ಪುಟ:Kanakadasa darshana Vol 1 Pages 561-1028.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕಿಂಡಿಯಲ್ಲಿ ನೋಡಿದ ಕವಿತೆಗಳು ೫೭೧ ಕಿಂಡಿಯಲ್ಲಿ ನೋಡಿದ ಕವಿತೆಗಳು (ಕನಕದಾಸರ ಕವಿತೆಗಳನ್ನು ಕುರಿತ ಚರ್ಚೆ) ಡಾ. ಕೆ. ಕೇಶವಶರ್ಮ ಒಂದು, ರೀತಿಗಳು ಕೃತಿಗಳು ಕೇಳಬಹುದಾದ ಕೃತಿಗಳು, ಇಲ್ಲಿ ಹೇಳುವವನು ಮತ್ತು ಕೇಳುವವನ ಸಂಬಂಧ ಸ್ಪಷ್ಟವಾಗಿರುತ್ತದೆ. ಹೇಳುವವನು ಮತ್ತು ಕೇಳುವವನು ಏಕಕಾಲಕ್ಕೆ ಸಂಧಿಸುತ್ತಾರೆ. ಇನ್ನೊಂದು ಬರಹ ಮಾಧ್ಯಮದ ಕೃತಿಗಳು. ಇಲ್ಲಿ ಕೃತಿಕಾರನ ಎದುರಿಗೆ ಅದನ್ನು ಸ್ವೀಕರಿಸುವವರು ಇರುವುದಿಲ್ಲ. ಆದುದರಿಂದ ಸಹಜವಾಗಿಯೇ ಬರಹಗಾರನು ಹೆಚ್ಚು ಸ್ವಾತಂತ್ರ್ಯವನ್ನು ಅನುಭವಿಸುತ್ತಿರುತ್ತಾನೆ. ಮೊದಲ ವರ್ಗದ ಕೃತಿಗಳಲ್ಲಿ ಕೃತಿಕಾರನು ಶಿಸ್ತುಬದ್ಧವಾಗಿ ನಡೆಯಬೇಕಾಗುತ್ತದೆ. ಆದರೆ ಇನ್ನೊಂದು ಬಗೆಯ ಕೃತಿಗಳಲ್ಲಿ ಕೃತಿಕಾರ ಭಾಷೆಯೊಂದಿಗೆ ನರ್ತನ ಮಾಡುತ್ತಾನೆ. ೬. ಬರಹಗಾರನ ವೈಯಕ್ತಿಕತೆ, ಅವನ ಸ್ವಂತಿಕೆಯು ಬರಹದಲ್ಲಿ ಅಭಿವ್ಯಕ್ತಿಯ ರೂಪವನ್ನು ತಾಳುವುದರಿಂದ ಸಹಜವಾಗಿಯೇ ಅವನ ದೃಷ್ಟಿಯೂ ಕೂಡಾ ಮುಖ್ಯವಾಗುತ್ತದೆ : ಕಿಟಕಿಯ ಮೂಲಕ ಹೊರ ಜಗತ್ತನ್ನು ನೋಡಿದಂತೆ. ೭ ಯಾವುದೇ ಕೃತಿಯನ್ನು ಓದುವಾಗಲೂ ನಮ್ಮ ಅನುಭವದ ಸಂಗತಿಯು ಮುಖ್ಯವಾಗುತ್ತದೆ. - ೮.ವಾಸ್ತವವಾದಿಯೆನ್ನಬಹುದಾದ ಕೃತಿಗಳಲ್ಲಿಯೂ ಪರಿಪೂರ್ಣವಾದ ಸತ್ಯ ಇರುವುದಿಲ್ಲ. ಅಲ್ಲೊಂದು ಉದ್ದೇಶ ಇರುತ್ತದೆ, ಸೌಂದರ್ಯ ಇರುತ್ತದೆ. ಯಾವುದೇ ಕಲಾಕೃತಿಯು ಸಂರಚನೆಯ ಕುರಿತಂತೆ ಮಾತಾಡುವಾಗ ಕೆಲವಂಶಗಳು ಮುಖ್ಯವಾಗುತ್ತವೆ : ೧. ಕೃತಿಯ ರಚನೆಯು ಅಂತರಂಗದ ಅಭಿವ್ಯಕ್ತಿಯಾಗಿದ್ದರೂ, ಅದರ ಜೊತೆಯಲ್ಲಿ, ಸಾಮಾಜಿಕ, ರಾಜಕೀಯ, ಆರ್ಥಿಕ ಸಂಗತಿಗಳು ಅಡಕವಾಗಿರುತ್ತವೆ. ಯಾಕೆಂದರೆ, ಕಲಾವಿದನೊಬ್ಬನು ಈ ರೀತಿಯ ನಿರ್ದಿಷ್ಟ ಸಂದರ್ಭಗಳಲ್ಲಿ ಬದುಕುತ್ತಿರುತ್ತಾನೆ. ಹೀಗಾಗಿ, ಕಲಾವಿದನ ಬದುಕು ಸಮಾಜದ ಒಟ್ಟು ಸಂದರ್ಭಗಳಿಂದ ನಿಶ್ಚಿತವಾಗಿರುತ್ತದೆ. ಇದರರ್ಥ ಕವಿಯಾಗಲೀ ಕಲಾವಿದನಾಗಲೀ ನೇರವಾಗಿ ಚರಿತ್ರೆಗೆ ಬದ್ದನಾಗಿರುತ್ತಾನೆಂದಲ್ಲ. ಅದರ ಬದಲಾಗಿ, ಚರಿತ್ರೆಯಲ್ಲಿ ಕಲಾವಿದನು ತೀರಾ ಸಹಜವಾಗಿ ರೂಪುಗೊಂಡಿರುತ್ತಾನೆಂದಷ್ಟೆ. ೨. ಸಾಹಿತ್ಯವು ಕೇವಲ ಸೂಚನೆಯಾಗಿದ್ದು, ಈ ಸೂಚನೆಯೂ ಸಾಮಾಜಿಕ ವರ್ಗ, ಆಯಾ ಸಮಾಜದ ದೃಷ್ಟಿಯನ್ನು ಹೊಂದಿರುತ್ತದೆ. ೩ ಸಾಹಿತ್ಯವು ತತ್ಕಾಲೀನ ಸಮಾಜವನ್ನು ಸರಳವಾಗಿ ಸ್ವೀಕರಿಸುವುದಿಲ್ಲ. ಕೃತಿಯಲ್ಲಿ ಅದಕ್ಕೊಂದು ಮೆರಗು ಸಿದ್ಧವಾಗಿರುತ್ತದೆ. ೪. ಕೃತಿಯ ರಚನೆಯಲ್ಲಿ ಕೃತಿಕಾರ ಮತ್ತು ಕೃತಿ ಎನ್ನುವ ಎರಡು ಅಂಶಗಳಿರುತ್ತವೆ. ಕೃತಿಯ ಜಗತ್ತಿನಲ್ಲಿ ಭಾಷೆಯೂ ಅದರದೇ ಆದ ಕ್ರಿಯಾತ್ಮಕ ಅಂಶವನ್ನು ಒಳಗೊಂಡಿರುತ್ತದೆ. ಇಲ್ಲಿ ಇದರೊಂದಿಗೆ ಬೇರೆ ಅಂಶಗಳೂ ಇವೆ. ಉದಾಹರಣೆಗೆ ವಯೋಲಿನ್ ಬಾರಿಸುವವನು ಮಾತಾಡುವುದಿಲ್ಲ. ವಯೋಲಿನ್ ನುಡಿಸುತ್ತಾನೆ. ಚಿತ್ರ ಬಿಡಿಸುವವನು ಬಣ್ಣಗಳನ್ನು ಬಳಸುತ್ತಾನೆ. ಹೀಗೆಯೇ ಒಬ್ಬ ಕೃತಿಕಾರ ಭಾಷೆಯನ್ನು ಉಪಯೋಗಿಸುತ್ತಾನೆ. ಅಂದರೆ : ಭಾಷೆಯು ಕೃತಿಕಾರನಿಗೆ ಒಂದು ವಾಹನವಲ್ಲ. ಅದೊಂದು ಕಲೆ. ವಸಾಹತುಪೂರ್ವದ ಕನ್ನಡದ ಕವಿಗಳ ಬಗೆಗೆ ಚರ್ಚಿಸುವಾಗ ನಮಗೆ ಸಹಜವಾಗಿಯೇ ಆ ಕವಿಗಳ ಕುರಿತು ಒಂದೋ ವಿಪರೀತವಾದ ಆದರಾಭಿಮಾನವಿರುತ್ತದೆ. ಇಲ್ಲವೇ ನಿರಾಕರಣೆಯ ಧ್ವನಿಯು ಇರುತ್ತದೆ. ಇದಕ್ಕಿರುವ ಮುಖ್ಯ ಕಾರಣಯೆಂದರೆ ನಾವು ಸಿಲುಕಿಕೊಂಡಿರುವ ಆಧುನಿಕ ಚರಿತ್ರೆಯೇ ಆಗಿದೆ. ಈ ಆಧುನಿಕ ಚರಿತ್ರೆಯ ಮುಖಖೇಡಿತನದ ಹುಚ್ಚಾಟಕ್ಕೆ ಸಿಕ್ಕಿದ ನಮ್ಮ ಓದಿನ ಕ್ರಮವೂ ಕೂಡಾ ಪಶ್ಚಿಮದ ದಿಕ್ಕಿನ ಕಡೆಗೆ ಮುಖಮಾಡಿದೆ. ಸಾಂಸ್ಕೃತಿಕ ಒತ್ತಡವನ್ನು ಕಳೆದುಕೊಳ್ಳಲು ತೊಡಗುತಿರುವ ನಮ್ಮ ಪ್ರಕ್ರಿಯೆಯ ಹಂಬಲವೂ ಕೂಡಾ ಈ ರೀತಿಯಲ್ಲಿ ಸ್ವ-ಗುರುತಿನ ಹಂಬಲವಾಗಿ (selfidentity) ಮಾರ್ಪಟ್ಟಿದೆ. ಇದರ ಪರಿಣಾಮವೆಂದರೆ-ಹಳೆಗನ್ನಡ ಕಾವ್ಯದ ಬಗೆಗಿನ ನಮ್ಮ ಓದಿನ ಕ್ರಮವೂ ಕೆಲವೊಮ್ಮೆ ಉತ್ತೇಕ್ಷೆಯ ರೂಪವಾಗಿ, ಕನ್ನಡ ಕಾವ್ಯದ ಆದರಾಭಿಮಾನದ ತೀವ್ರತೆಯ ಕ್ರಿಯೆಯಾಗಿ ಮಾರ್ಪಟ್ಟಿದೆ. ಇದರಿಂದಾಗಿ ಆಧುನಿಕ ಜಗತ್ತಿಗೆ ಸಂಬಂಧಿಸದ ಹಳೆಗನ್ನಡದ ಕಾವ್ಯವೆಲ್ಲವೂ ದಿವ್ಯವಾಗಿ