ಪುಟ:Kanakadasa darshana Vol 1 Pages 561-1028.pdf/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೭೨ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೀರ್ತನೆಗಳ ಕಳವು ೯೭೩ ಕರುಣಿ ಕೃಪಾಳು ಕಾಗಿನೆಲೆಯಾದಿಕೇಶವನ ಚರಣ ಕಮಲವ ನಂಬಿ ಸುಖಿಯಾಗು ಮನವೇ || ೫ || (ಪು. 16-17) ಆ) ರಾಗ-ಮಧ್ಯಮಾವತಿ ತಾಳ-ಆಟ ಆರು ಬಾರರು ಸಂಗಡಿಬ್ಬರು ನಾರಾಯಣದ ದಿವ್ಯನಾಮ ಒಂದಲ್ಲದೆ | ಪ || ಹೊತ್ತು ನವಮಾಸ ಪರಿಯಂತ ಗರ್ಭದಲಿ ಅತ್ಯಂತ ನೋವು ಬೇನೆಗಳ ತಿಂದು ತುತ್ತು ಬುತ್ತಿಯ ಕೊಟ್ಟು ಸಲಹಿದ ತಾಯಿಯು ಅತ್ತು ಕಳುಹುವಳಲ್ಲದೆ ಸಂಗಡ ಬಾರಳು ಮನೆ ಮಕ್ಕಳಿವರೆನ್ನ ತನುವು ಒಡವೆ ಎರಡು ಘನವಾಗಿ ನಂಬಿರೆ ನನ್ನವೆಂದು ಅನುಮಾನವೇತಕೆ ಜೀವ ಹೋದ ಬಳಿಕ ಘನ ಹೊತ್ತು ಮನೆಯಲ್ಲಿ ಇರಿಸಿಕೊಳ್ಳರೊ ದೇವ || ೨ || ಇವೆರಡೂ ಹಾಡುಗಳೂ ಒಂದೇ ಮೂಲದ ನಕಲುಗಳು ; ಒಂದು ಇನ್ನೊಂದರ ನಿಜ ಪ್ರತಿ. 'ಅ'ದಲ್ಲಿರುವ ಚರಣಗಳು 'ಆ'ದಲ್ಲೂ ಇದೆ, ಪಲ್ಲವಿಯೂ ಅಷ್ಟೆ, ರಾಗ ಮತ್ತು ತಾಳ ಕೂಡ ಎರಡರಲ್ಲೂ ಸಮಾನ. 'ಅ'ದಲ್ಲಿ ಆಡು ಮಾತಿನ ಗತ್ತೂ, 'ಆ'ದಲ್ಲಿ ಶಿಷ್ಟದ ಒತ್ತೂ ಇದೆ. ಚರಣಗಳ ಆನುಪೂರ್ವಿ 'ಆ'ದಲ್ಲಿ (ಸಂಖ್ಯೆ) ಅದಲು ಬದಲು ಆಗಿದೆ ; ಎರಡನೆಯ ಚರಣ ಮೂರನೆಯದೂ, ನಾಲ್ಕನೆಯದು ಎರಡನೆಯದೂ ಆಗಿದೆ. ಅಲ್ಲದೆ 'ಅ'ದಲ್ಲಿ ಶೈಲಿಯ ಶೈಥಿಲ್ಯವೂ, ಆಧುನಿಕ ಕನ್ನಡದ ರಚನೆಯೂ ವ್ಯಕ್ತಗೊಂಡಿದ್ದು ಇದರಲ್ಲಿ ಅನ್ಯರ ಕೈವಾಡವಿರುವ ಗುಮಾನಿಗೆ ಅವಕಾಶವಾಗಿದೆ. 'ಆ'ದಲ್ಲಿ ಎಷ್ಟೇ ಶಿಷ್ಟಪರ ರಚನೆಗೆ ಒಲವು ತೋರಿದ್ದರೂ 'ಅ'ದ ಪಲ್ಲವಿ ಮತ್ತು ಮೂರನೆಯ ಚರಣಾಂತ್ಯದ 'ಬಾಹೋರಲ್ಲದೆ' ಎಂಬುದು ನಿಶ್ಚಯವಾಗಿಯೂ 'ಅ'ದ ಎರವಲು ಮಾತಷ್ಟೇ ಅಲ್ಲ, ಇಡೀ 'ಆ'ದ ಶಿಲ್ಪಕ್ಕೆ 'ಅ'ದ ನಕಾಶೆಯೇ ಮೂಲವೆಂಬ ಸುಳಿವು ಕೊಡುವ ಮಾತೂ ಆಗಿದೆ. ೨. ಅ. ರಾಗ-ಸೌರಾಷ್ಟ್ರ ತಾಳ-ಏಕ ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ | ಪ || ನೆಲ್ಲುಗಳ ಕುಟ್ಟಿಕೊಂಡು ಬಿದುರುಗಳ ಹೊತ್ತುಕೊಂಡು ಕೂಲಿಗಳ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ || ೧ || ನಾಲಕು ವೇದ ಪುರಾಣ ಶಾಸ್ತ್ರ ಪಂಚಾಂಗ ಹೇಳಿಕೊಂಡು ಕಾಲ ಕಳೆಯುವುದೆಲ್ಲ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ || ೨ || ಬಡಿದು ಬಡಿದು ಕಬ್ಬಿಣವ ಕಾಸಿ ತುಬಾಕಿ ಮಾಡಿ ಹೊಡೆವ ಗುಂಡು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ || ೩ || ಚಂಡಭಟರೆಲ್ಲ ಮುಂದೆ ಕತ್ತಿ ಹರಿಗೆಯ ಪಿಡಿದು ಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ.. || ೪ || ದೊಡ್ಡ ದೊಡ್ಡ ಕುದುರೆಯನೇರಿ ನೇಜೆ ಹೊತ್ತು ರಾಹುತನಾಗಿ ಹೊಡೆದಾಡಿ ಸಾಯುವುದು... || ೫ || ಕುಂಟೆ ಕೂರಿಗೆಯಿಂದ ಹೆಂಟೆ ಮಣ್ಣ ಹದ ಮಾಡಿ ರಂಟೆ ಹೊಡೆದು ಬೆಳೆಸುವುದು... || ೬ || ಕೆಟ್ಟತನದಿಂದ ಕಳ್ಳತನವನ್ನೆ ಮಾಡಿ ಕಟ್ಟಿ ಹೊಡಿಸಿಕೊಂಬುವುದು... | ೭ || ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ ಆತ್ಮ ಬಳಲಿದಾಗ ಬಂಧುಗಳು ಬಂದು ಹೊತ್ತು ಹೊರಗೆ ಸಾಕು ಎಂತೆಂಬರು ಹೊತ್ತುಕೊಂಡು ಹೋಗಿ ಅಗ್ನಿಯಲ್ಲಿ ಬಿಸುಟಿ ಮತ್ತೆ ಬೆನ್ನನು ತಿರುಗದಲೆ ಬಾಹೊರಲ್ಲದೆ ನೆರೆದಿದ್ದ ಪುರಜನ ವಿಪ್ರರಗ್ನಿಯ ಸಾಕ್ಷಿ ಕರವಿಡಿದು ಕೈಧಾರೆ ಎರಸಿಕೊಂಡು ತರುಣಿ ತನ್ನಯ ಗಂಡನನು ಮುಟ್ಟಲಮ್ಮದೆ ನೆರೆ ಏನುಗತಿ ಗತಿ ತನಗೆ ಹೇಳಲಮ್ಮಳಲ್ಲದೆ ಹರಣ ಹೋಗದ ಮುನ್ನ ಹರಿಯ ಸೇವೆಯ ಮಾಡಿ ಪರಲೋಕ ಸಾಯುಜ್ಯ ಪಡೆದುಕೊಂಡು ಕರುಣಿ ಕೃಪಾಳು ಶ್ರೀಪುರಂದರ ವಿಠಲನ ನೆರೆ ನಂಬಿ ಭಜಿಸಿ ನೀ ಸುಖಿಯಾಗೊ ಮನುಜಾ || ೫ || (ಪು. 89-90)