ಪುಟ:Kanakadasa darshana Vol 1 Pages 561-1028.pdf/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೦೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳು : ಧಾರ್ಮಿಕ ಮುಖ ೯೦೯ ಭೇದೋ ಜೀವಗಣಾ ಹರೇರನುಚರಾಃ ನಿಚೋಚ್ಚ ಭಾವಂಗತಾಃ ಮುಕ್ತಿರ್ನೈಜಸುಖಾನುಭೂತಿರಮಲಾ ಭಕ್ತಿಶ್ಚ ತತ್ಸಾಧನಂ | ಹೈಕ್ಷಾದಿ ತ್ರಿತಯಂ ಪ್ರಮಾಣಮಖಿಲಾಮಾಬೈಕವೇದ್ಯೋ ಹರಿಃ || (ಶ್ರೀಹರಿ ಸರ್ವೋತ್ತಮ ; ಜಗತ್ತು ಪಾರಮಾರ್ಥಿಕ ಸತ್ಯ ; ಪಂಚಭೇದವು ಪಾರಮಾರ್ಥಿಕ ಸತ್ಯ ಮತ್ತು ನಿತ್ಯ ಜೀವಗಣಗಳು ಶ್ರೀ ಹರಿಯ ಅನುಚರರು; ನಿತ್ಯ ತಾರತಮ್ಯವುಳ್ಳವರು. ಸ್ವರೂಪ ಸುಖಾನುಭವ ಮುಕ್ತಿ ; ನಿರ್ಮಲವಾದ ಭಕ್ತಿಯು ಮುಕ್ತಿಗೆ ಸಾಧನ ; ಪ್ರತ್ಯಕ್ಷ ಅನುಮಾನ ಆಗಮಗಳು ಸಾಧಕ ಪ್ರಮಾಣಗಳು ; ಶ್ರೀ ಹರಿಯು ಆಗಮ ಮಾತ್ರವೇದ್ಯ.) ಕನಕದಾಸರ ಕೀರ್ತನೆಗಳಲ್ಲಿ ಹರಿಸರ್ವೋತ್ತಮತ್ವದ ಪ್ರತಿಪಾದನೆಯಿದೆ. ಸ್ವರೂಪ ಸುಖಾನುಭವವೇ ಮುಕ್ತಿ, ನಿರ್ಮಲ ಭಕ್ತಿಯೇ ಮುಕ್ತಿಗೆ ಸಾಧನ ಎಂಬ ನಿಲುವು 'ಹರಿಭಕ್ತಿಸಾರ'ದಲ್ಲಿ ಕಂಡುಬರುತ್ತದೆ. ಕೀರ್ತನೆಗಳಲ್ಲಿ ಹನುಮ, ಭೀಮ, ಮಧ್ವರ ಸ್ತೋತ್ರವಿದೆ. ಇಷ್ಟರ ಹೊರತು ಮಧ್ವಮತಕ್ಕೆ ವಿಶಿಷ್ಟವಾದ ಪ್ರಮೇಯಗಳೂ ಕನಕದಾಸರ ಕೃತಿಗಳಲ್ಲಿ ಪ್ರಕಟವಾಗುವುದಿಲ್ಲ. ಹುಡುಕಿದರೆ ಇನ್ನೂ ಕೆಲವು ಸುಳಿವುಗಳು ದೊರೆಯಬಹುದಷ್ಟೆ. ಮುಖ್ಯವಾದ ಮಾತೆಂದರೆ, ಕನಕ ಕೀರ್ತನೆಗಳಲ್ಲಿ ಹರಿಹರ ಸಾಮರಸ್ಯ ಎದ್ದು ಕಾಣುತ್ತದೆನ್ನುವುದು. ಕನಕದಾಸರ ಉದಾರ ಭಾಗವತ ಮನೋಧರ್ಮಕ್ಕೆ ಇದು ಸುಸಾಕ್ಷಿಯಾಗಿದೆ. ದಾಸನಾಗಬೇಕು ಸದಾಶಿವನ ದಾಸನಾಗಬೇಕು ತಮ್ಮನ್ನು ತೆರೆದುಕೊಂಡಿದ್ದರೆಂದು ಹೇಳಿದರೆ ತಪ್ಪಾಗಲಾರದು. ಆದರೆ ಅವರ ಕೀರ್ತನೆಗಳಲ್ಲಿ ಹಾಗೂ 'ಹರಿಭಕ್ತಿಸಾರ'ದಲ್ಲಿ ತಾತ್ತಿಕ ವಿಚಾರಗಳಿದ್ದರೂ ಯಾವುದೇ ನಿರ್ದಿಷ್ಟ ಪಂಥದ ಪ್ರತಿಪಾದನೆ ಇಲ್ಲವೆಂಬುದು ಗಣ್ಯವಾದ ಸಂಗತಿ. ವಾಸ್ತವವಾಗಿ, ಕನಕದಾಸರು ಎಲ್ಲ ಸಂಪ್ರದಾಯಗಳ ಸಾರವನ್ನು, ಮುಖ್ಯವಾಗಿ ಭಕ್ತಿ ಪ್ರಕ್ರಿಯೆಯನ್ನು ಹೀರಿಕೊಂಡು, ಅವುಗಳನ್ನು ಮೀರಿ “ಅತ್ಯತಿಷ್ಠದ್ದಶಾಂಗುಲಂ” ಎನ್ನುವಂತೆ ಬೆಳೆದ ಚೇತನ. ಈ ಔದಾರ್ಯ ಅನುಭಾವಿಯ ಲಕ್ಷಣ. ಅನುಭಾವಿ ಮತವನ್ನು ಮೀರಿದ ಮಹಾಂತ; ಪಂಥದಿಂದ ಪಾರಾದ ಪ್ರಾಜ್ಞ ಅನುಭಾವ (mysticism) ಎಂದರೇನು? ಒಂದು ಮಾತಿನಲ್ಲಿ ಹೇಳಬೇಕೆಂದರೆ, ತನುಭಾವ ಅಳಿಯುವುದೇ ಅನುಭಾವ. ಅದು ಪರಾಸತ್ಯದ ಅಪರೋಕ್ಷಾನುಭೂತಿ. 'Love of God' ಎಂದು ಒಬ್ಬಾತ ಅನುಭಾವವನ್ನು ಲಕ್ಷಣೀಕರಿಸಿದ್ದಾನೆ. ನಮ್ಮಲ್ಲಿರುವ 'ಪರಮಪ್ರೇಮರೂಪಾ”, “ಪರಾನುರಕ್ತಿರೀಶ್ವರೆ' ಎಂಬ ಭಕ್ತಿಲಕ್ಷಣವಾಕ್ಯಗಳನ್ನು ಇಲ್ಲಿ ನೆನೆಯಬಹುದು. ಅಂತೂ ಅನುಭಾವ ಎನ್ನುವುದು ಉತ್ಕಟವಾದ ಭಗವದ್ರತಿ ; ಅಂತಿಮವಾಗಿ ಜೀವಾತ್ಮ, ಪರಮಾತ್ಮರ ಐಕ್ಯದಲ್ಲಿ ಪಠ್ಯವಸಾನಗೊಳ್ಳುವಂಥದು, ಪ್ರಾಯಃ ಕನಕದಾಸರ ಒಂದೇ ಒಂದು ಹಾಡಿನಲ್ಲಿ ಅದ್ವಿತದ ನಿಲುವು ಕೂಡ ಪ್ರಕಾಶಗೊಂಡಿರುವುದು ತುಂಬ ಗಮನಾರ್ಹ : ಸದರವಿಲ್ಲವೆ ನಿಜಯೋಗ, ಸಚ್ಚಿದಾನಂದ ಗುರು ದಿಗಂಬರಯೋಗ... ...ಭೇದವು ಲಯವಾಗುವತನಕ ಬಿಡ ದಾದಿಕೇಶವ ನಿಮ್ಮ ನೆಲೆಗಾಣದನಕ | ಹರಿ-ಹರರು ಅಭಿನ್ನ ಎಂದು ಕನಕ ದಾಸರು ಹೇಳಲು ಸಾಧ್ಯವಾಗಿರುವುದು ಇಂಥ ನಿಲುವಿನಿಂದಲೇ ಎನಿಸುತ್ತದೆ. ಅನುಭಾವಿ ಹೇಳತಕ್ಕದ್ದೆಲ್ಲ ಅನುಭವಮೂಲವಾದದ್ದು. ಕನಕದಾಸರಲ್ಲಿ ತಾತ್ವಿಕ ವಿಚಾರಗಳಿದ್ದರೂ ಅವು ಕೇವಲ ಬೌದ್ದಿಕ ಅರಿವಿನಿಂದ, ಶುಷ್ಕ ತರ್ಕದಿಂದ ಬಂದವಲ್ಲ ; ಕವಿ ಸಹಜವಾದ ವಿಸ್ಮಯಮೂಲವಾದ ಅಭಿವ್ಯಕ್ತಿ ಅವರದು. ವೇದಶಾಸ್ತ್ರ ಶಬ್ದ ತರ್ಕ ಮೀಮಾಂಸೆಗಳ ಓದಿದವನಲ್ಲ ನಿನ್ನಯ ಭಕುತಿಗಧಿಕ ವಾದ ಇನ್ನೊಂದೇನನುಸುರುವೆನು || ಆರು ಬಲ್ಲರು ಹರಿಹರಾದಿಗಳ ಮಹಿಮೆಯನು? -ಮುಂತಾದ ಉಕ್ತಿಗಳನ್ನು ಬಗೆಯಬೇಕು. 'ಮೋಹನತರಂಗಿಣಿ'ಯಲ್ಲೂ ಹರಿಹರರ ಅಭೇದ ಅಭಿವ್ಯಕ್ತವಾಗಿದೆ. ಅಷ್ಟೇ ಅಲ್ಲ, ಆ ಕಾವ್ಯದಲ್ಲಿ ಶ್ರೀವೈಷ್ಣವ ಧರ್ಮದ ಪ್ರಭಾವವಿದ್ದು, ಪ್ರಪತ್ತಿ ಮಾರ್ಗದ ಪ್ರತಿಪಾದನೆ ತೋರಿಬರುತ್ತದೆ. 'ಹರಿಭಕ್ತಿಸಾರ'ದಲ್ಲಿಯೂ ಅದರ ಸೂಚನೆಗಳುಂಟು. 'ಮೋಹನ ತರಂಗಿಣಿ'ಯ ಆರಂಭದಲ್ಲೇ ಶ್ರೀ ರಾಮಾನುಜ ಸ್ತುತಿಯಿರುವುದನ್ನು ಲಕ್ಷಿಸಬೇಕು. ಅದು ಶೃಂಗಾರ ಕಾವ್ಯವಾದರೂ ಶ್ರೀವೈಷ್ಣವ ಸಂಪ್ರದಾಯದ ಎಳೆಗಳು ಅದರಲ್ಲಿ ಮೇಲಿಂದ ಮೇಲೆ ಮಿಂಚುತ್ತವೆ. ಈ ಕಾರಣದಿಂದ ವೈಷ್ಣವ, ಶ್ರೀವೈಷ್ಣವ ಎರಡೂ ಮತಗಳ ಪ್ರಭಾವ ಸಂಸ್ಕಾರಗಳಿಗೆ ಕನಕದಾಸರ ವ್ಯಕ್ತಿತ್ವ ಗುರಿಯಾಗಿತ್ತೆಂದು ಖಚಿತವಾಗಿ ಹೇಳಬಹುದು ಅಷ್ಟೇ ಅಲ್ಲ, ಶೈವ, ವೀರಶೈವ ಧರ್ಮಗಳ ಪ್ರಭಾವಕ್ಕೂ ಅವರು