ಪುಟ:Kanakadasa darshana Vol 1 Pages 561-1028.pdf/೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೬೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೀರ್ತನೆಗಳ ಶಬ್ದ ಶಿಲ್ಪ ೫೬೫ ಗ್ರಹಿಸಲು ಯತ್ನಿಸಬಹುದು. ಚರ್ಚೆಯ ಸೌಲಭ್ಯಕ್ಕಾಗಿ ಇಬ್ಬರು ಕನಕದಾಸರನ್ನು ಗುರುತಿಸಿಕೊಳ್ಳೋಣ. ಒಬ್ಬ ಕಥಕ ಮತ್ತೊಬ್ಬ ಕೀರ್ತನಕಾರ. ಈ ಮಾತುಗಳನ್ನು ವ್ಯಾವಹಾರಿಕವಾದ ನೆಲೆಯಲ್ಲಿ ಬಳಸಿಲ್ಲ. ಕೀರ್ತನೆಗಳನ್ನು ರಚಿಸಿದ ಕನಕದಾಸರಲ್ಲೂ 'ಕಥಕ ಸ್ವರೂಪವಿದೆ. ಹಾಗೆಯೇ ಕಥನ ಪ್ರಧಾನ ಕೃತಿಗಳಲ್ಲೂ “ಕೀರ್ತನಕಾರರ ಅಂಶವಿದೆ. ಈ ಇಬ್ಬರೂ ಕನಕದಾಸರ ರಚನೆಗಳಲ್ಲಿ ಸಮಾನವಾದ ರೂಪ ಸಂಬಂಧ ವಾದ ಸಂಗತಿಗಳನ್ನು ಮೊದಲು ಗಮನಿಸಬಹುದು. ಮಾತ್ರಾಲಯ ಹಾಗೂ ಅಂಶಲಯಗಳೆರಡನ್ನೂ ತಮ್ಮ ಕೃತಿಗಳಲ್ಲಿ ಕನಕದಾಸರು ಬಳಸಿದ್ದಾರಷ್ಟೆ ಇವುಗಳಲ್ಲಿ ಯಾವುದೇ ಲಯವಿರಲಿ, ಆ ರಚನೆಯ ಪದ್ಯ ಇಲ್ಲವೇ ಚರಣಗಳು ಎರಡು ಬಗೆಯ ಚೌಕಟ್ಟುಗಳನ್ನು ಹೊಂದಿರುತ್ತವೆ. ಒಂದು ಲಯದ ಬಂಧವಾದರೆ ಇನ್ನೊಂದು ವರ್ಣಿತ ಇಲ್ಲವೇ ಕಥಿತ ವಸ್ತು. ಈ ಎರಡೂ ಚೌಕಟ್ಟುಗಳಿಗೆ ಅನುಗುಣವಾದ ಸೂಕ್ತ ಭಾಷಾಶರೀರದ ನಿರ್ಮಾಣವೇ ಕವಿಯಾಗಿ ಕನಕದಾಸರ ಮುಖ್ಯ ಆಸಕ್ತಿಯಾಗುತ್ತದೆ. ಎಂದರೆ ಇಲ್ಲಿ ನಿಯಂತ್ರಕವಾಗಿ ಕೆಲಸ ಮಾಡುವುದು ಲಯದ ಬಂಧ, ಆ ಬಂಧದ ಸಾಧ್ಯತೆಗಳು, ಅಂತಸ್ಥವಾಗಿರುವ ಒಂದು ಮಿತಿಯ ಸ್ವಾತಂತ್ರ್ಯ ಇವಿಷ್ಟು ಭಾಷೆಗೆ ಪ್ರಥಮ ಹಂತದ ಕಾವ್ಯತ್ವವನ್ನು ಒದಗಿಸುತ್ತವೆ. ಲಂರದ ಬಂಧದೊಂದು ಮಾದರಿಯನ್ನು ನೋಡೋಣ. ಮಾತ್ರಾಲಯದ ಭಾಮಿನಿ ಷಟ್ಟದಿಯನ್ನು ಕನಕದಾಸರು ತಮ್ಮ ಕೃತಿಗಳಲ್ಲಿ ಬಳಸಿದ್ದಾರೆ. ಭಾಮಿನಿಯ ಓಟದ ನಿಯತತೆಯಲ್ಲಿ ೩-೪ ಮಾತ್ರೆಯ ಲಯವನ್ನು ಪರಿವೃತ್ತಿಗೊಳಿಸುವಷ್ಟು ಮಾತ್ರ ಸ್ವಾತಂತ್ರ್ಯವಿರುತ್ತದೆ. ಉಳಿದಂತೆ ಸಿಗುವ ಸ್ವಾತಂತ್ರ್ಯವೆಲ್ಲ ನಡುಗನ್ನಡ ಲಕ್ಷಣಗಳಿಂದ ಒದಗಿ ಬರುವಂಥದು, ನಡುಗನ್ನಡ ಪ್ರತ್ಯಯಗಳ ರೂಪಬಾಹುಳ್ಯ ಮತ್ತು ಅವುಗಳ ಮುಕ್ತ ಪ್ರಸಾರ ಇಲ್ಲಿ ಗಮನಿಸಬಹುದಾದ ಒಂದು ನಿದರ್ಶನ, ಸಪ್ತಮಿ ವಿಭಕ್ತಿಯ ಪ್ರತ್ಯಯ ಇ / ಒಳು / ಒಳಗೆ / ಅಲಿ | ಅಲ್ಲಿ ಹೀಗೆ ಐದು ರೂಪಗಳಲ್ಲಿ ಬಳಕೆಯಾಗಬಹುದು. ಒಂದು, ಎರಡು ಮತ್ತು ಮೂರು ಮಾತ್ರೆಗಳ ರೂಪಸಾಧ್ಯತೆಯ ಜತೆಗೆ ಪ್ರಾಸದ ಪ್ರಶ್ನೆಯನ್ನು ಪರಿಹರಿಸಿಕೊಳ್ಳಲು ಇಲ್ಲಿ ಪರಾಯಗಳೂ ಒದಗುತ್ತವೆ. ಇದಲ್ಲದೆ ಪದಕೋಶದಲ್ಲಿ, ಅದರಲ್ಲೂ ನಾಮಪದ ಕೋಶದಲ್ಲಿ ಆಯ್ಕೆಯ ಸಾಧ್ಯತೆ ಇರುವುದರಿಂದಲೂ ಲಯದ ಕೋರಿಕೆಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಉದಾ : ಲಕ್ಷ್ಮೀಶ, ಲಕ್ಷ್ಮೀಪತಿ, ಲಕ್ಷ್ಮೀರಮಣ ಈ ಪದಗಳಲ್ಲಿ ಆಯ್ಕೆ ಮುಖ್ಯವಾಗಿ ಲಯದ ನೆಲೆಯದ್ದು ತಾನೇ? ಈ ಆಯ್ಕೆ ಕಾವ್ಯಾತ್ಮಕವಾಗಿ ನಿಯೋಗವನ್ನು ಪಡೆಯುವುದು ಕನಕದಾಸರಲ್ಲಿ ಅಪರೂಪ. ಇಷ್ಟು ಮಾತುಗಳ ಹಿನ್ನೆಲೆಯಲ್ಲಿ ಕೀರ್ತನೆಗಳನ್ನು ಗಮನಿಸಬಹುದು. ಇಲ್ಲಿನ ಚರ್ಚೆಗೆ ಹರಿಭಕ್ತಸಾರವನ್ನೂ ಕೀರ್ತನೆ-ಸ್ತೋತ್ರ ಎಂಬ ಅರ್ಥದಲ್ಲಿಎಂದು ಪರಿಗಣಿಸಲಾಗಿದೆ. ಕೀರ್ತನೆಗಳ ಬಂಧ ಹಾಗೂ ಶಿಲ್ಪ ನಿಯತವಾದುದು. ಇದು ವಸ್ತು ಹಾಗೂ ಲಯ ಎರಡಕ್ಕೂ ಅನ್ವಯಿಸುವ ಮಾತು. ಪಲ್ಲವಿ ಅನುಪಲ್ಲವಿಗಳು ಭಾಷಿಕರಚನೆ ಹಾಗೂ ಅರ್ಥಸಾಧ್ಯತೆಗಳೆರಡರಲ್ಲೂ ಕೀರ್ತನೆಯ ಮುಂದಿನ ಚರಣಗಳನ್ನು ನಿಯಂತ್ರಿಸುತ್ತವೆ. ಇಲ್ಲಿ ಕನಕದಾಸರು ಪಡೆದುಕೊಂಡಿರುವ ಸ್ವಾತ೦ತ್ರ ಚರಣಗಳ ಸಂಖ್ಯೆಯನ್ನು ಅನಿಯತಗೊಳಿಸುವುದರಲ್ಲಿದೆ. ಹೀಗಾಗಿ ಸಂವೃತ ಬಂಧವನ್ನು ತೋರಿಕೆಯ ವಿವೃತತೆಗೆ ವರ್ಗಾಯಿಸಿದಂತಾಗಿದೆ. ಇದಲ್ಲದೆ ಭಾಷಿಕ ರಚನೆಯ ಹಂತದಲ್ಲೂ ಕನಕದಾಸರು ಕೆಲವು ಸಾಧ್ಯತೆಗಳನ್ನು ಬಳಸಿ ಕೀರ್ತನೆಯ ಶಿಲ್ಪಕ್ಕೆ ವಿವೃತತೆಯನ್ನು ತಂದು ಕೊಡಲು ಯತ್ನಿಸುತ್ತಾರೆ. ಪುರಾಣ, ಮಹಾಕಾವ್ಯಗಳು ಮತ್ತು ಭಾಗವತಇವುಗಳ ಕಥಾಭಾಗಗಳನ್ನೂ ಪೂರ್ವಾವಲೋಕಿಸಲು ಸಾಧ್ಯವಾಗುವಂಥ ವಾಕ್ಯಗಳು ಅವರ ಕೀರ್ತನೆಗಳಲ್ಲಿ ಬರುವುದನ್ನು ಇಲ್ಲಿ ನಿದರ್ಶನವಾಗಿ ಉಲ್ಲೇಖಿಸಬಹುದು. ಇಂಥ ಕಡೆ ಕಥನವನ್ನು ನಿರ್ವಹಿಸುವ ವಿಧಾನದಲ್ಲಿ ನಾವೀನ್ಯವಿರುತ್ತದೆ. ಸಾಮಾನ್ಯ ಕಥನದಲ್ಲಿ ವಾಕ್ಯಗಳು, ಮಾತುಗಳು ಕಥಾಭಾಗವನ್ನು ವಿವರಿಸುವ ಕೊಂಡಿಗಳಾಗಿ ಕೆಲಸಮಾಡುತ್ತವೆ. ಆದರೆ ಕೀರ್ತನೆಗಳಲ್ಲಿ ಕಥನದ ಉಲ್ಲೇಖ ಬಂದರೆ ಅವು ವ್ಯಾಖ್ಯಾನವನ್ನು ರೂಪಿಸುವ, ಆ ಮೂಲಕ ಪಲ್ಲವಿಯ ಮುಖ್ಯಧಾಟಿಗೆ ನೆರವಾಗುವ ಸತ್ಯವನ್ನು ಕಟ್ಟಿಕೊಡುತ್ತಿರುತ್ತವೆ. ಕರಿಪತಿಯ ಸರಸಿಯೊಳು ಮೊಸಳೆ ಪಿಡಿಯಲು ಭರದಿ ಪರಮಪುರುಷ ಜಗತ್ಪತಿಯೆನಲು ಗರುಡವಾಹನನಾಗಿ ಹರಿ ಬಂದವನ ಕಾಯ್ದು.... ಈ ಸಾಲು ಪ್ರಸಿದ್ದ ಪ್ರಸಂಗವನ್ನು ಉಲ್ಲೇಖಿಸುತ್ತದೆ ; ವಿವರಿಸುವುದಿಲ್ಲ. ಕೇವಲ ಕಥನವಷ್ಟೇ ಇಲ್ಲಿ ಮುಖ್ಯವಲ್ಲ. ಬದಲಿಗೆ ಹಾಗೂ ಜೊತೆಗೆ ಆ ಸಂದರ್ಭವನ್ನು ವ್ಯಾಖ್ಯಾನಿಸುವ ಆಸಕ್ತಿ ಕೂಡ ಇಲ್ಲಿದೆ. ಅಂದರೆ ಮೊಸಳೆಯನ್ನು ರಕ್ಷಿಸಿದ ಘಟನೆ ಮತ್ತೆ ಮತ್ತೆ ಬೇರೆ ಬೇರೆ ಪಾತ್ರಗಳ ಸಂದರ್ಭದಲ್ಲಿ 3