ್ತಿದ್ದ ವಿವರಗಳನ್ನು ಪದ್ಯಗಳು ಕೊಡುತ್ತವೆ. ಚಿನ್ನದ ಹಂಡೆಗಳಲ್ಲಿ ಕುಂಕುಮರಸವನ್ನು ತುಂಬಿಕೊಂಡು ಹೆಂಗಳೆಯರು ಎರಚಾಡುತ್ತಿದ್ದುದು ಮೋಹಕವಾದುದು. ಓಕುಳಿಯಾಟದ ಸಂದರ್ಭದಲ್ಲಿ ಭೇರಿ, ಮದ್ದಳೆ, ಶಂಖ, ನಗಾರಿ, ಡಿಂಡಿಮ, ಡೋಲು, ತಂಬಟದ ಧ್ವನಿ ಮೊಳಗುತ್ತಿದ್ದುವೆಂದು ಕವಿಯ ಹೇಳಿಕೆ. ಈ ಸಡಗರದಲ್ಲಿ ರಾಜನನ್ನು ಒಳಗು ಮಾಡುತ್ತಿದ್ದುದನ್ನು ಕವಿ ವರ್ಣಿಸಿರುವನು (೧೪-೬೮) : ನಮ್ಮೊಳು ನಾವೆ ಪೊಯ್ದಾಡುವುದೇಕೆಂದು ಕಮ್ಮಲರ್ಗಂಧಗಂಧಿಯರು ತಮ್ಮನಾಳುವ ಕೃಷ್ಣರಾಯನ ತುಡುಕಿದ ಪೆರ್ಮೆಯನೇನ ಬಣ್ಣಿಪೆನು || ಇದರಲ್ಲಿ 'ನಮ್ಮನಾಳುವ ಕೃಷ್ಣರಾಯ' ಎಂಬ ಮಾತು ಮುಖ್ಯವಾದುದು; ಇದು ಕೃಷ್ಣದೇವರಾಯನನ್ನು ಕುರಿತ ಮಾತೆಂಬುದರಲ್ಲಿ ಸಂಶಯವಿಲ್ಲ. ಜನಸ್ತೋಮದ ಸಂಭ್ರಮದಲ್ಲಿ ದೊರೆ ಕೃಷ್ಣದೇವರಾಯ ಪಾಲುಗೊಳ್ಳುತ್ತಿದ್ದ ವಿಶೇಷ ಸಂಗತಿಯ ಮೇಲೆ ಇದು ಬೆಳಕು ಚೆಲ್ಲುತ್ತದೆ. ಈ ಓಕುಳಿಯಾಟ ವಿಜಯನಗರದ ಕಾಲದಲ್ಲಿ ಆಚರಣೆಯಲ್ಲಿತ್ತೆಂದು ಹೇಳಬಹುದು. “ಅನಿರುದ್ಧನ ನಗರಶೋಧನೆ' ಮತ್ತು 'ಅನಿರುದ್ದನ ಬೇಟೆಯ ವರ್ಣನೆಗಳಲ್ಲಿ ಕೂಡ ವಿಜಯನಗರಕ್ಕೆ ಸಂಬಂಧಿಸಿದ ವಿಷಯಗಳಿವೆ. ಅನಿರುದ್ದ ನಗರ ಸಂಚಾರ ಸಮಯದಲ್ಲಿ ಕಂಡ ಚಿತ್ರಗಳು ವಾಸ್ತವವಾಗಿ ವಿಜಯನಗರದ ಚಿತ್ರಗಳೇ. ಇವುಗಳಲ್ಲಿ ಸುವರ್ಣ-ವೇದಿಕೆಯ ಶಾಲೆಗಳು, ಸಂಭ್ರಮಿಸುವ ಉಪ್ಪರಿಗೆಗಳು, ಸೂಳೆಗೇರಿಯ ಸೊಬಗು, ಚಂದ್ರಕಾಂತಶಿಲೆಯ ವೇದಿಕೆಗಳು ಮುಖ್ಯವಾದವು. ಇಲ್ಲಿನ ನಗರ ಕಾವಲುಗಾರರ ಚಿತ್ರ ಗಮನಾರ್ಹವಾದುದು. ಕೆರಗಳನ್ನು ಮೆಟ್ಟಿದ, ಉಡುಗೆಯ ಮೇಲೆ ನಡುಪಟ್ಟಿಧರಿಸಿ ಮತ್ತು ಅದರ ಮೇಲೆ ಕಿರುಗತ್ತಿಯನ್ನು ಕಟ್ಟಿದ, ಹೆದೆಯೇರಿಸಿದ ಬಿಲ್ಲುಗಳನ್ನು ಹೊಂದಿರುವ ತಳವಾರರು ಕಾವಲು ತಿರುಗುತ್ತಿದ್ದರೆಂದು ಕನಕದಾಸರು ಬರೆಯುತ್ತಾರೆ. ವಿಜಯನಗರದ ರಾತ್ರಿಗಸ್ತಿನ ಬಿಗಿವ್ಯವಸ್ಥೆಯನ್ನು ಇದು ಹೇಳುತ್ತಿರುವಂತೆ ತೋರುವುದು. ಅನಿರುದ್ದನ ಬೇಟೆಯ ವರ್ಣನೆಯಲ್ಲಿ ವಿಜಯನಗರದ ರಾಜರು ಕೈಗೊಳ್ಳುತ್ತಿದ್ದ ಬೇಟೆಯ ವರ್ಣನೆಯ ಹಿನ್ನೆಲೆಯನ್ನು ಕೊಡುತ್ತಿರಬಹುದು. ದ್ವಾರಾವತಿಯಲ್ಲಿ ಹೆಸರಾಂತ ರಾಜಕುಮಾರರು ಜಾತಿ ಕುದುರೆಗಳನ್ನೇರಿ ಬೇಟೆಗೆ ಹೊರಡುತ್ತಿದ್ದರು (೯-೭) ಎನ್ನುವಲ್ಲಿ ವಿಜಯನಗರದ ಪ್ರಸಿದ್ದ ರಾಜಕುಮಾರರ ವಿಷಯವೇ ಇರುವಂತಿದೆ. ಈ ರಾಜಕುಮಾರರ ಎಡ ಬಲದಲ್ಲಿ “ಚಾಮರಛತ್ರವೆರಸಿ' (೧೯-೮) ಭಿಲ್ಲರ ಸಮೂಹ ಸಹ ನಡೆಯಿತೆಂದು ಕವಿ ಹೇಳುತ್ತಾನೆ. ಇಂತಹ ಕಡೆಗಳಲ್ಲಿ ರಾಜರ ವೈಹಾಳಿಯನ್ನು ಚಿತ್ರಿಸುವ ಕವಿಯ ಹವಣಿಕೆ ಇರಬಹುದು. 'ಮೋಹನತರಂಗಿಣಿ'ಯ ಯುದ್ದವರ್ಣನೆಯಲ್ಲೂ ಕೆಲವು ವಾಸ್ತವ ಸಂಗತಿಗಳು ಇರಬಹುದು. ಉದಾಹರಣೆಗೆ “ಪೆಟಲಂಬಿನವರು' (೩೬-೪೨) ಉಲ್ಲೇಖದಲ್ಲಿ ಕೆಲವರು ತುಬಾಕಿಯ ಉಪಯೋಗವನ್ನು ಕಂಡಿದ್ದಾರೆ : “ಪೆಟಲಂಬಿನವರ ಪಥಕಗಳನ್ನು ಹೇಳುವುದರಿಂದ ತುಬಾಕಿಯ ಉಪಯೋಗ ಆ ವೇಳೆಗೆ ಪ್ರಾರಂಭವಾಗಿದ್ದಿತೆಂದು ತಿಳಿಯಬಹುದು.”28 ರಕ್ಷಣಾವ್ಯವಸ್ಥೆಯನ್ನು ಗಮನಿಸುತ್ತಾ “ಮದ್ದುಗುಂಡಿನ ಪಡೆಯಿಂದ ಕೂಡಿತ್ತು29” ಎಂದು ಹೇಳುವ ನ್ಯೂನಿಜ್‌ನ ಹೇಳಿಕೆಯು ಇದನ್ನೇ ಸೂಚಿಸುತ್ತದೆ. ೨೮. ಮೋಹನತರಂಗಿಣಿ ಸಂ. ಎಸ್. ಎಸ್. ಕೋತಿನ, ಮುನ್ನುಡಿ, ಪು xii ೨೯. ಕರ್ಣಾಟಕದ ಪರಂಪರೆ, ಸಂಪುಟ ಎರಡು, ಪು. ೪೦ ೨೭, ಅದೇ, ಪು. 283