ಪುಟ:Kanakadasa darshana Vol 1 Pages 561-1028.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

OSOSO ಕನಕ ಸಾಹಿತ್ಯ ದರ್ಶನ-೧ ಕನಕದಾಸರ ದೃಷ್ಟಿಯಲ್ಲಿ ಯುದ್ಧ ಬಾಲೆಯರುಗಳು ಬೊಬ್ಬಿಡಲು ಗೋಪುರದಗ್ರ ಶಾಲೆಯ ರೋದನಕೇಳಿ ಲೀಲೆಗಾರನ ಕೋಲ್ವುದಿಲ್ಲೆಂದು ದುಃಖದ ಶೀಲೆಗೆ ಮಾತನಟ್ಟಿದನು | ಇಷ್ಟೇ ಅಲ್ಲ ಅವನ ಮಾನವೀಯತೆ ಮತ್ತೂ ಪ್ರಖರವಾಗಿ ಪ್ರಕಟಗೊಳ್ಳುತ್ತದೆ : ಅಂಗಜನಾತ್ಮಸಂಭವನ ಮೋರೆಯ ನೋಡಿ ಕಂಗೆಡಬೇಡೆಂದು ದೈತ್ಯ ಮಂಗಳವಸ್ತ್ರಾಭರಣ ಮಾಲ್ಯಾನು ಲೇ ಪಂಗಳ ಕೊಟ್ಟು ಮನ್ನಿಸಿದ || ಸೆಡೆಯದೆ ಸಮರಸ್ಥಳದಲಿ ದೈತ್ಯರ ಪಡೆಯನೆಲ್ಲವ ಗೆಲ್ಲುದಕೆ | ಬಿಡೆಯವಿಲ್ಲದೆ ಮೆಚ್ಚಿ ವಜ್ರಶೃಂಖಲಮೆಂಬ ಕಡಗವ ಕಾಡಿಸಿದನು || ಯುದ್ದ ಸರ್ವನಾಶದ ಹಂತ ಮುಟ್ಟಿದಾಗ ಅದನ್ನು ಹೇಗಾದರೂ ತಪ್ಪಿಸಬೇಕೆಂಬ ತುಡಿತ ಕನಕದಾಸರಲ್ಲಿರುವುದನ್ನು ಕಾಣಬಹುದು. ಉದಾಹರಣೆಗೆ ಯುದ್ಧದ ಒಂದು ಹಂತದಲ್ಲಿ ಶಿವ ತ್ರಿಶೂಲವನ್ನೂ ಕೃಷ್ಣ ಚಕ್ರವನ್ನೂ ಹಿಡಿದು ನಿಂತಾಗ ಆಕಾಶವಾಣಿ ಮೊಳಗುತ್ತದೆ : ಶಿವ ತ್ರಿಶೂಲದೊಳಿಡಲುಣಿದವರಿಲ್ಲ ಕೇ ಶವ ಚಕ್ರವಾಸ ಲೆಕ್ಕಿಸದು ಹವಣಲ್ಲ ನಿಲ್ಲು ನಿಲ್ಲೆನುತಿರ್ವರಿಗೆ ಸ ತ್ಯವ ಪೇಳುದಾಕಾಶವಾಣಿ || ಇಲ್ಲಿ ಶಿವ ಮತ್ತು ತ್ರಿಶೂಲ ಒಂದು ಮಹಾನ್‌ಶಕ್ತಿ, ಕೃಷ್ಣ ಮತ್ತು ಚಕ್ರ ಮತ್ತೊಂದು ಮಹಾನ್‌ಶಕ್ತಿ, ಈ ಎರಡು ಶಕ್ತಿಗಳಿಗೆ ತಾಕಲಾಟ ಶುರುವಾದರೆ ಜಗತ್ತಿನ ಸರ್ವನಾಶವಾಗುತ್ತದೆ ಎಂಬ ಭಾವನೆಯಿದೆ. (ಪ್ರಸ್ತುತ ಅಮೆರಿಕ ಮತ್ತು ರಷ್ಯ ಎರಡು ಬೃಹತ್ ಅಣುಶಕ್ತಿ ಕೇಂದ್ರಿತ ರಾಷ್ಟ್ರಗಳು. ಅವು ಯುದ್ಧಕ್ಕೆ ತೊಡಗಿದರೆ ಜಗತ್ತು ಸರ್ವನಾಶದ ಹಾದಿ ಹಿಡಿಯುತ್ತದೆ ಎಂದು ಚಿಂತಿಸಿ ಆ ಘಟ್ಟಕ್ಕೆ ಎರಡು ರಾಷ್ಟ್ರಗಳು ಹೋಗದಂತೆ ತಡೆಹಿಡಿಯುವ ಸಮಷ್ಟಿ ಪ್ರಯತ್ನವನ್ನು ನಾವಿಲ್ಲಿ ಸ್ಮರಿಸಿಕೊಳ್ಳಬೇಕು.) ಕೃಷ್ಣ ತನ್ನ ಚಕ್ರದಿಂದ ಬಾಣಾಸುರನ ೯೯೮ ತೋಳುಗಳನ್ನು ಕತ್ತರಿಸಿ ಉಳಿದೆರಡು ತೋಳುಗಳನ್ನು ಕತ್ತರಿಸಲು ಮತ್ತೆ ಚಕ್ರಕ್ಕೆ ಕೈಹಾಕಲು ಹೋದಾಗ ಶಿವ ಅಡ್ಡ ಬಂದು, ಭಕ್ತನನ್ನು ಸಮಾಧಾನಪಡಿಸಿ, ಬುದ್ಧಿವಾದ ಹೇಳುವುದರಲ್ಲಿಯೂ ಬೃಹತ್ ಶಕ್ತಿಯ ವಿರುದ್ಧ ಸಂಘರ್ಷ ಸಲ್ಲದು ಎಂಬ ಧ್ವನಿಯೇ ಇದೆ : ಕೇಶವನೆಡೆಗೆನ್ನೆಡೆಗಾವನೊರ್ವನು ದ್ವೇಷಬುದ್ಧಿಯ ಮಾಡಿದಡೆ ದೋಷ ಸಂಭವಿಸುವುದೆಂದು ಧೂರ್ಜಟಿ ದೈ ತೇಶಗೆ ವಿಸ್ತರಿಸಿದನು. ಸಮಕಾಲೀನ ರತ್ನಾಕರನ ಯುದ್ಧವರ್ಣನೆಗಿಂತಲೂ ಕನಕದಾಸರ ಯುದ್ದ ವರ್ಣನೆ ಹೆಚ್ಚು ಜೀವಂತವಾಗಿ, ವೀರವತ್ತಾಗಿ ಬಂದಿದೆ ಎಂಬುದನ್ನು ನಾವೀಗ ನೋಡಬಹುದು. ಉದಾಹರಣೆಗೆ ಶಂಬರಾಸುರನ ಈ ಮಾತುಗಳನ್ನು ಗಮನಿಸಿ: ಸರನೆ ಸೀಳೊ ದಿಗ್ಗಜದ ಮಂಡೆಯಮೆಟ್ಟಿ ಸುಜ್ರನೆ ಸುರಿವೆನೇಲ್ಗಡಲ ತಿರನೆ ತಿರುಹುವೆ ಧರಣಿಯ ಮಹದಾದಿ ಪರ್ವತವನು ಕೀಳೆ ನೋಡು || ಸಿನೆ, ಸುಜ್ರನೆ, ತಿನೆ ಎಂಬ ಅನುಕರಣ ಶಬ್ದಗಳ ಮೂಲಕವೇ ಜೀವಂತ ಚಿತ್ರ ಕಣ್ಮುಂದೆ ಮೂಡುವಂತೆ ಮಾಡಿರುವುದು ಇಲ್ಲಿಯ ಸೊಗಸು. ಸೀಳುವಾಗ ಉಂಟಾಗುವ 'ಸರಕ್' ಎಂಬ ಸದ್ದು ಸರನೆ ಎಂಬುದರ ಮೂಲಕ, ಸುರಿದುಕೊಳ್ಳುವಾಗ (ತಟ್ಟೆಯಿಂದ ಪಾಯಸವನ್ನು ಕೈಯ ಮೂಲಕ ಬಾಯಿಗೆ ಸುರಿದುಕೊಳ್ಳುವುದನ್ನು ಚಿತ್ರಿಸಿಕೊಳ್ಳಿ) ಸುರಕ್ ಎಂಬ ಸದ್ದನ್ನು ಸುರನೆ ಎಂಬ ಶಬ್ದದ ಮೂಲಕ, ಕವಣೆಯ ಕಲ್ಲಿನಂತೆ ಗರಗರನೆ ತಿರುಗಿಸುವ ಕ್ರಿಯೆಯನ್ನು ತಿರನೆ ಎಂಬ ಶಬ್ದದ ಮೂಲಕ ಹೇಗೆ ಮುಷ್ಟಿಗ್ರಾಹ್ಯ ಮಾಡಿದ್ದಾರೆ ಎಂಬುದು ಮನನಾರ್ಹ. ಇನ್ನೊಂದು ಉದಾಹರಣೆ. ಅನಿರುದ್ಧನ ವಿರುದ್ದ ಕುಂಭಾಂಡ ಹಾಗೂ ಸೈನಿಕರು ಸೆಣೆಸಾಡಲು ಅಸಹಾಯಕರಾದಾಗ ಒಬ್ಬ ವೀರ ಬಾಣಾಸುರನಲ್ಲಿಗೆ ಓಡಿಬಂದು, ಹೆಣ್ಣ ಭೋಗಿಸ ಬಂದವನಲ್ಲ ಕದನವ ಹಣ್ಣಲೋಸುಗ ಬಂದವನು