ಪುಟ:Kanakadasa darshana Vol 1 Pages 561-1028.pdf/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೫೨ ಕನಕ ಸಾಹಿತ್ಯ ದರ್ಶನ-೧ ಕನಕ ಮತ್ತು ಪುರಂದರರ ಕೀರ್ತನೆಗಳು ೯೫೩ ವಸಿಷ್ಠಗೋತ್ರ ಸಂಭೂತಃ ಶ್ರೀಪುರಂದರದಾಸಜಃ ಧೀಮಾನ್ ಮಧ್ವಪದಾಸಾಖಯೋಯಾಜುಷೋತ್ರವೃತ್ತಿಕಂ | ಎನ್ನುವ ಉಲ್ಲೇಖದಿಂದ ಅವರು ಬ್ರಾಹ್ಮಣರೆಂದು ಭಾವಿಸಬಹುದಾಗಿದೆ. ಕನಕದಾಸರನ್ನು ಕುರಿತು ಕುರುಬ, ಕಬ್ಬಲಿಗ, ಬೇಡಜಾತಿಗೆ ಸೇರಿದವರೆಂದು ವಿದ್ವಾಂಸರು ಬಗೆ ಬಗೆಯಾಗಿ ಪ್ರತಿಪಾದಿಸಿದ್ದಾರೆ. ಕುರುಬ ಜಾತಿಗೆ ಸೇರಿದವರೆನ್ನಲು-ಕುರುಬರ ಕುಲದಲ್ಲಿ ಜನಿಸಿದೆನಗೀ ಜನುಮದಲ್ಲಿ ಮುಕ್ತಿ ಎಂತು ಎಂಬೆ (ಕ, ಕೀ. ೯೦), ನಾವು ಕುರುಬರು ನಮ್ಮ ದೇವರೊ ಬೀರಯ್ಯ (ಕ.ಕೀ. ೧೩.೮) ಎನ್ನುವ ಕೀರ್ತನೆಗಳು ಆಧಾರವಾಗಿವೆ. ಕನಕದಾಸನು ಕಬ್ಬಲಿಗನು ಎಂದು ಅಣಕಿಸಿ ನುಡಿಬೇಡಿರಣ್ಣ (ಮಹಾ ೧೭) ಎನ್ನುವ ಪುರಂದರದಾಸರ ಮಾತಿನಿಂದ ಅವರನ್ನು ಕಬ್ಬಲಿಗನೆಂದು ಭಾವಿಸಬಹುದಾಗಿದೆ, ಬೆಟಗೇರಿ ಕೃಷ್ಣಶರ್ಮರು ಮತ್ತು ಬೆಂಗೇರಿ ಹುಚ್ಚರಾಯರು ತಾವು ನಡೆಸಿದ ಕ್ಷೇತ್ರಕಾರ್ಯದಿಂದ ಬೇಡರ ವರ್ಗಕ್ಕೆ ಸೇರಿದ ದಾಸಜಾತಿಯವರಿರಬೇಕೆಂದು ಮಾಹಿತಿಗಳನ್ನು ಒದಗಿಸಿದ್ದಾರೆ. ಆದರೆ ಕನಕದಾಸರೇ ರಚಿಸಿರುವರೆಂದು ಭಾವಿಸಲಾಗಿರುವ-ಕುರುಬರ ಕುಲದಲ್ಲಿ ಜನಿಸಿದೆನಗೀ ಜನುಮದಲ್ಲಿ ಮುಕ್ತಿ ಎಂತು ಎಂಬೆ ಎನ್ನುವ ಮಾತು ಪ್ರಕ್ಷಿಪ್ತವಾಗಿಲ್ಲದಿದ್ದಲ್ಲಿ ಅವರು ಕುರುಬರ ಜಾತಿಗೆ ಸೇರಿದವರೆಂದು ಭಾವಿಸಬಹುದಾಗಿದೆ. ಪುರಂದರದಾಸರು ವ್ಯಾಸರಾಯರಿಂದ ದೀಕ್ಷೆ ಪಡೆದದ್ದು ನಿಜವಾದರೂ ಅವರಿಗೆ ರಾಮಾನುಜ ಪುಣೀತ ಶ್ರೀವೈಷ್ಣವ ಧರ್ಮದ ಪರಿಚಯವಿದ್ದಿತೆನ್ನುವುದಕ್ಕೆಕದವನಿಕ್ಕಿದಳಿದೆಕೊ ಗಯ್ಯಾಳೀ ಮೂಳಿ ಕೀರ್ತನೆಯಲ್ಲಿ ಭಾರತ ರಾಮಾಯಣ ಪಾಂಚರಾತ್ರಾಗಮ ಸಾರಸತ್ವದ ಬಿಂದು ಕಿವಿಗೆ ಬಿದ್ದಿತೆಂದು (ಸಂ. ೧೧೭) ಎನ್ನುವ ಮಾತು ನಿಲ್ಲುತ್ತದೆ. ಆದುದರಿಂದ ಪುರಂದರದಾಸರು ಕರ್ನಾಟಕದಲ್ಲಿ ಪ್ರಚಲಿತವಿದ್ದ ಭಾಗವತ ಧರ್ಮದ ಅನುಯಾಯಿಗಳಾಗಿದ್ದು ಅನಂತರ ಮಧ್ವಮತವನ್ನು ಸ್ವೀಕರಿಸಿರಬಹುದು. ಕನಕದಾಸರು ಆರಂಭದಲ್ಲಿ ಶ್ರೀವೈಷ್ಣವಧರ್ಮದ ಅನುಯಾಯಿಗಳಾಗಿದ್ದುದಕ್ಕೆ ರಾಮಾನುಜ ಮತೋದ್ದಾರಕ ತಾಮಸಗುಣಪಾಶ ಗಿರಿವಜ್ರದಂಡ ಎನ್ನುವ ಕೀರ್ತನೆಯಲ್ಲಿ ಬರುವ ಹರಹರ ಎಂಬ ಶೈವರ ಏಳೂರು ಶಿರಗಳನರಿದನು ನಮ್ಮ ತಾತಯ್ಯ-ಎನ್ನುವಲ್ಲಿ Vc ತಾತಾಚಾರ್ಯರನ್ನು ಸ್ಮರಿಸಿರುವುದು, ವಂದಿಸಿರುವುದು ಕಾರಣವಾಗುತ್ತದೆ. ಅನಂತರದ ಕಾಲದಲ್ಲಿ ಕನಕದಾಸರು ವಾದಿರಾಜರ ಶಿಷ್ಯತ್ವವನ್ನು ವಹಿಸಿ ಮಧ್ವಮತದ ಅನುಯಾಯಿಗಳಾಗಿದ್ದಾರೆ. ಹನುಮಂತ, ಭೀಮ, ಆನಂದತೀರ್ಥರು ಹೀಗೆ ಪರಂಪರೆಯಾಗಿಬರುವ ಮಧ್ವಮತದ ಸಿದ್ಧಾಂತಕ್ಕೆ ಅನುಗುಣವಾಗಿಯೋ ಪುರಂದರ ಮತ್ತು ಕನಕರು ಮಧ್ವಾಚಾರ್ಯರನ್ನು ನೆನೆದಿದ್ದಾರೆ. ಪುರಂದರದಾಸರು, ಕೂಸನು ಕಂಡಿರಾ-ಮುಖ್ಯಪ್ರಾಣನ ಕಂಡಿರಾ (ಪೂಜಾ. ೩೫) ಎನ್ನುವ ಕೀರ್ತನೆಯಲ್ಲಿ ಹನುಮಂತ, ಭೀಮರ ಅನಂತರ ಮಧ್ವಾಚಾರ್ಯರನ್ನು ಮಾಯಾವಾದಿಗಳ ಗೆದ್ದಿತು ಕೂಸು ಮಧ್ವಮತವನ್ನುದ್ದರಿಸಿತು ಕೂಸು ಮುದ್ದು ಶ್ರೀ ಪುರಂದರವಿಠಲನ ದಯದಿಂದ ಉಡುಪಿಯಲ್ಲಿ ಬಂದು ನಿಂತಿತು ಕೂಸು || ೩ || ಎಂದು ಮುಂತಾಗಿ ಸ್ತುತಿಸಿದ್ದರೆ ಕನಕದಾಸರು-ಪರಮಪದವೀವ ಗುರುಮುಖ್ಯ ಪ್ರಾಣ (ಕ, ಕೀ. ೧೦) ಎನ್ನುವ ಕೀರ್ತನೆಯಲ್ಲಿ ಕಲಿಯುಗದಲ್ಲಿ ತುರೀಯಾಶ್ರಮವನೆ ಧರಿಸಿ ಕಲುಷರಾದ ಮಾಯಿಗಳ ಸೋಲಿಸಿ ಬಲವಾದ ಮಧ್ವಮತವನ್ನು ಬಲಿದೆಂದೆನಿಸಿ ಕಾಗಿ ನೆಲೆಯಾದಿಕೇಶವನೆ ವರದೈವವೆನಿಸಿ || ೩ || ಎನ್ನುವಂತಹ ಕೀರ್ತನೆ (ಕ. ಕೀ, ೧೩) ಗಳನ್ನು ರಚಿಸಿದ್ದಾರೆ. ಭಕ್ತನು ದೈವಸಾಕ್ಷಾತ್ಕಾರವನ್ನು ಶ್ರವಣ, ಕೀರ್ತನ, ಸ್ಮರಣ, ಪಾದಸೇವನ ಅರ್ಚನ, ವಂದನ, ದಾಸ್ಯ, ಸಖ್ಯ, ಆತ್ಮನಿವೇದನ ಎಂಬ ನವವಿಧ ಭಕ್ತಿಗಳ ಮೂಲಕ ಪಡೆಯಬಹುದೆಂದು ಭಾರತೀಯ ಧರ್ಮಪರಂಪರೆ ಭಾವಿಸುತ್ತದೆ. ಅಂತೆಯೇ ಮಧ್ವಮತದವರೂ ಕೂಡ ಅದನ್ನು ಅಂಗೀಕರಿಸಿದ್ದಾರೆ. ಪುರಂದರದಾಸರು-ಹರಿಯ ಒಂಬತ್ತು ಭಕ್ತಿಯ ಬಲ್ಲ ಧೀರ, ಮರಳಿ ಸಂಸ್ಕೃತಿಯ ದಾರಿಗೆ ಹುಟ್ಟಿ ಬಾರ (ಮಾಹಾ೧) ಎನ್ನುವ ಕೀರ್ತನೆಯಲ್ಲಿ ನವವಿಧಭಕ್ತಿಯ ಸ್ವರೂಪವನ್ನು ವಿವರ ವಿವರವಾಗಿ ವರ್ಣಿಸಿ ಕಡೆಯಲ್ಲಿ ಹರಿಕಥಾಶ್ರವಣವು ಹರಿನಾಮಸಂಕೀರ್ತನೆ ಹರಿಪಾದ ಸೇವನ ಹರಿಪೂಜನ ವಂದನ ದಾಸ್ಯ ಸಖ್ಯತ್ವ

  • 'ಎಪಿಗ್ರಾಫಿಯ ಇಂಡಿಕ, ಸಂಪುಟ ೩೧, ಸಂಚಿಕೆ ೩, ಶ್ಲೋಕ ೧೭೮-೧೮೦.