ಪುಟ:Kanakadasa darshana Vol 1 Pages 561-1028.pdf/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೬೬ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ದೃಷ್ಟಿಯಲ್ಲಿ ಯುದ್ಧ ೮೬೭ ಲೋಕದಲಧಿಕ ಭೋಜನವಿದೆಂ ದಾಕೆವಾಳರು ಬುಧರು ಜರೆದು ನಿ ರಾಕರಿಸಿ ಬಿಡಲಂತು ನೀ ಶೂದ್ರಾನ್ನವಾದೆಯಲ | ನಾಕನಿಳಯರು ಸಾಕ್ಷಿ ನಿನ್ನ ವಿ ವೇಕಿಗಳು ಮೆಚ್ಚುವರೆ ಬಾಹಿರ ಸಾಕು ನಡೆ ನೀನಾವ ಮಾನ್ಯನು ಕಡೆಗೆ ತೊಲಗೆಂದ | ಕ್ಷಿತಿಯಮರರುಪನಯನದಲಿ ಸು ವ್ರತ ಸುಭೋಜನ ಪರಮ ಮಂತ್ರಾ ಕ್ಷತೆಗಳಲಿ ಶುಭಶೋಭನದಲಾರತಿಗೆ ಹಿರಿಯರಲಿ | ಕ್ರತುಗಳೆಡೆಯೊಳಗರಮನೆಯಲಿ ಪ್ರತಿದಿನವು ರಂಜಿಸುತ ದೇವರಿ ಗತಿಶಯದ ನೈವೇದ್ಯ ತಾನಹೆನೆಂದನಾ ವಿಹಿಗ || ಪರಿಮಳದ ಚಂದನದ ತರುವಿಗೆ ಸರಿಯೆ ಒಣಗಿದ ಕಾಷ್ಠ ಗೋವದು ಕರೆದ ಹಾಲಿಗೆ ಕುರಿಯು ಹಾಲಂತರವೆ ಭಾವಿಸಲು | ಪರಮ ಸಾಹಸಿ ವೀರ ಹನುಮಗೆ ಮರದ ಮೇಲಣ ಕಪಿಯ ತಾನಂ ತರವೆ ಫಡ ನೀನೆನಗೆ ಸರಿಯೇ ಭ್ರಷ್ಟ ತೊಲಗೆಂದ || ಮೇಲರಿಮೆ ಅಥವಾ ಸರ್ವಶ್ರೇಷ್ಠತೆಯ ಪಿತ್ತ ನೆತ್ತಿಗೇರೀದ ವೀಹಿ ಒಂದೇ ಸಮ ಬಾಯಿಗೆ ಬಂದದ್ದನ್ನು ಬಡಬಡಿಸಿದಾಗ ನರೆದಲನಿಗೆ ಕೋಪ ಬ್ರಹ್ಮರಂಧಕ್ಕೇರುತ್ತದೆ “ನುಡಿಗೆ ಹೇಸದ ಭಂಡ ನಿನ್ನೊಳು | ಕೊಡುವರೇ ಮಾರುತ್ತರವ ಕಡು | ಜಡನಲಾ ನಿನ್ನೊಡನೆ ಮಾತೇಕೆ' ಎಂದು ಮನದಲ್ಲಿ ಅಂದುಕೊಂಡರೂ ತಡೆಯಲಾರದೆ ಸಿಡಿಲಂತೆ ಗರ್ಜಿಸುತ್ತಾನೆ : ಸತ್ವಹೀನನು ಬಡವರನು ಕ ಧೃತ್ತಿ ನೋಡೆ ಧನಾಡ್ಯರನು ಬೆಂ ಬತ್ತಿ ನಡೆವವುಪೇಕ್ಷೆ ನಿನ್ನದು ಹೇಳಲೇನದನು | ಹೆತ್ತ ಬಾಣಂತಿಯರು ರೋಗಿಗೆ ಪತ್ಯ ನೀನಹೆ ಹೆಣದ ಬಾಯಿಗೆ ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕರವೆಂದ || ಜನಪರಿಗೆ ಶಿಶುಗಳಿಗೆ ಬಾಂಧವ ಜನರೆಡೆಗೆ ಬ್ರಹ್ಮರ ಸಮಾರಾ ಧನೆಗೆ ವಿದ್ಯಾರಂಭ ಕಾಲಕೆ ಸಕಲ ಭೂಸುರರ | ಮನೆಗಳಿ ಹರಿದಿವಸದಪಾ ಸನೆಗಳಲಿ ತಾ ಯೋಗ್ಯನಹುದೆಂ ದೆನಿಸಿಕೊಂಬೆನು ನೀನಯೋಗ್ಯನು ಭ್ರಷ್ಟ ತೊಲಗೆಂದ | ಹೊಸ ಮನೆಯ ಪುಣ್ಯಾರ್ಚನೆಗೆ ಮಿಗೆ ಯೆಸೆವ ಮದುಮಕ್ಕಳಿಗೆ ಸೇಸೆಗೆ ವಸುಮತೀಶರ ಗರುಡಿಯಲಿ ಶಸ್ತಾಸ್ತದರ್ಚನೆಗೆ | ಎಸೆವ ವಿಪರ ಫಾಲದಲಿ ರಂ ಜಿಸುವ ಗಂಧಾಕ್ಷತೆಯಹೆನು ಭಾ ವಿಸಲು ಲೋಕದೊಳಾರು ಸರಿಯಿಂತೆಂದನಾ ವಿಹಿಗ || ಸತ್ತ ದಿನದಾರಭ್ಯ ಮನುಜರು ಮತ್ತೆ ಕರ್ಮದ ಹೊತ್ತು ಪಿಂಡವ ನಿತ್ತು ತಪ್ಪದೆ ಮತ್ತೆ ವಾಯಸ ಕುಲವ ಕರಕರದು | ತುತ್ತನಿಡುವರು ಎಳ್ಳು ದರ್ಭೆಗೆ ತೆತ್ತಿಗನು ನೀನಾದೆ ಕೀರ್ತಿಯ ಹೊತ್ತುಕೊಂಡೆ ದುರಾತ್ಮ ನಿನ್ನೊಳು ಮಾತದೇಕೆಂದ || ಮಳೆಡೆಗೆದು ಬೆಳೆಯಡಗಿ ಕ್ಷಾಮದ ವಿಲಯಕಾಲದೊಳನ್ನವಿಲ್ಲದ ಅಳಿವ ಪ್ರಾಣಿಗಳಾದರಿಸಿ ಸಲಹುವೆನು ಜಗವರಿಯೆ | ಎಲ್ಲವೊ ನೀನೆಲ್ಲಿಹೆಯೊ ನಿನ್ನಯ 1111111111111111111111111111111111111111111111111111111111111111111111111