ಪುಟ:Kanakadasa darshana Vol 1 Pages 561-1028.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೬೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ದೃಷ್ಟಿಯಲ್ಲಿ ಯುದ್ಧ ೮೬೫ ನನ್ನ ಬಗ್ಗೆ ಅಪಸ್ವರ ಎತ್ತಿದರೆ ಅವರ ಮೂತಿಗಳನ್ನು ಅರೆಬಂಡೆಯ ಮೇಲೆ ಉಜ್ಜಿಬಿಡುತ್ತೇನೆ ಎಂಬ ಭೀಮನ ಮಾತುಗಳೂ ಸಹ, ಒಂದು ಘಟನೆ ಮತ್ತೊಂದನ್ನು ಹೆರುವ ಕೊಂಡಿಗಳುಳ್ಳ ಸರಪಣಿಯಂತಿರುವುದನ್ನು ಗಮನಿಸಬಹುದು. ಅಂದರೆ ರಾಘವಾಂಕನ ಸರಪಳಿ ಘಟನೆಗಳ ತದ್ವತ್ ಧಾಟಿಯೇ ಕುಮಾರವ್ಯಾಸನಲ್ಲಿ ನಾಟಿಗೊಂಡಂತಿದೆ. ರಾಘವಾಂಕನ ಪದ್ಯದ ಅಂತ್ಯದಲ್ಲಿ ದೇವತೆಗಳನ್ನು ಸುಡುನೀರಿನಲ್ಲಿ ಅದ್ದುವ ರೂಪಕ ಬಳಕೆಯಾಗಿದ್ದರೆ ಕುಮಾರವ್ಯಾಸನ ಪದ್ಯದ ಅಂತ್ಯದಲ್ಲಿ ದೇವತೆಗಳ ಮುಸುಡನ್ನು ತೇಯುವ ರೂಪಕ-ಸಾಣಿಕಲ್ಲು ಮತ್ತು ಗಂಧದ ಕೊರಡಿನ ರೂಪಕ-ಬಳಕೆಯಾಗಿದೆ. ಅಷ್ಟೆ ; ಧಾಟಿ ಮಾತ್ರ ಒಂದೇ. ಅದ್ದರಿಂದ ಪ್ರಾಚೀನ ಕವಿಗಳ ಪ್ರಭಾವವಿರದ ಅರ್ವಾಚೀನ ಕವಿಗಳಿರುವುದಿಲ್ಲ. ಆದರೆ ಆ ಪ್ರಭಾವ ಗುಣವಿಶೇಷವಾಗಿ ಮೂಡಿದೆಯೇ ಇಲ್ಲವೇ ಎಂಬುದು ಮುಖ್ಯವಾಗುತ್ತದೆ. ಗುಣವಿಶೇಷವಾದಾಗ ಪ್ರಭಾವ ದೋಷವಾಗುವುದಿಲ್ಲ. ಕನಕದಾಸರಲ್ಲಿ, ಕುಮಾರವ್ಯಾಸನಲ್ಲಿ ಹೇಗೋ ಹಾಗೆ ಪ್ರಭಾವ ದೋಷವಾಗಿಲ್ಲ. ಸರ್ವನಾಶ ಸಂಭವಿಸುವ ಸಮಯದಲ್ಲಿ ಸಮನ್ವಯ ದೃಷ್ಟಿ ಕಂಡುಬರುತ್ತದೆ ; ಮಾನವೀಯ ಅನುಕಂಪ ದಾನವೀಯ ರಣರಂಪವನ್ನು ತಡೆ ಹಿಡಿಯುತ್ತದೆ. ಕನಕದಾಸರ 'ಮೋಹನ ತರಂಗಿಣಿ' ಮತ್ತು ರತ್ನಾಕರನ 'ಭರತೇಶ ವೈಭವ' ಹದಿನಾರನೆಯ ಶತಮಾನದ ಎರಡು ಮಹತ್ವದ ಸಾಂಗತ್ಯ ಕೃತಿಗಳು, ಎರಡರಲ್ಲೂ ವಿಜಯನಗರ ಸಾಮ್ರಾಜ್ಯದ ಭೋಗವೈಭವಗಳು ಚಿತ್ರಣಗೊಂಡಿವೆ ; ಶೃಂಗಾರ ವೀರಗಳು ಪ್ರೇಮಕಾಮಗಳು ಎರಕಗೊಂಡಿವೆ. ಆದರೆ ಯುದ್ದದ ಸ್ವಾನುಭವವಿರುವ ಕನಕದಾಸರ ಯುದ್ಧವರ್ಣನೆ ತಮ್ಮ ಸಮಕಾಲೀನ ಕವಿಯಾದ ರತ್ನಾಕರನ ಯುದ್ಧ ವರ್ಣನೆಗಿಂತಲೂ ಹೆಚ್ಚು ಜೀವಂತವಾಗಿ, ಶಕ್ತಿಯುತವಾಗಿ ಬಂದಿದೆ ಎಂಬುದರಲ್ಲಿ ಎರಡು ಮಾತಿಗೆ ಎಡೆಯಿಲ್ಲ, ಭರತೇಶ ವೈಭವದ 'ದಿಗ್ವಿಜಯ'ದ ಅಧ್ಯಾಯ ಯುದ್ಧಕ್ಕಿಂತ ಹೆಚ್ಚಾಗಿ 'ಪ್ರಣಯದ ದಿಗ್ವಿಜಯ'ವೇ ಆಗಿರುವುದನ್ನು ಮರೆಯುವಂತಿಲ್ಲ. ಕನ್ನಡ ಕಾವ್ಯಗಳಲ್ಲಿ ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧಗಳು ವರ್ಣಿತವಾಗಿವೆ ; ಶಸ್ತ್ರಾಸ್ತ್ರ ಯುದ್ದಗಳೂ ಸಹ. ಕನಕದಾಸರ ಕಾವ್ಯಗಳಲ್ಲಿ ದೃಷ್ಟಿಯುದ್ಧ, ಜಲಯುದ್ಧಗಳಿಲ್ಲ ; ಮಲ್ಲಯುದ್ಧ, ಶಸ್ತ್ರಾಸ್ತ್ರಗಳ ಯುದ್ಧಗಳಿವೆ ; ಜೊತೆಗೆ 'ವಾಗ್ಯುದ್ಧ'ವೂ ಸಹ. ರಾಮಧಾನ್ಯಚರಿತೆಯಲ್ಲಿ ಪ್ರೋಹಿಗೂ ನರೆದಲಗನಿಗೂ ನಡೆಯುವ ಮಾತಿನ ಸೆಣೆಸಾಟ ವಾಗ್ಯುದ್ದಕ್ಕೆ ಒಳ್ಳೆಯ ಉದಾಹರಣೆ. ಶ್ರೀ ರಾಮನ ಸಮ್ಮುಖದಲ್ಲಿ ಗೌತಮ ಮಹರ್ಷಿ ನವಧಾನ್ಯಗಳಲ್ಲಿ ರಾಗಿಯೇ ಶ್ರೇಷ್ಠ ಎಂದು ಹೇಳಿದಾಗ ಅದನ್ನು ಸಹಿಸಲಾರದೆ ಹಿಗ ತನ್ನ ಹೊಟ್ಟೆಯ ವಿಷವನ್ನೆಲ್ಲ ಕಕ್ಕುತ್ತಾನೆ : ಮೊಗಲರ ಆಕ್ರಮಣದಿಂದ ಹಿಂದೂ ಧರ್ಮ ಸಂಸ್ಕೃತಿಗಳನ್ನು ಉಳಿಸಲೋಸುಗ ಉದಯವಾದ ವಿಜಯನಗರ ಸಾಮ್ರಾಜ್ಯದ ವೈಭವದ ದಿನಗಳಲ್ಲಿ ಬದುಕಿದ್ದವರು ಕನಕದಾಸರು, ಸಾಮಂತರಾಜರಾದ ಇವರೂ ಸಹ ಪರರಾಯರ ಆಕ್ರಮಣವನ್ನು ದಮನಮಾಡಲು ಪ್ರಾಣದ ಹಂಗುದೊರೆದು ಹೋರಾಡಿದವರೇ. ಇವರು ರಣರಂಗವನ್ನು ಹೊಕ್ಕರೆಂದರೆ “ಪೌಜು ಕನಕುಮನಕು” ಆಗುತ್ತಿತ್ತೆಂದು ತಾವೇ ಒಂದು ಹಾಡಿನಲ್ಲಿ ಹೇಳಿಕೊಂಡಿದ್ದಾರೆ. ದೇಶಪ್ರೇಮ ನರನಾಡಿಗಳಲ್ಲಿ ಧುಮ್ಮಿಕ್ಕಿ ಹರಿಯುತ್ತಿದ್ದ ಆ ಕಾಲದಲ್ಲಿ ವೀರಕ್ಕೆ ಮೊದಲ ಸ್ಥಾನ. ಹಾಗೆ ವೀರರಾಗಿ ಹೋರಾಡುವಾಗ, ಶತ್ರುಗಳಿಂದ ಪ್ರಾಣಾಂತಿಕ ಪೆಟ್ಟು ತಿಂದು, ಅಂಥ ಸಮಯದಲ್ಲಿ ದೇವರೇ ನನ್ನ ಪ್ರಾಣ ಉಳಿಸಿದನೆಂದುನಂಬಿ ದಾಸನಾದ ಪ್ರಸಂಗ ಅವರ ಕೀರ್ತನೆಯಿಂದಲೇ ತಿಳಿದು ಬರುತ್ತದೆ. ಆ ಪ್ರಾಣಾಂತಿಕ ಘಟನೆ ಹಾಗೂ ತಾವು ಕಂಡಿದ್ದ ಯುದ್ದದ ಸಾವುನೋವು ಅವರನ್ನು ವೈರಾಗ್ಯದತ್ತ ದೂಡಿದವೆಂದು ತೋರುತ್ತದೆ. ಆ ಕಾರಣದಿಂದಲೋ ಏನೋ ಕನಕದಾಸರ ಮೋಹನ ತರಂಗಿಣಿಯ ಯುದ್ಧವರ್ಣನೆಯಲ್ಲಿ ವೀರಕ್ಕೆ ಅಗ್ರ ತಾಂಬೂಲ ಸಂದಿದ್ದರೂ, ಏನೆಲವೂ ನರೆದಲಗ ನೀನು ಸ ಮಾನೆಯೆನಗಿಲ್ಲಿ ನಮ್ಮನು ದಾನವಾಂತಕ ಬಲ್ಲನಿಬ್ಬರ ಹೆಚ್ಚುಕುಂದುಗಳ | ಜಾನಕಿ ಪತಿಯ ಸನಿಹದಲಿ ಕುಲ ಹೀನ ನೀನು ಪ್ರತಿಷ್ಠ ಸುಡು ಮತಿ ಹೀನ ನೀನೆಂದೆನುತ ಖತಿಯ ಭಂಗಿಸಿದ |