ಪುಟ:Kanakadasa darshana Vol 1 Pages 561-1028.pdf/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೨ ಕನಕ ಸಾಹಿತ್ಯ ದರ್ಶನ-೧ ಕನಕ ಸಾಹಿತ್ಯದಲ್ಲಿ ಭಕ್ತಿಸ್ವರೂಪ ಪ್ರೊ. ವಸಂತಕುಷ್ಟಗಿ ಕೊಟ್ಟಿದ್ದಾರೆ : ಅಂಧಕನ ಕೈಯಲಿ ಕೋಲಿತ್ತು ಕರೆದೊಯ್ದ ಮುಂದಾಳು ತಪ್ಪಿ ಗುಂಡಿಗೆ ಕೆಡಹಲು ಅಂಧಕನ ತಪ್ಪೋ ಮುಂದಾಳಿನ ತಪ್ಪೆ ಹಿಂದಾಡಬೇಡ-ಎನ್ನಲಿ ತಪ್ಪಿಲ್ಲ !” ಎಂದು ಸಹಜ ಸಲಿಗೆಯಿಂದ, ನಿಜ ಭಕ್ತಿ ಮಾತ್ರ ನೀಡುವ ನಿರ್ಭೀತಿಯಿಂದ ಹೇಳಬಲ್ಲ ಕನಕದಾಸರು 'ಬಂದೆನಯ್ಯ ಗೋವಿಂದ ಸೆಟ್ಟಿ ನಿನ್ನ | ಹರಿವಾಣ ತೀರ್ಥ ಪ್ರಸಾದ ಉಂಟೆನಲಾಗಿ' ಎಂಬ ಕೀರ್ತನೆಯಲ್ಲಿ ತಿರುಪತಿಯಲ್ಲಿ ನಡೆವ ಧರ್ಮದ ವ್ಯಾಪಾರೀಕರಣವನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿದ್ದಾರೆ-ಹೀಗೆ ಅವನ ಆರಾಧ್ಯ ಪರಲೋಕದಲ್ಲಿ ಎಲ್ಲಿಯೋ ಕುಳಿತು ಭಕ್ತನ ಬರವಿಗಾಗಿ ಕಾದಿರುವ ದೈವತನವಲ್ಲ, ಅವನೊಡನಿದ್ದು ಅವನನ್ನು ಸದ್ಧತಿಗೊಯ್ಯುವ ಹೊಣೆ ಹೊತ್ತ ಜವಾಬ್ದಾರೀದೈವ. ಅಂತೆಯೇ, “ಊರಿಗೆ ಬಂದರೆ ದಾಸಯ್ಯ ನಮ್ಮ | ಕೇರಿಗೆ ಬಾ ಕಂಡ್ಯ ದಾಸಯ್ಯ' ಎಂದವರು ಕರೆದರು ; ಬದುಕಿದೆನು ಬದುಕಿದೆನು ಭವ ನನಗೆ ಹಿಂಗಿತು | ಪದುಮನಾಭನ ಪಾದದೊಲುಮೆ ಎನಗಾಯಿತು ” ಎಂದು ಹಾಡಿದರು : “ಇಂದೆನ್ನ ಜೀವಕ್ಕು ಸಕಲ ಸಂಪದವಾಯ್ತು | ಮುಂದೆನ್ನ ಜನ್ನ ಸಫಲವಾಯಿತು | ತಂದೆ ಶ್ರೀ ಕಾಗಿನೆಲೆಯಾದಿ ಕೇಶವರಾಯ | ಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ ” ಎಂದು ಉದ್ಗರಿಸಿದರು. ಕನಕದಾಸರಿಗೆ ಇಹವೂ ತನ್ನಲ್ಲಿ, ಪರವೂ ತನ್ನಲ್ಲಿ. ಇನ್ನೊಂದು ಕೀರ್ತನೆ ಗಮನಾರ್ಹವಿಲ್ಲಿ. “ಇಷ್ಟು ದಿನ ಈ ವೈಕುಂಠ | ಎಷ್ಟುದೂರವೆನ್ನುತ್ತಿದ್ದೆ ||ಪ| ದೃಷ್ಟಿಯಿಂದ ನೋಡಿದೆ ನಾ | ಸೃಷ್ಟಿಗೀಶ ಶ್ರೀರಂಗಶಾಯಿ |ಅ.ಪ| ವನ ಉಪವನಗಳಿಂದ | ಘನಸರೋವರಗಳಿಂದ | ಕನಕ ಗೋಪುರಗಳಿಂದ | ಘನ ಶೋಭಿತನೆ ಶ್ರೀರಂಗಶಾಯಿ || - ಇಂಥ ದಿವ್ಯಕೇಂದ್ರ ಇಂಥ ನಿಸರ್ಗ ಸೌಂದರ್ಯದ ಮಡಿಲಲ್ಲಿ ಮಲಗಿರುವಾಗ ಇನ್ನಾವ ವೈಕುಂಠದಾಸೆ. ಇದೇ ವೈಕುಂಠವಾಗಿ, ಪರಂಧಾಮವಾಗಿ ಕಂಡಿತವರಿಗೆ. ಇಂಥ ರಮಣೀಯ ದೇವಾಲಯಗಳೂ ನಿಸರ್ಗಸ್ವರ್ಗಗಳು ಬೇಕಾದಷ್ಟಿವೆ ಭಾರತದಲ್ಲಿ ! ಹೀಗಿರುವಾಗ 'ಭಾರತವೆ ಸ್ವರ್ಗವೈ ನಾವೆ ದೇವತೆಗಳೆ' ಎಂದು ಕನಕದಾಸರಿಗೂ ಎನ್ನಿಸಿದ್ದರೆ ಆಶ್ಚರ್ಯವಿಲ್ಲ' ಸಾಹಿತ್ಯವೆಂದರೆ ಬದುಕಿನಲ್ಲಿ ಶ್ರದ್ಧೆಯನ್ನು ಹುಟ್ಟಿಸುವುದು. ತನ್ನರಿವನ್ನು ಮನುಷ್ಯನಲ್ಲಿ ಮೂಡಿಸಿ ಬದುಕನ್ನು ಮಾಡಲಪೇಕ್ಷಿಸುವಂತೆ ಮಾಡುವುದು. ಎಲ್ಲವೂ ಪರಮಾತ್ನಮಯವಾದರೂ ಪರಮಾತ್ಮನ ಪ್ರೇರಣೆಯಿಂದಲೇ ಎಲ್ಲ ನಡೆದರೂ, ಪುರುಷಾರ್ಥಕ್ಕೆ ಮಾಹಿತಿಯನ್ನು ನೀಡಿ ಬದುಕನ್ನು ಅರಳಿಸುವುದೇ ಆಗಿದೆ. ಅದಕ್ಕೂ ಹೊರತಾಗಿ ಯಾವ ನಾಡಿನ ಸಂತ ಸಾಹಿತ್ಯವೂ ಇಲ್ಲ. ಅದರಲ್ಲಿಯೂ ಕನ್ನಡ ಸಾಹಿತ್ಯವು ಈ ವಿಷಯದಲ್ಲಿ ಚೈತನ್ಯಪೂರ್ಣ ಬಂಗಾರದ ಖಣಿಯಾಗಿದೆ. ಏಕೆಂದರೆ ಭಕ್ತಿಗಂಗೆಯು ಕನ್ನಡ ಸಾಹಿತ್ಯದ ಜೀವನದಿಯಾಗಿ ಇಲ್ಲಿ ಹರಿದದ್ದೇ ಅದಕ್ಕೆ ಕಾರಣ. ವಿಶೇಷತಃ ಶರಣರು ದಾಸರು ಭಕ್ತಿವಾಹಿನಿಯನ್ನು ಅಖಂಡವಾಗಿ ತಮ್ಮ ತಮ್ಮ ಜೀವಿತಕಾಲದಲ್ಲಿ ಪ್ರವಹಿಸುವಂತೆ ಮಾಡಿದರಲ್ಲದೆ, ಅವರು ತಮ್ಮ ಸಾಹಿತ್ಯದಿಂದ ತ್ರಿಕಾಲಗಳಲ್ಲಿಯೂ ಭಕ್ತಿಯ ಶಕ್ತಿವಾಹಿನಿಯನ್ನು ಸದಾಕಾಲ ಪ್ರವಹಿಸುವಂತೆ ಮಾಡಿದ್ದಾರೆ. ಅಂತೆಯೇ ವಿಶ್ವಮಾನವತಾವಾದಕ್ಕೆ ಕನ್ನಡನೆಲವು ತವರು ನೆಲವಾಗಿದೆ. ಜೀವಗಂಗೆಯಾಗಿದೆ. ಈ ಭಕ್ತಿ ಎನ್ನುವುದಕ್ಕೆ ಪ್ರೀತಿ ಭೀತಿಗಳು, ಆಶ್ಚರ್ಯ ಆದರಗಳು ಮೂಲನೆಲೆಗಳು. ಏಕೆಂದರೆ ಸೃಷ್ಟಿಯಲ್ಲಿ ರಮ್ಯವಾದ ಸೊಂಪೂ, ಅದ್ಭುತರಮ್ಯವಾದ ಚೆಲುವುಗಳು ಹಾಸುಹೊಕ್ಕಾಗಿವೆ. ಇವುಗಳ ಸಂಮಿಲಿತ ಸ್ವರೂಪವೇ ಭಕ್ತಿ, ಭಯ ಅನುಕಂಪ ವಿಶ್ವಾಸಗಳಿಂದ ಭಕ್ತಿ ಪರಮಾತ್ಮ ಸ್ವರೂಪವನ್ನು ತೋರಿಸುತ್ತದೆ. ಅಂತರಂಗ ಪರಿಶೀಲನೆಯಿಂದ ಪರಿಸರದಲ್ಲಿ ಆರೋಗ್ಯದ ನಿರ್ಮಿತಿಯಾಗಿ ಪರಿಸರವೆಲ್ಲ ಪರಮಾತ್ಮವಾಗಿ ಪರಿಣಮಿಸುತ್ತದೆ. ಇಂತಹ ಪರಮಾತ್ಮತ್ವದ ದರ್ಶನಕ್ಕಾಗಿ ಸಂತ ಸಾಹಿತ್ಯವು ಹಂಬಲಿಸಿದೆ. ಅಂತರಂಗದರ್ಶನದಲ್ಲಿ ತೃಪ್ತಿಯನ್ನು ಪಡೆದು ಆನಂದವನ್ನು ನೀಡುವಲ್ಲಿ ಸಾಫಲ್ಯವಾಗಿದೆ. ಇಂಥ ಭಕ್ತಿಯ ಮೂಲವನ್ನು ಕಾಣಲು ಹೊರಟಾಗ ಥಟ್ಟನೆ ಶ್ರೀಗುರುದೇವ ರಾನಡೆ ಅವರ, “ವೇದಗಳ ಸಾನುಪ್ರದೇಶದಿಂದ ಹೊರಹೊರಟ