ಪುಟ:Kanakadasa darshana Vol 1 Pages 561-1028.pdf/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೬೪ ಕನಕ ಸಾಹಿತ್ಯ ದರ್ಶನ-೧ ಕನಕ ಮತ್ತು ಪುರಂದರರ ಕೀರ್ತನೆಗಳು ೯೬೫ ಎನ್ನುವ ಕೀರ್ತನೆಯಲ್ಲಿ ಯಮನದೂತರು ಬಂದು ಎಳೆಯುವಾಗ ಹೆಂಡತಿ, ಮಕ್ಕಳು, ಮಂಡೆತುಂಬ ಬಂಧು ಬಳಗ ಇವರಲ್ಲಿ ಯಾರು ಕಂಡು ಬಿಡಿಸಿಕೊಳ್ಳುತ್ತಾರೆ. ಬತ್ತಲಿಂದ ಬಂದು ಬತ್ತಲೆ ಹೋಗುತ್ತಾರೆ. ಆದುದರಿಂದಪರಮಗುರು ಚೆನ್ನಾದಿ ಕೇಶವಚರಣ ಭಜಿಸಿ ಚಂಚಲವಳಿದು ವರವ ಪಡೆದು ಹೊಂದು ಮುಕುತಿ ಎಂದು ಮಾರ್ಗದರ್ಶನ ನೀಡಿದ್ದಾರೆ. ಪ್ರಪಂಚದ ನಶ್ವರತೆಯನ್ನು ದೇಹದ ಅನಿತ್ಯತೆಯನ್ನು ಬಲ್ಲ ಪುರಂದರದಾಸರು ಮತ್ತು ಕನಕದಾಸರು ಆ ನಿಟ್ಟಿನಲ್ಲಿ ಕೂಡ ಕೀರ್ತನೆಗಳನ್ನು ರಚಿಸಿದ್ದಾರೆ. ಪುರಂದರ ದಾಸರು ಗಾಳಿಗಿಕ್ಕಿದ ದೀವಿಗೆಯಂತೆ ಈ ದೇಹ ನಿತ್ಯವಲ್ಲ ನಿತ್ಯವಲ್ಲ ಅನಿತ್ಯ (ಆರ್ತ-೫೮೦) ಎಂದಿದ್ದರೆ, ಕನಕದಾಸರು ಏನು ಇಲ್ಲದ ಎರಡು ದಿನದ ಸಂಸಾರವೆಂದಿದ್ದಾರೆ. ಡಿಂಬದಲ್ಲಿರುವ ಜೀವ ಕಂಬ ಸೂತ್ರಗೊಂಬೆ (ಕ.ಕೀ. ೫೮) ಯಾದುದರಿಂದ ಶರೀರ ಮೋಹವನ್ನು ತೊರೆಯಬೇಕು ಎಂಬುದು ಕನಕದಾಸರ ನಿಲುವು. ರೋಗರುಜಿನಗಳಿಗೆ ಆಗರವಾದ ಈ ಶರೀರ ಭಕ್ತಿಸಾಧನೆಯಲ್ಲಿ ಅಡ್ಡಿ ಆತಂಕ ಎಂದು ಭಾವಿಸಿದುದುಂಟು. ಪುರಂದರದಾಸರು-ಈ ಶರೀರದ ಭ್ರಾಂತಿ ಇನ್ನೇಕೆ ಮನವೆ ವಾಸುದೇವನ ನೆನೆದು ಸುಖಿಯಾಗು ಮನವೆ (ಆರ್ತ. ೩೭) ಎನ್ನುವ ಕೀರ್ತನೆಯಲ್ಲಿ ಕಾಲು ಜವಗುಂದಿದುವು, ದೃಷ್ಟಿಗಳು ಹಿಂಗಿದುವು, ಜವನ ಜಾರಿ ಜರೆಯೊದಗಿತು, ಕಾಲಕರ್ಮಾದಿಗಳು ಕೂಡಿದ ಕ್ಷಣದಲ್ಲಿ ಬೀಳುವ ಈ ತನುವಿನಲ್ಲಿ ಇನ್ನೇಕೆ ಆಸೆ ಎಂದಿದ್ದಾರೆ. ನೀರಬೊಬ್ಬುಳಿಯಂತೆ ನಿತ್ಯವಲ್ಲ ಈ ದೇಹ ಎನ್ನುವ ಪುರಂದರ ನಿಲುವನ್ನೇ ಅಂಗೀಕರಿಸಿದ ಕನಕದಾಸರುತಲ್ಲಣಿಸದಿರು ಕಂಡ್ಯ ತಾಳು ಮನವೆ ಎಲ್ಲರನು ಸಲಹುವನು ಶ್ರೀನಿವಾಸ ಎನ್ನುವ ಕೀರ್ತನೆಯಲ್ಲಿ ಬೆಟ್ಟದ ತುದಿಯ ಮರಕ್ಕೆ ನೀರೆರೆದವರು ಯಾರು, ಕಲ್ಲಿನೊಳಗೆ ಹುಟ್ಟಿ ಕೂಗುವ ಕಪ್ಪೆಗೆ ಆಹಾರವೀಯುವವರು ಯಾರುಆದುದರಿಂದ ಯೋಚಿಸಬೇಡ ಬಲ್ಲಿದ ಆದಿಕೇಶವರಾಯ ಎಲ್ಲರನು ಸಲಹುವನು ಎಂದಿದ್ದಾರೆ. ಪುರಂದರದಾಸರ ಚಿಂತೆ ಏತಕೊ-ಬಯಲು ಭ್ರಾಂತಿ ಏತಕೊ ಎನ್ನುವ ಕೀರ್ತನೆಯಲ್ಲಿ ಇದೇ ಬಗೆಯ ಭಾವನೆಗಳು ಮೂಡಿಬಂದಿವೆ. ಇಂತಹ ಭದ್ರವಾದ ಬೆಲೆಗಟ್ಟಿನ ಮೇಲೆ ಸಾಧನೆಗೆ ತೊಡಗಿದ ದಾಸರು ತೀರ್ಥಯಾತ್ರೆಗಳನ್ನು ನಡೆಸಿದುದುಂಟು. ಪುರಂದರದಾಸರು ಕರ್ನಾಟಕದಲ್ಲಿ ಮಾತ್ರವಲ್ಲದೆ ಆಸೇತುಹಿಮಾಚಲ ತೀರ್ಥಯಾತ್ರೆ ಮಾಡಿ ಅಲ್ಲಿನ ದೇವತೆಗಳಿಗೆ ಸೇವೆ ಸಲ್ಲಿಸಿದುದಕ್ಕೆ ಅವರ ಕೀರ್ತನೆಗಳಲ್ಲಿ ಆಧಾರಗಳು ಸಿಗುತ್ತವೆ, ಆರಿಗೆ ವಧುವಾದೆ ಅಂಬುಜಾಕ್ಷಿ ಕ್ಷೀರಾಬ್ಲಿ ಕನ್ನಿಕೆ ಮಹಾಲಕುಮಿ (ಪೂಜಾ, ೨) ಎನ್ನುವ ಕೀರ್ತನೆ ಅಂತಹ ಕೀರ್ತನೆಗಳಲ್ಲಿ ಒಂದು. ಇಲ್ಲಿ ಬರುವ ಕ್ಷೇತ್ರಗಳನ್ನು ಹೀಗೆ ಪಟ್ಟಿ ಮಾಡಬಹುದಾಗಿದೆ-ಶರಧಿ ಬಂಧನ ರಾಮಮೂರುತಿ-ರಾಮೇಶ್ವರ, ಅನಂತ ಪದ್ಮನಾಭ-ತಿರುವನಂತಪುರ, ಎರಡು ಹೊಳೆಯ ರಂಗಪಟ್ಟಣಶ್ರೀರಂಗಪಟ್ಟಣ, ಬೇಲೂರು ಚೆನ್ನಗರಾಯ, ಉಡುಪಿಯ ಕೃಷ್ಣ, ಪಂಢರಪುರ ವಿಠಲ, ಬದರೀನಾರಾಯಣ, ಬಿಂದುಮಾಧವ-ಕಾಶಿ, ಪುರುಷೋತ್ತಮ-ಜಗನ್ನಾಥಪುರಿ, ವೆಂಕಟೇಶ-ತಿರುಪತಿ, ಕಂಚಿ ವರದರಾಜ, ಮುಷ್ಟದ ಆದಿವರಾಹ, ಶ್ರೀರಂಗನಾಯಕ-ಶ್ರೀರಂಗ, ರಾಜಗೋಪಾಲಮನ್ನಾರುಗುಡಿ ಹೀಗೆ ಹಲವಾರು ಕ್ಷೇತ್ರಗಳ ಉಲ್ಲೇಖ ಅವರ ಕೀರ್ತನೆಗಳಲ್ಲಿ ಕಂಡುಬರುತ್ತವೆ. ಕನಕದಾಸರು ಪುರಂದರದಾಸರಷ್ಟು ವ್ಯಾಪಕವಾಗಿ ಪ್ರವಾಸ ಮಾಡಿದುದಕ್ಕೆ ಅವರ ಕೀರ್ತನೆಗಳಲ್ಲಿ ಸಾಕಷ್ಟು ಆಧಾರ ಸಿಗುವುದಿಲ್ಲ. ಕನಕದಾಸರು ಕಾಗಿನೆಲೆ (ಕ.ಕೀ.೨), ಬಾಡ (೧೨೮) ಕದರಮಂಡಲಗಿ (೧೮) ತಿರುಪತಿಯ ನಾಮಾಂತರಗಳಾದ ಶೇಷಾಚಲ (೨೨) ತಿರುಪತಿ (೨೭) ಶೇಷಗಿರಿ (೩೮) ಕನಕಾದ್ರಿ (೪೦) ಉರಗಗಿರಿ (೨೩೨)ಗಳು, ಮುತ್ತತ್ತಿ (೭) ವೇಲಾಪುರ (೭೯) ಶ್ರೀರಂಗಪಟ್ಟಣ (೮) ವಿಜಯನಗರ (೧೪೨) ಮೇಲುಕೋಟೆಯ ನಾಮಾಂತರಗಳಾದ ಯದುಶೈಲ (೧೪೬) ಯಾದವಗಿರಿ (೨೦)ಗಳು, ಕದಳಿ (೧೪೯) ಬಂಕಾಪುರ (೧೯೪) ತಿರುಕೊ ವಲೂರು (೨೩೦) ಬಿಳಿಗಿರಿಯವಾಸ (= ಬಿಳಿಗಿರಿರಂಗನ ಬೆಟ್ಟ, ೨೩೧) ಎನ್ನುವ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದುದಾಗಿ ಅವರ ಕೀರ್ತನೆಗಳಿಂದ ತಿಳಿದುಬರುತ್ತದೆ. ಈ ಆಧಾರಗಳನ್ನು ನೋಡಿದಾಗ ಕನಕದಾಸರು ಉಡುಪಿಗೆ ಹೋಗಿದ್ದರೆ ಎನ್ನುವುದು ಪ್ರಶ್ನಾರ್ಹವಾಗಿಯೇ ಉಳಿಯುತ್ತದೆ. ಕನಕದಾಸರು ವ್ಯಾಪಕವಾಗಿ ತೀರ್ಥಯಾತ್ರೆ ಮಾಡದಿರುವುದಕ್ಕೆಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ ದೇಶ ದೇಶ ಸುತ್ತಿದರೆ ಫಲವೇನೊ ಈ ಛಲವೇನೊ | (ಕ.ಕೀ. ೧೦೪) ಮತ್ತು-ನೂರೆಂಟು ತಿರುಪತಿಯ ಯಾತ್ರೆಯನ್ನು ಮಾಡುವುದ ನಾನೊಲ್ಲೆ (ಕ. ಕೀ. ೨೦೮) ಎನ್ನುವ ಅವರ ನಿಲುವೇ ಕಾರಣವೆಂದು ಭಾವಿಸಬಹುದಾಗಿದೆ. ಪುರಂದರದಾಸರಾಗಲಿ ಕನಕದಾಸರಾಗಲಿ ಪರಮಾತ್ಮನ ಮೂಲರೂಪಕ್ಕೂ ಅವತಾರ ರೂಪಕ್ಕೂ ಅಭೇದವೆನ್ನುವ ದೈತಶಾಸ್ತ್ರದ ಮುಖ್ಯ