ಪುಟ:Kanakadasa darshana Vol 1 Pages 561-1028.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

غعغ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಪದಗಳಲ್ಲಿ ಸಂಗೀತ ععع ಹಾಡು ಶಾಸ್ತ್ರೀಯ ಚೌಕಟ್ಟಿಗೆ ಸೇರಿದ್ದಲ್ಲ ಎಂಬ ವಿವೇಚನೆ ಇರಬೇಕು. ಜಾನಪದ ಹಾಡಿನಲ್ಲಿ ನಾವು ಕಲ್ಪಿಸಿಕೊಂಡ ರಾಗಲಕ್ಷಣವನ್ನು ನಾವು ಕಾಣದಿದ್ದರೆ, ಆ ಹಾಡಿಗೆ ಸಹಜವಾದ ರಾಗಲಕ್ಷಣ ಬೇರೆ ಇರಬಹುದು ಅಲ್ಲವೆ ? ನಮ್ಮ ಪರಿಚಯದಲ್ಲಿರುವ ಯಾವ ರಾಗವನ್ನೂ ಅಲ್ಲಿ ಗುರುತಿಸಲಾಗದಿದ್ದರೆ, ಅದನ್ನು “ಮಟ್ಟು' ಧಾಟಿ' ಎನ್ನುತ್ತೇವೆ. ಜಾನಪದ ಹಾಡಿಗಿರುವುದು 'ಮಟೇ', 'ಧಾಟಿಯೇ, ಪರಿಷ್ಕೃತ ರಾಗವಲ್ಲ. ಇಂಥ ಜನಪ್ರಿಯವಾಗಿದ್ದ, ಪ್ರಚುರಪ್ರಯೋಗವಿದ್ದ ಮಟ್ಟುಗಳನ್ನೇ ವಿದ್ಯಾರಣ್ಯರಾಗಲಿ ವೇಂಕಟಮುನಿಯಾಗಲಿ ಅಲ್ಪಸ್ವಲ್ಪ ಮಾರ್ಪಡಿಸಿ, ಪರಿಷ್ಕರಿಸಿ, ಸಂಸ್ಕಾರಗೊಳಿಸಿ ರಾಗಗಳನ್ನಾಗಿ ಮಾಡಿಕೊಂಡರು. ಹೀಗೆ ಪರಿಷ್ಕರಿಸಲ್ಪಟ್ಟ ರಾಗಗಳೇ ನಮ್ಮ ಪರಿಚಯದಲ್ಲೀಗ ಇರುವುವು. ಈ ರಾಗಗಳಲೇ ತ್ಯಾಗರಾಜರೇ ಮೊದಲಾದವರು ಕೃತಿರಚನೆ ಮಾಡಿದರು. ರಾಗಪರಿಷ್ಕಾರದ ಕೆಲಸ ಮುಗಿಯುವ ಮೊದಲೇ ಇದ್ದದ್ದು ದಾಸಸಾಹಿತ್ಯ ಪುರಂದರದಾಸರ ಪದಗಳಲ್ಲಾಗಲೇ ಪರಿಷ್ಕಾರದ ಪ್ರಯತ್ನ ನಡೆದುದನ್ನು ಗುರುತಿಸಬಹುದು. ಈ ಕೆಲಸ ಶ್ರೀಪಾದರಾಜರಿಂದಲೇ ಮೊದಲಾಗಿದ್ದರೂ ಇದ್ದೀತು ; ಆದರೆ ಇದನ್ನು ಅಷ್ಟು ಮುಖ್ಯವೆಂದು ಅವರಾಗಲಿ ಪುರಂದರದಾಸರಾಗಲಿ ಭಾವಿಸಿರಲಾರರು. ಒಟ್ಟಾರೆ ದಾಸಸಾಹಿತ್ಯದಲ್ಲಿ ಬಹುಮಟ್ಟಿಗೆ ಮಟ್ಟುಗಳೇ ಮುಖ್ಯವೆನಿಸಿದವು ಎಂದರೆ ತಪ್ಪಾಗದು. ಕನಕದಾಸರ ಪದಗಳಂತೂ ಮಟ್ಟುಗಳಲ್ಲೇ ಮೈದಳೆದುವು. ಮಟ್ಟುಗಳಲ್ಲಿ ರಾಗ ಇಲ್ಲ ಎಂದಲ್ಲ ; ಈಗ ನಮ್ಮ ರಾಗಲಕ್ಷಣಗಳಿಗೆ ಒಪ್ಪುವಂಥ ರಾಗನಿರೂಪಣೆಯನ್ನು ಅಲ್ಲಿ ನಾವು ಕಾಣಲಾರೆವು ಎನ್ನುವುದಂತೂ ದಿಟ. ಅದನ್ನು ಅಲ್ಲಿ ಕಾಣಬೇಕೆಂದು ನಾವು ಬಯಸುವುದೂ ತಪ್ಪು. ಕನಕದಾಸರು, ಪುರಂದರದಾಸರು ಬದುಕಿ ಬಾಳಿದ ಕಾಲದಲ್ಲಿ ಬತ್ತೀಸರಾಗಗಳೆಂಬ ಕಲ್ಪನೆಯಿದ್ದಿತು. ಬಸವಣ್ಣನವರ ಒಂದು ವಚನದಲ್ಲೂ (ಬತ್ತೀಸರಾಗವ ಹಾಡಯ್ಯ) ಪುರಂದರದಾಸರ ಪದವೊಂದರಲ್ಲೂ (ತುತ್ತೂರು ತೂರೆಂದು ಬತ್ತೀಸರಾಗದಲ್ಲಿ, ಚಿತ್ರವಲ್ಲಭ ತನ್ನ ಕೊಳಲನೂದಿದನು) ಇದರ ಉಲ್ಲೇಖವಿದೆ. ಆದರೆ ಈ ಮೂವತ್ತೆರಡು ರಾಗಗಳು ಯಾವುವು ಎಂದು ನೇರವಾಗಿ ಎಲ್ಲರೂ ಒಪ್ಪುವಂತೆ ಪಟ್ಟಿ ಮಾಡುವುದು ಕಷ್ಟ. ಪುರಂದರದಾಸರ ಪದದಲ್ಲಿ ಗೌಳಿ, ನಾಟ, ಆಹಿರಿ, ಗುರ್ಜರಿ, ಮಾಳವಿ, ಸಾರಂಗ, ಫಲಮಂಜರಿ, ದೇಶಾಕ್ಷಿ, ಇವು ಹೆಸರುಗೊಂಡಿವೆ. ಅವರ ಇನ್ನೊಂದು ಪದದಲ್ಲಿ (ನಳಿನಜಾಂಡ ತಲೆಯ ತೂಗಿ ಮೋಹಿಸುತಿರಲುಈ ರಾಗಗಳೊಂದಿಗೆ ಮಾರವ, ದೇಶಿ, ಭೈರವಿ, ಸಾವೇರಿ, ಪೂರ್ವಿಕಾಂಭೋಜಿ, ಪಾಡಿ, ಶಂಕರಾಭರಣ, ವರಾಳಿ, ಕಲ್ಯಾಣಿ, ತೋಡಿ ಮುಖಾರಿ, ಯರಳಿ, ವಸಂತ, ಬೌಳಿ, ಧನಶ್ರೀ, ಸೌರಾಷ್ಟ್ರ, ಗುಂಡಕ್ರಿಯ, ರಾಮಕ್ರಿಯ, ಮೇಘ, ಕುರಂಜಿ ಎಂಬ ಇತರ ರಾಗಗಳ ಪ್ರಸ್ತಾಪವೂ ಇದೆ. ಅಂತೂ ಐದಾರು ರಾಗಗಳನ್ನೂ ಬಿಟ್ಟು ಉಳಿದಂತೆ ಬತ್ತೀಸರಾಗಗಳಿಗೆ ಲೆಕ್ಸ ದೊರೆತಂತಾಯಿತು ಆದರೆ ಈ ರಾಗಗಳಲ್ಲಿ ಹಲವು ಈಗ ಬಳಕೆಯಲ್ಲೇ ಇಲ್ಲ, ಇನ್ನೂ ಕೆಲವು ರಾಗಗಳು ಈಗಿನ ಹೆಸರನ್ನೇ ತಳೆದಿದ್ದರೂ ಈಗಿನ ರಾಗಸ್ವರೂಪವೇ ಆಗಲೂ ಇದ್ದಿತು ಎಂಬ ನಿಶ್ಚಯವಿಲ್ಲ ಮೇಲಾಗಿ ಈಗ ಪರಿಚಿತವಾದ ರಾಗಗಳಲ್ಲೇ ದಾಸರ ಪದಗಳು ರಚಿತವಾಗಿದ್ದರೂ, ಆ ರಾಗಭಾವವೇ ಬೇರೆ, ಅದೇ ರಾಗಗಳಲ್ಲೇ ದಾಸರ ಪದಗಳು ರಚಿತವಾಗಿದ್ದರೂ, ಆ ರಾಗಭಾವವೇ ಬೇರೆ, ಅದೇ ರಾಗಗಳಲ್ಲಿ ಮುಂದೆ ತ್ಯಾಗರಾಜರೇ ಮೊದಲಾದವರ ರಚನೆಗಳ ರಾಗಭಾವವೇ ಬೇರೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ದಾಸರ ಪದಗಳಿಗೆ ರಾಗನಿರ್ದೆಶನ, ಸ್ವರಸಂಯೋಜನೆಗಳನ್ನು ಮಾಡುವವರು ಮುಗ್ಗರಿಸುವುದು ಇಲ್ಲಿಯೇ. ಬೇರೆ ಬೇರೆ ಸಂದರ್ಭಗಳಲ್ಲಿ ಒಂದೇ ರಾಗ ಹಲವು ಶೈಲಿಗಳಲ್ಲಿ ಒದಗಿ ಬರುತ್ತದೆ ಎನ್ನುವುದನ್ನು ಅವರು ಗಮನಿಸುವುದಿಲ್ಲ. ಪುರಂದರದಾಸರ, ಅದಕ್ಕಿಂತ ಹೆಚ್ಚಾಗಿ ಕನಕದಾಸರ, ಹಾಡುಗಳಲ್ಲಿ ರಾಗಭಾವ ಇರುತ್ತದೆ. ಆದರೆ ಹಲವೊಂದು ವೇಳೆ ಇಂಥದೇ ರಾಗವೆಂದು ನಿರ್ಣಯವಾಗಿ ಹೇಳಲಾಗುವುದಿಲ್ಲ. ಯಾವೊಂದು ರಾಗದ ನೆರಳು ಕಂಡುಕೊಂಡರೂ, ಅದೇ ರಾಗದ ದಾರಿಯನ್ನು ಕಡೆಯವರೆಗೂ ಪದ ಹಿಡಿಯುತ್ತದೆ ಎಂಬ ನಂಬಿಕೆಯಿಲ್ಲ. ಹಾಡುವಾಗ ರಾಗಕ್ಕಿಂತ ಧಾಟಿ (ಮಟ್ಟು) ಮುಖ್ಯವಾಗುತ್ತದೆ. ರಾಗವಿದ್ದರೂ ಜಾನಪದ ಜಾಯಮಾನಕ್ಕೆ ಹೆಚ್ಚಾಗಿ ಒಗ್ಗುವ, ಬತ್ತೀಸರಾಗಗಳ ಎಣಿಕೆಗೆ ಸೇರುವ ರಾಗದ ಕಳೆಯೇ ಇರುತ್ತದೆ. ಅದರಲ್ಲಿ ಉದ್ದುದ್ದ ತಾನಗಳು, ತೀರ ನವುರಾದ ಗಮಕಗಳು, ಚಮತ್ಕಾರದ ದಾಟುಸ್ವರಗಳು ಇಂಥದೆಲ್ಲ ಇರುವುದಿಲ್ಲ. ಕನಕದಾಸರ ಪದಗಳನ್ನು ಹಾಡುವವರು ತೀರ ಕರ್ಮಠ ಸ್ವಭಾವದ, ಭಾವವಿರಕ್ತರಾದ ಸಂಗೀತವಿದ್ವಾಂಸರಾದರೆ ಪದಗಳ ಗೊತ್ತುಗುರಿಯೇ ಹಾರಿಹೋಗುವ ಸಂಭವವಿದೆ. ತ್ಯಾಗರಾಜರ ಕೀರ್ತನೆಗಳಲ್ಲಾದರೆ ಸಾಹಿತ್ಯದ ಭಾಗ ರಾಗಭಾವವನ್ನು ಹಿಂಬಾಲಿಸಿ ಬರುತ್ತದೆ ; ರಾಗನಿರೂಪಣೆಯೇ ಕೀರ್ತನೆಯ ಪ್ರಯೋಜನವೆಂದರೂ ತಡೆದೀತು. ಅಲ್ಲಿನ ಸಾಹಿತ್ಯವನ್ನು ಹಾಗೆಯೇ