ಪುಟ:Kanakadasa darshana Vol 1 Pages 561-1028.pdf/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೩೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರು : ಕೆಲವು ಚಿಂತನೆಗಳು ೯೩೧ ಇತರ ಪ್ರಮುಖ ಹರಿದಾಸರೊಂದಿಗೆ ಅಥವಾ ಕೀರ್ತನಕಾರರೊಂದಿಗೆ ಹೆಗಲೆಣೆಯಾಗಿ ನಿಂತದ್ದು ಒಂದು ಆಶ್ಚರ್ಯವೇ ಸರಿ. ಅಷ್ಟೇ ಅಲ್ಲ, ಈ ಪ್ರತಿಷ್ಠಿತರ ಆಂದೋಲನದ ನಡುವೆ, ಅಪ್ರತಿಷ್ಠಿತ ವರ್ಗದ ಈ ಭಕ್ತ ತನ್ನ ವ್ಯಕ್ತಿ ವಿಶಿಷ್ಟತೆಗಾಗಿ ಎದುರಿಸಬೇಕಾಗಿ ಬಂದ ಸವಾಲುಗಳೂ ಸಂಘರ್ಷಗಳೂ ಸ್ವಾರಸ್ಯವಾಗಿವೆ. ಕನಕದಾಸರ ವಿಶಿಷ್ಟತೆ ಇರುವುದು ಅವರು ದಾಸರಲ್ಲಿ (ಕೀರ್ತನಕಾರರಲ್ಲಿ) ಕವಿಗಳು ಎಂಬ ಸಂಗತಿಯಲ್ಲಿ. ಇದೇ ದಾಸ ಪರಂಪರೆಯ ಇತರರಿಂದ ಅವರನ್ನು ಪ್ರತ್ಯೇಕಿಸುವ ಲಕ್ಷಣವಾಗಿದೆ. ಅವರು ತಮ್ಮ ಕೀರ್ತನೆಗಳ ಮೂಲಕ ಅಂದಿನ ಹರಿದಾಸ ಪರಂಪರೆಯಲ್ಲಿ ಸುಭದ್ರವಾದ ಸ್ಥಾನವನ್ನು ಗಳಿಸಿಕೊಂಡಂತೆಯೇ, ತಮ್ಮ ಕಾವ್ಯ ನಿರ್ಮಿತಿಯಿಂದ ಕನ್ನಡ ಸಾಹಿತ್ಯ ಪರಂಪರೆಯಲ್ಲಿಯೂ ವಿಶಿಷ್ಟವಾದ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಎರಡನೆಯದಾಗಿ, ಕೀರ್ತನಕಾರರಾದ ಅವರು, ಆ ಸಂಪ್ರದಾಯದ ಇತರರಂತೆ ಕೇವಲ 'ಮಾಧ್ವಭಕ್ತಿ' ಹಾಗೂ 'ಸಿದ್ಧಾಂತಗಳಿಗೆ ಕಟ್ಟುಬೀಳದೆ, ಒಂದು ಉದಾರವಾದೀ ಧಾರ್ಮಿಕ ನಿಲುವನ್ನು ಪ್ರಕಟಿಸುತ್ತಾರೆ. ತಾವು ಕುರುಬರು' ಎಂಬ ಬಗ್ಗೆ ಯಾವುದೇ ಕೀಳರಿಮೆ ಇಲ್ಲದೆ, ತಮ್ಮ ಭಕ್ತಿಯ ನಿಲುವನ್ನು ನಾವು ಕುರುಬರು ನಮ್ಮ ದೇವರು ಬೀರಯ್ಯ ಕಾವ ನಮ್ಮಜ್ಜ ನರಕುರಿಯ ಹಿಂಡುಗಳ | ಎಂಬಂಥ ರೂಪಕದಲ್ಲಿ ಹೇಳಬಲ್ಲವರಾಗಿದ್ದಾರೆ. ಭಕ್ತ ಭಗವಂತನ ಸಂಬಂಧವನ್ನು, ಕುರಿ ಕುರುಬ ರೂಪಕದಲ್ಲಿ ಹೇಳುವುದು ಕನಕದಾಸರಂಥವರಿಗೆ ಮಾತ್ರ ಸಾಧ್ಯ : ಈ ಬಗೆಯ ಅವೈದಿಕ ಪರಂಪರೆಯ ಪ್ರತೀಕಗಳನ್ನು ಬೇರೆಯವರು ಕೊಡಲಾರರು. ವೈದಿಕ ಸಂಪ್ರದಾಯದ ಕೀರ್ತನಕಾರರ ಅಭಿವ್ಯಕ್ತಿ ಏನಿದ್ದರೂ 'ಗೋವು' 'ಗೋಪಾಲಕ'ನ ರೂಪಕದ ಮೂಲಕ ಸಾಧ್ಯ. ಕನಕದಾಸರು, ಈ ಕೀರ್ತನೆಯಲ್ಲಿ ಈ ರೂಪಕವನ್ನು ವಿಸ್ತರಿಸುವ ಕ್ರಮವೂ ತುಂಬ ಸ್ವಾರಸ್ಯವಾಗಿದೆ ; ಅವರ ಶೂದ್ರತ್ವಕ್ಕೆ ಸಾಕ್ಷಿಯಾಗಿದೆ. ಹಾಗೆಯೇ 'ದೇವೀ ನಮ್ಮ ದ್ಯಾವರು ಬಂದರು ಬನ್ನಿರೇ ನೋಡಬನ್ನಿರೇ' ಎಂಬ ಧಾಟಿಯ ಮತ್ತು ಗ್ರಾಮ್ಯ ಭಾಷೆಯಲ್ಲಿ ಅವರು ಬರೆದ ಇನ್ನೂ ಹಲವು ಕೀರ್ತನೆಗಳನ್ನು ನೋಡಿದಾಗ ಮತ್ತು ರಾಮಧಾನ್ಯ ಚರಿತೆಯ ವಸ್ತು ನಿರ್ವಹಣೆಯನ್ನು ಗಮನಿಸಿದಾಗ, ಕನಕದಾಸರು ಅಂದಿನ ಅಪ್ರತಿಷ್ಠಿತ ಸಾಮಾಜಿಕ ಸ್ತರದಿಂದ ಬಂದ ಏಕೈಕ ಕೀರ್ತನಕಾರರು ಎಂಬುದು ಖಚಿತವಾಗುತ್ತದೆ. ಇದರಿಂದಾಗಿ ಅವರು ವೈಚಾರಿಕವಾಗಿ ಹಾಗೂ ಸಾಮಾಜಿಕವಾಗಿ ಎದುರಿಸಬೇಕಾಗಿ ಬಂದ ಬಿಕ್ಕಟ್ಟುಗಳು ಹಾಗೂ ಸಂಘರ್ಷಗಳು ಕಡಿಮೆಯೇನಲ್ಲ. ಇವು ಅವರ ಕೀರ್ತನೆಗಳಲ್ಲಿ ಮತ್ತು ಅವರನ್ನು ಕುರಿತ ಐತಿಹ್ಯಗಳಲ್ಲಿ ಕಾಣಿಸಿಕೊಂಡಿವೆ. ಒಂದೆಡೆ ಕನಕದಾಸನ ಮೇಲೆ ದಯಮಾಡಲು ವ್ಯಾಸ ಮುನಿ ಮಠಿಕರೆಲ್ಲ ದೂರುತಿಹರೋ || ಎಂಬ ಪುರಂದರ ದಾಸರ ಕೀರ್ತನೆಯ ದಾಖಲೆಯಲ್ಲಿ ಗುರುವ್ಯಾಸರಾಯರು 'ಶೂದ್ರ' ಎಂದು ಕನಕದಾಸರ ಮೇಲೆ ವಿಶೇಷ ಪ್ರೀತಿ ತೋರಿಸಿದ ಕಾರಣದಿಂದ, ಅಂದಿನ ಸಂಪ್ರದಾಯಸ್ಥ ಬ್ರಾಹ್ಮಣರು ತೋರಿದ ಪ್ರತಿಕ್ರಿಯೆಯ ಚಿತ್ರವೊಂದು ಬಿಚ್ಚಿಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿಯೇ ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ ? || ಆತ್ಮಯಾವ ಕುಲ ಜೀವ ಯಾವ ಕುಲ ತತೇಂದ್ರಿಯಗಳ ಕುಲ ಪೇಳಿರಯ್ಯ | ಆತ್ಮಾಂತರಾತ್ಮ ನೆಲೆಯಾದಿ ಕೇಶವ ಆತನೊಲಿದ ಮೇಲೆ ಯಾತರ ಕುಲವಯ್ಯ ? || ಎಂದು ಪ್ರಶ್ನೆ ಮಾಡುವುದರ ಮೂಲಕ ತಮ್ಮ ಪ್ರತಿಭಟನೆಯನ್ನು ದಾಖಲು ಮಾಡುತ್ತ, ತಮ್ಮ ವ್ಯಕ್ತಿತ್ವದ ಪರಿಚಯ ಮಾಡಿಕೊಡುತ್ತಾರೆ. ಅವರ ಬಗ್ಗೆ ಪ್ರಚಲಿತವಾದ ಒಂದೆರಡು ದಂತಕತೆಗಳು ಅವರು ಏರಿದ ಎತ್ತರವನ್ನು ಸೂಚಿಸುತ್ತವೆ. ಬಾಳೆಯ ಹಣ್ಣನ್ನು ಯಾರೂ ಇಲ್ಲದೆಡೆ ತಿಂದು ಬನ್ನಿ ಎಂದು ಗುರುಗಳು ತಮ್ಮ ಶಿಷ್ಯರಿಗೆ ಹೇಳಿದಾಗ, ಆ ಹಣ್ಣನ್ನು ತಿನ್ನದೆ ತಮ್ಮ ಮುಂದೆ ಬಂದ ಶಿಷ್ಯ ಕನಕದಾಸನ ತಿಳಿವಳಿಕೆಯನ್ನು ಗುರು ವ್ಯಾಸರಾಯರು ಮೆಚ್ಚಿಕೊಂಡದ್ದಾಗಲಿ, ಯಾರು ಮೊದಲು ವೈಕುಂಠಕ್ಕೆ ಹೋಗಬಲ್ಲದು ಎಂದು ಕನಕದಾಸನನ್ನು ಗುರುಗಳು ಪ್ರಶ್ನಿಸಿದಾಗ “ನಾನು ಹೋದರೆ ಹೋಗಬಹುದು' ಎಂಬ ಉತ್ತರದ ಮೂಲಕ ಕನಕದಾಸರು ಸೂಚಿಸಿದ ಅಹಂ ನಿರಸನದ ಸಂಗತಿಯಾಗಲಿ ಕನಕದಾಸರ ತತ್ವಜ್ಞಾನಕ್ಕೆ ಸಾಕ್ಷಿಯಾಗಿವೆ. ಉಡುಪಿಯ 'ಕನಕನ ಕಿಂಡಿ'ಯ ಪ್ರಸಂಗವಂತೂ, ಸಾಮಾಜಿಕವಾಗಿ ಅಂದಿನ ಪ್ರತಿಷ್ಠಿತ ವರ್ಗದವರ ಧೋರಣೆಗೆ ಅರ್ಥವತ್ತಾದ ಒಂದು ಪ್ರತೀಕವಾಗಿದೆ. ವಚನ ಚಳುವಳಿಯ ಸಂದರ್ಭದಲ್ಲಿ ಈ ಬಗೆಯ