ಪುಟ:Kanakadasa darshana Vol 1 Pages 561-1028.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೧೦ ಕನಕ ಸಾಹಿತ್ಯ ದರ್ಶನ-೧ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ೬೧೧ ಅವು ವಸ್ತುನಿಷ್ಠ ಕಾವ್ಯವಾಗಿ ಪಂಡಿತವರ್ಗಕ್ಕೆ ಮೆಚ್ಚುಗೆಯಾದುವು ಎಂಬುದು ಸತ್ಯ ಸಂಗತಿ. ವಚನಕಾರರಿಂದ ಆರಂಭವಾದ ಹೊಸ ಅಲೆಯೊಂದು ಸಮಗ್ರ ಕ್ರಾಂತಿಯನ್ನೇ ಉಂಟು ಮಾಡಿತೆಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅದು ಮುಖ್ಯವಾಗಿ ಕಾವ್ಯದ ವಸ್ತು, ಭಾಷೆ, ಅಭಿವ್ಯಕ್ತಿಯ ರೀತಿಯ ಮೇಲೆ ಉಂಟುಮಾಡಿದ ಪಭಾವ ಅತಿಶಯವಾದುದು. ಅದರ ಜೊತೆ ಜೊತೆಯಲ್ಲಿಯೇ ಕವಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ದೊರೆತದ್ದು ಮಹತ್ವದ ಸಂಗತಿ. ಹೀಗಾಗಿ ಧಾರ್ಮಿಕ ಚಿಂತನೆಯಷ್ಟೇ, ವ್ಯಕ್ತಿ ಸ್ವಾತಂತ್ರ್ಯದ ಕಡೆಗೂ ಅವರು ಗಮನ ಕೊಟ್ಟರು, ಸಾಹಿತ್ಯಪ್ರಪಂಚದಲ್ಲಿ ತುಂಬಿ ತುಳುಕಾಡುತ್ತಿದ್ದ ಪುರಾಣ ವಿಷಯಗಳು ಹಾಗೂ ರಾಜ ಮಹಾರಾಜರುಗಳ ವಿಷಯಕ್ಕೆ ಬದಲಾಗಿ ಮಾನವ ಸಂಬಂಧವಾದ ಯಾವುದೇ ವಿಷಯ ಸಾಹಿತ್ಯದ ವಸ್ತುವಾಗುವಂತಾದುದು ಮಾನವನ ವೈಚಾರಿಕ ಜಗತ್ತಿನ ಒಂದು ವೈಜಯಂತಿ, ಸಮಕಾಲೀನ ಪ್ರಜ್ಞೆ ಸಾಮಾಜಿಕ ಪ್ರಜ್ಞೆ ಹಾಗೂ ವ್ಯಕ್ತಿಯ ಸಚ್ಚಾರಿತ್ರ್ಯವನ್ನು ಕುರಿತಾದ ವಿಷಯಗಳು ವಚನಕಾರರಿಂದ ಸಾಹಿತ್ಯದಲ್ಲಿ ಧಾರಾಳವಾಗಿ ಪ್ರಕಟಗೊಳ್ಳಲಾರಂಭಿಸಿತೆಂಬುದು ಗಮನಾರ್ಹ. ಇದು ಎಲ್ಲಾ ವಚನಕಾರರ ಹಾಗೂ ದಾಸರ ಕೃತಿಗಳಲ್ಲಿ ಸ್ಪಷ್ಟವಾಗಿ ವ್ಯಕ್ತಗೊಂಡಿರುವುದನ್ನು ಕಾಣುತ್ತೇವೆಯಾದರೂ, ಕನಕದಾಸರು ಕವಿಯಾಗಿ ತಮ್ಮ ಕೃತಿಗಳಲ್ಲಿಯೂ ಇದನ್ನು ಅಷ್ಟೇ ದಟ್ಟವಾಗಿ ಪ್ರಕಟಿಸಿರುವುದು ವಿಶೇಷ ಅಂಶವಾಗಿದೆ. ಹಿಂದಿನ ಕೃತಿಗಳಲ್ಲಿ ಕಾಣದ ಅಥವಾ ತೀರಾ ವಿರಳವೆನ್ನಬಹುದಾದ ಸಮಕಾಲೀನ ಜೀವನದ ಯಥಾವತ್ತಾದ ಚಿತ್ರಣ ಕನಕದಾಸರಲ್ಲಿ ಅತ್ಯಂತ ಸಹಜವಾಗಿ ಕಂಡುಬರುತ್ತದೆ. ಆ ದೃಷ್ಟಿಯಿಂದ ನೋಡುವಾಗ ಕನಕದಾಸರ 'ಮೋಹನ ತರಂಗಿಣಿ' ಒಂದು ಅದ್ವಿತೀಯವಾದ ಶ್ರೇಷ್ಠ ಕೃತಿ. ಕನಕದಾಸರ ಸಹಜ ಕಾವ್ಯಪ್ರತಿಭೆ ಇಲ್ಲಿ ಭೋರ್ಗರೆದು ಹರಿದಿರುವುದನ್ನು ಕಾಣಬಹುದು. 'ಮೋಹನ ತರಂಗಿಣಿ'ಯಲ್ಲಿ ದೈವೀ ಪಾತ್ರಗಳು ಬಂದರೂ-ಅಲ್ಲಿ ಶೃಂಗಾರವನ್ನು ಮೆರೆದಿರುವುದರ ಜೊತೆಗೆ, ಸಮಕಾಲೀನ ಬದುಕಿನ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುವಲ್ಲಿ ಕನಕದಾಸರು ಪೂರ್ಣ ಯಶಸ್ವಿಯಾಗಿದ್ದಾರೆ ಅಥವಾ ಗಮನಿಸದೆಯೇ ಹೋಗಿರಬಹುದಾದ, ಗಮನಿದರೂ ನಿರ್ಲಕ್ಷಿಸಿರಬಹುದಾದ ಬಹುಸೂಕ್ಷ್ಮ ವಿಷಯಗಳನ್ನು ಸೊಗಸಾಗಿ ಜೀವತುಂಬಿ ತಂದಿದ್ದಾರೆ. ವಿಜಯನಗರ ಕಾಲದ ರಸಿಕ ಶ್ರೀಮಂತ ಉಜ್ವಲದ ಬದುಕು ಕನಕದಾಸರಲ್ಲಿ ಒಳ್ಳೆಯ ಕಾವ್ಯವಾಗಿದೆ. ಕವಿಗಿರಬೇಕಾದ ಸೂಕ್ಷ್ಮಮತಿ ಹಾಗೂ ಸೂಕ್ಷ್ಮದೃಷ್ಟಿಗಳೆರಡೂ ಕನಕದಾಸರಲ್ಲಿ ಎದ್ದು ಕಾಣುತ್ತವೆ. 'ಮೋಹನ ತರಂಗಿಣಿ'ಯ ೩-೪ನೆಯ ಅಧ್ಯಾಯದಲ್ಲಿ ಬರುವ ಪುರವರ್ಣನೆ ಕನಕದಾಸರನ್ನು ಒಬ್ಬ ವಿಶಿಷ್ಟ ಕವಿಯಾಗಿಸಿರುವಂತೆಯೇ ಒಬ್ಬ ಮಹಾನ್ ಕಲಾಕಾರನನ್ನಾಗಿಯೂ ಮಾಡಿದೆ. ವಿಜಯನಗರ ಸಾಮ್ರಾಜ್ಯದ ಸುವರ್ಣಯುಗದ ಬಣ್ಣನೆಯನ್ನು ಕವಿ ಕಣ್ಣಿಗೆ ನಾಟಿಸಿದ್ದಾನೆ : ಸೋಮ ಸೂರಿಯ ವೀಥಿ ವೀಥಿಯಿಕ್ಕೆಲದಲ್ಲಿ ಹೇಮ ನಿರ್ಮಿತ ಸೌಧದೋಳಿ ರಮಣೀಯತೆವೆತ್ತ ಕಳಸದಂಗಡಿಯಿರ್ದು ವಾ ಮಹಾದ್ವಾರಕಾ ಪುರದೆ || ಭೋಜಿಪ ಕಪೂರ ಕಸ್ತೂರಿ ಜೀರ್ಣಜಿ ವಾಜಿ ಪುಣುಗು ಬಹು ತೈಲ ಸೋಜಿಗವಡೆದ ಸುಗಂಧದಂಗಡಿಗಳು ರಾಜಿಸುತ್ತಿರ್ದುವಿಕ್ಕೆಲದಿ || ಚಪ್ಪನ್ನ ದೇಶದ ನಾಣಿಯಂಗಳ ನೋಟ ತುಪ್ಪದ ಚಪಲ ಸೆಟ್ಟಿಗಳು ಒಪ್ಪವಡೆದು ಕುಳಿತಿರ್ದರು ಹಣ ಹೊನ್ನ ಕುಪ್ಪೆಯ ಮುಂದಿಟ್ಟುಕೊಂಡು || ಸುರಗಿ ಸೇವಂತಿಗೆ ಕುಂದ ಮಂದಾರ ಪಾ ದರಿ ಕಂಚಿ ಕಣಿಗಲೆ ದವನ ಬಿರಿದ ಕೆಂಜಾಜಿಯೆಂಬುವ ಪುಷ್ಪದಂಗಡಿ ಪರುಠವಿಸಿರ್ದುದೇನೆಂಬೆ || ಉತ್ತುತ್ತೆ ಖರ್ಜುರ ದ್ರಾಕ್ಷಿ ಸಕ್ಕರೆ ಬೆಲ್ಲ ಮೆಸಿದ ಕಾಯಭಾಗ ಒತ್ತದೆ ಕಳಿತ ಸಮಸ್ತ ಪಸರಂಗ ಇಕ್ಕೆಲದಲಿ ಮಾಲುತಿಹವು || ಅಷ್ಟೇ ಅಲ್ಲ, ಅಲ್ಲಿಯ ಶ್ರೀಮಂತರ ಅಟ್ಟಹಾಸ ವೈಭವವೆಂದರೆ : ಓರಂತೆ ಮರಕಾಲರು ಹಡಗಿನ ವ್ಯವ ಹಾರದಿ ಗಳಿಸಿದ ಹಣವ