ಪುಟ:Kanakadasa darshana Vol 1 Pages 561-1028.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೭೨ ಕನಕ ಸಾಹಿತ್ಯ ದರ್ಶನ-೧ ಕಿಂಡಿಯಲ್ಲಿ ನೋಡಿದ ಕವಿತೆಗಳು ೫೭೩ ಅಷ್ಟೇ ಅಲ್ಲ, ನಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತರಕೊಡುವ ವಾಗ್ಗೇವತೆಯ ಪ್ರತೀಕವಾಗಿ ಕಾಣಿಸುತ್ತದೆ. ಕನ್ನಡದ ಬಹುತೇಕ ನವೋದಯದ ವಿಮರ್ಶಕರಲ್ಲಿ ಈ ರೀತಿ ಪ್ರತಿಕ್ರಿಯೆಯೂ ಕಾಣಿಸಿದೆ. ಆಧುನಿಕ ವೈಚಾರಿಕ ಚೌಕಟ್ಟಿನಲ್ಲಿ ತುಂಬಿಕೊಂಡಿರುವ ಅನ್ಯಶಿಸ್ತಿನ ಮುಖಾಂತರ ಹಳೆಗನ್ನಡ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವ ರೀತಿಯೂ ಕನ್ನಡದ ವಿಮರ್ಶಾ ಬರಹ ಮತ್ತು ಓದಿನಲ್ಲಿ ಕಾಣಿಸಿಕೊಂಡಿದೆ. ಹಳೆಗನ್ನಡ ಕಾವ್ಯ “ವಸ್ತುನಿಷ್ಠತೆ' ಇತ್ಯಾದಿ ಚರ್ಚೆಗಳೂ ಇದರ ಮೂಲಕ ಸಂಪ್ರಾಪ್ತವಾಗಿದೆ.* ಈ ಪರಿಕ್ರಮದಲ್ಲಿ ಎಷ್ಟೋ ಬಾರಿ ನಮ್ಮ ಆಧುನಿಕ ವಿಚಾರಗಳಿಗೆ ಹಳೆಗನ್ನಡ ಕೃತಿಗಳನ್ನು ಕತ್ತರಿಸಿಡುವ ಕ್ರಮವೂ ಕೂಡಾ ಬಂದಿದೆ. ಸದ್ಯ ಕನ್ನಡದಲ್ಲಿ ಕನಕದಾಸರ ಕೃತಿಗಳನ್ನು ಕುರಿತಂತೆ ಬಂದ ಮುಖ್ಯ ಚರ್ಚೆಗಳೂ ಮೇಲಿನ ಅಂಶಗಳಿಂದ ಪ್ರೇರಿತವಾಗಿವೆ. ಕನಕದಾಸರು ಕೃತಿಗಳನ್ನು ಕುರಿತಂತೆ ಬಂದ ಚರ್ಚೆಯ ಕೇಂದ್ರ ಬಿಂದುಗಳನ್ನು ಹೀಗೆ ಗುರುತಿಸಬಹುದು: ೧. ಕನಕದಾಸರ ಕವಿತೆಗಳಲ್ಲಿ ಶಬ್ದ ಚಿತ್ರಗಳಿವೆ ಮತ್ತು ಕನಕದಾಸರಿಗೆ ವಿಪುಲವಾದ ಲೋಕಾನುಭವವಿದೆ ೨. ಕನಕದಾಸರು ತಮ್ಮ ಕವಿತೆಗಳಲ್ಲಿ ತತ್ಕಾಲೀನ ಸಮಾಜ ಸ್ಥಿತಿಯನ್ನು ವರ್ಣಿಸುತ್ತಾರೆ. ೩. ದಾಸ ಸಾಹಿತ್ಯಕ್ಕೂ ತತ್ಕಾಲೀನ ರಾಜಕಾರಣಕ್ಕೂ ಸಂಬಂಧವಿದೆ. ೪. ಕುಲದ ಬಗೆಗೆ ಕನಕದಾಸರು ಎತ್ತುವ ಪ್ರಶ್ನೆ ಅಮೂರ್ತವಾದ ವೈಚಾರಿಕ ವಿಷಯವಾಗಿರದೆ, ವಾಸ್ತವದನುಭವದ ಹಿನ್ನೆಲೆಯಿಂದ ಹುಟ್ಟಿ ಬಂದುದಾಗಿದೆ.' ೫. ಭಕ್ತಿ ಸಿದ್ದಾಂತದ ಚೌಕಟ್ಟಿನ ಬದುಕಿಗೆ ಮಂತ್ರಮುಗ್ಧನಾದ ಕನಕದಾಸನು ಅಂಥ ಬದುಕಿನ ಅನುಕರಣೆಯ ಸಾಧನೆಯಲ್ಲಿ ಸಾಮಾನ್ಯವರ್ಗದ ಸಂವೇದನೆಗಳಿಂದ ದೂರವಾಗಬೇಕಾಯಿತು. ೬. ಕನಕದಾಸರು ನಿಮ್ಮಜಾತಿಗೆ ಸೇರಿದುದರಿಂದ ಅವರ ಕವಿತೆಗಳಲ್ಲಿ ಜಾತಿಯ ಬಗೆಗಿನ ನಿಲುವುಗಳು ವ್ಯಕ್ತವಾಗುತ್ತವೆ. ೭ ಮೋಹನ ತರಂಗಿಣಿಯಲ್ಲಿ ಬರುವ ಅನೇಕ ವರ್ಣನೆಗಳು ವಿಜಯನಗರ ಸಾಮ್ರಾಜ್ಯ ಕುರಿತು ಹೇಳುತ್ತವೆ. 10 ಕನಕದಾಸರ ಕವಿತೆಗಳನ್ನು ಕುರಿತು ಮುಖ್ಯವಾಗಿ ಬಂದಿರುವ ಈ ವಿಚಾರಗಳು ಕನ್ನಡದ ವಿದ್ವಾಂಸರು ಓದಿದ ಕ್ರಮಕ್ಕೆ ಸಂಬಂಧಿಸಿವೆ. ಈ ರೀತಿಯ ವಿಮರ್ಶೆಯಲ್ಲಿ ನಡೆದಿರುವ ಅನುಸಂಧಾನದ ಪ್ರತಿಕ್ರಿಯೆಯೂ ವಾಸ್ತವವಾಗಿ ಕನಕದಾಸರ ಕವಿತೆಗಳು ಲಿಖಿತ ಪರಂಪರೆಗೆ ಸೇರಿದ ಅನಂತರ ನಡೆದ ಪ್ರತಿಕ್ರಿಯೆಯನ್ನು ಸೂಚಿಸುತ್ತವೆ. ಆದರೆ, ಇದಕ್ಕೆ ಕಾಲದ ಅಂತರವೂ ಕೂಡಾ ಬಂದಿದೆ. ಯಾಕೆಂದರೆ, ವಿಜಯನಗರ ಕಾಲದ ಸನ್ನಿವೇಶದಲ್ಲಿ ಕಾವ್ಯರಚಿಸಿದ ಕನಕದಾಸರ ಕಾವ್ಯಕ್ಕೆ ವಸಾಹತು ಕಾಲಘಟ್ಟದ ಅನಂತರ ದೊರೆತ ಪ್ರತಿಕ್ರಿಯೆಗಳಿವು. ಕನಕದಾಸರ ಕೃತಿಗಳು ಎರಡು ಬಗೆಯವು : ಒಂದು ವಿಸ್ತ್ರತ ಚೌಕಟ್ಟು ಉಳ್ಳ ಮಹಾಕಾವ್ಯ ಮಾದರಿಯ ರಚನೆಗಳು 'ಮೋಹನ ತರಂಗಿಣಿ' 'ನಳಚರಿತೆ' ಕೃತಿಗಳು ಈ ಮಾದರಿಯವುಗಳು. ಇನ್ನೊಂದು ರೀತಿಯ ಕವಿತೆಗಳನ್ನು ಕೀರ್ತನೆಗಳೆಂದು ಗುರುತಿಸಲಾಗಿದ್ದು ಇದಕ್ಕೆ ಮೋಹನ ತರಂಗಿಣಿಯಂಥ ಮಹತ್ವಾಕಾಂಕ್ಷೆ ಇಲ್ಲ. ಒಬ್ಬನೆ ಕವಿಯು ಎರಡು ರೀತಿಯ ರಚನೆಗಳನ್ನು ಮಾಡಿದಾಗ, ಅವನ ಕವಿತೆಗಳನ್ನು ವಿರಚನೆಗೊಳಿಸುವುದು ಒಂದು ರೀತಿಯಿಂದ ಸಮಸ್ಯೆಯೇ ಆಗಿರುತ್ತದೆ. ಕನಕದಾಸರ ಈ ರೀತಿಯ ರಚನೆಗಳನ್ನು ಹೀಗೆ ಅರ್ಥೈಸಬಹುದು ; ೧. ಈ ರೀತಿಯ ರಚನೆಗೆ ಕಾರಣವಾದ ಸಾಮಾಜಿಕ, ರಾಜಕೀಯ, ಆರ್ಥಿಕ ಸಂಗತಿಗಳ ಹಿನ್ನೆಲೆಯಿಂದ. ೨. ಈ ರಚನೆಗಳ ಚೌಕಟ್ಟುಗಳ ಹಿನ್ನೆಲೆಯಿಂದ, ೩. ಕೃತಿಗಳು ಸೂಚಿಸುವ ಜಗತ್ತಿನ ಹಿನ್ನೆಲೆಯಿಂದ ಈಗಾಗಲೇ ಸೂಚಿಸಲಾಗಿರುವಂತೆ ಯಾವುದೇ ಕೃತಿಯು ತನ್ನಷ್ಟಕ್ಕೆ ತಾನು ಸ್ವಯಂಭೂತವಾದುದಲ್ಲ. ಅದಕ್ಕೆ ರಾಜಕೀಯ, ಸಾಮಾಜಿಕ ಎನ್ನಬಹುದಾದ ಆಯಾಮವೊಂದೆ. ಮೇಲೆ ಉಲ್ಲೇಖಿಸಲಾಗಿರುವ ಕಾವ್ಯ ರಚನೆಯ ಹಿಂದಿನ ಮನಸ್ಸು ಪ್ರತ್ಯೇಕವಾದುದಲ್ಲ. ಒಂದೇ ಮನಸ್ಸು ಎರಡು ರೀತಿಯ ಕೆತ್ತನೆಯನ್ನು ಮಾಡಿದೆ. ಅಂದರೆ : ಮೂಲತಃ ಈ ರೀತಿಯ ಕೆಲಸಗಳು ಒಂದು ರೀತಿಯ ಉತ್ಪಾದನಾ ಸಂಬಂಧವನ್ನು ಹೊಂದಿದೆ. ಮಹಾಕಾವ್ಯದ ರಚನೆಯನ್ನು ಹೋಲುವ ಕೃತಿಗಳಲ್ಲಿ ಕನಕದಾಸರು ಸೂಚಿಸುವ ಜಗತ್ತು ಮತ್ತು ಕೀರ್ತನೆಗಳಲ್ಲಿ ಸೂಚಿಸುವ ಜಗತ್ತು ಒಂದರ್ಥದಲ್ಲಿ ಒಂದೇ ಆಗಿದೆ. 'ಮೋಹನ ತರಂಗಿಣಿ' ಮತ್ತು 'ನಳ ಚರಿತ್ರೆ' ಕೃತಿಯಲ್ಲಿರುವ ವಸ್ತು ಕೇವಲ ಲೌಕಿಕವಾದುದಲ್ಲ' 'ಮೋಹನ ತರಂಗಿಣಿ'ಯ ವಸ್ತು ಭಾಗವತದ್ದು, “ಪೌರಾಣಿಕವಾದ ಕಥಾವಸ್ತುವನ್ನು ಜನಪ್ರಿಯವಾದ ಧಾಟಿಯಲ್ಲಿ