ಪುಟ:Kanakadasa darshana Vol 1 Pages 561-1028.pdf/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕ ಸಾಹಿತ್ಯದಲ್ಲಿ ಭಕ್ತಿಸ್ವರೂಪ ೮೯೯ ಕೀಲು ಜಡಿದ ತೊಗಲ ಗೊಂಬೆ ನಿನ್ನದೇನೆಲೊ | ಲೋಲ ಆದಿಕೇಶವನ್ನ ಭಕ್ತನಾಗೆಲೊ ||೩ ಇದರಲ್ಲಿಯ ತಥ್ಯಾಂಶದ ಪ್ರಕಾರ ಭಕ್ತನೆಂಬವನಿಗೆ ಜಾತಿಮತಪಂಥಗಳೇ ಇಲ್ಲ. ಅವನು ಭಕ್ತಿಮಾರ್ಗದಲ್ಲಿ ನಡೆದರೆ ಸಾಕು ಅದು ಅವನನ್ನು ಪೂರ್ಣತ್ವದ ಕಡೆಗೆ ತಲುಪಿಸುತ್ತದೆ. ಇಂತಹ ಕೀರ್ತನೆಗಳನ್ನು ಓದಿದಾಗ, ಹಾಡಿದಾಗ, ಈ ಭಕ್ತಿಮಾರ್ಗದಲ್ಲಿರುವ ದಿಟತ್ವವು ಕಂಡರೂ, ಪಶ್ಚಾತ್ತಾಪದ ತಳಮಳದಲ್ಲಿ ಬೆಂದು ಬೇಯದ ಮುನ್ನ ಅದು ಸ್ಪಷ್ಟವಾಗಲಾರದು. ಆದ್ದರಿಂದ ಬರಿ ಓದು ಮೊದಲ ಹಂತದಲ್ಲಿ ಒಳಗಿನ ವಿವೇಕವನ್ನು ಎಚ್ಚರಿಸುತ್ತದೆ. ಮುಂದೆ ತಿಳಿವಳಿಕೆಗೆ ಓದು ಹತ್ತಿ ಚಿಂತನದಲ್ಲಿ ಬೆಳಕು ಮೂಡಿದಾಗ ವಿಶ್ವಾಸ ಹೊಡೆದೇಳುತ್ತದೆ. ಇಂಥ ಕ್ರಿಯಾಶಕ್ತಿಯನ್ನು ಸಾಧಕನಲ್ಲಿ ತರಲು, ಕನಕರು ಕೊಡುವ ಸಮಾಧಾನ, ಕೋಟಿ ಸೂಠ್ಯಪ್ರಭೆಯ ಈ ಕೆಳಗಿನ ಕೀರ್ತನೆಯಲ್ಲಿದೆ : “ತಲ್ಲಣಿಸದಿರು ಕಂಡೆಯಾ ತಾಳು ಮನವೆ-ಸ್ವಾಮಿ || ನಿಲ್ಲದಲೆ ರಕ್ಷಿಸುವ ಸಂದೇಹಬೇಡ |ಪ|| ಇದರಲ್ಲಿ ಸೃಷ್ಟಿಯ ನಿಗೂಢಶಕ್ತಿಯ ವಿವೇಚನೆ ದರ್ಶನಾತ್ಮಕವಾಗಿದೆ. ಸತ್ಯಶೋಧಕನ ತಿಳಿವಳಿಕೆಗೆ ಮೂಡಿಬರುವ ಸತ್ಯದ ತಿರುಳೇ ಅದರಲ್ಲಿದ್ದು ಸಾಧಕನ ದಾರಿಯನ್ನು ನಿಚ್ಚಳಗೊಳಿಸಿದೆ. ಭಕ್ತಿಯ ಅಂಶದಲ್ಲಿ ತಾದಾತ್ಮತೆ ಮತ್ತು ಬದುಕಿನ ನೆರಳು ಬೆಳಕನ್ನು ಮೀರಿದ ಆನಂದ ಪ್ರಾಪ್ತಿಗಳೇ ತುಂಬಿರುವುದನ್ನೇ ಹೊಳೆಯಿಸುತ್ತದೆ. ಇಂತಹ ಜಟಿಲ ವಿಷಯಗಳನ್ನು ಸುಂದರ ದೃಷ್ಟಾಂತಗಳಿಂದ ಸ್ಪಷ್ಟಪಡಿಸುವ ಕಲೆ ಕನಕರಿಗೆ ದೇವರಿತ್ತ ವಿಶಿಷ್ಟವರ. ಅನುಮಾನಗಳನ್ನೆಲ್ಲ ತೂಗಿ ನೋಡಿ ಹಂಸಕ್ಷೀರಗೊಳಿಸಿ ಪ್ರಮಾಣಪೂರ್ಣಶಬ್ದಗಳ ಚಲಾವಣೆ ಕನಕರಿಗೆ ಮೀಸಲಿಟ್ಟ ಶಕ್ತಿ, ಅಂತೆಯೇ ಭಕ್ತಿಮಾರ್ಗದಲ್ಲಿ ನಡೆಯಬೇಕಾದವನ ಮಾರ್ಗದ ಸ್ವರೂಪವನ್ನುಬದುಕಿನಲ್ಲಿ ಸಾಕ್ಷಾತ್‌ಗೊಳಿಸಿ, ಪರಮಯೋಗಿ ಯಾರು ಎಂಬುವನ್ನು ಗ್ರಹಿಸಿ ಆರ್ತಗೊಳಿಸಿಟ್ಟಂತಿದೆ. ಈ ಮುಂದಿನ ಕೀರ್ತನೆ : ತಾನಾರು ದೇಹವಾರು-ದಿವ್ಯ- || ಜ್ಞಾನದಲ್ಲಿ ತಿಳಿದಾತ ಪರಮಯೋಗಿ || ಪ || ಅಸ್ಥಿಪಂಜರದ ನರಗಳ ತೊಗಲ ಹೊದಿಕೆಯ | ವಿಸ್ತರಿಸಿ ಬಿಗಿದ ಮಾಂಸದ ಬೊಂಬೆಯು || ಮೂತ್ರ ಮಲ ರಕ್ತಕೀವದ ಪ್ರಳಯದೊಡಲೆಂದು | ವಿಸ್ತರಿಸಿ ತಿಳಿದಾತ ಪರಮಯೋಗಿ || ೧ || ಬೆಟ್ಟದಾ ತುದಿಯಲ್ಲಿ ಬೆಳೆದ ವೃಕ್ಷಂಗಳಿಗೆ | ಕಟ್ಟೆಕಟ್ಟುತ ನೀರ ಹೊಝರಾರು ? ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾದ ಮೇಲೆ ಕೊಟ್ಟು ರಕ್ಷಿಸುವನು ಇದಕೆ ಸಂದೇಹಬೇಡ ||೧|| ಸೂತಕಾದ್ದಿಯಲಿ ನವಮಾಸ ತುಂಬಿರೆ ತನ್ನ | ಮಾತೆಯುದರದಿ ಬಂದು ಬೆರಸಿ ಬೆಳೆದು || ಪಾತಕವದೊಂದು ಮೂರುತಿಯಾದ ತನುವೆಂದು | ನೀತಿಯಲಿ ತಿಳಿದಾದ ಪರಮಯೋಗಿ || ೨ || ಅಡವಿಯೊಳಗಾಡುವ ಮೃಗಜಾತಿ ಪಕ್ಷಿಗಳಿಗೆ ಅಡಿಗಡಿಗೆ ಆಹಾರವಿತ್ತವರದಾರು ? || ಪಡೆದ ಜನನಿಯಂತೆ-ಸಾರಥಿಯಾಗಿ ತಾ || ಬಿಡದೆ ರಕ್ಷಿಸುವನು ಇದಕೆ ಸಂದೇಹಬೇಡ ೨|| ಕಲ್ಲೊಳಗೆ ಪುಟ್ಟಿಕೂಗುವ ಮಂಡುಕಂಗಳಿಗೆ ಅಲ್ಲಿ ಹೋಗಿ ಆಹಾರವಿತ್ತವರದಾರು ? || ಬಲ್ಲಿದನು ಕಾಗಿನೆಲೆಯಾದಿ ಕೇಶವರಾಯ | ನಿಲ್ಲದೇ ರಕ್ಷಿಪನು ಇದಕೆ ಸಂದೇಹಬೇಡ ಘೋರ ಸಂಸಾರ ತನುವೆಂದು ತನ್ನಲ್ಲಿ ತಿಳಿದು | ಗೇರು ಹಣ್ಣಿನ ಬೀಜದಂತೆ ಹೊರಟು || ಮಾರಪಿತ ಕಾಗಿನೆಲೆಯಾದಿಕೇಶವ ಪಾದ- | ವಾರಿಜವ ನಂಬಿದವ ಪರಮಯೋಗಿ || ೩ || ಹೀಗೆ ಪರಮಾತ್ಮನಲ್ಲಿ ನಂಬಿಕೆ ಮೂಡಿ ಪರಮಯೋಗಿಯಾಗಲು ಧಾವಿಸಿದಾಗ ಮುಂದಿನ ನಡಿಗೆ ಬಲು ಸುಲಭ. ಏಕೆಂದರೆ ಅವರಿಗೆ ಎಲ್ಲ ಕಡೆಗೂ |೩||