ಪುಟ:Kanakadasa darshana Vol 1 Pages 561-1028.pdf/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೫೦ ಕನಕ ಸಾಹಿತ್ಯ ದರ್ಶನ-೧ ಕನಕ ಮತ್ತು ಪುರಂದರರ ಕೀರ್ತನೆಗಳು ೯೫೧ ಕನಕ ಮತ್ತು ಪುರಂದರರ ಕೀರ್ತನೆಗಳು ಜಿ. ಜಿ. ಮಂಜುನಾಥನ್ ಕನಕದಾಸರು (೧೫೦೮-೧೬೦೬) ಮತ್ತು ಪುರಂದರದಾಸರು (೧೪೮೦-೧೫೬೪) ಹರಿದಾಸ ಸಾಹಿತ್ಯದ ಎರಡು ಕಣ್ಣು ಕಣ್ಣು ಎರಡಾದರೂ ನೋಟ ಒಂದೇ ಇರುವಂತೆ ಈ ಮಹನೀಯರು ಸಾಧಿಸಿದ ಸಾಧನೆಗಳು ಒಂದೇ ಮಟ್ಟದ್ದಾಗಿದ್ದು ಮಹತ್ತ್ವದ್ದಾಗಿವೆ. ವ್ಯಾಸರಾಯರ ಚರಣಕಮಲ ದರ್ಶನವೆನಗೇಸುಜನ್ಮದ ಸುಕೃತಫಲದಿ ದೊರಕಿತೊ (ಪೂಜಾ. ೬)* ಎಂದು ಪುರಂದರದಾಸರು ವ್ಯಾಸರಾಯರನ್ನು ಸ್ತುತಿಸಿದ್ದಾರೆ. ಕನಕದಾಸರನ್ನು ಕುರಿತುಕನಕದಾಸನ ಮೇಲೆ ದಯಮಾಡಲು ವ್ಯಾಸಮುನಿ ಮಠಿಕರೆಲ್ಲರು ದೂರುತಿಹರೂ (ಸ೦ ೧೨೧) ಎಂದು ಕೀರ್ತನೆಯನ್ನು ರಚಿಸಿದ್ದಾರೆ. ಕನಕದಾಸರ ಕೀರ್ತನೆಗಳಲ್ಲೆಲ್ಲೂ ವ್ಯಾಸರಾಯರ ಉಲ್ಲೇಖವಿಲ್ಲ. 'ಮಗುವು ಕಾಣಿರಯ್ಯ ಮಾಯದ ಮಗುವು ಕಾಣಿರಯ್ಯ ಸುಗುಣ ವಾದಿರಾಜರೆ ಮೂಜಗವನು ತನ್ನುದರದೊಳಿಟ್ಟು' (ಕ. ಕೀ. ೧೨೦) ಎನ್ನುವ ಕೀರ್ತನೆಯಲ್ಲಿ ವಾದಿರಾಜರನ್ನು, “ತಿರಿದುಂಬದಾಸರ ಕೈಯ ಕಪ್ಪವ ಕಟ್ಟಿಸಿಕೊಂಡೆ ತಿರುಮಲಾಚಾರ್ಯ ಶ್ರೀಗುರುವೆ ಬಲ್ಲ' (ಕ.ಕೀ. ೨೦೫) ಎನ್ನುವಲ್ಲಿ ತಿರುಮಲಾಚಾರ್ಯ ಗುರುಗಳನ್ನು ನೆನೆದಿದ್ದಾರೆ. ವ್ಯಾಸರಾಯರನ್ನು ಪ್ರಹ್ಲಾದನ ಅವತಾರ, ಪುರಂದರರನ್ನು ನಾರದರ ಅವತಾರ ಎನ್ನುವ ಭಾವನೆ ಪ್ರಚಲಿತವಿರುವಂತೆಯೇ ಕನಕದಾಸರನ್ನು ಯಮಧರ್ಮನ ಅವತಾರ ಎನ್ನುವ ಭಾವನೆಯಿದೆ. ಈ ಮಾತಿಗೆ ಪೂರಕವಾಗಿ ಕನಕದಾಸರ-ಯಮನು ಮುನ್ನೆ ಮಾಂಡವ್ಯ ಶಾಪದಿಂದೆರಡು ಜನುಮ ಶೂದ್ರಯೋನಿಯೊಳಗೆ ಪುಟ್ಟಿದನು ಮೊದಲ ಜನುಮ ವಿದುರನಾಗಿ ಕುರುಬರ ಕುಲದಲ್ಲಿ ಜನಿಸಿದೆನಗೀ ಜನುಮದಲ್ಲಿ ಮುಕ್ತಿ ಎಂತು ಎಂಬೆ' (ಕ ಕೀ 90) ಎನ್ನುವ ಕೀರ್ತನೆ ನಿಲ್ಲುತ್ತದೆ. ಪುರಂದರದಾಸರು ಮತ್ತು ಕನಕದಾಸರು ಹರಿದಾಸದೀಕ್ಷೆಯನ್ನು ಸ್ವೀಕರಿಸುವುದಕ್ಕೆ ಕಾರಣವಾದ ಸಂದರ್ಭಗಳು ಪರಂಪರಾಗತವಾದ ನಂಬಿಕೆಗೆ ಪಾತ್ರವಾಗಿದ್ದು ಹೀಗಿವೆ. ಪುರಂದರ ವೈರಾಗ್ಯಭಾವನೆಯು ಸ್ಪುಟಗೊಳ್ಳಲು ಅವರ ಹೆಂಡತಿಯ ಮೂಗುತಿಯ ಪ್ರಸಂಗ ಕಾರಣವೆಂದು ಭಾವಿಸಲಾಗಿದ್ದು ಇದಕ್ಕೆ ಆಧಾರವಾಗಿ-ಆದದ್ದೆಲ್ಲಾ ಒಳಿತೇ ಆಯಿತು ನಮ್ಮ ಶ್ರೀಧರನ ಸೇವೆಯ ಮಾಡಲು ಸಾಧನಸಂಪತ್ತಾಯಿತು ಎನ್ನುವ ಕೀರ್ತನೆ ನಿಲ್ಲುತ್ತದೆ. ಅಂತೆಯೇ ಕನಕದಾಸರು ಯುದ್ಧರಂಗದಲ್ಲಿ ಗತಾಸುವಾಗಿ ಬಿದ್ದಿದ್ದಾಗ ಹರಿ ಬಂದು ಸಲಹಿದನೆಂದೂ ಅದರಿಂದ ಅವರಿಗೆ ವೈರಾಗ್ಯ ಮೂಡಿತೆಂದೂ ನಂಬಲಾಗಿದೆ. ಇದಕ್ಕೆ ಆಧಾರವಾಗಿ-ಹರಿ ನಿನ್ನ ಪದಕಮಲ ಕರುಣದಿಂದಲಿ ಎನಗೆ ದೊರಕಿತೀ ಗುರುವೆ ಹರಿಯೆ (ಕ.ಕೀ. ೯೨) ಎನ್ನುವ ಕೀರ್ತನೆಯ ಭಾಗವಾದ 'ಅರಿಗಳು ದಂಡೆತ್ತಿ ಬರಲು ನಾನವರೊಡನೆ ಪರಿಪರಿ ಹೋರುತಿರಲು ದುರುಳರೆನ್ನನು ಜೈಸಿ ಹರಿದಟ್ಟಿ ಬಂದೆನ್ನ ಧರೆಗುರುಳಿಸಿದರೊ ಹರಿಯೆ...ದೊರೆತನವ ಬಿಡಿಸಿ ಸುಸ್ಥಿರ ಮಾರ್ಗವನೆ ತೋರಿ ಪರಿಪಾಲಿಸಿದೆಯೆನ್ನ ಹರಿಯೆ' ಎನ್ನುವ ಮಾತು ನಿಲ್ಲುತ್ತದೆ. ಪುರಂದರದಾಸರು ಬ್ರಾಹ್ಮಣರೆಂದೂ ಚಿನಿವಾರವೃತ್ತಿಯ ವೈಶ್ಯರೆಂದೂ ಊಹೆಗಳಿವೆ. ಆದರೆ ಕಮಲಾಪುರದ ಶಾಸನದಲ್ಲಿ ಬರುವ

  • ಇಲ್ಲಿ ಕೊಟ್ಟಿರುವ ಸಂಕೇತಗಳ ವಿವರ ಹೀಗಿದೆ

೧. ಕನಕದಾಸರ ಕೀರ್ತನೆಗಳು (ಕ. ಕೀ) ಸಂ ಪಂಡಿತರತ್ನಂ ವಿದ್ಯಾವಾರಿಧಿ ಶ್ರೀ ಬಿ. ಶಿವಮೂರ್ತಿ ಶಾಸ್ತ್ರೀ ಮತ್ತು ಡಾ. ಕೆ. ಎಂ. ಕೃಷ್ಣರಾವ್ ಎಂ.ಎ.ಪಿ.ಎಚ್.ಡಿ. ಪ್ರಕಾಶಕರು, ರಾಜ್ಯಸಮಿತಿ ಶ್ರೀಕನಕದಾಸರ ನಾಲ್ಕನೆಯ ಶತಮಾನೋತ್ಸವ ಮೈಸೂರು ಸರ್ಕಾರ, ಬೆಂಗಳೂರು – ೧೯೬೫ ೨. ಶ್ರೀ ಪುರಂದರದಾಸರ ಸಾಹಿತ್ಯ, ಸಂ. ಬೆಟಗೇರಿ ಕೃಷ್ಣಶರ್ಮ ಮತ್ತು ಬೆಂಗೇರಿ ಹುಚ್ಚರಾಯರು. ಶ್ರೀ ಪುರಂದರದಾಸರ ೪೦೦ನೆಯ ವರ್ಷದ ಉತ್ಸವ ಮಂಡಲ, ಧಾರವಾಡ. ೧. ಪೂಜಾತ (ಪೂಜಾ) ೨. ಆರ್ತಭಾವ (ಆರ್ತ) ೩. ಮಾಹಾತ್ಮಜ್ಞಾನ-('ಮಾಹಾ) ೪. ಕೃಷ್ಣಲೀಲಾ (ಕೃಷ್ಣ) ೫. ಲೋಕನೀತಿ (ಲೋಕ) ೬. ಸಂಕೀರ್ಣ (ಸಂ). ಧೀಮಾನ್ ಲಕ್ಷ್ಮಣದಾಸಾಖ್ಯಃ ಶ್ರೀಪುರಂದರದಾಸಜಃ ವಸಿಷ್ಠಗೋತ್ರಜೋ ವೃತ್ತಿಯಮಹಿಯಾಜುಷಃ | ವಸಿಷ್ಠಾನ್ವಯ ಸಂಭೂತಃ ಶ್ರೀಪುರಂದರದಾಸಜಃ ದ್ವ ಹೇಬಣದಾಸಾಯ್ಯೋ ಯಾಜುಷೋತ್ರದ್ವಿವೃತ್ತಿಕಃ |