ಪುಟ:Kanakadasa darshana Vol 1 Pages 561-1028.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕದಾಸರ ದೃಷ್ಟಿಯಲ್ಲಿ ಯುದ್ಧ ೮೬೩ ಕನಕದಾಸರ ದೃಷ್ಟಿಯಲ್ಲಿ ಯುದ್ಧ ಸುಧಾಕರ ಕನ್ನಡ ಸಾಹಿತ್ಯದಲ್ಲಿ ಕಲಿ ಹಾಗೂ ಕವಿಗಳಾಗಿದ್ದವರ ಪೈಕಿ ಕನಕದಾಸರೂ ಒಬ್ಬರು. ಆದರೆ ಕವಿಗಳಲ್ಲಿ ದಾಸರು, ದಾಸರಲ್ಲಿ ಕವಿಗಳು ಇವರೊಬ್ಬರೇ; ಅಷ್ಟೇ ಅಲ್ಲ ಕಲಿತನ, ಕವಿತನ, ಸಂತತನಗಳ ಮುಕ್ಕಣ್ಣುಳ್ಳವರೂ ಇವರೊಬ್ಬರೇ. ಆದ್ದರಿಂದ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ಈ ನಿಟ್ಟಿನಿಂದ ನೋಡಿದರೆ ವಿಶಿಷ, ವಿರಳ. ಕನಕದಾಸರ ನಳಚರಿತ್ರೆಯ ವರ್ಣನೆಯ ಕೆಲಭಾಗದಲ್ಲಿ, ಮೋಹನ ತರಂಗಿಣಿಯ ಯುದ್ದವರ್ಣನೆಯ ಕೆಲಭಾಗದಲ್ಲಿ ಕುಮಾರವ್ಯಾಸನ ಪ್ರಭಾವದ ಛಾಯೆಯನ್ನು ಕೆಲ ವಿಮರ್ಶಕರು ಗುರುತಿಸಿರುವುದುಂಟು. ಆದರೆ ಒಂದಲ್ಲ ಒಂದು ಪ್ರಭಾವಕ್ಕೊಳಗಾಗದ ಕವಿಗಳಾರಿದ್ದಾರೆ? ಪ್ರಭಾವ ದೋಷವಲ್ಲ ; ಪ್ರತಿಭಾವಂತ ಕವಿ ಪ್ರಭಾವದ ಹುಲ್ಲುಮೇದು ಅರಗಿಸಿಕೊಂಡು ಅದನ್ನು ಹಾಲಾಗಿ ನೀಡುತ್ತಾನೆ. ಆದ್ದರಿಂದ ಪ್ರಭಾವ ತೊಪ್ಪೆಯಾಗಿ ಬಿದ್ದಿದೆಯೋ ಅಥವಾ ಹಾಲಾಗಿ ಹರಿದಿದೆಯೋ ಎಂಬ ಅಂಶ ಮುಖ್ಯವಾಗುತ್ತದೆ. ಉದಾಹರಣೆಗೆ “ಕುಡಿಮೀಸೆ ಕುಣಿದವು ಮೂಗಿನೊಳ್ ಹೊಗೆಸುತ್ತಿ | ಕಿಡಿಗಳನಕ್ಷೆ ಮುಕ್ಕುಳಿಸೆ” ಎಂಬ ಮೋಹನ ತರಂಗಿಣಿಯ ಯುದ್ಧವರ್ಣನೆಯ ಸಾಲುಗಳಲ್ಲಿ ಕುಮಾರವ್ಯಾಸನ ಪ್ರಭಾವವಿದೆ ಎಂದು ಹೇಳಬಹುದು. ಹಾಗೆಯೇ ಕುಮಾರವ್ಯಾಸನ ಮೇಲೂ ಹಿಂದಿನ ಕವಿಗಳ ಪ್ರಭಾವ ಇದೆ ಎಂಬುದನ್ನು ಮರೆಯಬಾರದು. ಉದಾಹರಣೆಗೆ ರಾಘವಾಂಕನ ಹರಿಶ್ಚಂದ್ರ ಕಾವ್ಯ'ದಲ್ಲಿ ವಿಶ್ವಾಮಿತ್ರನಿಗೆ ಸಕಲ ರಾಜ್ಯವನ್ನು ಧಾರೆ ಎರೆದು ಕೊಟ್ಟ ಹರಿಶ್ಚಂದ್ರ “ಹರಣಮಂ ಬೇಡದುಳುಹಿದನು ಮುನಿ ಕರುಣಿಸಿದನೆಂದು ತಲೆದಡವಿಕೊಳುತ” ಹೊರಟ ವರ್ಣನೆ ಬರುತ್ತದೆ. ಕುಮಾರವ್ಯಾಸನ 'ಗದುಗಿನ ಭಾರತ'ದಲ್ಲೂ ಅಭಿಮನ್ಯುವಿನ ಸಾವಿನ ತರುವಾಯ ಕೌರವ ಸೈನ್ಯ “ತಲೆದಡವಿಕೊಳುತ” ಹೆಜ್ಜೆ ಇಟ್ಟ ವರ್ಣನೆ ಬರುತ್ತದೆ ; ಅಂದರೆ ತಮ್ಮ ತಲೆ ತಮ್ಮ ಶರೀರದ ಮೇಲೆ ಇದೆಯೋ ಇಲ್ಲವೋ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವ ಸೂಚನೆ ಅದರಲ್ಲಿದೆ. ಇಲ್ಲಿ ರಾಘವಾಂಕನ ಅಭಿವ್ಯಕ್ತಿಚಾತುರವನ್ನು ಕುಮಾರವ್ಯಾಸ ಬಳಸಿಕೊಂಡಿದ್ದಾನೆ. ಇದರಿಂದ ಕುಮಾರವ್ಯಾಸನಿಗೆ ಕುಂದುಂಟಾಗಿದೆಯೆ? ಇನ್ನೊಂದು ನಿದರ್ಶನ ನೋಡಿ : ನಿಮ್ಮ ಮಕ್ಕಳೆಂದು ತಿಳಿದು ಜೀವಸಹಿತ ಬಿಟ್ಟೆ, ಇಲ್ಲದಿದ್ದರೆ ಹೆಣ ಬೀಳುವವರೆಗೂ ಹೊಡೆಯುತ್ತಿದೆ ಎಂದು ಹರಿಶ್ಚಂದ್ರ ಹೇಳಿದಾಗ ವಿಶ್ವಾಮಿತ್ರ ಗರ್ಜಿಸುತ್ತಾನೆ ಹೊಡೆಯದಕ್ಕೇನವದಿರಂ ಹೊಡೆದ ಕೈಗಳಂ ಕಡಿವೆ ನಿನ್ನಂ ನಚ್ಚಿ ಮಲೆತ ದೇಶವನುರುಹಿ ಸುಡುವೆನಾ ದೇಶಕ್ಕೆ ಹಿತವಾಗಿ ಬಂದ ಮುನಿಯಂ ಮುರಿವೆನಾ ಮುನಿಯನು| ಹಿಡಿದು ಕದನಕ್ಕೆಂದು ಬಂದಮರರಂ ಕೆಡಹಿ ಹುಡುಕು ನೀರದ್ದುವೆನ್ನಳವನಳೆಯಾ ಮುನ್ನ ತೊಡಕಿ ತನಗಾದ ಭಂಗಂಗಳಂ ಹೇಳನೇ ನಿನಗೆ ಕಮಲಜಕಂದನು || ರಾಜನ ಕೈಗಳನ್ನು ಕಡಿದರೆ, ದೇಶದ ಪ್ರಜೆ ಮೇಲೆ ಬೀಳುತ್ತದೆ. ಆ ದೇಶವನ್ನು ಸುಟ್ಟಾಗ ಕುಲುಗುರು ವಶಿಷ್ಠ ಕೋಪಾವಿಷ್ಟನಾಗಿ ಮೇಲೇರಿ ಬರುತ್ತಾನೆ. ಅವನ ಸೊಕ್ಕನ್ನು ಮುರಿದಾಗ ದೇವತೆಗಳು ನಾಲಗೆ ಅಲ್ಲಾಡಿಸುತ್ತಾ ಬರುತ್ತಾರೆ. ಆಗ ಅವರನ್ನು ಸುಡುನೀರಿನಲ್ಲಿ ಅದ್ದಿ ಅದ್ದಿ ಎಸೆಯುತ್ತೇನೆ- ಎಂಬ ವಿಶ್ವಾಮಿತ್ರನ ಮಾತುಗಳು ಒಂದು ಘಟನೆ ಮತ್ತೊಂದು ಘಟನೆಗೆ 'ಕೊಕ್' ಕೊಡುವ ಅಥವಾ ಒಂದು ಘಟನೆ ಮತ್ತೊಂದನ್ನು ಹೆರುವ ಕೊಂಡಿಗಳುಳ್ಳ ಸರಪಣಿಯಂತಿರುವುದನ್ನು ಗಮನಿಸಬಹುದು. ಕುಮಾರವ್ಯಾಸನ ಭಾರತದ ವಿರಾಟಪರ್ವದಲ್ಲಿ ಬ್ರೌಪದಿಗೆ ಭರವಸೆ ಕೊಡುವಾಗ ಭೀಮ ಹೇಳುತ್ತಾನೆ : ಬಸುರ ಬಗೆವೆನು ಕೀಚಕನ ನಸು ಮಿಸುಕಿದೊಡೆ ವೈರಾಟವಂಶದ ಹೆಸರ ತೊಡೆವೆನು ನಮ್ಮನರಿದೊಡೆ ಕೌರವ ವಜವ | ಕುಸುರಿದರಿವೆನು ಭೀಮ ಕಷ್ಟವ ನೆಸಗಿದನು ಹಾಯೆಂದರಾದೊಡೆ ಮುಸುಡನಮರಾದ್ರಿಯಲಿ ತೇವೆನು ದೇವಸಂತತಿಯ | ಕೀಚಕನನ್ನು ಕೊಂದರೆ ವಿರಾಟನ ಕಡೆಯವರು ಮೇಲೇರಿ ಬರುತ್ತಾರೆ. ಅವರನ್ನು ಕೊಂದರೆ, ಪಾಂಡವರು ಅಲ್ಲಿಯೇ ಇರಬಹುದೆಂದು ಊಹಿಸಿ ಕೌರವ ದಂಡೆತ್ತಿ ಬರುತ್ತಾನೆ. ಅವರನ್ನೂ ಧ್ವಂಸ ಮಾಡಿದಾಗ ಬೇರೆ ಕೆಲಸವಿಲ್ಲದ ದೇವತೆಗಳು ಪ್ರಾವ ವಾಗುತ್ತೆ ಮೂಗಿನೊರ್ವ