ಪುಟ:Kanakadasa darshana Vol 1 Pages 561-1028.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

୪୧୭ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಮುಂಡಿಗೆಗಳು ೫೯೩ ಭೂಮಿಯು ಮುಂದೊ ಆಕಾಶ ಮುಂದೋ ಸ್ವಾಮಿ ತಿ ಇಕ್ಕಳ ಪೊತ್ತೊ ಇಕ್ಕಳ ತಿತ್ತಿಯ ಪೊತ್ತೊ ಇಕ್ಕಳ ಮುಂದೋ ತಿತ್ತಿಯು ಮುಂದೆ ಸ್ವಾಮಿ ಬೀಜ ವೃಕ್ಷವು ಪೊತ್ತೂ ವೃಕ್ಷ ಬೀಜವು ಪೊತ್ತೊ ಬೀಜವು ಮುಂದೆ ವೃಕ್ಷವು ಮುಂದೋ ಸ್ವಾಮಿ ಗಂಡ ಹೆಂಡತಿ ಪೊತ್ತೊ ಹೆಂಡತಿ ಗಂಡನ ಪೊತ್ತೊ ಗಂಡನು ಮುಂದೆ ಹೆಂಡತಿ ಮುಂದೆ ಸ್ವಾಮಿ ಕನಕನು ಹೇಳಿದ ಬೆಡಗು ಕಂಡವರು ನೀವ್ ಕೇಳಿ ತಿಳಿದು ನಿಮ್ಮ ಮನದಲ್ಲಿ ನೋಡಿ ಇಲ್ಲಿ ಭೂಮಿ-ಆಕಾಶ, ತಿ-ಇಕ್ಕಳ, ಗಂಡ-ಹೆಂಡತಿ ಇವುಗಳ ಕಾರ್ಯ ಕಾರಣ ಸಂಬಂಧವು ಬೀಜವೃಕ್ಷನ್ಯಾಯದ ಮೂಲಕ ನಿರೂಪಿತವಾಗಿದೆ. ದಶಾವತಾರ ಕುರಿತ ಕನಕದಾಸರ ಮುಂಡಿಗೆಯಲ್ಲಿ ಕಂಡುಬರುವ ಚಮತ್ಕಾರ ಮೆಚ್ಚುವಂತಹುದು: ಮಗುವಿನ ಮರುಳಿದು ಬಿಡದಲ್ಲ ಈ ಜಗದೊಳು ಪಂಡಿತರಿದ ಬಿಡಿಸಿ ನೀರನು ಕಂಡರೆ ಮುಳುಗುತಿದೆ ಮೋರೆಯ ತೋರದೆ ಓಡುತಿದೆ ಧಾರಿಣಿ ಅಲ್ಲಲ್ಲಿ ಅಳೆಯುತಿದೆ ದೊಡ್ಡ ಭೈರವಾಕಾರದಿ ಕೂಗುತಿದೆ ಪೊಡವಿಯ ಕೊಟ್ಟರೆ ಬಿಸುಡುತಿದೆ ತನ್ನ ಕೊಡಲಿಯೊಳ್ ಭೂಪರ ಕಡಿಯುತಿದೆ ಅಡವಿ ಕೋತಿಗಳ ಕೂಡುತಿದೆ ಮಡದಿಯರನು ಹಿಡಿದೆಳೆವುತಿದೆ ಉಟ್ಟಿದ್ದ ವಸ್ತವ ಬಿಸುಡುತಿದೆ ತನ್ನ ದಿಟ್ಟ ತೇಜಿಯನೇರಿ ನಲಿಯುತಿದೆ ಸೃಷ್ಟಿಯೊಳು ಭೂಸುರರು ಪೊರೆವ ಜಗ ಜಟ್ಟಿಯಾದಿಕೇಶವರಾಯನಂತೆ | ಈ ಮುಂಡಿಗೆಯನ್ನು ಹೀಗೆ ಗ್ರಹಿಸಬಹುದು ; ನೀರನು ಕಂಡರೆ ಮುಳುಗುತಿದೆ-ಮತ್ಯಾವತಾರ, ಮೋರೆಯ ತೋರದೆ ಓಡುತಿದೆ ವರಾಹಾವತಾರ, ಧಾರಿಣಿ ಅಲ್ಲಲ್ಲಿ ಅಳೆಯುತಿದೆ-ವಾಮನಾವತಾರ, ದೊಡ್ಡ ಭೈರವಾಕಾರದಿ ಕೂಗುತಿದೆ-ನರಸಿಂಹಾವತಾರ, ಮೊಡವಿಯ ಕೊಟ್ಟರೆ ಬಿಸುಡುತಿದೆ ತನ್ನ ಕೊಡಲಿಯೋಳ್ ಭೂಪರ ಕಡಿಯುತಿದೆ ಪರಶುರಾಮಾವತಾರ, ಅಡವಿ ಕೋತಿಗಳ ಕೂಡುತಿದೆ-ರಾಮಾವತಾರ, ಮಡದಿಯರನು ಹಿಡಿದೆಳೆವುತಿದೆ-ಕೃಷ್ಣಾವತಾರ, ಉಟ್ಟಿದ್ದ ವಸ್ತವ ಬಿಸುಡುತಿದೆ-ಬೌದ್ಧಾವತಾರ, ತನ್ನ ದಿಟ್ಟ ತೇಜಿಯನೇರಿ ನಲಿಯುತಿದೆ-ಕಲ್ಯಾವತಾರ. ಹೀಗೆ ಒಂದೊಂದು ಅವತಾರದ ಕ್ರಿಯೆಯ ಮೂಲಕ ಹರಿಪಾರಮ್ಯವನ್ನು ಎತ್ತಿ ಹಿಡಿದಿದ್ದಾರೆ. ಇದೇ ಭಾವ ಮುಂಡಿಗೆ ಎಂದು ಕರೆಯದಿದ್ದರೂ ಪುರಂದರರ ಕೀರ್ತನೆಯಲ್ಲಿಯೂ ವ್ಯಕ್ತವಾಗಿರುವುದು ಹೀಗಿದೆ : ಏನಾಯಿತು ರಂಗರೆ ನೋಡಿರಮ್ಮ ನಿ ಧಾನಿಸಿ ಎನಗೊಂದು ಪೇಳಿರಮ್ಮ ಪುಟ್ಟಿದಾರಭ್ಯ ಕಣ್ಣ ಮುಚ್ಚನಮ್ಮ-ತಾನು ಎಷ್ಟಾದರೂ ಮೊಲೆಯುಣ್ಣನಮ್ಮ ಸೊಟ್ಟಾದ ಮುಖ ಮೇಲಕ್ಕೆತ್ತನಮ್ಮ-ಹೀಗೆ ಎಷ್ಟು ಹೇಳಲಿ ಬಾಯ ಮುಚ್ಚನಮ್ಮ ಕಾಯ ಇದ್ದಂತಿದ್ದು ಹೆಚ್ಚಿತಮ್ಮ-ಹೆತ್ತ ತಾಯಿಯ ಒಲವಿಲ್ಲದಾಯಿತಮ್ಮ ನೋಯೆ ನೋಟಕ್ಕೆ ಅಬ್ಬಿ ಬತ್ತಿತಮ್ಮ-ಅವನ ಬಾಯಿಯೊಳಗೆ ವಿಶ್ವ ತೋರಿತಮ್ಮ ಅತ್ಯಂತ ಮಾತುಗಳನಾಡಿದನಮ್ಮ-ಮುಂದೆ ಸತ್ಯವು ಕುದುರೆಯನೇರುವ ನಮ್ಮ ನಿತ್ಯ ನಿರ್ದೋಷ ಪುರಂದರ ವಿಠಲ-ತನ್ನ ಭಕ್ತರ ಸಲಹುವ ದೇವನಮ್ಮ || ಇವು ಓದುಗರ ಭವಕೋಶವನ್ನು ವಿಸ್ತರಿಸುವಲ್ಲಿಯೂ ಸಹಾಯಕವಾಗಿವೆ. ಕನಕದಾಸರು ಉಪನಿಷತ್ತು, ಭಗವದ್ಗೀತೆಗಳನ್ನು ಆಳವಾಗಿ ಅಭ್ಯಾಸಮಾಡಿದಂತೆ ತೋರುತ್ತದೆ. ಅವುಗಳ ಸಂಸ್ಕಾರವನ್ನು ಮುಂಡಿಗೆಗಳಲ್ಲಿ ಗುರುತಿಸಬಹುದು, ಈ ಮಾತಿಗೆ ನಿದರ್ಶನವಾಗಿ ಜೀವ ಮತ್ತು ಆತ್ಮದ ಸ್ವರೂಪವನ್ನು ಕುರಿತ ಒಂದು ಮುಂಡಿಗೆ ನಿಲ್ಲುತ್ತದೆ. ಆತ್ಮಕ್ಕೆ ಅಳಿವಿಲ್ಲ, ಹುಟ್ಟು ಸಾವುಗಳಿಲ್ಲ. ದೇಹ ಹೋದರೂ ಜೀವ ಶಾಶ್ವತ, ಆತ್ಮವನ್ನು ಶಸ್ತ್ರ, ಅಗ್ನಿ, ನೀರು, ಗಾಳಿ ಯಾವುವೂ