ಪುಟ:Kanakadasa darshana Vol 1 Pages 561-1028.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೮೪ ಕನಕ ಸಾಹಿತ್ಯ ದರ್ಶನ-೧ ೮೮೫ ಗಾಯವಡೆದು ಕುಮಾರನ ಕೋಮಲವೆತ್ತ ಕಾಯದೊಳರುಣಾಂಬು ಸುರಿಯೆ ಆಯತಾಕ್ಷಿಯರಿರ್ವರು ನೋಡಿದರು ತಮ್ಮ ಬಾಯ ತಾಂಬೂಲವನುಗುಟ್ಟು || ಕನಕ ಸಾಹಿತ್ಯದಲ್ಲಿ ಇಹ-ಪರಗಳ ಕಲ್ಪನೆ ಸತ್ತನೆ ಶಿವಶಿವ ದೇಸಿಗನಾದನೆಂ ದತ್ತರಿರ್ವರು ದುಗುಡದಲಿ ಚಿತ್ತಜನಾತ್ಮಸಂಭವ ಮೂರ್ಛದಿಳಿದೆ ಚೈತನೊಂದರಗಳಿಗೆಯಲಿ || ಡಾ. ಸಿದ್ದಯ್ಯ ಪುರಾಣಿಕ ನಾಲ್ಕು ಗೋಡೆಗಳ ಮಧ್ಯೆ ಗ್ರಂಥಸ್ಥ ಭಾಷೆಯ ವಿದ್ವತ್ತು ಗಳಿಸಿ ಬೀಗುವ ನಾಗರಿಕ ವಿದ್ವಾಂಸರಿಗೆ “ಆಯತಾಕ್ಷಿಯರಿರ್ವರು ನೋಡಿದರು ತಮ್ಮ ಬಾಯ ತಾಂಬೂಲವನುಗುಟ್ಟು” ಎಂಬ ವರ್ಣನೆಯ ಆಂತಯ್ಯ ಅರ್ಥವಾಗುವುದೇ ಇಲ್ಲ. ದೇಹದಿಂದ ರಕ್ತ ಬುಗ್ಗೆಯಂತೆ ಚಿಮ್ಮುತ್ತಿರುವಾಗ ಹಾಗೂ ಅವನು ಮೂರ್ಛ ಹೋಗಿ ನಿಶ್ವೇಷ್ಟಿತನಾದಾಗ ಉಷಾಚಿತ್ರಲೇಖೆಯರು ಅವನು ಸತ್ತುಹೋದನೆಂದೇ ಭಾವಿಸಿ ತಮ್ಮ ಬಾಯ ತಾಂಬೂಲವನ್ನು ಅವನ ಬಾಯಿಗೆ ಉಗುಳಿ ನೋಡಿದರಂತೆ ! ಸಾಮಾನ್ಯವಾಗಿ ಸತ್ತವರ ಕಣ್ಣು ಹಾಗೂ ಬಾಯಿಗೆ ಅಕ್ಕಿ ಸುರಿಯುವುದೋ ಅಥವಾ ಜಗಿದ ತಾಂಬೂಲ ಇಡುವುದೋ ಜನಪದ ಸಂಪ್ರದಾಯ. ಬಹುಶಃ ಪ್ರಾಣವನ್ನು ಬಿಡುವಾಗ ಬಾಯಿ ವಿಕಾರಗೊಳ್ಳಬಹುದು, ಕಣ್ಣು ಮೆಡರಿಸಿಕೊಳ್ಳಬಹುದು, ಅದನ್ನು ನೋಡಿದ ಮಕ್ಕಳುಮರಿ ಹೆದರಿಕೊಂಡಾವು ಎಂಬ ಉದ್ದೇಶದಿಂದ ಹಾಗೆ ಮಾಡುವ ಪ್ರವೃತ್ತಿ ಬೆಳೆದಿರಬಹುದು, “ನಿನ್ನ ಬಾಯಿಗೆ ನನ್ನ ತಂಬುಲ ಹಾಕ” ಎಂಬ ಜನಪದ ಬೈಗುಳಿಗೆ “ನೀನು ಸಾಯ” ಎಂದೇ ಅರ್ಥ. ಆದ್ದರಿಂದ ಅವನು ಸತ್ತನೆಂಬ ಅವರ ಭಾವನೆ, ಅವರು ಅವನ ಬಾಯಿಗೆ ತಾಂಬೂಲವನ್ನು ಉಗುಳುವ ಕ್ರಿಯೆಯಲ್ಲಿ ಅಭಿವ್ಯಕ್ತವಾಗಿದೆ. ಧ್ವನ್ಯರ್ಥ ಅರ್ಥವಾಗುತ್ತದೋ ಇಲ್ಲವೋ ಎಂಬ ಅನುಮಾನದಿಂದಲೇ ಕನಕದಾಸರು ವಾಚ್ಯವಾದರೂ ಆಗಲಿ ಎಂದು ಮುಂದಿನ ಪದ್ಯದಲ್ಲಿ “ಸತ್ತನೆ ಶಿವಶಿವ ದೇಸಿಗನಾದನೆಂ | ದತ್ತರಿರ್ವರು ದುಗುಡದಲಿ” ಎಂದು ಹೇಳಿರುವುದು. ಆದ್ದರಿಂದ ಜನಪದ ಜೀವನದ ನಡೆನುಡಿ ಸಂಸ್ಕೃತಿಗಳ ಕೆನೆಯಂತಿದೆ ಅವರ ಕಾವ್ಯ ಯುದ್ಧ ವರ್ಣನೆಯಲ್ಲೂ ಅದು ವಿಜೃಂಭಿಸಿರುವುದು ಅವರ ಅಗಾಧ ಜೀವನಾನುಭವವನ್ನು ರುಜುವಾತುಗೊಳಿಸುತ್ತದೆ. ದಾಸಸಾಹಿತ್ಯ ದೇಹಕ್ಕೆ ಪುರಂದರ-ಕನಕರು ಕಣ್ಣುಗಳೆರಡು. ಕನಕದಾಸರ ಬೇರೆ ವೈಶಿಷ್ಟ್ಯಗಳೂ ಇವೆ. ಅವರು ಹಾಡುಗಬ್ಬಿಗರಷ್ಟೇ ಅಲ್ಲ, ಕವಿಗಳು ಕೂಡ ಛಂದೋವೈವಿಧ್ಯ, ವಸ್ತುವೈವಿಧ್ಯ, ವಿಚಾರವೈವಿಧ್ಯಗಳನ್ನೊಳಗೊಂಡ ಕಾವ್ಯಗಳನ್ನು ನಮಗೆ ಕೊಟ್ಟ ಕವಿಗಳು; ಶೈವ, ರಾಮಾನುಜೀಯ, ಮಾಧ್ವ ದರ್ಶನಗಳ ಸಾರವನ್ನು ಹೀರಿ ಬೆಳೆದ ಬೆಳಕಿಗರು ; ಭಕ್ತಿ ಜ್ಞಾನಗಳೆರಡಕ್ಕೂ ಪ್ರಾಶಸ್ಯ ನೀಡಿ ಅವುಗಳ ಮಧುರ ಮಿಶ್ರಣದಿಂದ ಅನನ್ಯವಾದ ಕೀರ್ತನೆಗಳನ್ನು, ಮುಂಡಿಗೆಗಳನ್ನು, ಕಾವ್ಯಗಳನ್ನು ರಚಿಸಿದ ಪ್ರತಿಭಾಶಾಲಿಗಳು; ಪಂಥ ಮೂರರಿಂದ ಪ್ರಭಾವಿತರಾಗಿಯೂ ಸ್ವತಂತಮತಿಗಳಾಗಿ ಉಳಿದ ಚಿಂತನಶೀಲರು; ತಮ್ಮ ಆತ್ಮಜ್ಞಾನದಿಂದ ತಮ್ಮ ಗುರುಗಳನ್ನು ಮೆಚ್ಚಿಸಿದ, ಆಗದವರನ್ನು ಬೆಚ್ಚಿಸಿದ ಅಚ್ಚ ಅರಿವಿನ ದೊರೆಗಳು-ಅರಮನೆಯನ್ನು ತೊರೆದು ಬುದ್ಧನಂತೆ ಅರಿವಿನ ಮನೆಯೊಡೆಯರಾದ ಮಹಾನುಭಾವರು. ಅವರ ಸಾಹಿತ್ಯವನ್ನು ವಿವಿಧ ದೃಷ್ಟಿಯಿಂದ ವ್ಯಾಸಂಗಿಸಿ ಅವರ ವಿಚಾರಧಾರೆಯನ್ನು ಜನಮನದಲ್ಲಿ ಹರಿಸುವ ಕಾರ್ಯ ಅತ್ಯಗತ್ಯವಾದುದು. ಇಲ್ಲಿ ಅವರ ಇಹ-ಪರಗಳ ಕಲ್ಪನೆಯೇನೆಂಬುದನ್ನು ಅರಿಯಲು ಹವಣಿಸೋಣ. “ತೇ ತಂ ಭುಕ್ಕಾ ಸ್ವರ್ಗಲೋಕಂ ವಿಶಾಲಂ, ಕ್ಷೀಣೇ ಪುಣ್ಯ ಮರ್ತ್ಯಲೋಕಂ ವಿಶಂತಿ” ಎಂಬ ಗೀತೋಕ್ತಿಯ ಪ್ರಭಾವ ಭಾರತೀಯರ ಮನದ ಮೇಲೆ ಎಷ್ಟು ದಟ್ಟವಾಗಿದೆಯೆಂದರೆ “ಮರ್ತ್ಯಲೋಕವು ಕರ್ತಾರನ ಕಮ್ಮಟವಯ್ಯಾ, ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ' ಎಂದು ಬಸವಣ್ಣನವರು ಹೇಳಿದರೂ ಬಸವ ಪುರಾಣದಲ್ಲಿಯೇ ನಂದೀಶ್ವರ ಮರ್ತ್ಯಕ್ಕೆ ಹೋಗಲಾರೆನೆಂದು ಗೋಗರೆಯುತ್ತಾನೆ ! ಹರಿಹರನಂತೂ ಕೈಲಾಸದಲ್ಲಿ ಮಾಡಿದ ತಪ್ಪಿಗೆ ಮರ್ತ್ಯಲೋಕವೇ ಶಿಕ್ಷಾಲಯವೆಂದು ತನ್ನ ಪ್ರತಿಯೊಂದು ರಗಳೆಯಲ್ಲಿಯೂ