ಪುಟ:Kanakadasa darshana Vol 1 Pages 561-1028.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ೬೨೩ ಪ್ರೇಮದ ಕಥೆ. ಅಲ್ಲಿ ಬರುವ ಕೃಷ್ಣ-ರುಕ್ಕಿಣಿ, ರತಿ-ಮನ್ಮಥ ಹಾಗೂ ಉಷಾಅನಿರುದ್ದರ ಶೃಂಗಾರ ಕಾವ್ಯದ ಮೂಲ ಸತ್ವವಾಗಿದೆ. ಇಲ್ಲಿ ಬರುವ ಶ್ರೀ ಕೃಷ್ಣನ ಮೂಲಕ ಭಕ್ತಿಯ ಸೋಂಕು ಕಂಡು ಬಂದರೂ ಗೌಣ. ರತ್ನಾಕರ ವರ್ಣಿಯ ಭರತೇಶನಿಗೂ ಶ್ರೀಕೃಷ್ಣನಿಗೂ ಹಲವಂಶಗಳಲ್ಲಿ ಸಾಮ್ಯವಿದೆ. ಶ್ರೀಕೃಷ್ಣನು ಹದಿನಾರು ಸಾವಿರ ಪತ್ನಿಯರನ್ನು ಹೊಂದಿ ಲೋಲುಪ್ತವಾಗಿರುವಂತೆ ತೋರಿದರೂ ಅವನು ಯೋಗಿ ಹಾಗೆಯೇ ಭರತ ತೊಂಬತ್ತಾರು ಸಾವಿರ ಪತ್ನಿಯರನ್ನು ಹೊಂದಿ 'ಗಣನೆಯಿಲ್ಲದ ಸುಖದೊಳೊಲಾಡಿದರೂ ಅದರಲ್ಲಿಯೇ ನಿಂತವನಲ್ಲ. ಆದರೆ ರತ್ನಾಕರನ ಪ್ರಕಾರ ಭೋಗವು ಯೋಗದ ಮೊದಲ ಮೆಟ್ಟಲು ಎಂಬ ಪ್ರತಿಪಾದನೆ . ಆ ಹಿನ್ನೆಲೆಯಲ್ಲಿ ರತ್ನಾಕರವರ್ಣಿ, ಭರತನ ಭೋಗಜೀವನವನ್ನು ಬಣ್ಣಿಸುವಾಗ ಶೃಂಗಾರವನ್ನೂ ಅದರ ತುತ್ತತುದಿಗೊಯ್ದಿದ್ದಾನೆ. ಆ ಮೂಲಕ ಇಡೀ ಕಾವ್ಯವನ್ನು ಶೃಂಗಾರಮಯವಾಗಿಸಿದ್ದಾನೆ. ಕನಕದಾಸರ 'ಮೋಹನ ತರಂಗಿಣಿ'ಯ ಕಥಾವಸ್ತು ಇದಕ್ಕಿಂತ ಸ್ವಲ್ಪ ಬೇರೆಯಾದರೂ, ತಿರುಳು ಒಂದೇ-ಶೃಂಗಾರ ಪ್ರಧಾನ. ಅಲ್ಲಿ ರತ್ನಾಕರವರ್ಣಿ ತ್ಯಾಗ-ಭೋಗಗಳ ಸಮನ್ವಯವನ್ನು ಸಾಧಿಸುವ ದೃಷ್ಟಿ ತೋರಿದ್ದಾರೆ, ಇಲ್ಲಿ ಕನಕದಾಸರು ಜೀವನದಲ್ಲಿ ಭೋಗಕ್ಕೂ ಸ್ಥಾನವಿದೆ ಎಂಬುದನ್ನು ಹೇಳ ಹೊರಟಂತೆ ಕಾಣುತ್ತದೆ. ಸಂತಕವಿಯಾದ ಕನಕದಾಸರು ಒಂದು ಕಡೆ ಅಪಾರವಾದ ಭಕ್ತಿಯನ್ನು, ಅಧ್ಯಾತ್ಮವನ್ನು ಮೆರೆದಿರುವಂತೆಯೇ ಮತ್ತೊಂದು ಕಡೆ ಶೃಂಗಾರದೆಡೆಗೂ ಗಮನ ಕೊಟ್ಟಿರುವುದನ್ನು ನೋಡಿದರೆ ರತ್ನಾಕರವರ್ಣಿಯ ಮನೋಭಾವ ಕನಕರಲ್ಲಿಯೂ ಕಂಡು ಬರುತ್ತದೆ. ಅದೇನೇ ಇದ್ದರೂ ಶೃಂಗಾರ ಕವಿಗಳಾಗಿ ಇಬ್ಬರೂ ಮನಸೆಳೆಯುತ್ತಾರೆ. ಕಾವ್ಯವನ್ನು ರಸಮಯವಾಗಿಸುವಲ್ಲಿ ಇಬ್ಬರೂ ಸ್ಪರ್ಧಿಸಿದ್ದಾರೆಂಬಂತೆ ಸನ್ನಿವೇಶಗಳೂ, ವರ್ಣನೆಗಳೂ ಕಾವ್ಯದುದ್ದಕ್ಕೂ ಬರುತ್ತದೆ. ಇಲ್ಲಿಯ ಶೃಂಗಾರ ಶ್ರೀಮಂತಿಕೆಯನ್ನು ನೋಡುವಾಗ, ಕನಕದಾಸರು ಇದನ್ನು ತರುಣದಲ್ಲಿಯೇ ಇನ್ನೂ ಆಧ್ಯಾತ್ಮಿಕತೆಯ ಕಡೆಗೆ ಪೂರ್ಣವಾಲುವ ಮೊದಲೇ ರಚಿಸಿರುವರೆಂಬುದು ಸ್ಪಷ್ಟ ಕನಕದಾಸರು ತರುವ ಶೃಂಗಾರ ವಿಲಾಸದ ಲಾಸ್ಯವನ್ನು ಈ ಪದ್ಯಗಳಲ್ಲಿ ನೋಡಬಹುದು : ನಳಿನೋದ್ಭವ ಕೋಟಿ ವತ್ತರ ತನುವಿಡಿ ದಳಿದೊಡದೇನು ವೃಥಾಯ ಸುಳಿಗುರುಳ ಬಲೆಯ ತೋಳ ತೆಕ್ಕೆಯೊಳೊಂದು ಗಳಿಗೆ ಬಾಳಲು ಮುಕ್ತಿಯಹುದು | ಹೊಳೆವ ಕೆಂಬಲ್ಲು ಚೆಂದುಟಿ ಕಂಬು ಕಂಠ ಕೌಂ ಕುಳ ಕೋಮಲತ್ವ ನುಣೋಲೆಯ ಸ್ಥಳದಲ್ಲಿ ಮೊಗವಿಟ್ಟು ಮುಂಡಾಡಿ ಸೊಗ ಮಯ್ಯೋ ಛಳವಟ್ಟು ಸಾವುದಚ್ಚರಿಯೆ | ಇದು ಕನಕದಾಸರ ವೈಖರಿಯಾದರೆ, ಶೃಂಗಾರ ರಸದಲ್ಲಿಯೇ ಮುಳುಗಿದ ರತ್ನಾಕರವರ್ಣಿಯ ವರ್ಣನಾವೈಖರಿ ಮತ್ತೊಂದು ಬಗೆಯದು ; ಮಲಗಿದ್ದ ಭರತನು ಬಳಿಯಿದ್ದ ಪದ್ವಿನಿಯನ್ನು ಕಂಡು, ಕಣ್ಣೆರೆದಾಕ್ಷಣ ಬರಸೆಳೆದಾ ತೊಂಡೆ ವಣ್ಣುಟಿಯಬಲೆಯನಪ್ಪಿ ನಾಣ್ಣಾಣ ಜುಮ್ಮೆನೆ ಚುಂಬಿಸಿ ಲಲನೆಗೆ ಗೇಣೇರಿದನು ಸ್ವರ್ಗಸುಖವ || ಇದು ರತ್ನಾಕರವರ್ಣಿ ಕಾವ್ಯದಲ್ಲಿ ಬರುವ ಶೃಂಗಾರರಸದ ಒಂದು ಬಿಂದು ಮಾತ್ರ, ಕುಮಾರವ್ಯಾಸನ ಮಹಾಭಾರತದಂತೆ ರತ್ನಾಕರ ವರ್ಣಿಯ ಕಾವ್ಯದ ಹರಹೂ ಬಹಳ ದೊಡ್ಡದು, ಆ ವಿಸ್ತಾರದಲ್ಲಿ ಇಂತಹ ವರ್ಣನೆಗಳ ರಾಗ ಅದೆಷ್ಟೋ ಇದೆ. ಸಾಂಗತ್ಯ ಕವಿಗಳ ಸಾಲಿನಲ್ಲಿ ನಂಜುಂಡ ಕವಿಯೂ ಗಮನ ಸೆಳೆಯುವ ಕವಿ, ಅವನ 'ಕುಮಾರರಾಮ ಸಾಂಗತ್ಯ' ಕನ್ನಡದ ವಿಶಿಷ್ಟ ಕೃತಿಗಳಲ್ಲಿ ಒಂದು. ಇದೊಂದು ಐತಿಹಾಸಿಕ ಕಾವ್ಯವಾಗಿ ಬಾಳಿ-ಬದುಕಿ, ಭಾರತೀಯ ಇತಿಹಾಸದಲ್ಲಿ ಸೇರಿದ ವ್ಯಕ್ತಿಗಳನ್ನೊಳಗೊಂಡು ವಿಶೇಷ ಮನ್ನಣೆಗೂ ಪಾತ್ರವಾಗಿದೆ. ಕುಮಾರ ರಾಮನ ಕಥೆ ಕರ್ನಾಟಕದಲ್ಲಿ ಒಂದು ವಿಶಿಷ್ಟ ಸ್ಥಾನವನ್ನೂ ಪಡೆದಿದೆ. ಅದು ಕೂಡ 'ನಳಚರಿತ್ರೆ' (ಕುಮಾರವ್ಯಾಸ ಭಾರತ' 'ಭರತೇಶ ವೈಭವಗಳಂತೆ ಜನಪ್ರಿಯ ಕಾವ್ಯ-ಜನಾದರಣೀಯ ಕಾವ್ಯ, ಸಹಜವಾಗಿಯೇ ಇಲ್ಲಿ ಯುದ್ದ ವರ್ಣನೆಯನ್ನು ಕಾಣಬಹುದು. ನಂಜುಂಡ ಕವಿ ಶೃಂಗಾರರಸವನ್ನು ಕಾವ್ಯದಲ್ಲಿ ರಸ ಮಿಡಿಯುವಂತೆ ತಂದಿರುವಂತೆಯೇ, ಯುದ್ಧ ವರ್ಣನೆಯನ್ನು ಅದ್ಭುತವಾಗಿಯೇ ತಂದಿದ್ದಾನೆ. ಕ್ಷತ್ರಿಯನಾದ ನಂಜುಂಡ ಕವಿಗೆ ಅದು ಸುಲಭ ಸಾಧ್ಯವಾಗಿರುವಂತೆಯೇ ಸ್ವತಃ ದಂಡನಾಯಕನಾಗಿದ್ದ ಕನಕದಾಸನಿಗೂ ಅದು ದಕ್ಕಿದ ವಿಷಯವಾಗಿದೆ. ಯುದ್ಧವರ್ಣನೆಗೆ ಸಾಂಗತ್ಯ ಅಷ್ಟಾಗಿ ಒಗ್ಗಿಬಂದ ಛಂದಸ್ಸಲ್ಲ ಎಂಬುದು