ಪುಟ:Kanakadasa darshana Vol 1 Pages 561-1028.pdf/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೧೬ ಕನಕ ಸಾಹಿತ್ಯ ದರ್ಶನ-೧ ಕನಕಸೂಕ್ತಿ ಸಂಚಯ ೧೦೧೭ ರಂಜಕದ ಬೇರಿಗೆ ರಾಗ ಮೂವತ್ತೆರಡು || ಕುಂಜರದ ಗಮನೆಯರು ಪೇಳುಗೋವಿಂದ. ೫) ಮರವನು ನುಂಗುವ ಪಕಿ ಮನೆಯೊಳಗೆ ಬಂದಿದೆ. ಒಂಟಿಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲ | ಗಂಟಲು ಮೂರುಂಟು ಮೂಗು ಇಲ್ಲ || ಕುಂಟು ಮನುಜರಂತೆ ಕುಳಿತಿಹುದು ಮನೆಯೊಳಗೆ | ಎಂಟು ಹತ್ತರ ಭಕ್ಷ ಭಕ್ಷಿಸುವುದು. ೬) ನನ್ನವ್ವ ಕಲ್ಲಬಿಡೆ | ಈ ಧೋತ್ರವ ಚೆನ್ನಾಗಿ ಒಗೆಯಬೇಕು. ಉಟ್ಟ ಧೋತ್ರವು ಮಾಸಿತು | ಮನದೊಳಗಿರುವೊ | ದುಷ್ಪರೈವರುಗಳಿಂದ | ಕಷ್ಟದುರಿತಗಳು | ಬಿಟ್ಟು ಹೋಗುವ ಹಾಗೆ ಮುಟ್ಟಿ ಜಲದೊಳು | ಗಟ್ಟಾಗಿ ಒಗೆಯಬೇಕು. ಪಕ್ಷಿ ಬಂದಿದೆ ಗಂಡಭೇರುಂಡ ತನ್ನ | ಕುಕ್ಷಿಯೊಳೀರೇಳು ಜಗವನಿಂಬಿಟ್ಟಂಥ - ಜಾತಿಸೂತಕವೆಂಬ ತ್ರಿಮಲಕ್ಕೆ ಶೂಲದಂತಹ ಪರವಸ್ತು. ಆರೆರಡು ದಂತಿಗಳು ದಾರಿಯಲಿ ನಿಂತಿಹವು ಆರು ಮೂರು ತುರುಗಳು ದಾರಿಗೊಡವು. ೯) ಅತಿಥಿಗಾದರಿಸುವವನೆ ಅತಿಲುಬ್ದನು. ೧೦) ಕೆರೆಕಟ್ಟೆ ಪೂದೋಟ ರಚಿಸುವವನೇ ದ್ರೋಹಿ. ೧೨) ಗುರುಹಿರಿಯರ ಬೈವವನೆ ಶಿಷ್ಯ. ನುಡಿಗಟ್ಟುಗಳು “ನಾನು ಹೋದರೆ ಹೋದೆನು” ಮೋಕ್ಷಕ್ಕೆ ಹೋಗುವ ಅರ್ಹತೆ ಉಳ್ಳವರು ಯಾರು ಎಂದು ವ್ಯಾಸರಾಯರು ಇಟ್ಟ ಪ್ರಶ್ನೆಗೆ ಕನಕದಾಸರ ಈ 'ನಾನು ಹೋದರೆ ಹೋದೇನು? ಎಂಬ ಉತ್ತರ ತಾತ್ವಿಕ ಅರ್ಥದಿಂದ ಶೋಭಿಸುತ್ತದೆ. ಮೇಲುನೋಟಕ್ಕೆ ಅಪಹಾಸ್ಯವಾಗಿ ಕಂಡರೂ ಅದರಲ್ಲಿ ಅಡಗಿರುವ ಅಪರೂಪದ ರಹಸ್ಯ, ಬಲ್ಲವರನ್ನು ಚಕಿತಗೊಳಿಸುತ್ತದೆ. ಹಿಂದೆ ಬರುವವರಿಗೆ ಮುಂದೆಮುಂದೆ ಬರುವವರಿಗೆ ಹಿಂದೆ.” ತಿರುಪತಿಯ ಶ್ರೀವೆಂಕಟೇಶ್ವರ ಕಲ್ಯಾಣ ಮಹೋತ್ಸವವನ್ನು ನೋಡಲು ಶ್ರೀಹರಿಯ ನಿರ್ದೇಶನದಂತೆ ಬೆಟ್ಟವನ್ನು ಹತ್ತುತ್ತಿದ್ದ ಕನಕದಾಸರನ್ನು ಭಗವಂತನ ಸಂದೇಶದಂತೆ ಸತ್ತರಿಸಿ ಕರೆತರಲು ಬಂದ ಪರಿವಾರದವರು “ಕನಕದಾಸರು ಎಲ್ಲಿ ಬರುತ್ತಿದ್ದಾರೆ” ಎಂದು ಕೇಳಿದರು. ಆಗ ಕನಕದಾಸರು ಮುತ್ತಿನಂತಹ ಮೇಲಿನ ಮಾತನ್ನಾಡಿ, ಭಕ್ತಿಪಥದಲ್ಲಿ ಹಿಂದೆ ತಮಗಿಂತ ಎಷ್ಟೋ ಜನ ಆಗಿಹೋಗಿದ್ದಾರೆ, ಮುಂದೆ ಅನೇಕ ಜನ ಈ ಪಥದಲ್ಲಿ ಬರಲಿದ್ದಾರೆ. ತಾವು ನಡುವೆ ಇರುವ ಒಬ್ಬ ಭಕ್ತ ಎಂಬ ಬಹು ದೊಡ್ಡ ತತ್ವವನ್ನು ಸ್ಪಷ್ಟಪಡಿಸಿದ್ದಾರೆ. ಆದರೆ ಆ ಅನುಭಾವಿಯ ಮಾತಿನ ಅರ್ಥವನ್ನು ಅರಿಯುವ ಶಕ್ತಿ ಎಷ್ಟು ಜನಕ್ಕಿದೆ. ಕನಕದಾಸರ ಉಕ್ತಿಸ್ವಾರಸ್ಯ ಮತ್ತು ರಹಸ್ಯವನ್ನು ಅರಿಯಲು ಸಂಸ್ಕಾರ ಬೇಕು. ಜೊತೆಗೆ ಔದಾರ್ಯವಿರಬೇಕು. ಕನಕದಾಸರ ಕೃತಿಗಳಲ್ಲಿ ಬಂದಿರುವ ಸೂಕ್ತಿಗಳಲ್ಲಿ ಮುಖ್ಯವಾದವುಗಳನ್ನು ಸಂಗ್ರಹಿಸಿಕೊಡುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಿದೆ. ಕನಕದಾಸರ ಪ್ರತಿಭಾವಿಲಾಸ, ಅನುಭಾವಸಂಪತ್ತು, ನುಡಿಗಟ್ಟುಗಳ ರಹಸ್ಯ ಹಾಗೂ ಈ ಎಲ್ಲದರ ಹಿಂದಿರುವ ವಾಗ್ಯಭವದ ಅರಿವಾಗಬೇಕಾದರೆ ಅವರ ಕೃತಿಗಳನ್ನು ಆಮೂಲಾಗ್ರವಾಗಿ ಓದಬೇಕು. ಆಗ ಅವರೊಂದು ಅಣಿಮುತ್ತು ಎಂಬ ಅಂಶ ಸ್ಪಷ್ಟವಾಗುತ್ತದೆ. ಜ್ಞಾನಿಗಳ ಮನದಲ್ಲಿ ಮೊರೆವಮುತ್ತು ಎಂಬ ಸತ್ಯ ಮನದಟ್ಟಾಗುತ್ತದೆ. ೮) ಆ