ಪುಟ:Kanakadasa darshana Vol 1 Pages 561-1028.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕದಾಸರ ದೃಷ್ಟಿಯಲ್ಲಿ ಯುದ್ಧ ೮೬೯ ಬಳಗವದು ತಾನೆಲ್ಲಿಹುದೀ ಹಲವು ಹುಲುಧಾನ್ಯಗಳೆನಗೆ ಸರಿದೊರೆಯೆ ಕೇಳೆಂದು || ಬಲ್ಲಿದರು ಬರೆ ಬಡವರಲಿ ನಿ ನಲ್ಲಿಯುಂಟುವುಪೇಕ್ಷೆ ನಮ್ಮಲಿ ಸಲ್ಲದೀ ಪರಿ ಪಕ್ಷಪಾತವದಿಲ್ಲ ಭಾವಿಸಲು ಬಲ್ಲಿದರು ಬಡವರುಗಳೆನ್ನದೆ ಎಲ್ಲರನು ರಕ್ಷಿಸುವೆ ನಿರ್ದಯ ನಲ್ಲ ತಾ ನಿನ್ನಂತೆ ಎಲ ಕುಟಿಲಾತ್ಮ ಹೋಗೆಂದ || ಇಷ್ಟೇ ಅಲ್ಲ, ಹಿಯನ್ನು 'ನಪುಂಸಕ' ಎಂದೂ ಲೇವಡಿ ಮಾಡುತ್ತಾನೆ ನರೆದಲಗ. ಹೀಗೆ ಮಾತಿನ ಮೂಲಕವೇ ಜರುಗುವ ಈ ಯುದ್ಧ ವಿಶಿಷ್ಟವಾದದ್ದು, ಕೈಕಾಲಿಗೆ ಪ್ರಾಣಕ್ಕೆ ಜಖಂ ಆಗದಿದ್ದರೂ ಮನಸ್ಸಿಗೆ ಮಾನಕ್ಕೆ ಜಖಂ ಆಗುವಂಥ ಯುದ್ದವಿದು. ಅನ್ಯಾಯ ಪಕ್ಷಪಾತ ಅಸಮಾನತೆಯ ವಿರುದ್ದ ಝಳಪಿಸಿದ ಬಂಡಾಯದ ನಾಲಗೆ ಖವಿದು. ಬಾಯಿಯ ನಾಲಗೆ-ಖಡ್ಗದ ಜೊತೆಗೆ ಹಸ್ತದ ಲೋಹ-ಖಡ್ಗವನ್ನು ಬಳಸಿ ಯುದ್ಧ ಮಾಡುವ ವರ್ಣನೆ ಪಂಪ ರನ್ನ ಕುಮಾರವ್ಯಾಸರಲ್ಲಿ ಸಶಕ್ತವಾಗಿ ಬಂದಿರುವಂತೆ ಕನಕದಾಸರ ಮೋಹನ ತರಂಗಿಣಿಯಲ್ಲೂ ಬಂದಿದೆ. ಉದಾಹರಣೆಗೆ ಅನಿರುದ್ಧನು ಬಾಣಾಸುರನ ಕಡೆಯ ದೈತ್ಯರನ್ನು `ಸಿಡಿದಲೆಗೊಟ್ಟು ಮಲೆತು ನಿಂತಿದ್ದಾಗ ಎದುರಾದ ಕುಂಭಾಂಡನಿಗೆ ಹೇಳುತ್ತಾನೆ : ನೋಡೆನ್ನ ಕೈಚಳಕವ ಬಾಯಿ ಪಂತವ ನಾಡುವರಾವಲ್ಲವೆನುತೆ ಹೂಡಿದ ಕೂರ್ಗಣೆಯಿಂದ ದೈತ್ಯನ ಮೆಯ್ಯ ತೋಡಿದನೈದಂಬಿನಲಿ | ಕುಂಭಾಂಡ ಪೆಟ್ಟಿನಿಂದ ಮೂರ್ಛ ಹೋದಾಗ ಉಳಿದ ರಕ್ಷಸರು ಅನಿರುದ್ಧನನ್ನು ಮುತ್ತಿ ಹೀಗೆಂದು ಹಂಗಿಸುತ್ತಾರೆ : ಎಳೆವಾ ಬಲ್ಲಿಗೆ ಬಂದರೆ ಸೀಗೆಯ ಮೆಳೆಯೊಳು ಮಥನವೆ ಮಗನೆ | ಇಳೆಯೊಳಗಳೆದಿರಿನ್ನೊಂದಿಗೆ ನೀ ಹುಟ್ಟಿ ಬೆಳೆವೆ ಹೋಗೆಂದು ಸಾರಿದರು || ಬಾಲ್ ನಾನಹುದು ನಿಮ್ಮುವೆ ಕೊಲ್ಲದನ್ನಕ ಬಾಣಿ ಬಿಲ್ಲಾನ್ವಿತನಾಗಿ ಬಾಟ್ ಬಾಣಾತ್ಯ ಸಂಭವೆಯಿಲ್ಲದಾನೊರ್ವ ಬಾಟನೆಂದನಿರುದ್ದ ನುಡಿದ | ಇಲ್ಲಿ ಬಾಯಿಯ ನಾಲಗೆ-ಖಡ್ಗ ಹಸ್ತದ ಲೋಹ-ಖಡ್ಗದ ಜೊತೆಜೊತೆಗೇ ಅಖಾಡಕ್ಕೆ ಇಳಿದಿರುವುದನ್ನು ಕಾಣುತ್ತೇವೆ. ಬಾಣಾಸುರ ಕೃಷ್ಣನ ಹಲವು ಅವತಾರಗಳನ್ನು ಎತ್ತಿ ಆಡಿ, ಯುದ್ದದಲ್ಲಿ ಹಿಮ್ಮೆಟ್ಟಿ ಮರೆಮೋಸದಿಂದ ಶತ್ರುಗಳನ್ನು ಕೊಂದೆ ಎಂದು ಹಿಯ್ಯಾಳಿಸುತ್ತಾನೆ: ಯದುಕುಲೋತ್ತಮ ಕೇಳು ಸಮರಕೆ ಹಿಮ್ಮೆಟ್ಟಿ ಬದುಕುವ ರಣಭಂಡರನು ಕುದುಕುಳಿ ಜಯಲಕ್ಷ್ಮಿ ಕೂಡಿಕೊಂಬವಳಲ್ಲ ವದು ಕಾರಣ ಪೇಟ್ ನಿನಗೆ || ಆಗ ಕೃಷ್ಣನ ನಾಲಗೆ-ಖಡ್ಗದ ಏಟನ್ನು ನೋಡಿ ತಗಡು ಹಿಮ್ಮೆಟ್ಟಿ ಧಾರಿಣಿಯೊಳು ಬರಸಿಡಿ ಲೊಗೆವಂತೆ ಬಂದೆಲುಗುವುದು ತೆಗೆದೆಸೆಯಲು ಸರಳು ಹೋಗಿ ಗರ್ಭವ ಬಗೆಯದೆ ಮಾಲ್ಪುದೆ ಮರುಳೆ ಅಡಗುವ ಶಾರ್ದೂಲ ಹಾಡುವ ಹರಿಣನ ಕೆಡಹಿ ರೋಹಿತವನೀಂಟುವುದು ಮೊಡವಿಯೊಳಾರದು ಗೆಲುಸೋಲವೆಂಬುದ ಜಡಮತಿ ತಿಳಿದು ಪೇಳೆನಗೆ || ಕುರಿ ಟಗರು ಹಿಂದು ಹಿಂದಕ್ಕೆ ಸರಿದು ಹೋಗುವುದು ಅತಿಯಾದ ವೇಗ ಮತ್ತು ಶಕ್ತಿಯಿಂದ ಬಂದು ಎದುರಾಳಿಯನ್ನು ಗುದ್ದುವುದಕ್ಕೆ, ಹಾಗೆಯೇ ನಾನು ಸಮರದಲ್ಲಿ ಹಿಮ್ಮೆಟ್ಟಿ ಹೋಗಿದ್ದರೆ ಅದು ವೈರಿಯನ್ನು ಮೆಟ್ಟಿ ಹಾಕುವುದಕ್ಕೆ ವಿನಾ ಅಂಜಿಕೆಯಿಂದಲ್ಲ ಎಂಬುದು ಕೃಷ್ಣನ ಉತ್ತರ.*

  1. ಡಾ. ಕೆ. ತಿ. ನ ಅವರು “ಮರುಳೆ, ಹೊಡೆದ ನನ್ನ ಬಾಣಗಳು ಸಿಡಿಲಿನಂತೆ ಅಡ್ಡ ಗಟ್ಟಿ ನಿನ್ನನ್ನು ಹಿಮ್ಮೆಟ್ಟಿಸುವವಲ್ಲದೆ ನಿನ್ನ ಗರ್ಭವನ್ನೂ ಹೊಕ್ಕು ಸೀಳಿಬಿಡುವುದು” ಎಂದು ಗದ್ಯಾನುವಾದ ಮಾಡಿ, ಮೂಲದ 'ತಗರುಪಟ್ಟಿನ ಸೊಗಸು ಶಕ್ತಿಗಳು ಸೋರಿ ಹೋಗುವಂತೆ