ಪುಟ:Kanakadasa darshana Vol 1 Pages 561-1028.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೩೬ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಸಾಹಿತ್ಯದ ಮೇಲೆ ಅವರ ಹಿಂದಿನ ಮತ್ತು ಅವರ ಸಮಕಾಲೀನ ಕವಿಗಳ ಪ್ರಭಾವ ೬೩೭ ತೊಡಗಿಸಿಕೊಂಡಿದ್ದು ಆಂತರಿಕ ಅವಶ್ಯಕತೆ ಮತ್ತು ಸಾರ್ವಜನಿಕ ಒತ್ತಡ ಕಾರಣಗಳಿಂದಾಗಿ, ತಾವು ಕ್ರಾಂತಿಯನ್ನು ಮಾಡುತ್ತಿದ್ದೇವೆಂದು ತಿಳಿದೋ, ತಿಳಿಯದೆಯೋ ಒಟ್ಟಾರೆ ಹನ್ನೆರಡು ಮತ್ತು ಹದಿನೈದನೆಯ ಶತಮಾನಗಳಲ್ಲಿ ಈ ಬದಲಾವಣೆಯ ಬೀಜದ ಅಂಕುರಾರ್ಪಣೆಯಾಯಿತೆನ್ನುವುದು ಐತಿಹಾಸಿಕ ಸತ್ಯ. ಈ ಬದಲಾವಣೆಗಳ ಹಿಂದಿರುವ ವ್ಯಕ್ತಿಗಳು ಮತ್ತು ಶಕ್ತಿಯನ್ನು ಗಮನಿಸಿದರೆ, ಇದರಲ್ಲಿ ಸಾಮಾಜಿಕವಾಗಿ ಹಿಂದುಳಿದ, ಶೋಷಣೆಗೆ ಒಳಗಾದವರ ಸಿಂಹಪಾಲು ಇರುವುದನ್ನು ಗುರುತಿಸಬಹುದು. ಮುನ್ನೆಲೆಯಲ್ಲಿ ಬಸವಣ್ಣನವರಂಥ, ಪುರಂದರದಾಸರಂಥ ಮುಂದುವರಿದ ಜನಾಂಗದ ನಾಯಕತ್ವವನ್ನು ಗುರುತಿಸಬಹುದಾದರೂ, ಈ ಚಳುವಳಿಗಳೂ ಜ್ವಲಂತವಾಗಿರುವಂತೆ ನೋಡಿಕೊಳ್ಳುವಲ್ಲಿ ಇವರ ಹಿಂದೆ ಕೆಲಸ ಮಾಡಿದ ಹಲವು ಹತ್ತು ಸಾಮಾಜಿಕ ಸ್ತರಗಳನ್ನು ಕಡೆಗಣಿಸುವಂತಿಲ್ಲ ಮಾತ್ರವಲ್ಲ. ಈ ಎಲ್ಲ ಸಾಧನೆ ಸಿದ್ಧಿಗಳಿಗೆ ಅವರ ಪಾಲಿನ ಕೊಡುಗೆ ಮಹತ್ವವಾದುದು ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಕನಕದಾಸರು ಬಾಡ ಗ್ರಾಮದ ಕುರುಬರ ಮನೆತನದಲ್ಲಿ ಜನಿಸಿ, ಪಾಳೆಯ ಗಾರರಾಗಿ ಆಡಳಿತ ನಡೆಸಿ ತಮ್ಮ ಕಾತ್ರವನ್ನು ಮೆರೆದಿದ್ದರೂ ಅವರಿಗೆ ವ್ಯಾಸರಾಯರ ಶಿಷ್ಯರುಗಳಿಗಿದ್ದ ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆ ಇರಲಿಲ್ಲ. ಅವರ ಬಗ್ಗೆ ಇರುವ ದಂತಕಥೆಗಳನ್ನು ನಂಬಬಹುದಾದರೆ, ಅವರು ಏರಿದ ಎತ್ತರಕ್ಕೆ, ಅನುಭಾವಿ ಪ್ರಜ್ಞೆಗೆ ಅವರ ಅವಿಶ್ರಾಂತ ಸಾಧನೆಯೇ ಕಾರಣ ಎನ್ನಬಹುದು. ಅಹಂಕಾರನಿರಸನ, ಸರ್ವಾಂತರ್ಯಾಮಿತ್ವ ದರ್ಶನ ಇವುಗಳು ಅವರಿಗೆ ಅನುಭವಗಮ್ಯವಾಗಲು ಅವರ ಸಾಧನಶೀಲ ಮನೋಭಾವದೊಂದಿಗೆ ಅವರಿಗೆ ದೊರೆತ ವ್ಯಾಸರಾಯರಂಥ ಗುರುವಿನ ಬೆಂಬಲ ಮತ್ತು ಆಸರೆ, ಪುರಂದರದಾಸರಂಥ ದಾಸವರೇಣ್ಯರ ಸಹವಾಸಗಳೂ ಕಾರಣವಾಗಿದ್ದಿರಬೇಕು. ಈ ವೈಷ್ಣವ ಮಹಾಪೂರದಲ್ಲಿ ತಮ್ಮ ಭಾಗವತ ದೃಷ್ಟಿಯನ್ನು ಬಲವಾಗಿ ನಮ್ಮಿಕೊಂಡು ಕೀರ್ತನೆಗಳು ಮತ್ತು ಕಾವ್ಯಗಳ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಹರಿಹರ ಸಾಮರಸ್ಯವನ್ನು ಪ್ರತಿಪಾದಿಸುತ್ತಾ ಸಮಾಜದ ಕಣ್ಣೆರೆಸಲು ಅವರ ಮೇಲೆ ಕುಮಾರವ್ಯಾಸನಂಥ ಮಹಾನ್ ಭಾಗವತ ಕವಿಯ ಪ್ರಭಾವವೂ ಹೇರಳವಾಗಿತ್ತೆಂಬುದಕ್ಕೆ ಅನೇಕ ಆಂತರಿಕ ನಿದರ್ಶನಗಳನ್ನು ಕೊಡಬಹುದು. ಹೀಗೆ ಕನಕದಾಸರ ವ್ಯಕ್ತಿತ್ವ ಮತ್ತು ಕಾವ್ಯಗಳ ಮೇಲೆ ಅವರ ಪರಂಪರಾಗತ ಕಾವ್ಯ ಪ್ರಜ್ಞೆ ಮತ್ತು ಸಮಕಾಲೀನ ಪ್ರಜೆಗಳು ಪ್ರಭಾವ ಬೀರಿವೆಯಾದರೂ ಇವೆಲ್ಲವನ್ನೂ ಸಮಾವೇಶಗೊಳಿಸಿಕೊಂಡ ಒಂದು ವಿಭಿನ್ನ, ವಿಶಿಷ್ಟ ವ್ಯಕ್ತಿತ್ವವನ್ನೂ ಅವರಲ್ಲಿ ನಾವು ಕಾಣಬಹುದಾಗಿದೆ. ಕೀರ್ತನೆಗಳು : ಕನಕದಾಸರು ಕವಿಯಾಗಿ ಹೆಸರುಗೊಂಡು ಅನೇಕ ಕಾವ್ಯಗಳನ್ನು ರಚಿಸಿ ದಾಸಪರಂಪರೆಯಲ್ಲಿ 'ದಾಸರಲ್ಲಿ ಕವಿಗಳು' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರೂ ಅವರ ಅಂತರಂಗ ಸಾಧನೆಯ, ಅನುಭಾವಿ ಪ್ರಜ್ಞೆಯ, ಸಾಮಾಜಿಕ ಕಳಕಳಿಯ, ಭಕ್ತಿ ಪಾರಮ್ಯದ ದರ್ಶನ ಮಾಡಿಸುವವು, ಅವರ ಕೀರ್ತನೆಗಳೇ, ನಾವು ಅವರನ್ನು ಪ್ರಮುಖವಾಗಿ ಗುರುತಿಸುವುದು ಒಬ್ಬ ದಾಸರನ್ನಾಗಿ, ದಾಸಕೂಟದ ಸದಸ್ಯರನ್ನಾಗಿ, ವ್ಯಾಸಮಠದ ಒಬ್ಬ ಹಿರಿಯ ಪ್ರತಿನಿಧಿಯೆಂದಾಗಿ, ಕನಕದಾಸರ ಕೀರ್ತನೆಗಳಲ್ಲಿ ಪುರಂದರರಂತೆ ಕೃಷ್ಣಪಾರಮ್ಯ, ಭಾಗವತ, ಮಹಾಭಾರತ-ರಾಮಾಯಣ ಮೊದಲಾದ ಮಹಾಕಾವ್ಯಗಳ ಪ್ರಭಾವ, ಪುರಾಣ ಪ್ರಪಂಚದ ವ್ಯಾಪಕ ಪರಿಚಯ, ಇವುಗಳನ್ನಲ್ಲದೆ ಕನ್ನಡ ಕವಿಗಳ ಅದರಲ್ಲೂ ಶರಣ ಕವಿಗಳ ಪ್ರಭಾವವನ್ನೂ ಗುರುತಿಸಬಹುದಾಗಿದೆ. ಕುಮಾರವ್ಯಾಸನಂತೂ ಅವರ ಕೀರ್ತನೆಗಳು ಮತ್ತು ಕಾವ್ಯಗಳ ತುಂಬೆಲ್ಲ ತನ್ನ ಅಚ್ಚಳಿಯದ ಪ್ರಭಾವವನ್ನು ಬೀರಿದ್ದಾನೆ ಎಂಬುದಕ್ಕೆ ಅನೇಕ ನಿದರ್ಶನಗಳನ್ನು ಕೊಡಬಹುದು. “ಪುರಂದರದಾಸರ ಕೀರ್ತನೆಗಳ ಸಂಖ್ಯೆಗೆ ಹೋಲಿಸಿದರೆ ಕನಕದಾಸರ ಕೀರ್ತನೆಗಳು ಅತ್ಯಲ್ಪವಾಗಿ ಕಾಣುತ್ತವೆ. ಆದರೆ ಕನಕದಾಸರ ಕೀರ್ತನೆಗಳ ತತ್ವವನ್ನು ಗಮನಿಸಿದರೆ ಅವು ಪುರಂದರದಾಸರ ಕೀರ್ತನೆಗಳ ಸತ್ವಗಳೊಂದಿಗೆ ಸಮಸ್ಪರ್ಧಿಯಾಗಬಲ್ಲವು. ಹಾಗೆ ನೋಡಿದರೆ ಪುರಂದರ ದಾಸರ ಕೀರ್ತನೆಗಳಿಗಿಂತ ಕನಕದಾಸರ ಕೀರ್ತನೆಗಳಲ್ಲಿ ಕಾವ್ಯಗುಣ ಒಂದು ಕೈ ಮಿಗಿಲಾಗಿಯೇ ಇರುವಂತೆ ತೋರುತ್ತದೆ” ಎಂಬ ವಿಮರ್ಶೆಯ ಮಾತನ್ನು ಗಮನಿಸಬಹುದು. ದಾಸವರೇಣ್ಯರಿಬ್ಬರನ್ನೂ ತೂಗಿನೋಡುವ ಈ ನೋಟದಲ್ಲಿ ವಿಮರ್ಶಕರ ಒಲವು ಸಹಜವಾಗಿಯೇ ಕವಿ ಕನಕದಾಸರ ಕಡೆಗೆ ಹೆಚ್ಚು ಒಲಿದಿದೆ ಎಂಬುದನ್ನು ಗುರುತಿಸಬಹುದು. ಪುರಂದರರಂತೆ ಕೃಷ್ಣನ ಮಹಿಮೆಯ ವರ್ಣನೆ, ರೂಪವರ್ಣನೆ, ಪವಾಡಸದೃಶ ಘಟನೆಗಳ ಹೆಗ್ಗಳಿಕೆ, ಪುರಾಣ ಇತಿಹಾಸ ಕಾವ್ಯಗಳ ಆಳವಾದ ಅಭ್ಯಾಸ ಪರಿಚಯಗಳ ತಿಳಿವಳಿಕೆ ಇವೆಲ್ಲವು ಕನಕದಾಸರಲ್ಲಿ 2. ಕನಕದಾಸರ ವಿಶಿಷ್ಟತೆ-ಪರಿಶೀಲನ-ಜಿ. ಎಸ್. ಶಿವರುದ್ರಪ್ಪ, ಉಷಾ ಸಾಹಿತ್ಯಮಾಲೆ ಮೈಸೂರು, ಪು. 102, 1967.