ಪುಟ:Kanakadasa darshana Vol 1 Pages 561-1028.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೪೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಸಾಹಿತ್ಯದ ಮೇಲೆ ಅವರ ಹಿಂದಿನ ಮತ್ತು ಅವರ ಸಮಕಾಲೀನ ಕವಿಗಳ ಪ್ರಭಾವ ೬೪೯ ಈವರೆಗಿನ ಸಮೀಕ್ಷೆಯಿಂದ ಕನಕದಾಸರು ಪರಂಪರೆಗೆ ಎಷ್ಟು ಋಣಿ, ಸಮಕಾಲೀನ ಸಾಹಿತ್ಯ ಅವರ ಮೇಲೆ ಬೀರಿದ ಪ್ರಭಾವ ಯಾವ ಬಗೆಯದು ಎಂಬುದನ್ನು ಗುರುತಿಸಬಹುದು. ಅವರ ಪುರಾಣದ ತಿಳಿವಳಿಕೆ ಅಗಾಧವಾದದ್ದು, ಮಹಾಕಾವ್ಯಗಳ ಸ್ಕೂಲ ಹಾಗೂ ಸೂಕ್ಷ್ಮ ಅಧ್ಯಯನ, ಸಂಸ್ಕೃತ ಸಾಹಿತ್ಯದ ಮತ್ತು ಕನ್ನಡದ ದೇಸಿ ಸಾಹಿತ್ಯದ ಅಗಾಧವಾದ ಜ್ಞಾನ ಮತ್ತು ಶರಣಸಾಹಿತ್ಯ ಮತ್ತು ದಾಸಸಾಹಿತ್ಯಗಳ ಮೌಲ್ಯಗಳ ಪುನರ್ನಿಮಿ್ರತಿಯ ಬಗೆಗಿನ ಕಾಳಜಿ, ಕುಮಾರವ್ಯಾಸನಂಥ ಭಾಗವತ ಕವಿಯ ಅಚ್ಚಳಿಯದ ಪ್ರಭಾವ ಇವೆಲ್ಲವನ್ನೂ ಅವರ ಕೃತಿಗಳು ಸಾರಿ ಹೇಳುತ್ತವೆ. “ಅವರ ಷಟ್ಟದಿಗಳಲ್ಲಿ ಕುಮಾರವ್ಯಾಸನ ಪ್ರಭಾವವಿದೆ. ಅವರ ಕೀರ್ತನೆಗಳಲ್ಲಿ ಪುರಂದರದಾಸರ ಛಾಯೆಯಿದೆ. ಅವರ ಕನಕನ ಮುಂಡಿಗೆಗಳೆಂಬ ಕೆಲವು ರಚನೆಗಳಲ್ಲಿ ಬೆಡಗಿನ ವಚನಗಳ ಅನುಕರಣವಿದೆ. ಆದರೆ ಈ ನೆಳಲು ಬೆಳಕಿನ ನಡುವೆ ಕನಕದಾಸರು ತಮ್ಮ ತೇಜಸ್ಸನ್ನು ಕಳೆದುಕೊಂಡಿಲ್ಲ. ಅವರು ತಮ್ಮ ಕವಿ ವಿಶಿಷ್ಟವಾದ ಸಹಜ ಪ್ರತಿಭೆಯಿಂದ, ಮನಸ್ಸಿನ ಉದಾರತೆಯಿಂದ, ವಸ್ತು ವೈವಿಧ್ಯ ಮತ್ತು ಛಂದೋ ವೈವಿಧ್ಯಗಳಿಂದ ಸಮಕಾಲೀನ ಜೀವನ ಪ್ರಜ್ಞೆಯಿಂದ, ಪಂಥಬದ್ಧವಲ್ಲದ ಉದಾತ್ತ ವ್ಯಕ್ತಿತ್ವದಿಂದ ದಾಸಪರಂಪರೆಯಲ್ಲಿ ಮಾತ್ರವಲ್ಲದೆ ಕನ್ನಡ ಕವಿಗಳ ಪಂಕ್ತಿಯಲ್ಲಿಯೂ ವಿಶಿಷ್ಟವಾದ ಸ್ಥಾನವನ್ನು ಸಂಪಾದಿಸಿಕೊಂಡಿದ್ದಾರೆ. ಗ್ರಂಥಋಣ 1. ಕನ್ನಡ ಸಾಹಿತ್ಯ ಚರಿತ್ರೆ - ಡಾ. ರಂ. ಶ್ರೀ ಮುಗಳಿ ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ - ಸಂಪುಟ-4, ಭಾಗ-2, ಬೆಂಗಳೂರು ವಿವಿ ಕರ್ಣಾಟಕಭಾರತ ಕಥಾಮಂಜರಿ - ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ ವಚನಧರ್ಮಸಾರ - ಎಂ. ಆರ್. ಶ್ರೀ. ಕನಕದಾಸರ ವಿಶಿಷ್ಟತೆ - ಜಿ. ಎಸ್. ಎಸ್. ಪುಟ 111 ಪರಿಶೀಲನ - ಜಿ. ಎಸ್. ಎಸ್. ಕನಕದಾಸರ ಕೀರ್ತನೆಗಳು - ನಾಲ್ಕನೆಯ ಶತಮಾನೋತ್ಸವ ಸಂಪುಟ ಸಂ : ಬಿ. ಶಿವಮೂರ್ತಿಶಾಸ್ತಿ, ಕೆ. ವಿ. ಕೃಷ್ಣರಾವ್ 7. ನಳಚರಿತ್ರೆ - ಸಂ : ಡಾ. ದೇಜಗೌ, 8, ರಾಮಧಾನ್ಯಚರಿತೆ - ಸಂ : ಕೆ. ಸಿ. ಪಂಚಲಿಂಗೇಗೌಡ 9. ಹರಿದಾಸ ಸಾಹಿತ್ಯ - ರಾ. ಸ್ವಾ, ಪಂಚಮುಖಿ 10. ಕನಕದಾಸರು - ಕೆ. ವೆಂಕಟರಾಮಪ್ಪ 11. ಮೋಹನ ತರಂಗಿಣಿ ಸಂಗ್ರಹ - ಸಂ : ಬಿ. ಎಸ್. ಸಣ್ಣಯ್ಯ 12. ಮಹಾತ್ಮ ಕನಕದಾಸ ಪ್ರಶಸ್ತಿ - ನಾಲ್ಕನೆಯ ಶತಮಾನೋತ್ಸವ ಸಮಿತಿ 13. ಹರಿದಾಸ ಹೃದಯ - ಜಿ. ವರದರಾಜರಾವ್ ೩೦ ವ