ಪುಟ:Kanakadasa darshana Vol 1 Pages 561-1028.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೫೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ರಾಮಧಾನ್ಯ ಚರಿತೆ ೬೫೫ ಸಂತತ್ವದ ಪ್ರಭಾವವೆನ್ನಿಸುತ್ತದೆ. ರಾಮಧಾನ್ಯ ಚರಿತೆಯ ಕಥೆ ಸಿಂಹಾವಲೋಕನ ಕ್ರಮದ ರಾಮಾಯಣದ ಕಥೆಯೆಂದು ಹೇಳಬಹುದಾಗಿದೆ. ರನ್ನ ಕವಿ ಮಹಾಭಾರತ ಕಥೆಯ ಕಡೆಯ ದಿನದ ಕಥೆಯನ್ನು ಹೇಳುತ್ತಾ ಇಡೀ ಮಹಾಭಾರತದ ಕಥೆಯನ್ನು ಸಿಂಹಾವಲೋಕನದಿಂದ ಹೇಳಿದ್ದೇನೆನ್ನುತ್ತಾನೆ. ಕನಕದಾಸರು ಈ ಮಾತು ಹೇಳದೆಯೇ ರಾಮನ ಕೃಪೆಗೆ ಪಾತ್ರವಾದ ರಾಗಿಯ ಈ ಕಥೆಯಲ್ಲಿ ಸಿಂಹಾವಲೋಕನ ಕ್ರಮದಲ್ಲಿ ರಾಮಾಯಣದ ಕಥೆ ಹೇಳಿದ್ದಾರೆ. “ಧರೆಯನೆಲ್ಲವ ಸೋತು ಜೂಜಲಿ ಕುರುಪತಿಗೆ ಕೈದಳಸಿ ತಮ್ಮಂದಿರ ಸಹಿತ ಧರ್ಮಜನು ಕಾಮ್ಯಕವನದೊಳಿರುತಿರಲು” ಒಂದು ದಿನ ಶಾಂಡಿಲ್ಯ ಮುನಿ ಅಲ್ಲಿಗೆ ಬಂದ. ಆಗ ಧರ್ಮರಾಯ “ನಿಮ್ಮ ದರುಶನದಿ ಪಾವನರು ನಾವಾದವೆಮಗಿನ್ನಾವ ಬುದ್ದಿಯನರುಹುವಿರಿ” ಎಂದ. ಆಗ ಶಾಂಡಿಲ್ಯಮುನಿ “ರಘುಪತಿಯ ಗುಣಹಾರ ಧರ್ಮವ ಪಾಲಿಸಿದ ನರೆದಲೆಗ ಹಿಯರ” ಪ್ರಸಂಗವಿದೆ ಎಂದ. ಅದಕ್ಕೆ ಧರ್ಮರಾಯ ಎನಲು ರಾಮಚರಿತ್ರೆಯನು ನೀ ವೆನಗೆ ಪೇಳಿದೊಡಾಲಿಸುವೆನೆನೆ ಮನದೊಳಗೆ ತಾ ನಸುನಗುತ ಶಾಂಡಿಲನು ಯುಧಿಷ್ಠಿರಗೆ ಅನುನಯದೊಳಾಧರಿಸಿ ರಘುನಂ ದನನ ಚರಿತೆಯನರುಹಿ ಭೂಪನ ಮನಸಿನಲ್ಲಿರುವಂತೆ ವಿಸ್ತರಿಸಿದ ರಾಮ ಕಥೆಯ || ಕೇಳು ಕುಂತೀತನಯ ಎಂದು ಒಂಬತ್ತನೆಯ ಪದ್ಯದಲ್ಲಿ ರಾಮಾಯಣದ ಕಥೆಯನ್ನಾರಂಭಿಸಿದ ಕವಿ ಹದಿನೈದನೆಯ ಪದ್ಯದಲ್ಲಿ ವಿಭೀಷಣನಿಗೆ ಪಟ್ಟ ಕಟ್ಟುವುದರ ಮೂಲಕ ರಾಮಾಯಣವನ್ನು ಒಟ್ಟು ಎಂಟು ಭಾಮಿನಿಯಲ್ಲಿ ಮುಗಿಸುತ್ತಾನೆ. ಆ ಮೇಲೆ ತಾನು ಅಯೋಧ್ಯೆಗೆ ಹೊರಡುವುದಾಗಿ ರಾಮ ವಿಭೀಷಣನಿಗೆ ಹೇಳುತ್ತಾನೆ. ಆ ಕೂಡಲೇ ನಿಜ ಮಂತ್ರಿಯನ್ನು ಕರೆಸಿ ಸಮಾಲೋಚಿಸುತ್ತಾನೆ ವಿಭೀಷಣ, ರಾಮನ ಅಯೋಧ್ಯಾ ಪಯಣಕ್ಕೆ ಕುಬೇರನ ರಥವನ್ನು ತರಿಸುತ್ತಾನೆ. ರಾಮ ತನ್ನ ಪರಿವಾರ ಸಮೇತವಾಗಿ ಅಯೋಧ್ಯೆಯತ್ತ ಹೊರಡುತ್ತಾನೆ. ಲಂಕೆಯಿಂದ ಮುಚುಕುಂದ ಋಷಿಯ ಆಶ್ರಮಕ್ಕೆ ತಲುಪುವವರೆಗಿನ ಕಥೆಯನ್ನು ರಾಮ ಸೀತೆಗೆ ಆಯಾ ಸ್ಥಳ ಪರಿಚಯ ಮಾಡಿಕೊಡುವಷ್ಟು ಕಥೆಯನ್ನು ಎರಡೇ ಪದ್ಯಗಳಲ್ಲಿ ಹೇಳಿ ಕವಿ ಮುಗಿಸುತ್ತಾನೆ. ಕನಕದಾಸರ ಸಂಗ್ರಹ ಕೌಶಲಕ್ಕೆ ಈ ಪದ್ಯ ನೋಡಬಹುದು : ತಡೆಯದೈತಂದುಭಯಬಲ ಸಂ ಗಡಿಸಿ ಬರುತಿರೆ ಮುಂದೆ ಸೇತುವ ಮಡದಿಗೆಲ್ಲವ ತೋರಿಸುತ ನೆರೆಕಡಲ ದಾಂಟಿದರು ನಡೆದು ರಾಮೇಶ್ವರದ ಬಳಿಯಲಿ ಮೃಡನ ಪೂಜಿಸಿ ಭಕ್ತಿ ಭಾವದ ಸಡಗರದಿ ವಾಲ್ಮೀಕಿಯಾಶ್ರಮಕೈದಿದನು ನೃಪತಿ || ಮುಚುಕುಂದ ಋಷಿಯ ಆಶ್ರಮಕ್ಕೆ ರಾಮ ಬಂದುದ ಕೇಳಿ “ಬಂದು ಕಂಡರು ಸಕಲ ಮುನಿವರರು.” ಇಲ್ಲಿ ಮುನಿಗಳೊಂದಿಗೆ ರಾಮ ಮಾತುಕತೆಯಾಡಿದ ವಿವರ ಕೆಲವು ಪದ್ಯಗಳಲ್ಲಿ ಬರುತ್ತದೆ. ಹೀಗೆ ರಾಮಾಯಣವನ್ನು ಸಂಗ್ರಹಿಸಿ ಹೇಳುವ ಸಂಪ್ರದಾಯ ಪರಂಪರೆಯಿಂದ ನಡೆದು ಬಂದುದು. ಏಳೆಂಟು ಪದ್ಯಗಳಲ್ಲಿ ಇಡೀ ರಾಮಾಯಣದ ಕಥೆಯನ್ನು ಹೇಳುವುದನ್ನು ಸಂಗ್ರಹ ರಾಮಾಯಣ ಎಂದು ಕರೆಯಲಾಗಿದೆ. ಅಲ್ಲಿ ನೆರೆದ ಮಹಾಮುನೀಶ್ವರ ರೆಲ್ಲ ತರಿಸಿದರಖಿಳವಸ್ತುವ ಬೆಲ್ಲ ಸಕ್ಕರೆ ಜೇನುತುಪ್ಪ ರಸಾಯನಂಗಳಲಿ ಭುಲ್ಲವಿಸಿ ರಚಿಸಿದ ಸುಭಕ್ಷಗ ಇಲ್ಲಿ ಜೋಡಿಸಿ ಹೊರಿಸಿ ತಂದರು ರಾಮನೋಲಗಕೆ ಋಷಿಗಳು ಹೊರಸಿತಂದ ವಿವಿಧ ಭಕ್ಷ ಭೋಜ್ಯಗಳನ್ನು ಎಲ್ಲ ಸೈನಿಕರಿಗೆ ವೀರರಿಗೆ ಹಂಚಲಾಯಿತು. ಎಲ್ಲರೂ ತಿಂದು ತೇಗಿದರು. ಆಗ ರಾಮ ಅವರೆಲ್ಲರ ಪರವಾಗಿ ಆಂಜನೇಯನನ್ನು ಅನಿಲಸುತ ಬಾರೆಂದು ರಘುನಂ ದನನು ಕರುಣದೋಳಿವರ ರುಚಿಯೆಂ ತೆನಲು ಕರಗಳ ಮುಗಿದು ಬಿನ್ನೈಸಿದನು ರಘುಪತಿಗೆ | ಆಂಜನೇಯ ರಾಗಿಯ ತನಿಯ ಬಗ್ಗೆ ಪ್ರಶಂಸಿಸಿದ. ಆಗ ರಾಮ ಎನಲು ರಾಮ ನೃಪಾಲ ಗೌತಮ ಮುನಿಯನೀಕ್ಷಿಸಬೇಕು ತರಿ ಸೆನಲು ಧ್ಯಾನವನೊಡನೆಯಾಲೋಚಿಸಿದರೀ ಹದನ ಮನ ನಲಿದು ತಂತಮ್ಮ ಶಿಷ್ಯರ